ಯಳಂದೂರಲ್ಲಿ ವಿಶ್ವಕರ್ಮ ಜಯಂತಿ ಆಚರಣೆ.. ವಿಶ್ವಕರ್ಮರು ಎಲ್ಲರಿಗೂ ಮಾನ್ಯರು:ಎಸ್.ಪುಷ್ಪಲತಾ

ಯಳಂದೂರು(ನಾಗರಾಜ ವೈ.ಕೆ.ಮೋಳೆ): ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಮಹಾನ್ ವ್ಯಕ್ತಿ ಮಹರ್ಷಿ ವಿಶ್ವಕರ್ಮರಾಗಿದ್ದಾರೆ. ಈ ಬಗ್ಗೆ ನಂಬಿಕೆ ಬರಬೇಕಾದರೆ ಸನಾತನ ಹಿಂದೂ ಧರ್ಮವನ್ನು ಮೊದಲು ನಂಬುವ ಕೆಲಸವನ್ನು ಮಾಡಬೇಕು, ಇವರನ್ನು ಒಂದೇ ವರ್ಗಕ್ಕೆ ಸೀಮಿತಗೊಳಿಸದೆ ಎಲ್ಲರೂ ಪೂಜಿಸಬೇಕು ಎಂದು ಉಪನ್ಯಾಸಕಿ ಎಸ್. ಪುಷ್ಪಲತಾ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಊಕು ಆಡಳಿತದ ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ವಿಶ್ವಕರ್ಮ ಜಯಂತಿಯನ್ನು ಕೇವಲ ಒಂದೇ ಒಂದು ಜನಾಂಗಕ್ಕೆ ಸೀಮಿತಗೊಳಿಸಲಾಗಿದೆ. ಇದು ಹೀಗಾಗಬಾರದು, ಇವರೊಬ್ಬ ದೇವ ಶಿಲ್ಪಿಯಾಗಿದ್ದರು.
ವಿಶ್ವಕರ್ಮರು ಇಡೀ ವಿಶ್ವಕ್ಕೆ ಅನ್ನ ನೀಡುವ ರೈತನಿಗೆ ಭೂಮಿಯನ್ನು ಉಳುಮೆ ಮಾಡುವ ಸಲಕರಣೆಗಳನ್ನು ಮಾಡಿಕೊಟ್ಟ, ಎಲ್ಲರೂ ಸುಂದರವಾಗಿ ಕಾಣುವ ಆಭರಣವನ್ನು ತಯಾರಿಸುವ ಕುಲಕಸುಬಿನವರಾಗಿದ್ದು ಈ ಜನಾಂಗದ ಮೂಲ ಪುರುಷ ವಿಶ್ವಕರ್ಮರು ರೈತರೂ, ಸೇರಿದಂತೆ ವಿಶ್ವದ ಎಲ್ಲಾ ಜನಾಂಗಗಳ ಮಿತ್ರರಾಗಿದ್ದಾರೆ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಈ ಜನಾಂಗಕ್ಕೆ ಸಂವಿಧಾನದ ಅಡಿಯಲ್ಲಿ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನು ನಮ್ಮ ಸರ್ಕಾರ ನೀಡಿದೆ. ನಮ್ಮ ರಾಜ್ಯವೂ ಸೇರಿದಂತೆ ಇಡೀ ದೇಶದ ದೇಗುಲಗಳಲ್ಲಿ ಕಲೆಯ ಅಧ್ಬುತ ನಿದರ್ಶನಗಳನ್ನು ನೀಡಿ ಇದನ್ನು ಜಗದ್ವಿಖ್ಯಾತಗೊಳಿಸಿದ ಸಮುದಾಯ ಇದಾಗಿದೆ. ಇದಕ್ಕೆ ಯಳಂದೂರು ಪಟ್ಟಣದಲ್ಲಿರುವ ಬಳೇಮಂಟಪದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟ ಕಲ್ಲಿನ ಬಳೆಗಳ ಸರಪಳಿ ಒಂದು ಉತ್ತಮ ನಿದರ್ಶನವಾಗಿದೆ ಎಂದರು.
ತಹಶೀಲ್ದಾರ್ ಎಸ್.ಎಲ್. ನಯನ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ತಾಲೂಕು ವಿಶ್ವಕರ್ಮ ಜನಾಂಗದ ಅಧ್ಯಕ್ಷ ನಾಗರಾಜು, ಎಡಿಎಲ್‌ಆರ್ ಉಮೇಶ್, ಕೃಷಿ ಇಲಾಖೆಯ ಅಮೃತೇಶ್ವರ್, ಮಹದೇವಯ್ಯ, ರೇಚಣ್ಣ, ರಾಜಸ್ವ ನಿರೀಕ್ಷಕ ಯದುಗಿರಿ ಸೇರಿದಂತೆ ಇತರರು ಇದ್ದರು






