LatestMysore

ಕೆ.ಆರ್.ನಗರ ಬಸವಜಯಂತಿ ಕಾರ್ಯಕ್ರಮದಲ್ಲಿ ಹಾಲಿ, ಮಾಜಿ ಶಾಸಕರ ಪೈಪೋಟಿ… ಆಗಿದ್ದೇನು?

ಕೆ.ಆರ್.ನಗರ(ಸಂಘಟನೆ ಮಂಜುನಾಥ್):  ಕೆ ಆರ್ ನಗರ ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸವ ಭವನ ನಿರ್ಮಾಣಕ್ಕೆ ಹಾಲಿ ಶಾಸಕ ಡಿ ರವಿಶಂಕರ್ ಮಾಜಿ ಸಚಿವ ಸಾರಾ ಮಹೇಶ್ ಅವರ ನಡುವೆ ನಾನು ನಿರ್ಮಿಸಿ ಕೊಡುತ್ತೇನೆ ನಾನು ನಿರ್ಮಿಸಿ ಕೊಡುತ್ತೇನೆ ಎಂಬ ಪೈಪೋಟಿಗೆ ನಿಂತಂತೆ ವೇದಿಕೆಯಲ್ಲಿಯೇ ಆಕ್ರೋಶಭರಿತರಾಗಿ ಮಾತನಾಡಿದ ಪ್ರಸಂಗ ಬಸವಜಯಂತಿ ಕಾರ್ಯಕ್ರಮದಲ್ಲಿ ನಡೆಯಿತು.

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮತ್ತು ವೀರಶೈವ ಮಹಾಸಭಾಧ್ಯಕ್ಷ ಪಂಚಾಯತ್ ರಾಜ್ಯ ಸಚಿವ ಈಶ್ವರ್ ಖಂಡ್ರೆ ಬರುವುದು ಸ್ವಲ್ಪ ತಡವಾದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ವಿಜಯೇಂದ್ರ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಸೇರಿದಂತೆ ಸ್ವಾಮೀಜಿಗಳು ವಿವಿಧ ಮುಖಂಡರು ಇದ್ದ ವೇದಿಕೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ಬಸವ ಜಯಂತಿ ಕಾರ್ಯಕ್ರಮ ಕುರಿತು ಮಾತನಾಡಲು ಅವಕಾಶ ನೀಡಿದರು.

ಮಾಜಿ ಸಚಿವ ಸಾರಾ ಮಹೇಶ್ ಮಾತನಾಡಿ ಪಟ್ಟಣದ ಹೃದಯ ಭಾಗದಲ್ಲಿ ಬಸವ ಭವನ ನಿರ್ಮಾಣಕ್ಕೆ ಭೂಮಿಯನ್ನು ಗುರುತಿಸಿ ಭೂಮಿ ಪೂಜೆ ಮಾಡಿ ಭವನ ಕಟ್ಟಲು ಅನುದಾನ ನೀಡಿ ಪ್ರಾರಂಭ ಮಾಡಿದಾಗ ಕೆಲವು ಅಡೆತಡೆಗಳು ಬಂದಿದ್ದರಿಂದ ವೀರಶೈವ ಕ್ಷೇಮಾಭಿವೃದ್ಧಿ ಸಂಘಕ್ಕೆ ಭೂಮಿ ಮಂಜೂರಾಗಲು ತಡವಾದ್ದರಿಂದ ಅರ್ಧಕ್ಕೆ ಕಾಮಗಾರಿ ನಿಂತಿದೆ ಎಂದು ನೋವಿನಿಂದ ನುಡಿದರು.

ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಸವ ಭವನ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂದಿನ ಬಸವ ಜಯಂತಿ ಕಾರ್ಯಕ್ರಮ ನಡೆಯುವ ವೇಳೆಗೆ ಉದ್ಘಾಟನೆ ಮಾಡಲು ಸದಾ ನಾನು ಬದ್ಧನಿದ್ದು ಕ್ಷೇತ್ರದ ಎಲ್ಲ ವೀರಶೈವ ಮುಖಂಡರು ಸಹಕಾರ ನೀಡುವಂತೆ ಮನವಿ ಮಾಡಿ ಬಸವ ಜಯಂತಿಯ ಶುಭಾಶಯಗಳು ಕೋರಿ ತೆರಳಿದರು.

ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಿ ರವಿಶಂಕರ್ ಹಿಂದೆ ಅಧಿಕಾರದಲ್ಲಿದ್ದಾಗ ಮಾಡದ ನಾಯಕರು ಇಂದು ಬಸವಭವನ ನಾನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳುತ್ತಿರುವುದು ಏನು ಉದ್ದೇಶ ಎಂದು ಪ್ರಶ್ನಿಸಿದಾ ಶಾಸಕರು ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆಯನ್ನು ನೀಡಬಾರದೆಂದು ಮಾಜಿ ಸಚಿವರಿಗೆ ಸಂದೇಶ ರವಾನಿಸಿದರು.

ನಾನು ವೇದಿಕೆಯಲ್ಲಿ ನಿಂತು ಗಟ್ಟಿಯಾಗಿ ಮಾತನಾಡಲು ನನ್ನ ಧ್ವನಿಯಾಗಿ ನಿಂತು ಅತಿ ಹೆಚ್ಚು ಶಕ್ತಿ ನೀಡಿದ ವೀರಶೈವ ಸಮುದಾಯಕ್ಕೆ ನಾನು ಸದಾ ಋಣಿಯಾಗಿದ್ದು ಈಗಾಗಲೇ ಬಸವಭವನದ ಭೂಮಿಯ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಹೆಸರಿಗೆ ದಾಖಲೆಯನ್ನು ಮಾಡಿಸಿದ್ದು ಇನ್ನೆರಡು ಮೂರು ದಿನದಲ್ಲಿ ನಮ್ಮ ಕೈ ಸೇರಲಿದ್ದು ಈಗ ಮುಖ್ಯಮಂತ್ರಿ ವಿವೇಚನೆಯಡಿ ಒಬ್ಬ ಶಾಸಕರಿಗೆ 20 ಕೋಟಿ ಅನುದಾನವನ್ನು ನೀಡುತ್ತಿದ್ದು ಅದರಲ್ಲಿ ಒಂದು ಕೋಟಿ ಅನುದಾನವನ್ನು ಬಸವ ಭವನ ನಿರ್ಮಾಣಕ್ಕೆ ನೀಡುತ್ತಿದ್ದು ಅದರ ಜೊತೆಗೆ ನನ್ನ ಸ್ವಂತ ಹಣದಿಂದ ಭವನದ ಪೂರ್ಣ ಜವಾಬ್ದಾರಿಯನ್ನು ನಾನೇ ಬರುತ್ತೇನೆ ಎಂದು ಭರವಸೆ ನೀಡಿದರು.

ಒಟ್ಟಾರೆಯಾಗಿ ಕ್ಷೇತ್ರದ ವೀರಶೈವ ಮುಖಂಡರು ಮತ್ತು ಮಹಾಜನತೆ ಇಬ್ಬರು ನಾಯಕರ ಬಸವ ಭವನ ನಿರ್ಮಾಣಕ್ಕೆ ನಾ ಮುಂದು ನೀ ಮುಂದು ಎಂಬ ಹೇಳಿಕೆ ಚರ್ಚೆಯ ವಿಷಯವಾಗಿತ್ತು.

admin
the authoradmin

ನಿಮ್ಮದೊಂದು ಉತ್ತರ