ಹುಣಸೂರು ತಾಲ್ಲೂಕಿನ ಯಲಚ್ಚನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್ ಗೌಡ ಚಾಲನೆ

ಹುಣಸೂರು(ಮನುಕುಮಾರ್): ಸಮುದಾಯ ಭವನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಅದರ ಸದ್ಬಳಕೆಗೆ ಮುಂದಾಗಬೇಕು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.
ಹುಣಸೂರು ತಾಲ್ಲೂಕಿನ ಯಲಚ್ಚನಹಳ್ಳಿ ಗ್ರಾಮದಲ್ಲಿ 25 ಲಕ್ಷ. ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಹಾಗೂ 15 ಲಕ್ಷ.ರೂ ವೆಚ್ಚದ ನೂತನ ಬಸ್ ಸ್ಟಾಂಡ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಸಮುದಾಯಭವನಕ್ಕೆ 25 ಲಕ್ಷ ರೂ.ಗಳನ್ನು ಈಗಾಗಲೇ ನೀಡಿದ್ದು, ಹೆಚ್ಚುವರಿಯಾಗಿ 15 ಲಕ್ಷ.ರೂಗಳನ್ನು ನಮ್ಮ ಶಾಸಕ ನಿಧಿಯಿಂದಲೇ ನೀಡಿ ಒಟ್ಟು 40 ಲಕ್ಷ.ರೂ ವೆಚ್ಚದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗುವುದು.

ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಸಮುದಾಯ ಭವನವನ್ನು ನಿರ್ಮಿಸಿಕೊಳ್ಳಲು ಆದ್ಯತೆ ನೀಡಬೇಕು. ಭವನಗಳು ನಿರ್ಮಾಣ ಮಾಡಿ ಅವನ್ನು ಹಾಗೇ ಬಿಡುವುದಲ್ಲ, ಸಮುದಾಯ ಕಾರ್ಯಕ್ರಮಗಳಿಗೆ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.
ಸಿಂಗರಮಾರನಹಳ್ಳಿ ಕೆರೆ ಪೈಪ್ ಲೈನ್ ಗೆ ಅನುದಾನ
ಸಿಂಗರಮಾರನಹಳ್ಳಿ ಗ್ರಾಮದ ಕೆರೆಗೆ ನೀರು ತುಂಬಿಸಲು ಏತನೀರಾವರಿ ಯೋಜನೆಯಡ್ಡಿ 01.ಕೋಟಿ ರೂ.ವೆಚ್ಚದ ಪೈಪ್ ಲೈನ್ ಕಾಮಗಾರಿಗೆ ಚಾಲನೆ, ಗ್ರಾಮದ ಒಕ್ಕಲಿಗರ ಸಮುದಾಯ ಭವನಕ್ಕೆ 25.ಲಕ್ಷ.ರೂ ಅನುದಾನ ಹಾಗೂ ಗ್ರಾಮದ ಸಿ.ಸಿ ರಸ್ತೆಗೆ 40 ಲಕ್ಷ.ರೂ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಮಳೆಕೊರತೆ ನೀರನ್ನು ಮಿತವಾಗಿ ಬಳಸಿ
ಈ ಬಾರಿ ಮಳೆ ಕಡಿಮೆಯಾಗಿದ್ದು ಮುಂಬರುವ ದಿನಗಳಲ್ಲಿ ನೀರಿನ ಅಭಾವ ಆಗಲಿದೆ. ಬೆಳೆಗಳನ್ನು ಬಿತ್ತನೆ ಮಾಡುವಾಗ ನೀರಿನ ಮಟ್ಟವನ್ನು ಅರಿತು ಬಿತ್ತನೆ ಮಾಡಿ. ಈಗಾಗಲೇ ಕೆರೆಗಳಲ್ಲಿ ಶೇಖರಣೆಯಾಗಿರುವ ನೀರನ್ನು ಮುಂದಿನ ಬೇಸಿಗೆ ಕಾಲಕ್ಕೆ ಜನಜಾನುವಾರುಗಳಿಗೆ ಅನುಕೂಲವಾಗುವಂತೆ ಎಚ್ಚರಿಕೆವಹಿಸಿ ಮಿತವಾಗಿ ಬಳಸಬೇಕೆಂದು ಸಲಹೆ ನೀಡಿದರು.

ವಿವಿಧ ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ
ಅಸ್ವಾಳು ಗ್ರಾಮದ ಪರಿಶಿಷ್ಟ ಜನಾಂಗದ ಸಿ.ಸಿ ರಸ್ತೆಗೆ 40 ಲಕ್ಷ.ರೂ, ಹನುಮಂತಪುರ ಗ್ರಾಮದ ಪರಿಶಿಷ್ಟ ಜನಾಂಗದ ಸಿ.ಸಿ.ರಸ್ತೆಗೆ ,45 ಲಕ್ಷ.ರೂ. ಬಸವನಹಳ್ಳಿ ಗ್ರಾಮದಲ್ಲಿ ಶುದ್ಧ ನೀರು ಘಟಕಕ್ಕೆ 40 ಲಕ್ಷ.ರೂ. ದೇವಗಳ್ಳಿ ಗ್ರಾಮದಲ್ಲಿ ಶುದ್ದನೀರು ಘಟಕಕ್ಕೆ 7 ಲಕ್ಷ.ರೂ.ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಪಿ.ಡಿ.ಓ.ರನ್ನು ತರಾಟೆಗೆ ತೆಗೆದುಕೊಂಡ ಶಾಸಕರು
ಹಣ ಬರುತ್ತಿಲ್ಲ, ನಾವುಗಳು ಏನು ಮಾಡುವುದು, ಎಂದ ಸಿಂಗರಮಾರನಹಳ್ಳಿ ಪಿ.ಡಿ.ಓ ಮಂಜುಳಾ ಮಾತಿಗೆ ಗರಂ ಆದ ಶಾಸಕರು ನಮಗೂ ಅನುದಾನ ಬರುತ್ತಿಲ್ಲ, ಆದರೆ ಸಾರ್ವಜನಿಕ ಸೇವೆಗಾಗಿ ಇರುವ ನಾವುಗಳು ಇಂತಹ ಮಾತುಗಳನ್ನು ಹೇಳುವುದು ತರವಲ್ಲ, ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಲು ಕಿವಿಮಾತು ಹೇಳಿದ ಅವರು ತಕ್ಷಣ ಜಿ.ಪಂ.ಕಾರ್ಯನಿರ್ವಹಣಾ ಅಧಿಕಾರಿ ಯುಕೇಶ್ ಕುಮಾರನ್ನು ದೂರವಾಣಿ ಮುಖಾಂತರ ಸಂಪರ್ಕಸಿ ಮಾತನಾಡಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿದೀಪ ಸೇರಿದಂತೆ ಇನ್ನೂ ಹತ್ತು ಹಲವು ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ನನ್ನ ಕ್ಷೇತ್ರದ ಸಾರ್ವಜನಿಕರು ತಂದಿದ್ದು ಪಿ.ಡಿ.ಓ ಸ್ಥಳದಲ್ಲಿ ಇದ್ದು, ಅನುದಾನದ ಕೊರತೆಯ ಬಗ್ಗೆ ಮಾಹಿತಿ ನೀಡಿದರು, ಅದಕ್ಕಾಗಿ ತಮಗೆ ಸಮಸ್ಯೆ ತಿಳಿಸಿದ್ದು, ಶೀಘ್ರವಾಗಿ ಬಗ್ಗೆಹರಿಸಿಬೇಕೆಂದು ತಿಳಿಸಿದರು.

ಇದೇ ವೇಳೆ ಶುದ್ದ ನೀರು ಘಟಕಕ್ಕೆ ಜಾಗ ನೀಡಿದ ದಾನಿ ದೇವಗಳ್ಳಿ ನಾಗರಜ ಆರಸ್ ರವರಿಗೆ ಗೌರವಿಸಲಾಯಿತು. ಜಿ.ಪಂ.ಮಾಜಿ ಸದಸ್ಯ, ಸುರೇಂದ್ರ, ತಾ.ಪಂ.ಮಾ.ಸದಸ್ಯ ಪ್ರಭಾಕರ್, ಜೆ.ಡಿ.ಎಸ್ ಮುಖಂಡರಾದ ಅಸ್ವಾಳ್ ಕೆಂಪೇಗೌಡ, ಸತೀಶ್ ಪಾಪಣ್ಣ, ಗಾಗೇನಹಳ್ಳಿ ರಾಜೇಶ್, ಗ್ರಾಮದ ಗ್ರಾ.ಪಂ.ಮಾ.ಅದ್ಯಕ್ಷ,. ದೇವರಾಜ್, ಸದಸ್ಯರಾದ ಅಂಕೇಗೌಡ, ಕುಮಾರ್, ವೆಂಕಟೇಶ್, ಮುಖಂಡರಾದ ಕುಟ್ಟವಾಡಿ ಎಪಿಎಂಸಿ ಮಾಜಿ ನಿರ್ದೇಶಕ ರವೀಂದ್ರ, ನಿರ್ಮಿತಿ ಕೇಂದ್ರದ ಅದಿಕಾರಿ ನಿರಂಜನ್, ಪಿ.ಡಿ.ಓ.ಎಂ.ಮಂಜುಳಾ, ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.







