janamanakannada > Blog > Latest > Mysore > ಪ್ರತಿಭಾ ಪುರಸ್ಕಾರ…. ಸಾಲಿಗ್ರಾಮ, ಕೆ.ಆರ್.ನಗರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ…
ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಸೃಜನ ಲೇಖಕರು ಮತ್ತು ಕಲಾವಿದರ ಬಳಗ ಹಾಗೂ ವಿಚಾರಪ್ರಜ್ಞೆ ಪತ್ರಿಕಾ ಬಳಗದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶೇಕಡ 90ರಷ್ಟು ಅಂಕಗಳಿಸಿದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ಒಂದು ಭಾವಚಿತ್ರ, ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿಗಳನ್ನು ಕೆ.ಆರ್.ನಗರದ ವಿವಿ ರಸ್ತೆಯ ರಾಮನ್ ಕಾಫಿ ವರ್ಕ್ಸ, ಭಾರ್ಗವ್ ಡಿಟಿಪಿ ಸೆಂಟರ್, ವೆಂಕಟೇಶ್ವರ ಮೆಡಿಕಲ್ ಸ್ಟೋರ್, ಸಾಲಿಗ್ರಾಮದ ಪ್ಯಾಲೆಸ್ ಹೊಂಡ ಶೋ ರೂಮ್ ಗೆ ತಲುಪಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಳಗದ ಅಧ್ಯಕ್ಷ ರಾ.ಸುರೇಶ್ ಮೊ.ಸಂ. 9141145179 ಸಂಪರ್ಕಿಸಬಹುದು.
Tags:sangatane manjunath
admin








