LatestNews

ಹುಬ್ಬಳ್ಳಿಯ ಕೆಎಂಸಿಆರ್ ಐನ ಡಾ. ಮುಲ್ಕಿ ಪಾಟೀಲ್ ಗೆ ರಾಜ್ಯಮಟ್ಟದ ಪ್ರಶಸ್ತಿ

ಹುಬ್ಬಳ್ಳಿ: “ಅತ್ಯುತ್ತಮ ಶೈಕ್ಷಣಿಕ ಸಾಧನೆ ಹಾಗೂ ಶಿಕ್ಷಕರಾಗಿ ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನ, ಸಾಮರ್ಥ್ಯ, ಮೌಲ್ಯಗಳು ಮತ್ತು ಮನೋಭಾವಗಳನ್ನು ಬೆಳೆಸುವಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಗುರುತಿಸಿ, 2026ನೇ ಸಾಲಿನ ಐ ಎಂ ಎ   ಕರ್ನಾಟಕ ರಾಜ್ಯ ಶಾಖೆಯ ಶಿಕ್ಷಕರ ದಿನಾಚರಣೆ ಪ್ರಶಸ್ತಿಗೆ  ಕೆ ಎಂ ಸಿ ಆರ್ ಐ ನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್.ವೈ. ಮುಲ್ಕಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಡಾ.    ಮುಲ್ಕಿ ಪಾಟೀಲ್ ಅವರು ಹಲವು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ ಹಲವು ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಈ ಪ್ರಶಸ್ತಿಯನ್ನು ಸೆ. 5ರಂದು  ಬೆಳಿಗ್ಗೆ 10ಕ್ಕೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಹಾಗೂ ಐ ಎಮ್ ಎ – ಇಎಂಎಸ್  ರಾಷ್ಟ್ರೀಯ ಮಟ್ಟದ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು    ಐಎಂಎ  ಕರ್ನಾಟಕ ರಾಜ್ಯ ಶಾಖೆ ಅಧ್ಯಕ್ಷ ಡಾ. ಟಿ.ಎ. ವೀರಭದ್ರಯ್ಯ, ಕಾರ್ಯದರ್ಶಿ ಡಾ. ಸುರಿರಾಜು.ವಿ. ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಜಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಡಾ. ಮುಲ್ಕಿ ಪಾಟೀಲ್ ಅವರಿಗೆ ಕೆಎಂಸಿ ನಿರ್ದೇಶಕರು, ವೈದ್ಯಕೀಯ ಕಾಲೇಜು ಪ್ರಾಚಾರ್ಯರು ಅಭಿನಂದಿಸಿದ್ದಾರೆ

admin
the authoradmin

ನಿಮ್ಮದೊಂದು ಉತ್ತರ