LatestState

ಹುಷಾರ್ ಈ ಔಷಧಿಗಳನ್ನು ಸೇವಿಸುವ ಮುನ್ನ ಎಚ್ಚರವಿರಲಿ… ಸರ್ಕಾರದಿಂದಲೇ ಬಳಕೆ ಮಾಡದಂತೆ ಘೋಷಣೆ!

ಬೆಂಗಳೂರು: ನಾವು ರೋಗದಿಂದ ಮುಕ್ತರಾಗಲು ಒಂದಲ್ಲ  ಒಂದು ರೀತಿಯ ಮಾತ್ರೆ, ಟಾನಿಕ್ ಸೇವಿಸುವುದಲ್ಲದೆ, ಮುಖದ ಕಾಂತಿ ಹೆಚ್ಚಿಸಲು ಕೆಲವು ಕಾಂತಿವರ್ಧಕಗಳನ್ನು ಬಳಸುತ್ತಿರುತ್ತೇವೆ. ಆದರೆ ಆ ಔಷಧಿಗಳು ನಿಜಕ್ಕೂ ಗುಣಮಟ್ಟದ್ದೇ ಎಂಬುದರ ಬಗ್ಗೆ ಆಲೋಚಿಸುವುದೇ ಇಲ್ಲ. ಇವತ್ತು ಎಲ್ಲವೂ ಗುಣಮಟ್ಟ ರಹಿತ ಮತ್ತು ನಕಲಿಯದ್ದೇ ಆಗಿರುವ ಕಾಲದಲ್ಲಿ ಔಷಧಿಯೂ ಗುಣಮಟ್ಟವೂ ನಕಲಿಯಾದರೆ ಜನಸಾಮಾನ್ಯರ ಗತಿ ಏನು?

ಸಾಮಾನ್ಯವಾಗಿ ಔಷಧಿಗಳ ಮೇಲೆ ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯ ಕಣ್ಣಿಟ್ಟಿರುತ್ತದೆ. ಅಷ್ಟೇ ಅಲ್ಲದೆ ಅವುಗಳ ಗುಣಮಟ್ಟವನ್ನು ಪ್ರಯೋಗಕ್ಕೊಳಪಡಿಸುತ್ತಾ ಬಂದಿದೆ. ಇದೀಗ ಇಂತಹ ಪ್ರಯೋಗದ ವೇಳೆ ಹಲವು ಔಷಧಿ ಮತ್ತು ಕಾಂತಿ ವರ್ಧಕಗಳು ಉಪಯೋಗಕ್ಕೆ ಯೋಗ್ಯವಲ್ಲ ಎಂಬುದು ಪ್ರಯೋಗಾಲಯ ನೀಡಿದ ವರದಿಯಿಂದ ತಿಳಿದು ಬಂದಿದ್ದು ಅದನ್ನು ಉಲ್ಲೇಖಿಸಿ  ಸರ್ಕಾರಿ ವಿಶ್ಲೇಷಕರು ವಿವಿಧ ಔಷಧಿ ಮತ್ತು ಕಾಂತಿವರ್ಧಕಗಳನ್ನು ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರಲ್ಲಿ ಫಲವಂತಿಕೆ ದರ ಇಳಿಯುತ್ತಿದೆಯಾ? ಇದಕ್ಕೆ ಕಾರಣಗಳೇನು? ತಜ್ಞ ವೈದ್ಯರು ಹೇಳುವುದೇನು? ಇಲ್ಲಿದೆ ಮಾಹಿತಿ….

ಹಾಗಾದರೆ ಯಾವ ಔಷಧಿಗಳು ಯೋಗ್ಯವಲ್ಲ ಎಂಬುದನ್ನು ನೋಡಿದ್ದೇ ಆದರೆ ಗೋವಾದ ಮೆ. ಪುನಿಷ್ಕ ಇನ್‍ ಜೆಕ್ಟಬಲ್ ಪ್ರೈ.ಲಿಮಿಟೆಡ್‍ನ ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ ಐಪಿ 0.9% ಡಬ್ಲೂ/ವಿ (ಎನ್‍ಎಸ್), ಬ್ಯಾಚ್ ಸಂಖ್ಯೆ ಟಿಐ204 ಎ002, ಟಿಐ404 ಬಿ024, ಯುಬಿ404 ಬಿ021,  ಅಹಮದಬಾದ್‍ ನ  ಮೆ. ಕೇರ್‍ವಿನ್ ಫಾರ್ಮಾ ಸ್ಯೂಟಿಕಲ್ಸ್ (ಗುಜರಾತ್) ಪ್ರೈ. ಲಿಮಿಟೆಡ್‍ನ   ಫೆನಿರಮೈನ್ ಮಲೇಟ್ ಇನ್‍ ಜೆಕ್ಷನ್ ಐಪಿ (ಕೇರ್ ವಿಲ್), ಜಮ್ಮುವಿನ ಮೆ. ವಿವೇಕ್ ಫಾರ್ಮಾ ಕೇಮ್ (ಇಂಡಿಯಾ) ಲಿಮಿಟೆಡ್‍ನ ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ 500 ಎಂಜಿ, ಡಿಸ್ಟ್ ಸೊಲನ್‍ನ (ಹೆಚ್.ಪಿ.) ಇಂಡಿಯಾದ ಮೆ. ಬಯೋಡೀಲ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್‍ನ ಮುಪಿರೋಸಿನ್ ಆಯಿಂಟ್‍ಮೆಂಟ್ ಐಪಿ (ಮುಪಿಫೀಟ್).

ಸಿಲ್ವಾಸ್ಸ್‍ನ ಮೆ. ಪೆಂಟಾ ಫಾರ್ಮಾಸ್ಯೂಟಿಕಲ್ಸ್‍ ನ ಡೆಕ್ಸಾಮೆಥಾಜೋನ್ ಟ್ಯಾಬ್ಲೆಟ್ಸ್ ಐ.ಪಿ. 0.5 ಎಂಜಿ, ಹರಿದ್ವಾರದ ಮೆ. ಎಬಿಓಡಿ ಫಾರ್ಮಾಸ್ಯೂಟಿಕಲ್ಸ್‍ ನ ಪ್ಯಾಂಟಾಸ್-ಡಿ (ಪ್ಯಾಂಟೋಫ್ರಜೋಲ್  ಅಂಡ್ ಡೋಮ್‍ ಫೆರಿಡನ್ ಟ್ಯಾಬ್ಲೆಟ್ಸ್), ಜಯ್‍ ಪುರದ ಮೆ. ವಿವೇಕ್ ಫಾರ್ಮಾಕೇಮ್ (ಇಂಡಿಯಾ) ಲಿಮಿಟೆಡ್‍ನ ಸಿಪ್ರೋಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್  ಟ್ಯಾಬ್ಲೆಟ್ಸ್ ಐಪಿ 250 ಎಂಜಿ, ಗೋವಾದ ಮೆ. ಪುನಿಷ್ಕ ಇನ್‍ ಜೆಕ್ಟಬಲ್ ಪ್ರೈ.ಲಿಮಿಟೆಡ್‍ ನ ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲೂ/ವಿ (ಎನ್‍ಎಸ್) ಬ್ಯಾಚ್ ಸಂಖ್ಯೆ ಟಿಲ್ 504ಇ006, ತಾನದ ಮೆ. ನೆಪ್ಚೂನ್ ಲೈಫ್ ಸೈನ್ಸ್‍ಸ್ ಪ್ರೈ ಲಿಮಿಟೆಡ್‍ ನ  ಬೈಗೋ ಸಲೂಷನ್ (ಪೋವಿಡನ್ ಅಯೋಡಿನ್ ಸಲೂಷನ್ ಐ.ಪಿ).

ಇದನ್ನೂ ಓದಿ: ‘ಇ-ಸಂಜೀವಿನಿ ಟೆಲಿ ಮೆಡಿಸಿನ್ಸ್’… ರೋಗಿಗಳು ಮನೆಯಲ್ಲಿಯೇ ಕುಳಿತು ವೈದ್ಯರ ಸಲಹೆ ಪಡೆಯಲು ಸಹಕಾರಿ

ಸೋಲನ್‍ನ ಮೆ. ವೆರಾಕ್ಸ್ ಲೈಫ್ ಸೈನ್ಸ್‍ ಸ್ ಪ್ರೈ. ಲಿಮಿಟೆಡ್‍ನ ಎಪ್ರೋಜ್-50 (ಎಪರಿಸೋನ್ ಹೆಚ್‍ಸಿಎಲ್ ಟ್ಯಾಬ್ಲೆಟ್ಸ್), ಅಹಮದಬಾದ್‍ ನ ಮೆ. ಎಡ್ಕೆಮ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್‍ನ ಅಸಿವೇವ್ (ಎನೆಸ್ಥಿಟಿಕ್, ಅಚಿಟಿಸಿಡ್ ಅಂಡ್ ಅಚಿಟಿಪ್ಲಟುಲೆಮಟ್ ಓರಲ್ ಸಸ್‍ ಫೆನ್‍ ಶನ್), ಗೋವಾದ ಮೆ. ಪುನಿಷ್ಕ ಇನ್‍ ಜೆಕ್ಟಬಲ್ ಪ್ರೈ.ಲಿಮಿಟೆಡ್‍ ನ ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲೂ/ವಿ (ಎನ್‍ಎಸ್) ಬ್ಯಾಚ್ ನಂ.ಯುಎ404ಬಿ021,  ಸೋಲನ್‍ ನ ಮೆ. ಹನುಚೆಮ್ ಲ್ಯಾಬೋರೇಟರಿಸ್‍ನ ಕ್ಯಾಲ್ಸಿಯಂ ಅಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ (ಜೆನಿಬೋನ್ 500), ಫಲ್ಘರ್‍ನ  ಮೆ. ಬಿಟ್ಟು ಫಾರ್ಮಾಸ್ಯೂಟಿಕಲ್ಸ್ (II)ನ ಡಿಫೈನ್‍ಹೈಡ್ರೋಮಿನ್ ಹೈಡ್ರೊಕ್ಲೋರೈಡ್ ಕ್ಯಾಪ್ಲೂಲ್ಸ್ ಐಪಿ 25 ಎಂಜಿ, ಹಿಮಾಚಲ್‍ ಪ್ರದೇಶ್‍ ನ ಮೆ.ಜಡ್‍ಅರ್‍ಎಸ್ ಫಾರ್ಮಾಸ್ಯೂಟಿಕಲ್ಸ್‍ನ ಕಾಕ್ಸ್ ಮಿತ್-60 ಟ್ಯಾಬ್ಲೆಟ್ಸ್ (ಎಟೋರಿಕಾಕ್ಸಿಬ್ ಟ್ಯಾಬ್ಲೆಟ್ಸ್ ಐ.ಪಿ 60 ಎಂಜಿ)  ಕುರಾಲಿಯ ಮೆ. ಡಾ. ಎಡ್ವಿನ್ ಮೆಡಿಲ್ಯಾಬ್ಸ್ ಪ್ರೈ. ಲಿಮಿಟೆಡ್‍ನ ಕಾಕ್ಸ್ಮಿತ್-90 ಟ್ಯಾಬ್ಲೆಟ್ಸ್ (ಎಟೋರಿಕಾಕ್ಸಿಬ್ ಟ್ಯಾಬ್ಲೆಟ್ಸ್ ಐ.ಪಿ 90 ಎಂಜಿ)ಈ ಔಷಧಿ ಮತ್ತು ಕಾಂತಿವರ್ಧಕಗಳು ಗುಣಮಟ್ಟ ಹೊಂದಿಲ್ಲ ಎಂದು ತಿಳಿಸಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಉಪ ಔಷಧ ನಿಯಂತ್ರಕರು & ನಿಯಂತ್ರಣಾಧಿಕಾರಿ ಬಿ.ಪಿ.ಅರುಣ್ ಅವರು ಮಾಹಿತಿ ನೀಡಿದ್ದು, ಈ ಔಷಧಿಗಳನ್ನು  ಹಾಗೂ ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್  ಹೋಮ್‍ ನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವುದು. ಸಾರ್ವಜನಿಕರು ಈ ಔಷಧಗಳನ್ನು, ಕಾಂತಿವರ್ಧಕಗಳನ್ನು ಉಪಯೋಗಿಸಬಾರದು ಎಂದು  ತಿಳಿಸಿದ್ದಾರೆ.

ಇದನ್ನೂ ಓದಿ: ನೀವು ತಡವಾಗಿ ವಿವಾಹವಾಗಿದ್ದೀರಾ…? ಆದಷ್ಟು ಬೇಗ ಮಗು ಪಡೆಯುವ ಬಗ್ಗೆ ಆಲೋಚಿಸಿ…

 

admin
the authoradmin

Leave a Reply