CrimeLatest

ಹುಣಸೂರು ಬಳಿ ಬೈಕ್ ಚಾಲಿಸುತ್ತಿದ್ದ ಛಾಯಾಗ್ರಾಹಕನ ಬಲಿ ಪಡೆದ ಗೂಡ್ಸ್ ಈಚರ್ ವಾಹನ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಬೈಕ್ ಗೆ ಗೂಡ್ಸ್ ಈಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ   ಎಮ್ಮೆ ಕೊಪ್ಪಲು ಬಳಿಯ ಪುಟ್ಟನಕೆರೆ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ.

ಛಾಯಾಗ್ರಹಕ ಮೈಸೂರಿನ ಅಭಿಲಾಷ್ ಎಂ (28)  ಮೃತಪಟ್ಟ ದುರ್ದೈವಿ. ಈತ ಮಂಗಳವಾರ  ಮಧ್ಯಾಹ್ನ 2.25ರ ಸಮಯದಲ್ಲಿ ತನ್ನ ಹೀರೋ ಎಕ್ಸ್ ಪ್ಲಸ್  ಬೈಕ್ (ಕೆಎ 09 ಜೆ ಎಕ್ಸ್ 9964)ನಲ್ಲಿ ಮೈಸೂರಿನಿಂದ ಹುಣಸೂರಿಗೆ ಬರುತ್ತಿದ್ದ ವೇಳೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ   ಎಮ್ಮೆ ಕೊಪ್ಪಲು ಬಳಿಯ ಪುಟ್ಟನಕೆರೆ ಸಮೀಪ ಹುಣಸೂರಿನಿಂದ ಮೈಸೂರಿನ ಕಡೆಗೆ ವೇಗವಾಗಿ ತೆರಳುತ್ತಿದ್ದ ಗೂಡ್ಸ್ ಈಚರ್  ವಾಹನ ಚಾಲಕನ ಅಜಾಗರೂಕತೆಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಬೈಕ್ ಚಾಲಿಸುತ್ತಿದ್ದ ಅಭಿಲಾಸ್ ನೆಲಕ್ಕುರುಳಿ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ  ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಾಯಿತಾದರೂ ಆತ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ರವಿ,ನಗರ ಠಾಣಾಧಿಕಾರಿ ಶಿವ ಮಾದಯ್ಯ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಘಟನೆಗಳು ನಡೆಯುತ್ತಿದ್ದು, ಹೆದ್ದಾರಿಯಲ್ಲಿ ತೆರಳುವ ವಾಹನ ಚಾಲಕರು ಅತಿವೇಗದಿಂದ ವಾಹನಗಳನ್ನು ಚಲಾಯಿಸುವುದೇ ಇದಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಅಪಘಾತಗಳಿಗೆ ಕಡಿವಾಣ ಹಾಕಬೇಕಾಗಿದೆ.

admin
the authoradmin

Leave a Reply