ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಭಾರತದಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿದೆ. ಭಾರತ ದೇಶ ಮಾತ್ರವಲ್ಲದೆ ಇಂಡೋನೇಷ್ಯ, ಸಿಂಗಾಪುರ್, ಮಲೇಷ್ಯ, ಫಿಲಿಫೈನ್ಸ್, ಮೆಕ್ಸಿಕೋ, ಅಮೆರಿಕ ಮುಂತಾದ ಅನೇಕ ದೇಶಗಳಲ್ಲಿ ಬಾಳೆ ಎಲೆ ಊಟ ವ್ಯಾಪಕವಾಗಿ ಹರಡುತ್ತಿದೆ! ಭಾರತದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ಬಾಳೆಎಲೆಯಲ್ಲಿ ಊಟ ಮಾಡುವ ಪದ್ಧತಿ ಈಗ ಫ್ಯಾಷನ್. ಇತ್ತೀಚೆಗೆ ಅನೇಕ ದರ್ಶಿನಿಗಳು, ಹೋಟೆಲ್ ಗಳು ಈ ಹಳೆಯಟ್ರೆಂಡನ್ನೆ ವ್ಯಾಪಾರದ ಆಕರ್ಷಣೆಯನ್ನಾಗಿ ಮಾಡಿಕೊಂಡು ಯಥೇಚ್ಚ ಹಣ ಸಂಪಾದಿಸುತ್ತಿದ್ದಾರೆ. ಇಷ್ಟಿದ್ದರೂ ಬೆಳೆಯುವ ರೈತನಿಗೆಮಾತ್ರ ಯಾವ ಲಾಭವೂ ಇಲ್ಲ!
ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಏನಾದರೂ ಉಪಯೋಗವಿದೆಯೇ? ಖಂಡಿತ ಹೌದು ಎನ್ನುತ್ತಾರೆ ವಿಜ್ಞಾನಿಗಳು. ಇವರ ಸಂಶೋಧನೆಯಿಂದ ಸಾಬೀತಾಗಿರುವ ವಿಷಯ ಏನೆಂದು ತಿಳಿಯೋಣ:- ಬಾಳೆ ಎಲೆಯಲ್ಲಿ ಊಟ ಮಾಡುವಾಗ ಬಿಸಿಬಿಸಿ ಆಹಾರ ಪದಾರ್ಥ ಇದರ ಮೇಲೆ ಬಿದ್ದಾಗ ಸ್ರವಿಸುವ ಜಿಗುಟಾದವಸ್ತು ಆಹಾರದೊಂದಿಗೆ ಬೆರೆತು ನಮ್ಮ ದೇಹವನ್ನು ಸೇರುತ್ತದೆ. ಈ ಜಿಗುಟಾದ ವಸ್ತುವೇ ಭಯಾನಕ ಕ್ಯಾನ್ಸರ್ ರೋಗವನ್ನು ತಡೆಗಟ್ಟುವುದು. ಏಕೆಂದರೆ ಇದಕ್ಕೆ ಕ್ಯಾನ್ಸರ್ ಖಾಯಿಲೆ ವ್ರಣ ಹೆಚ್ಚಿಸುವ ಗ್ರಂಥಿ ಗಳನ್ನು ನಿಷ್ಕ್ರಿಯೆಗೊಳಿಸುವ ಶಕ್ತಿಯಿದೆ. ಹೀಗಾಗಿ ನಮ್ಮ ದೇಹವು ಕ್ರಾನ್ಸರ್ಗೆ ತುತ್ತಾಗುವ ಸಂಭವವನ್ನು ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ.
ಬಾಳೆಎಲೆ ಮೇಲೆ ಬಿಸಿ ಆಹಾರ ಪದಾರ್ಥ ಬಡಿಸಿದಾಗ, ಬಾಳೆ ಎಲೆಯಲ್ಲಿರುವ ಆರೋಗ್ಯಕರ ಪೋಷಕಾಂಶಗಳು ಆಹಾರದೊಂದಿಗೆ ಬೆರೆತು, ದೇಹವನ್ನು ಸೇರುತ್ತದೆ. ಇದರಿಂದಾಗಿ ನಮ್ಮ ದೇಹದಲ್ಲಿ ಆಗಾಗ್ಗೆ ಕಾಣಿಸುವ ತುರಿಕೆ ಕುರು ಮೊಡವೆ ಗಂಟು ಮುಂತಾದ ಸಣ್ಣಪುಟ್ಟ ದೈಹಿಕ ಖಾಯಿಲೆ ಬೇಗ ದೂರವಾಗುತ್ತವೆ. ಏಕೆಂದರೆ ಬಾಳೆ ಎಲೆಗಳಲ್ಲಿ ಪಾಲಿಫಿನಾಲ್ ಎಂಬ ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ. ಈ ಆ್ಯಂಟಿ- ಆಕ್ಸಿಡೆಂಟ್ಗಳಲ್ಲಿ ಅತ್ಯಂತ ಉಪಯುಕ್ತವಾದ ಎಪಿಗಲ್ಲೋ ಕಾಟೆಚಿನ್ ಗಾಲೆಟ್ (ಇಜಿಸಿಜಿ) ಇದ್ದು ನಮ್ಮ ಶರೀರದ ಊತ ತೂಕ ಮುಂತಾದ ಅನಗತ್ಯಗಳನ್ನು ಕಡಿತಗೊಳಿಸಲು ಸಹಕಾರಿ ಆಗಿದೆ. ನೈಸರ್ಗಿಕ ಉತ್ಕರ್ಷಣಾ ನಿರೋಧಕಶಕ್ತಿ ಆಗಿದೆ. ದೇಹವು ಇದನ್ನು ಸ್ವೀಕರಿಸುವುದರಿಂದ ಚರ್ಮ ಸುಕ್ಕುಗಟ್ಟುವುದನ್ನು ದೀರ್ಘಕಾಲ ತಡೆಯುತ್ತದೆ.
ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?
ಬಾಳೆಯ ಎಲೆಯಲ್ಲಿರುವ ಕೆಲವು ಪೋಷಕ ಅಂಶಗಳು ಶರೀರದ ತುರಿಕೆ ದದ್ದು ಹುಣ್ಣು ಮುಂತಾದವನ್ನು ದೂರ ಇಡುತ್ತದೆ. ಅಕಸ್ಮಾತ್ ದದ್ದು ಮೊಡವೆ ಕುರು ಹುಣ್ಣು ಗಂಟು ಇತ್ಯಾದಿ ಏನಾದರೂ ಚರ್ಮದ ಮೇಲೆ ಕಾಣಸಿಕೊಂಡರೆ ಬಾಳೆಎಲೆ ಮೇಲೆ ತೆಂಗಿನಎಣ್ಣೆ ಹಚ್ಚಿ ಬಾಧಿತ ಚರ್ಮದ ಭಾಗಕ್ಕೆ ಕಟ್ಟುವುದರಿಂದ ಶೀಘ್ರ ಗುಣಮುಖ ಆಗಲು ಪ್ರೇರೇಪಿಸುತ್ತದೆ. ಬಾಳೆಎಲೆಯನ್ನು ಊಟಕ್ಕೆ ಬಳಸುವ ಸಂಪ್ರದಾಯ- ಪದ್ಧತಿ ಭಾರತೀಯ ಸಂಸ್ಕೃತಿಯಲ್ಲಿ ಆದಿಕಾಲದಿಂದ ನಡೆದು ಬಂದಿದೆ. ಇದರಿಂದ ಮಾನವನ ದೇಹಕ್ಕಾಗುವ ಅನುಕೂಲಗಳನ್ನು ವಿಜ್ಞಾನವೂ ಸಾಬೀತು ಮಾಡಿದೆ.
ಕೆಲವೊಂದು ಅಡುಗೆ ತಯಾರಿಕೆಯಲ್ಲಿ ಹಲವು ಪದಾರ್ಥಗಳನ್ನು ಬಾಳೆ ಎಲೆಯಲ್ಲಿ ಸುತ್ತಿ ಬೇಯಿಸುವುದು ಈಗಲೂ ಉಂಟು. ಈರೀತಿ ತಯಾರಿಸಿದ ಅಡುಗೆಗೆ ಅದರದೇಆದ ವಿಶಿಷ್ಟ ಸುವಾಸನೆ ವಿಶೇಷ ರುಚಿ ಇರುತ್ತದೆ. ದಕ್ಷಿಣ ಭಾರತದ ಅತ್ಯಂತ ಉತ್ಕೃಷ್ಟ ಸಿಹಿಭಕ್ಷ್ಯ ಒಬ್ಬಟ್ಟು-ಹೋಳಿಗೆ ಮಾಡುವಾಗಲೂ ಬಾಳೆಎಲೆಯಮೇಲೆ ತಟ್ಟಿದನಂತರ ಬೇಯಿಸುವುದುಂಟು. ಇಡ್ಲಿ-ಕಡುಬು ಸಹ ಹಬೆಯಲ್ಲಿ ಬೇಯಿಸುತ್ತಾರೆ. ಬಾಳೆಎಲೆ ಉಪಯೋಗಿಸಿ ಮಾಡಿದ ಒಬ್ಬಟ್ಟುಹೋಳಿಗೆ ಇಡ್ಲಿಕಡುಬು ಸ್ವಾದಕ್ಕೂ, ಪ್ಲಾಸ್ಟಿಕ್ ಹಾಳೆ ಮೇಲಿಟ್ಟು ತಯಾರಿಸಿದ ತಿನಿಸುಗಳಿಗೂ ಇರುವ ರುಚಿಯ ವ್ಯತ್ಯಾಸವನ್ನೂ ಸಹ ಗಮನಿಸಬಹುದು.
ಇದನ್ನೂ ಓದಿ: ಐವತ್ತರ ನಂತರದ ಬದುಕಿಗೆ ಮಹಿಳೆಯರು ಮಾನಸಿಕ-ದೈಹಿಕವಾಗಿ ತಯಾರಾಗುವುದು ಹೇಗೆ?
ಬಾಳೆಎಲೆಯ ಮೇಲೆತಟ್ಟಿ ಮಾಡಿದ ತಿನಿಸುಗಳ ರುಚಿ ಬೇರೆಯೇ ಆಗಿದ್ದು ಪರಿಮಳಭರಿತ ಸ್ವಾದ ವಾಹ್… ಎನಿಸುವಂತೆ ಇರುತ್ತದೆ! ಊಟಕ್ಕೆ ಬಾಳೆ ಎಲೆಯನ್ನು ಬಳಸಿದ ನಂತರ ಅದನ್ನು ದನಕರುಗಳಿಗೆ ಮೇವಾಗಿ ನೀಡಬಹುದು. ಇದರಿಂದ ಅವುಗಳಿಗೂ ಆಹಾರ ದೊರಕಿದಂತೆ ಆಗುತ್ತದೆ ಮತ್ತು ಪ್ಲೇಟುಗಳನ್ನ ತೊಳೆಯಲು ಉಪಯೋಗಿಸುವ ನೀರೂ ಉಳಿತಾಯ ಆಗುತ್ತದೆ. ಒಂದುವೇಳೆ ದನಕರುಗಳು ಇಲ್ಲದಿರುವ ಕಡೆಗಳಲ್ಲಿ ಭೂಮಿಗೆ ಎಸೆದರೂ ಪರಿಸರಸ್ನೇಹಿ ಉತ್ತಮ ಗೊಬ್ಬರವಾಗುತ್ತದೆ!
ಆಧುನಿಕ ಜಗತ್ತಿನಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ಅಥವ ಥರ್ಮೋಕೋಲ್ ಪ್ಲೇಟ್ ಉಪಯೋಗಿಸಿದ ನಂತರ ತ್ಯಾಜ್ಯ ವಿಲೇವಾರಿ ಅತ್ಯಂತ ಗಂಭೀರ ಹಾಗೂ ಕಷ್ಟಕರ ಸಮಸ್ಯೆ ಆಗಿದೆ. ಇಂತಹ ತ್ಯಾಜ್ಯವನ್ನು ತಿಂದು ಪಾ..ಪ… ದನಕರುಗಳು ತಮ್ಮ ಪ್ರಾಣ ಕಳೆದುಕೊಂಡ ಉದಾಹರಣೆ ಇದೆ! ಹೀಗಾಗಿ ಬಾಳೆಎಲೆಯು ಈಎಲ್ಲ ಅನಾಹುತಗಳಿಗೂ ಪರಿಣಾಮಕಾರಿ ಪರ್ಯಾಯ ಮಾರ್ಗ ಆಗಿದೆ. ಇತ್ತೀಚಿಗೆ ಕೇರಳದಲ್ಲಿ ಆಹಾರ ಬಡಿಸಲು ಮತ್ತು ಪ್ಯಾಕ್ ಮಾಡಲು ಬಾಳೆಎಲೆ ಬಳಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ದೇಶದ ಎಲ್ಲರೂ ಇದೇ ಪದ್ದತಿ ಅನುಸರಿಸಿದರೆ ಸಕಲರೀತಿಯಲ್ಲಿ ಮಾನವರ ಮತ್ತು ಪ್ರಾಣಿಗಳ ಆರೋಗ್ಯ, ಆಯುಷ್ಯ ವೃದ್ದಿಸಲು ಹಾಗೂ ಪರಿಸರವನ್ನು ಸ್ವಚ್ಛವಾಗಿಡಲು ಸಹಾಯಕಾರಿ ಆಗುತ್ತದೆ.
ಇದನ್ನೂ ಓದಿ: ಹೃದಯಾಘಾತಕ್ಕೆ ಬದಲಾದ ಜೀವನ ಶೈಲಿ ಕಾರಣವೇ..? ನಗರ ಪ್ರದೇಶಗಳಲ್ಲಿ ಪ್ರಕರಣ ಹೆಚ್ಚಾಗುತ್ತಿದೆಯಾ?
ಊಟಕ್ಕೆ ಬಾಳೆ ಎಲೆಯನ್ನು ಹಾಕುವಾಗ ಕೆಲವೊಂದು ಪದ್ಧತಿಯನ್ನು ಹಿಂದಿನ ಕಾಲದಿಂದ ರೂಢಿಸಿಕೊಂಡು ಬರಲಾಗಿದೆ. ಅದೇನೆಂದರೆ ಅಗ್ರವು(ಬಾಳೆ ಎಲೆತುದಿ) ಬಡಿಸುವವರ ಬಲಕ್ಕೆ ಅಥವ ಊಟಕ್ಕೆ ಕುಳಿತವರ ಎಡಕ್ಕೆ ಬರುವಂತೆ ಇಡಬೇಕು. ಈ ಪದ್ದತಿಯಹಿಂದೆ ವೈಜ್ಞಾನಿಕ ಕಾರಣವಿದೆಯೇ? ಎಂದು ಹುಡುಕುವ ವ್ಯರ್ಥಪ್ರಯತ್ನ ಅನಗತ್ಯ. ಊಟ ಮಾಡುವರ ಎಡಕ್ಕೆ ಎಲೆಯಸಣ್ಣಭಾಗ ಇದ್ದರೆ ಎಲೆಯಕೊನೆಗೆ ಹಾಕುವಂಥ ಪದಾರ್ಥ ಉಪ್ಪು ಉಪ್ಪಿನಕಾಯಿ ಚಟ್ನಿ ಸಜ್ಜಿಗೆ ಪಾಯಸ ಪ್ರಸಾದ ಇತ್ಯಾದಿ ಬಡಿಸಲು ಸುಗಮ.
ಹೆಚ್ಚು ಭುಜಿಸುವ ಪದಾರ್ಥಗಳನ್ನು ಹೆಚ್ಚು ಸ್ಥಳಾವಕಾಶ ಇರುವ ಬಲಗಡೆಗೆ ಬಡಿಸಿದರೆ ಬಲಕೈಯಲ್ಲಿ ಊಟ ಮಾಡುವವರಿಗೆ ಅನುಕೂಲ ಮತ್ತು ಹೆಚ್ಚು ಜಾಗವಿರುವ ಕಾರಣ ಬಡಿಸಿದ ಪದಾರ್ಥಗಳು ನೆಲಕ್ಕೆ ಸೇರಿ ವೇಸ್ಟ್ ಆಗುವುದಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರೂ ಬಾಳೆಎಲೆಮೇಲೆ ಬಡಿಸುವ ಆಹಾರವನ್ನು ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ. “ಸಾರು ಮಜ್ಜಿಗೆ ಹರಿದು ನೆಲಸೇರುತ್ತದೆ” ಎಂಬ ಒಂದೇ ಕಾರಣಕ್ಕೆ ಬಾಳೆಎಲೆಯಲ್ಲಿ ತಿನ್ನುವುದನ್ನು ಬಿಡಬಾರದು. ಆರೋಗ್ಯ-ಆಯುಷ್ಯ ವೃದ್ಧಿಸಲು ಸಣ್ಣಪುಟ್ಟ ಖಾಯಿಲೆಯಿಂದ ದೂರವಿರಲು ಇದು ಸುಲಭ ಉಪಾಯ. ಆದ್ದರಿಂದ ಸದಾ ಬಾಳೆಎಲೆ ಊಟದ ಪದ್ಧತಿಯನ್ನೇ ಹೆಚ್ಚಾಗಿ ರೂಢಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳೋಣ.
ಅತ್ಯಂತ ಉಪಯುಕ್ತವಾದ ಲೇಖನ, ಧನ್ಯವಾದ ಸರ್
ಪೇಮಾ, ಗೃಹಿಣಿ
ಬಾಳೆಎಲೆಊಟ ಇಷ್ಟು ಆರೋಗ್ಯಕರ ಎಂದು ಗೊತ್ತಿರಲಿಲ್ಲ. ಅಂತೂ ಇಂತೂ ತಾವು ಈ ಬಗ್ಗೆ ಬಹಳ ಪ್ರಯೋಜನದ ಒಂದು ಮಾಹಿತಿಯ ಲೇಖನ ನೀಡಿದ್ದಕ್ಕೆ ಧನ್ಯವಾದ ನಮಸ್ಕಾರ
Very nice and hygiene informative article “bale yele oota” thanks sir
Good evening sir, you have published very excellent article about Plantain leaf 🍃 meals. It’s very very useful for all age groups. Thank you very much sir
Excellent job on plaintan leaf (I mean👍 😀 👏baale yeleya) oota article. Thank you sir 🙏
Best article 👏 🙌 👌 👍