ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಸುಮಾರು 78 ದಶಕಗಳ ಇತಿಹಾಸವಿರುವ ರೈತರ ಜೀವನಾಡಿ ಸಹಕಾರ ಕೃಷಿ ಬ್ಯಾಂಕಿಗೆ 4. ಕೋಟಿ 68 ಲಕ್ಷ ನಷ್ಟ ಉಂಟಾಗಿರುವುದು ನೋವಿನ ಸಂಗತಿ ಎಂದು ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಆರ್.ಕೆ. ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಮಧ್ಯಭಾಗದಲ್ಲಿರುವ ಈ ಬ್ಯಾಂಕಿಗೆ ರೈತರೇ ಜೀವಾಳ, ರೈತರೆ ಇಲ್ಲಿ ಹೆಚ್ಚಿನ 6892 ಸದಸ್ಯರಾಗಿರುವದರಿಂದ, ಪ್ರತಿವರ್ಷ ಬೆಳೆ ಸಾಲಕ್ಕೆ ಬೇಡಿಕೆ ಇದೆ.. ಆದರೆ ನಿಚ್ಚಳವಾಗಿ ನಿವ್ವಳ ಲಾಭವಿಲ್ಲದ ಕಾರಣ ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಆದರಿಂದ ಈಗಿನ ಸರಕಾರ, ಎಸ್.ಎಲ್.ಡಿ.ಬ್ಯಾಂಕಿನಿಂದ 50.ಕೋಟಿ ಹಣ ಸಾಲ ನೀಡಿದರೆ ಸಹಕಾರಿಯಾಗಲಿದೆ ಎಂದರು.
ಕನಿಷ್ಟ ಒಂದು ವರ್ಷಕ್ಕೆ ನಬಾರ್ಡ್ ಬ್ಯಾಂಕಿನಿಂದ 25 ಕೋಟಿ ಸಾಲ ನೀಡಿದರೆ.ಇಲ್ಲಿಯವರೆಗೆ ಎರಡು ಕೋಟಿ ಮುವ್ವತ್ತು ಲಕ್ಷ ನಷ್ಟವಾಗಿದೆ.67 ಸದಸ್ಯರಿಂದ 62 ಲಕ್ಷ 81 ಸಾವಿರ ಸುಸ್ತಿ ಬಾಕಿ ಉಳಿದಿದೆ.5 ಕೋಟಿ 43 ಲಕ್ಷ ಸಾಲ ವಿತರಣೆಯಲ್ಲಿ. ರೈತರಿಂದ ಸಾಲ ವಸೂಲಿ 2.ಕೋಟಿ 40.ಲಕ್ಷ. 3.ಕೋಟಿ 3.ಲಕ್ಷ ವಸೂಲಿ ಯಾಗಿಲ್ಲದಿರುವುದು ನಷ್ಟಕ್ಜೆ ಕಾರಣವಾಗಿದೆ.

ಸಾಲ ವಸೂಲಿಯಲ್ಲಿ ಶೇಕಡ: 79.23.ರಷ್ಟು ಇದ್ದರು ರೈತರಿಂದ ಸಾಲ ಪರಿಪೂರ್ಣ ವಸೂಲಿಯಾಗದೆ 6. 37 .ಲಕ್ಷ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕಿಗೆ ಹೊರೆಯಾಗಿದೆ.1994 ರಲ್ಲಿ ರೈತಾಪಿ ವರ್ಗಕ್ಕೆ ಗೃಹನಿರ್ಮಾಣ ಸಾಲ ಪಡೆದಿದ್ದ 25 ಕುಟುಂಬಗಳು ಸುಮಾರು 28 ಲಕ್ಷ ಸಾಲದ ಬಾಕಿ ಉಳಿಸಿಕೊಂಡಿವೆ ಈ ನಷ್ಟವನ್ನು ಸರಕಾರವೆ ಭರಿಸಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಆದ್ದರಿಂದ ನಾಡಿನ ಕ್ರಿಯಾಶೀಲ ವ್ಯಕ್ತಿತ್ವದ ಮುಖ್ಯಮಂತ್ರಿಗಳಾ ಡಿ.ಕೆ.ಶಿವಕುಮಾರ್ ಹಾಗೂ ಸಹಕಾರಿ ಸಚಿವರು ಈ ಕೂಡಲೆ 25.ರಿಂದ 30. ಹಣ ಬಿಡುಗಡೆ ಮಾಡಿದರೆ. ಗ್ರಾಮೀಣ ಭಾಗದ ರೈತರಿಗೆ ನೆರವಾಗಲಿದೆ ಎಂದು ತಾಲೂಕಿನ ರೈತರ ಪರವಾಗಿ ಮನವಿ ಮಾಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ನಿರ್ದೇಶಕರಾದ ಹೆಚ್.ಸಿ.ರವಿಕುಮಾರ್, ನಿಲವಾಗಿಲು ವಾಸು, ಚಿಕ್ಕಹೆಜ್ಜೂರು ಚಂದ್ರಶೇಖರ್ ಇದ್ದರು








