LatestMysore

ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಕಂದಾಯ ಸಚಿವ, ಡಿಸಿಎಂ ಡಾ.ಜಿ.ಪರಮೇಶ್ವರ್ ಬರಪರಿಶೀಲನೆ

ಹುಣಸೂರು(ಮನುಕುಮಾರ್):  ರಾಜ್ಯದ ಕಾನೂನಿನಡಿಯಲ್ಲಿ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರ್ಕಾರದ ನಿಯಮಗಳಡಿಯಲ್ಲೇ ಮಾಡಬೇಕು. ಹಾಗಾಗಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದೇವೆ. ಇನ್ನೊಂದು ವಾರ ಬಿಟ್ಟು ಪರಿಶೀಲನೆ ನಡೆಸಿ, ಆಗ ಈ ವರ್ಗಕ್ಕೆ  ಇನ್ನೂ 50ಕ್ಕೂ   ಸೇರುವ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.

ಮಂಗಳವಾರ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವಮ್ಮ ರವರು ತಮ್ಮ 2 ಎಕರೆ ಜಮೀನಲಿ ಬೆಳೆದಿದ್ದ ಜೋಳದ ಬೆಳೆಯನ್ನು ವೀಕ್ಷಣೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಮುಖ್ಯಮಂತ್ರಿಗಳು ಇಂದು ಗದಗದಲ್ಲಿ ಬರವೀಕ್ಷಣೆ ಮಾಡುತ್ತಿದ್ದಾರೆ. ನಾನು ಇಲ್ಲಿ ಬರ ವೀಕ್ಷಣೆ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಆದೇಶದಂತೆ ಎಲ್ಲ ಸಚಿವರು ತಮಗೆ ನಿಯೋಜಿಸಿರುವ ಜಿಲ್ಲೆಗಳ ಬರ ವೀಕ್ಷಣೆ ನಡೆಸುತ್ತಿದ್ದಾರೆ.

ಆ ನಂತರ ಎಲ್ಲವನ್ನೂ ಒಟ್ಟಾಗಿ ಪರಿಶೀಲಿಸಿ, ರೈತರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು, ಇನ್ಶೂರೆನ್ಸ್ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ನಂತರ ಇನ್ನೆರಡು ವಾರದೊಳಗೆ ಕೇಂದ್ರಕ್ಕೆ ಸಮಗ್ರ ಬರ ವರದಿಯನ್ನು ಸಲ್ಲಿಸುತ್ತೇವೆ. ಆ ಬಳಿಕ ಕೇಂದ್ರದ ತಂಡಗಳು ಬಂದು ಪರಿಶೀಲನೆ ನಡೆಸಿ, ನಂತರವಷ್ಟೇ ಪರಿಹಾರ ಬಿಡುಗಡೆಯಾಗುತ್ತದೆ. ಅದರ ಮೊದಲು ನಮಗೆ ಯಾವುದೇ ಪರಿಹಾರ ಹಣವನ್ನು ನಮಗೆ ಕೊಡುವುದಿಲ್ಲ ಎಂದರು.

ಬಿಳಿಸುಳಿ ರೋಗಕ್ಕೆ ವಿಮೆ ಹಣ ನೀಡಿ…

ತಾಲ್ಲೂಕಿನಲ್ಲಿ ಬೆಳೆದಿರುವ 53000 ಎಕ್ಟೇರ್ ನ ಪೈಕಿ  18000 ಎಕರೆಗೆ ಮುಸುಕಿನ ಜೋಳಕ್ಕೆ ಬಿಳಿಸುಳಿ ರೋಗ ಬಂದಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು, ಜೊತೆಗೆ ಹನಗೋಡು ನೆರಳಕುಪ್ಪೆ ರೈತ ಮಹದೇವ್ ನಾನು 10 ಎಕ್ಟೇರ್ ನಲ್ಲಿ ಜೋಳ ಕೃಷಿ ಮಾಡಿದ್ದು, ಇನ್ಸೂರೆನ್ಸ್ ಕಟ್ಟಿದ್ದೇನೆ,  ಆ ರೋಗ ಇನ್ಶೂರೆನ್ಸ್‌ನಲ್ಲಿ ಕವರ್ ಆಗಲ್ಲ ಎಂದು ಹೇಳುತ್ತಾರೆ ದಯವಿಟ್ಟು ಬಿಳಿಸುಳಿ ಜೋಳಕ್ಕೂ ಪರಿಹಾರ ಕೋಡಿಸಿ,  ಇನ್ಶೂರೆನ್ಸ್ ಕಂಪನಿಯವರೊಂದಿಗೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಯತ್ನ ಮಾಡಬೇಕು   ಎಂದಾಗ ಉಪಮುಖ್ಯಮಂತ್ರಿಗಳು

ಇದನೆಲ್ಲ ತಿಳಿದುಕೊಳ್ಳಲೆಂದೇ ಇಂದು ನಾನು ಬರವೀಕ್ಷಣೆಗೆ ಬಂದಿರುವುದಾಗಿ ಉಪ  ತಿಳಿಸಿ ಕೇಂದ್ರದ ಗಮನಕ್ಕೆ ಇದನ್ನು ತಂದು ಪರಿಹಾರಕ್ಕೆ ಏನು ಮಾಡಬೇಕೆಂದು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುವುದಾಗಿ ತಿಳಿಸಿದರು. ಅಂತಾರಾಷ್ಟ್ರೀಯ ಹವಾಮಾನ ವರದಿಯ ಪ್ರಕಾರ, ಸೆಪ್ಟೆಂಬರ್ ನಲ್ಲಿ ಒಂದನೇ ವಾರ ಅಥವಾ ಎರಡನೇ ವಾರದಲ್ಲಿ ಮಳೆ ಕಂಪ್ಲೀಟ್ ಆಗಿ ನಿಂತು ಹೋಗುತ್ತದೆ ಎಂಬ ಮಾಹಿತಿ ಇದೆ. ಎಲ್ ನಿನೋದಿಂದಾಗಿ 123 ವರ್ಷಗಳ ಬಳಿಕ ಈ ಪರಿಸ್ಥಿತಿ ಇದೆ. ಮಳೆ ಬರುತ್ತದೆ ಎಂದು ಹೇಳಲು ಆಗವುದಿಲ್ಲ. ಹೀಗಾಗಿ ರೈತರಿಗೆ ಮುಂದೆ ಯಾವ ರೀತಿ ಸಹಾಯ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದರು.

ಮೋಡ ಬಿತ್ತನೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೋಡ ಬಿತ್ತನೆ ಮಾಡಲು ಆದೇಶ ಕೊಟ್ಟಿದ್ದಾರೆ. ಈ ಬಗ್ಗೆ ನಮ್ಮ ಟೆಕ್ನಿಕಲ್ ತಂಡದವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಎಷ್ಟರ ಮಟ್ಟಿಗೆ ಸಹಾಯ ಆಗುತ್ತದೆ ಎಂಬುದನ್ನು ನೋಡಬೇಕು. ಟೆಕ್ನಿಕಲ್ ವರದಿಯ ಪ್ರಕಾರ ಹೆಚ್ಚು ಮಳೆ ಬರುವುದಿಲ್ಲ. ಅದು ತುಂತುರು ಮಳೆ ಬಂದ ಹಾಗೆ ಬರುತ್ತದೆ. ಜೊತೆಗೆ ಅದು ಬೆಳೆಗಳಿಗೆ ಸಾಕಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಇದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದರು.

ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಸಸ್ಯ ಬೆಳೆಯುತ್ತಾರೆ. ಆದರೆ ಈ ಬಾರಿ ಹುಣಸೂರು ತಾಲ್ಲೂಕಿನಲ್ಲೇ 16 ಸಾವಿರಕ್ಕೂ ಹೆಚ್ಚು ಹೇಕ್ಟರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ಆದರೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ, ವಾಣಿಜ್ಯ ಬೆಳೆಗಳಿಗೆ ಪರಿಹಾರ ಇಲ್ಲ.

ಹೀಗಾಗಿ ಇದಕ್ಕೆ ರಾಜ್ಯ ಸರ್ಕಾರದ ಪರಿಹಾರವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇಂದು ನಾನು ಬರವೀಕ್ಷಣೆ ಮಾಡಿದ ಬಳಿಕ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಂಪುಟದಲ್ಲಿ ಚರ್ಚೆ ಮಾಡಿ ರೈತರಿಗೆ ಏನು ಸಹಾಯ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಒಂದು ತಾಲ್ಲೂಕಿನಲ್ಲಿ 16 ಸಾವಿರ ಹೆಕ್ಟೇರ್‌ ನಷ್ಟ ಆಗಿದೆ ಎಂದರೆ, ಪಕ್ಕದ 6 ತಾಲ್ಲೂಕುಗಳಲ್ಲಿಯೂ ಇದುವೇ ಪರಿಸ್ಥಿತಿ ಇದೆ. ಹೀಗಾಗಿ ಈ ಕುರಿತು ಚರ್ಚೆ ಮಾಡುತ್ತೇವೆ ಎಂದರು.

ಹುಣಸೂರು ತಾಲ್ಲೂಕಿನ ಕಂದಾಯ ಇಲಾಖೆಯ ಕಟ್ಟಡಗಳು ಸೋರುತ್ತಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಈ ಕುರಿತು ಪ್ರಸ್ತಾವನೆ ಬಂದಿದ್ದರೆ ಅದನ್ನು ಪರಿಶೀಲನೆ ಮಾಡಿ ಮುಂದೆ ನೂತನ ಕಟ್ಟಡವನ್ನು ನಿರ್ಮಿಸಲು ತೀರ್ಮಾನ ಮಾಡುತ್ತೇವೆ ಎಂದರು. ಈ ವೇಳೆ ಹಲವು ರೈತಸಂಘ ಮುಖಂಡರು ಸಚಿವರಿಗೆ ತಾಲ್ಲೂಕಿನ ಅಭಿವೃದ್ಧಿಗಳ ಬಗ್ಗೆ ಮನವಿ ಸಲ್ಲಿಸಿದರು. ನಂತರ ತಾಲ್ಲೂಕು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್ ಭಗವತ್ ಗೀತೆ ಪುಸ್ತಕ ನೀಡಿ ಉಪಮುಖ್ಯಮಂತ್ರಿ ಪರಮೇಶ್ವರನ್ನು ಗೌರವಿಸಿದರು.

ಈ ವೇಳೆ ಹುಣಸೂರು ಶಾಸಕ ಹರೀಶ್‌ಗೌಡ, ಕೆ.ಆರ್.ನಗರ ಶಾಸಕ ರವಿಶಂಕರ್, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ , ಹುಡಾ ಅದ್ಯಕ್ಷ ಹೆಚ್.ಪಿ.ಅಮರ್ ನಾಥ್,  ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅದ್ಯಕ್ಷ ರಾಘು,  ಅಕ್ರಮ- ಸಕ್ರಮ ಸದಸ್ಯ ಕುಮಾರ್,  ತಹಶೀಲ್ದಾರ್ ಮಂಜುನಾಥ್ , ಇಓ ಹೊಂಗಯ್ಯ,  ಮತ್ತು ಕೃಷಿ ಅಧಿಕಾರಿ

ಅನಿಲ್, ತಾ.ಪಂ.ಮಾಜಿ ಅದ್ಯಕ್ಷೆ ಪದ್ಮಮ,  ಯುವ ಕಾಂಗ್ರೆಸ್ ಅದ್ಯಕ್ಷರಾದ ದರ್ಶನ್, ಪೈಸಲ್, ಮುಖಂಡರಾದ ಹೊಸೂರ್ ಕುಮಾರ್, ನಾಗರಾಜ್ ಮಾಲ್ನಾಡಿ, ನಿಂಗರಾಜ ಮಾಲ್ನಾಡಿ, ಸುರೇಂದ್ರ, ಕಾಂತರಾಜ್, ಸೇರಿದಂತೆ ಅನೇಕ ಅಧಿಕಾರಿಗಳು, ಮುಖಂಡರು, ಕಾಂಗ್ರೆಸ್, ಜೆ.ಡಿ.ಎಸ್ ಕಾರ್ಯಕರ್ತರು   ಹಾಜರಿದ್ದರು.

 

admin
the authoradmin

ನಿಮ್ಮದೊಂದು ಉತ್ತರ