LatestMysore

ಸಮುದ್ಯತಾ ಕೇಳುಗರ ಸಂಘದ ಧ್ಯೇಯ ವಾಕ್ಯ “ತರಂಗದೊಂದಿಗೆ ಭಾವಾಂತರಂಗ”: ಕಲಾಪ್ರಸಾದ್ ಗೆ ಗೌರವ ಸಮರ್ಪಣೆ

ಮೈಸೂರು: ಮೈಸೂರಿನ ವಿಜಯ ವಿಠಲ ಶಾಲಾ ಅವರಣದಲ್ಲಿ ಸಮುದ್ಯತಾ ಕೇಳುಗರ ಸಂಘದ 14ನೇ ವಾರ್ಷಿಕೋತ್ಸವ  ನಡೆಯಿತು. ಈ ಕಾರ್ಯಕ್ರಮದ ಆಯೋಜನೆಗೂ ಮುಂಚಿತವಾಗಿ ಬಳಗದಲ್ಲಿ ಎಲ್ಲಾ ಸದಸ್ಯರಿಗೂ ನವನಾವಿನ್ಯ, ಅರ್ಥಪೂರ್ಣ ಧ್ಯೇಯ ವಾಕ್ಯ ನೀಡಲು ತಿಳಿಸಲಾಗಿತ್ತು, ಇಪ್ಪತ್ತಕ್ಕೂ ಹೆಚ್ಚು ಕೇಳುಗರು ಭಾಗವಹಿಸಿದ್ದರು.

ಅತ್ಯುತ್ತಮ ಧ್ಯೇಯ ವಾಕ್ಯ ನೀಡಿದ ಬಳಗದ ಕ್ರಿಯಾಶೀಲ ಸದಸ್ಯೆ ಕಲಾಪ್ರಸಾದ್ ರವರು ಆಯ್ಕೆಯಾಗಿದ್ದಾರೆ. ಅವರು ನೀಡಿದ ಧ್ಯೇಯ ವಾಕ್ಯ “ತರಂಗದೊಂದಿಗೆ ಭಾವಾಂತರಂಗ” ಆಗಿದ್ದು, ಸಮಾರಂಭದ ವೇದಿಕೆಯಲ್ಲಿ ಎಲ್ಲಾ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಘೋಷಣೆ ಮಾಡಲಾಯಿತು.

ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಇದನ್ನ ಬಳಸಿಕೊಳ್ಳಲಾಗುವುದು ಎಂದು ಸಮುದ್ಯತಾ ಕೇಳುಗರ ಸಂಘದ ಅಧ್ಯಕ್ಷರಾದ  ಕಣ್ಣೂರು ವಿ ಗೋವಿಂದಾಚಾರಿ ರವರು ತಿಳಿಸಿದ್ದಾರೆ.

ಅಂದು ಕಾರ್ಯಕ್ರಮಕ್ಕೆ ಹಾಜರಾಗದಿದ್ದಕ್ಕೆ ನೆನ್ನೆ ಕಲಾಪ್ರಸಾದ್ ರವರ ಮನೆಯಲ್ಲಿಯೇ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಾಚಾರಿ, ಕಾರ್ಯದರ್ಶಿ ಟಿ ಎನ್ ರಾಜೇಶ್ವರಿ, ಖಜಾಂಚಿ ವಿಶ್ವನಾಥ್, ಸದಸ್ಯರಾದ ರಮಾ ಅಜಿತ್, ಭಗವತಿ, ಕಾಳಿಹುಂಡಿ ಶಿವಕುಮಾರ್ ಹಾಜರಿದ್ದರು. ಅಲ್ಲದೆ  ಕಲಾಪ್ರಸಾದ್ ರವರ ಅತ್ತೆ ಶತಾಯುಷಿ ಶ್ರೀಮತಿ ಅನಂತ ಲಕ್ಷ್ಮಿ ಮತ್ತು ಪತಿ ವಿಶ್ವ ಪ್ರಸಾದ್ ರವರು ಕೂಡ ಭಾಗಿಯಾದರು.

admin
the authoradmin

ನಿಮ್ಮದೊಂದು ಉತ್ತರ