LatestMysoreNews

ಮೈ ನಾ ಲೋಕೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆ:ಕಾಯಪಂಡ ವಿಷ್ಣು ನಾಚಪ್ಪ

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಮೈ ನಾ ಲೋಕೇಶ್ ಅವರಿಗೆ ಒಂದೇ ವಾರದಲ್ಲಿ ಎರಡು ದೊಡ್ಡ ಗೌರವ!

1 ದಿನಾಂಕ 13-11-2026 : ಮೈಸೂರು ವಿಮಾನ ನಿಲ್ದಾಣದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಕ್ಷಣ.  2 ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ : ಗದಗ್‌ನ ಡಾ. ಎ. ಬಿ. ಹಿರೇಮಠ ಪ್ರತಿಷ್ಠಾನ ನೀಡುವ ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಲೇಖಕ ಶ್ರೀ ಮೈ ನಾ ಲೋಕೇಶ್ ಅವರು ಭಾಜನರಾಗಿರುವುದು.

ನಾನು ಇವತ್ತು ಕೊಡಗಿನ ನೈಜ ಧ್ವನಿ ಮೂಲಕ ಬರೆಯುತ್ತಿರುವ ಲೇಖನಕ್ಕೆ ಮುಖ್ಯ ಕಾರಣವೇ ಮೈ ನಾ ಲೋಕೇಶ್ ಅವರು. ಅವರೊಂದಿಗಿನ ಒಡನಾಟ ನನ್ನನ್ನು ಲೇಖನ ಬರೆಯುವ ಮಟ್ಟಕ್ಕೆ ಕೊಂಡೊಯ್ಯುವಂತೆ ಮಾಡಿತು. ನನ್ನ ತರಹ ನೂರಾರು ಜನರ ಪ್ರತಿಭೆಯನ್ನು ಗುರುತಿಸಿ, ಅವರನ್ನು ಮೇಲೆತ್ತಲು ನಿರಂತರವಾಗಿ ಶ್ರಮಿಸುತ್ತಿರುವುದು ಇವರ ವ್ಯಕ್ತಿತ್ವದ ಮತ್ತೊಂದು ಮುಖ. ಇವರ ಮಾರ್ಗದರ್ಶನದಲ್ಲಿ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ ಮೆಂಟ್ ಟ್ರಸ್ಟ್ ವತಿಯಿಂದ ಸಂಕಷ್ಟದ ಸಮಯದಲ್ಲಿ ಅನೇಕರಿಗೆ ರಕ್ತ ಒದಗಿಸುವ ಸೇವೆಯನ್ನು ಮಾಡುತ್ತಿದ್ದೇವೆ. ಎಲ್ಲದಕ್ಕೂ ಪ್ರೇರಣೆ ಮೈ ನಾ ಲೋಕೇಶ್ ಅವರೇ.

ಮೈ ನಾ ಲೋಕೇಶ್ ಅವರು ಸುಮಾರು 20 ಸಂಘಟನೆಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಾಗಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕೆ ವಿವಿಧ ಸಮಾಜಗಳು ಕೊಡುತ್ತಿರುವ ಗೌರವ. ಕೊಡಗಿನಿಂದ ಬರುವ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಮಾಡಿಸಿಕೊಟ್ಟಿದ್ದಾರೆ. ಕೊಡಗಿನಿಂದ ಬರುವ ರೋಗಿಗಳಿಗೂ ತಮ್ಮ ಕೈಯಿಂದ ಆಗುವ ಸಹಾಯ ಹಸ್ತವನ್ನು ಮಾಡಿಸಿಕೊಟ್ಟಿದ್ದಾರೆ. ಅಪರಿಚಿತ ಊರಿನಲ್ಲಿ ಒಂದು ಕರೆಗೆ ಓಡಿ ಬರುವ ಇವರ ಮನಸ್ಸು ನಿಜಕ್ಕೂ ದೊಡ್ಡದು.

ನಿಮ್ಮ ಪರಿಶ್ರಮಕ್ಕೆ, ನಿಮ್ಮ ಸರಳತೆಗೆ, ನಿಮ್ಮ ಸಾಹಿತ್ಯ ಸೇವೆಗೆ ಸಿಕ್ಕಿರುವ ಈ ಗೌರವ ನಮಗೆಲ್ಲರಿಗೂ ಹೆಮ್ಮೆ ತಂದಿದೆ. ರಾಜಕೀಯ ಕ್ಷೇತ್ರದಲ್ಲೂ ಸಹ ನಿಮ್ಮಂತಹ ಸೇವಾ ಮನೋಭಾವದ ವ್ಯಕ್ತಿಗಳು ಮುಂದೊಂದು ದಿನ ಉನ್ನತ ಸ್ಥಾನಕ್ಕೆ ಬರಬೇಕು ಎನ್ನುವುದೇ ನಮ್ಮೆಲ್ಲರ ಹಾರೈಕೆ. ಈ ಸಂತೋಷ, ಈ ಗೌರವ ನಿಮಗೆ ಇನ್ನೂ ಹೆಚ್ಚಿನ ಯಶಸ್ಸು, ಇನ್ನೂ ಹೆಚ್ಚಿನ ಸಂತೋಷವನ್ನು ತರಲಿ ಎಂದು ಮನಸಾರೆ ಹಾರೈಸುತ್ತೇವೆ. ಮತ್ತೊಮ್ಮೆ ಮನಃಪೂರ್ವಕ ಅಭಿನಂದನೆಗಳು ಲೋಕೇಶ್ ಅವರೇ…..

admin
the authoradmin

ನಿಮ್ಮದೊಂದು ಉತ್ತರ