LatestMysore

ಸಮ ಸಮಾಜದ ಕ್ರಾಂತಿ ಮಾಡಿ  ಆಡಳಿತ ಸುಧಾರಣೆ ತಂದಿದ್ದು ದೇವರಾಜ ಅರಸು

ಹುಣಸೂರು(ಮನುಕುಮಾರ್):  ಸಮ ಸಮಾಜದ ಮೂಲಕ ರಾಜ್ಯದಲ್ಲಿ ಕ್ರಾಂತಿ ಮಾಡಿ  ಆಡಳಿತ ಸುಧಾರಣೆ ತಂದ ಧೀಮಂತ ರಾಜಕಾರಣಿ ಡಿ.ದೇವರಾಜು ಅರಸು ಎಂದು ಪ್ರದಾನ ಭಾಷಣಕಾರ, ಉಪನ್ಯಾಸಕ ನಾಗರಾಜ್ ತಿಳಿಸಿದರು.

ನಗರದ  ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೇವರಾಜ್ ಅರಸು ಅವರ 111 ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡುಅವರು ಮಾತನಾಡಿದರು.

ಅರಸು ಅವರು ಹುಣಸೂರು ತಾಲ್ಲೂಕಿನ ಕುಗ್ರಾಮ  ಕಲ್ಲಹಳ್ಳಿ ಗ್ರಾಮದವರು. ಸದಾ ಜನರೊಂದಿಗೆ ಬೆರೆತು ಅವರ ಕಷ್ಟಗಳ ಜೋತೆಯಾಗಿದ್ದವರು. ನೆಲೆ ಇಲ್ಲದವರಿಗೆ, ಸಣ್ಣಪುಟ್ಟ ಸಮುದಾಯಗಳನ್ನು ಗುರುತಿಸಿ ಶಕ್ತಿ ತುಂಬಿದ ಮಹಾನ್ ಚೇತನ, ಕೈಗಾರಿಕೆ ಸೇರಿದಂತೆ ಕೆರೆಕಟ್ಟೆಗಳ ನಿರ್ಮಾಣ, ಪ್ರತಿಯೊಬ್ಬರಿಗೂ ಬದುಕು ಕಟಿಕೊಟ್ಟ ಅರಸುರವರು ಎಂದು ಆರದ ದೀಪ, ಇವರ ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿತ್ತು, ಇವರು ದೇಶಕ್ಕೆ ಒಂದು ಶಕ್ತಿಯಾಗಿದ್ದರು ಎಂದರೆ ತಪ್ಪಾಗಲಾರದು.

ಸಾಮಾಜಿಕ ಪಿಡುಗಾಗಿದ್ದ ಮಲ ಹೊರುವ ಪದ್ದತಿ, ಜಿತ ಪದ್ಧತಿ  ನಿರ್ಮೂಲನೆ, ಋಣ ಪರಿಹಾರ ಕಾಯಿದೆಗಳನ್ನು ಜಾರಿಗೊಳಿಸಿದ್ದರಿಂದ ರಾಜ್ಯದ ಬಡವರು ಮತ್ತು ಹಿಂದುಳಿದ ವರ್ಗದವರು ಬದುಕು ಕಟ್ಟಿಕೊಳ್ಳಲು ವರವಾಯಿತು ಎಂದರು.

ತಹಸಿಲ್ದಾರ್ ಮಂಜುನಾಥ್ ಮಾತನಾಡಿ,  ಹಿಂದುಳಿದ ವರ್ಗಗಳ ಜನರಿಗೆ ಶೈಕ್ಷಣಿಕ, ಅರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬಲು ಎಲ್.ಜಿ ಹಾವನೂರು ವರದಿಯನ್ನು ಜಾರಿಗೆ ತರುವ ಮೂಲಕ ಸಮಾನನೆ ದೊರಕಿಸಿ ಕೊಟ್ಟರು. ಭೂಸುಧಾರಣೆ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಮೂಲಕ  ಭೂಮಿ ಯನ್ನು 7  ಲಕ್ಷ ಕುಟುಂಬಗಳಿಗೆ ದೊರಕಿಸಿ ಬಡವರು, ಶೋಷಿತರಿಗೆ ನೆರವಾದರು.

ಜನರಿಗೆ ಸಮಾನತೆ ಅವಕಾಶ ದೊರಶಿಸಿ ಕೊಡುವಲ್ಲಿ ಡಾ.ಜಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅವಕಾಶ ಕಲ್ಲಿಸಿದರೆ, ಸಂವಿಧಾನದ ಆಶಯದಂತೆ ಡಿ.ದೇವರಾಜ ಅರಸರು ಹಲವು ಬಡ ಜನರಿಗೆ, ಶೋಷಿತರಿಗೆ ಹಿಂದುಳಿದವರಿಗೆ ರಾಜಕೀಯ ಶಕ್ತಿ ನೀಡಿದವರು.

ಸಮಾಜದಲ್ಲಿ ತುಳಿತಕ್ಕೆ  ಒಳಗಾದ ಸಮಾಜ  ಜನರನ್ನು ಗುರುತಿಸಿ ಬೆಳೆಸಿದವರು, ಹಿಂದುಳಿದ ಹಾಸ್ಟೆಲ್ ಗಳನ್ನು ನಿರ್ಮಿಸಿ ನನ್ನಂತ ಎಷ್ಟೋ ಹಿಂದುಳಿದವರ ವಿದ್ಯಾರ್ಥಿಗಳಿಗೆ ದಾರಿದೀಪವಾದವರು, ಅರಸ್ ರವರ ಮೌಲ್ಯ, ಚಿಂತನೆ ಹಾಗೂ ಆದರ್ಶಗಳನ್ನು  ಅನುಸರಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಸನ್ಮಾನ:  ಹಿಂದುಳಿದ ವರ್ಗಗಳ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು   ಅಭಿನಂದಿಸಲಾಯಿತು. ಜಯಂತಿಯ ಅಂಗವಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ  ವಿಜೇತರಾದ ಮಕ್ಕಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಚಿಂತಕ ಜೆ.ಮಹದೇವ್ ಮಾತನಾಡಿದರು. ಹುಡಾ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್, ಇಓ ಹೊಂಗಯ್ಯ,  ದೇವರಾಜ್ ಅರಸು ಸಂಘದ ಅಧ್ಯಕ್ಷ ಬಿಳಿಕೆರೆ ರಾಜು, ಅಂಬೇಡ್ಕರ್ ಸಮುದಾಯ ಭವನದ ಸದಸ್ಯ ಮಹದೇವ್, ತಾಲೂಕು ಕುರುಬ ಸಮಾಜದ ಅದ್ಯಕ್ಷ ಡಿ.ಕೆ.ಕುನ್ನೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರತಿ, ಪ್ರಗತಿಪರ ಹೋರಾಟಗಾರರಾದ ಡಿ.ಕುಮಾರ್,  ಕಾಯಕ ಸಮಾಜದ ಅದ್ಯಕ್ಷ ಹೊನ್ನಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಘು,  ಅಕ್ರಮ- ಸಕ್ರಮ ಸಮಿತಿ ಸದಸ್ಯ ಕುಮಾರ್, ಮುಖಂಡರಾದ ಜಯರಾಮ್ ಸೇರಿದಂತೆ ಅನೇಕರು ಹಾಜರಿದ್ದರು

admin
the authoradmin

Leave a Reply