ArticlesLatest

ಗುರುವಿಗೆ ನೀಡಿರುವ ಆ ಸ್ಥಾನ ಎಂತಹದ್ದು ಗೊತ್ತಾ? ಇಷ್ಟಕ್ಕೂ ಗುರು ಎಂದರೆ ಯಾರು? ಆತ ಹೇಗಿರಬೇಕು?

ಭಾರತ ದೇಶದಲ್ಲಿ ಮಾತ್ರ ಮಾತೃದೇವವೋ ಭವಃ ಪಿತೃದೇವೋ ಭವಃ ಗುರುದೇವೋ ಭವಃ ಎಂಬ ಮಂತ್ರದ ಪ್ರಕಾರ ತಾಯಿ-ತಂದೆ ನಂತರ ಗುರುವಿಗೆ ಮೊದಲ ಸ್ಥಾನ ನೀಡುವ ಮೂಲಕ ಒಂದು ಉತ್ತಮ ಆಚಾರ-ವಿಚಾರ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಕಾಲಕ್ರಮೇಣ ಸರ್ವಪಲ್ಲಿ ರಾಧಾಕೃಷ್ಣನ್ ಸ್ಮರಣಾರ್ಥ ಪ್ರತಿವರ್ಷ ಸೆಪ್ಟೆಂಬರ್ 5ನೇ ತಾರೀಖು “ಶಿಕ್ಷಕರ ದಿನಾಚರಣೆ” ಯನ್ನಾಗಿ ಆಚರಿಸಿಕೊಂಡು ಬರಲಾಗಿದೆ.

ಗುರುರ್‌ ಬ್ರಹ್ಮ ಗುರುರ್‌ ವಿಷ್ಣು ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ. ಸೃಷ್ಟಿ ಸ್ಥಿತಿ ಲಯ ದೇವರುಗಳಾದ ತ್ರಿಮೂರ್ತಿಗಳ ನಂತರದ ನಾಲ್ಕನೇ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಪೌರಾಣಿಕ, ಐತಿಹಾಸಿಕ,  ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲು ಸಹ ಮಾನ್ಯತೆ ದೊರಕಿಸಲಾಗಿದೆ. ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. “ಅಕ್ಷರಂ ಏವಂ ಕಲಿಸಿದಾತಂ ಗುರು ವಂದ್ಯಂ” ಎಂಬುದರ ತಾತ್ಪರ್ಯ ” ಒಂದೇ ಒಂದು ಅಕ್ಷರವನ್ನ ಕಲಿಸಿದವರಿಗೂ ಗುರುವಿನ ಸ್ಥಾನಮಾನ ನೀಡಬೇಕು. ಇವರನ್ನು ಅಧ್ಯಾಪಕ ಆಚಾರ್ಯ ಶಿಕ್ಷಕ ಮೇಷ್ಟ್ರು ಟೀಚರ್ ಮುಂತಾದ ವಿವಿಧ ಪದನಾಮದಿಂದ ಗುರುತಿಸುತ್ತಾರೆ.

ಗುರು ಎಂಬುದರ ಬಗೆಗಿನ ಅರ್ಥವನ್ನು ನೋಡುತ್ತಾ ಹೋದರೆ ಅನಂತ ಅನನ್ಯ ಅಮೋಘ ಅಧ್ಭುತ ಅಮರ ಅಪರಿಮಿತ ಅಸಾಮಾನ್ಯ ಅಗಣಿತ ಮುಂತಾದ ವ್ಯಾಖ್ಯಾನ ನೀಡಬಹುದು. ಭೂಮಂಡಲದಲ್ಲಿ ಮಾನವನಿಗೆ ಎದುರಾಗುವ ಅನರ್ಥ ಅಪಾರ್ಥ ಅಸಮರ್ಥ ಅಸಾಧ್ಯ ಕ್ಲಿಷ್ಟ ಎಂಥದೇ ಸಮಸ್ಯೆಗಳಿಗೆ ಏಕಚಿತ್ತ ದ್ವೈತಾದ್ವೈತ ತ್ರಿಕರಣಶುದ್ಧಿ ಚತುಷ್‌ ದಿಕ್ಕು ಪಂಚಭೂತ ಅರಿಷಡ್‌ವರ್ಗ ಸಪ್ತಸ್ವರ ಅಷ್ಟಭೋಗಭಾಗ್ಯ ನವ(ರಸ)ಗ್ರಹ ದಶಮಸಿರಿ ಸೊಬಗು ಏಕಾದಶತೃಪ್ತಿ ದ್ವಾದಶಮುಕ್ತಿ ಹಾಗೂ ಶಿಷ್ಟರಕ್ಷಕ-ದುಷ್ಟಶಿಕ್ಷಕ ಇದೆಲ್ಲದರ ಸಾರಾಂಶವನ್ನು ಸರಳವಾಗಿ ಎಳೆಎಳೆಯಾಗಿ ತಿಳಿಹೇಳುವ ಪೂರ್ಣಕುಂಭ ಸುರಭಿಯೆ ಗುರು!  ಗುರುವಿನ ಮಹಾತ್ಮೆ ಎಷ್ಟು ವರ್ಣಿಸಿದರೂ ಸಾಲದು.

ಅರ್ಹ ಆಚಾರ್ಯ ಆಗಬೇಕಾದರೆ ಯಾವುದೇ ವಿದ್ಯೆಯನ್ನು ಮೊದಲು ತಾನು ಅರ್ಥೈಸಿಕೊಂಡು ನಂತರ ಶಿಷ್ಯರಿಗೆ ಬೋಧಿಸಬೇಕು. ಲಿಖಿತ-ಪ್ರಾಯೋಗಿಕ ಶಿಕ್ಷಣದ ಜತೆಗೆ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ಕಲಿಸಬೇಕು.  ಅದ್ಭುತ ಆಶ್ಚರ್ಯ ನವ್ಯ ಭವ್ಯ ಉನ್ನತ ಅಧ್ಯಯನ ಸಂಶೋಧನೆ ಬಗ್ಗೆ ಸರಿಮಾರ್ಗದರ್ಶನ ನೀಡಬೇಕು.  ಕಠಿಣ-ಹೊಸ ಪದ-ವಾಕ್ಯ ವ್ಯಾಕರಣ-ಅವಧಾನ ಇವುಗಳಿಗೆಲ್ಲ ಗುರುವೆ ನಿಘಂಟಾಗಬೇಕು! ನ್ಯಾಯಾನ್ಯಾಯ ಧರ್ಮಾಧರ್ಮ ಸತ್ಯಾಸತ್ಯ ಅರ್ಥಾನರ್ಥ ಮೋಸವಂಚನೆ ಪಾಪಪುಣ್ಯ ಕಾನೂನು ಸಂವಿಧಾನ ಪರೀಕ್ಷೆ ಫ಼ಲಿತಾಂಶ ಪ್ರಯತ್ನ ಫ಼ಲಾಫ಼ಲ ಸದು[ದುರು]ಪಯೋಗ ಮುಂತಾದವುಗಳ ಬಗ್ಗೆ ವಕೀಲನಾಗಬೇಕು ಪ್ರವಾದಿಯಾಗಬೇಕು ತಾಯಿಯಾಗಬೇಕು ತಂದೆಯಾಗಬೇಕು ಗೆಳೆಯನಾಗಬೇಕು ಶಿಕ್ಷಕ!

ಜಗತ್ತಿನ ಯಾವುದೆ ಜನ ದೇಶ ಭಾಷೆ ಸಂಸ್ಕೃತಿ ಇತಿಹಾಸ ಇತ್ಯಾದಿ ಬಗ್ಗೆ ಕನಿಷ್ಟ ಜ್ಞಾನವಿದ್ದು ಎಂಥ ವಿದ್ಯಾರ್ಥಿಯನ್ನೂ ತಿದ್ದಿ ತೀಡುವ ಶಕ್ತಿ ಮನವರಿಕೆ ಮಾಡುವ ಯುಕ್ತಿ ಇರಬೇಕು. ಸರಳತೆ ಸಜ್ಜನಿಕೆ ಬೆಳೆಸಿಕೊಂಡು ನವರಸಗಳ ಭಾವನೆಯಲ್ಲಿ ಇ[ಬ]ರುವ ಕಠಿಣ-ಮೃದು ಉಚ್ಛಾರಣೆ ಪದಪ್ರಯೋಗ ಉಚಿತಾನುಚಿತ ಪೂರಕ ಮಾರಕ ಪರಿಣಾಮ ಪರಿಮಿತಿ ಬಗ್ಗೆ ಪೂರ್ಣವಾಗಿ ಪಕ್ವವಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮನನ ಮಾಡಿಸುವಂಥ ಉಪಾಧ್ಯಾಯ ಆಗಬೇಕು! ಯಾವುದೆ ಒಂದು ಶಾಸ್ತ್ರ ಅಥವ [ವಿ]ಜ್ಞಾನವನ್ನು ಬೋಧಿಸಿದ ನಂತರ ಅದನ್ನು ಸರಾಗವಾಗಿ, ಸುಲಭವಾಗಿ, ಸಂದರ್ಭೋಚಿತವಾಗಿ ಅರ್ಥೈಸುವ ಮತ್ತು ಉದಾಹರಣೆ ಸಮೇತ ತಾತ್ಪರ್ಯ ತಿಳಿಸುವ ಕಲೆಯನ್ನು  ಕಲಿಸುವ ಅಥವ ಮೈಗೂಡಿಸಿಕೊಂಡ ತಜ್ಞ ಆಗಿರಬೇಕು.

ಗೀತ ಸಂಗೀತ ನಾಟ್ಯ ನಟನೆ ಕುಂಚ(ಶಿಲ್ಪ)ಕಲೆ ವಾದವಿವಾದ ವಿತಂಡವಾದ ತರ್ಕ-ವಿತರ್ಕ, ರೀತಿ-ನೀತಿ, ವಾ[ಕ್ಪಟು]ಚಾಳಿತನ ಸ್ವಾವಲಂಬನ ಪರಾವಲಂಬನ ಸ್ವಂತಿಕೆ ಎರವಲು ಅ[ನ]ಸೂಯೆ ಸ್ವಾತಂತ್ರ್ಯ ಸ್ವೇಚ್ಛಾಚಾರ ಮುಂತಾದವುಗಳನ್ನ ವಿವಿಧ ಕೋನದಲ್ಲಿ ವಿಮರ್ಶಿಸುವ ಟೀಕೆ-ಟಿಪ್ಪಣಿ ಮಾಡುವಂಥ [ಪ್ರ]ಶಿಕ್ಷಣವನ್ನು ಕಲಿಸಿಕೊಡುವ ಸಕಲಕಲಾ ವಲ್ಲಭನಾಗಬೇಕು. “ಗುರು-ಶಿಷ್ಯ” ಎಂಬ ಕಾಲಚಕ್ರದೊಳಗೆ ವಿದ್ಯೆಯನ್ನು ಒಬ್ಬರಿಂದ ಮತ್ತೊಬ್ಬರಿಗೆ ಕಲಿತು ಕಲಿಸುವ ಮನಸ್ಸು ನಿರಂತರವಾಗಿ ಇರಬೇಕು. ಸಹಜವಾದ ಕ್ರಿಯೆ-ಪ್ರಕ್ರಿಯೆಗಳಿಗೆ ಸ್ಪಂದಿಸಬೇಕು. ಕಾಲಕ್ಕೆ ತಕ್ಕಂತೆ, ಭೌಗೋಳಿಕ ಲಕ್ಷಣಕ್ಕೆ ತಕ್ಕಂತೆ, [ಪ್ರ]ದೇಶಕ್ಕೆ ತಕ್ಕಂತೆ, ಭೌ[ತಿ]ದ್ಧಿಕ ಬದಲಾವಣೆಗೆ ತಕ್ಕಂತೆ ಮಾನವೀಯ ಮೌಲ್ಯಗಳನ್ನು ಹೊಂದಿಸಬೇಕು,ಸರಿಯಾದ ಮಾರ್ಗದರ್ಶನ ಮಾಡಬೇಕು.

ಜೀವನದಲ್ಲಿ ಎದುರಾಗುವ ಕಷ್ಟನಷ್ಟ ಕೋಪತಾಪ ತ್ಯಾಗಭೋಗ ಸವಾಲುಗಳನ್ನು ಸರಿಸಮನಾಗಿ ಸ್ವೀಕರಿಸುವ ಸಿದ್ಧಶಿಲೆ ಆಗಿಸಬೇಕು.  ಇತಿಹಾಸದ ಘಟನೆಗಳ ಅಥವಾ ಅನುಭವದ ದೃಷ್ಟಾಂತಗಳ ಉದಾಹರಣೆ ನೀಡಿ ಧ್ಯೈರ್ಯ ಸಾಹಸದ ಮೂರ್ತಿಯಾಗಿಸಬೇಕು ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷಣೆ ಸಿದ್ಧಾಂತದ ಮೇಲೆ, ನಮ್ಮ ನಾಡಿನ ವೇದಾಂತದ ಹಿನ್ನೆಲೆಯಲ್ಲಿ ಮುನ್ನುಗ್ಗುತ್ತ ಒಮ್ಮೊಮ್ಮೆ  ತಲೆಬಾಗುತ್ತ, ಆತ್ಮಸಾಕ್ಷಿಯಾಗಿ ಸರಿ ಎಂಬುದನ್ನು ಬಿಡದೆ ಮುಂದುವರೆಸುತ್ತ ‘ಸೈ’ಎನಿಸಿಕೊಳ್ಳಬೇಕು.

ದಿ[ಟ]ಟ್ಟ ಗುರುವು ಪ್ರಪಂಚದ ಪ್ರತಿಯೊಂದು ಸಾಧನೆ ಬೋಧನೆಗಳ ಸಂಗಮವಾಗಿದ್ದು ನಿಗರ್ವಿ ನಿಸ್ವಾರ್ಥಿ ನಿಷ್ಪಕ್ಷಪಾತಿ ಆಗಿರುತ್ತಾನೆ. ಸಮಾಜ ಕಂಟಕರಾದ ಗುರು-ಶಿಷ್ಯರನ್ನು  ದೂರವಿರಿಸಬೇಕು? ಆಪತ್ಕಾಲದಲ್ಲಿ ತನ್ನಂ ತಾನು ರಕ್ಷಿಸಿಕೊಳ್ಳುವಂಥ ಶಸ್ತ್ರಾಸ್ತ್ರ ವಿದ್ಯೆಗಳ ಜತೆಗೆ ಸಾಮ-ದಾನ-ಭೇದ-ದಂಡ ಎಂಬ ಚತುರೋಪಾಯಗಳನ್ನು ಕಲಿತು-ಕಲಿಸಬೇಕು. ಹಾಗಿಲ್ಲದೆಹೋದಾಗ ಅನ್ಯಾಯ,ವಂಚನೆ, ದ್ರೋಹಕ್ಕೆ ಗುರಿಯಾಗಿ ಅಕಾಲ ಮೃತ್ಯುಗೆ ಬಲಿ ಆಗಬಹುದು.

ವಿದ್ಯೆಬಗ್ಗೆ ರಾಷ್ಟ್ರಕವಿ ಕುವೆಂಪು ವ್ಯಾಖ್ಯಾನ : ವಿದ್ಯೆಯೆಂಬುದು ಪ್ರಶ್ನೆಯಿಂದ ಆಶ್ಚರ್ಯದೆಡೆಗೆ ಪುನಃ ಆಶ್ಚರ್ಯದಿಂದ ಪ್ರಶ್ನೆಯೆಡೆಗೆ ಚಲಿಪ ನಿರಂತರ ಪ್ರಕ್ರಿಯೆ ಈ ಪ್ರಕ್ರಿಯೆಯಿಂದಲೆ ಪರಿಪೂರ್ಣತೆ ಪ್ರಾಪ್ತವಾಗುತ್ತದೆ ಎಂಬುದು ರಾಷ್ಟ್ರಕವಿಯ ಅಭಿಮತ.

ಗುರುವು ಹೀ[ಹೇ]ಗಿರಬೇಕೆಂದರೆ, ತ್ರಿಕರಣ ಶುದ್ಧಿಯಿಂದ ವಿದ್ಯೆ ಕಲಿಸಬೇಕು. ವಿದ್ಯಾಸಕ್ತರಿಗೆ ಸಹೋದ್ಯೋಗಿಗೆ ಅವಶ್ಯಕತೆ ಇದ್ದವರಿಗೆ ಬಯಸಿಬಂದವರಿಗೆ ಸಾರ್ಥಕರೀತಿ ಪ್ರತಿಫಲಾಪೇಕ್ಷೆ ಬಯಸದೆ ಪ್ರಾಮಾಣಿಕ ವಿದ್ಯಾದಾನ ಮಾಡಬೇಕು. ಸದಭಿರುಚಿ ಸಮರ್ಥತೆ ಬೋಧನೆ ಸಂಶೋಧನೆ ಸಾಮಾಜಿಕ ನಡವಳಿಕೆ ಸಚ್ಚ್ಯಾರಿತ್ರ್ಯದ ಬಗ್ಗೆ ‘ರೋಲ್‌ ಮಾಡಲ್’ ಆಗಬೇಕು.

ಇದನ್ನೂ ಓದಿ: ಶಿಕ್ಷಕರ ಕುರಿತಂತೆ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರು ಹೇಳಿದ್ದೇನು? ವಿದ್ಯಾರ್ಥಿಗಳಿಗೆ ಹೇಳಬಹುದಾದ ಕಿವಿಮಾತು!

 

admin
the authoradmin

10 Comments

  • Excellent article sir, I am also a professor of computer science, Mysore. Anyway thank you sir for a better understanding contents
    Dr Vinaykumar, PhD

  • ಇದೇ ಮೊದಲು ನಾನು ನಿಮ್ಮ ಪತ್ರಿಕೆಯ ಓದುಗಳಾಗಿ ಓದಿದ ಗುರು ಶಿಷ್ಯರ ಸಂಬಂಧ ಲೇಖನ. ಅದೇನೇ ಇರಲಿ ಸರ್, ಬಹಳ ಚೆನ್ನಾಗಿ ಬರೆದಿದ್ದಾರೆ ನಿಮಗೆಲ್ಲರಿಗೂ ವಂದನೆಗಳು

  • ನಮ್ಮ ಗೆಳತಿಯರ ಗುಂಪಿಗೂ ಶೇರ್ ಮಾಡಿದ್ದೇನೆ ಸರ್

  • ನಾರಾಯಣಸ್ವಾಮಿ, ನಿವೃತ್ತ ಉದ್ಯೋಗಿ ಶಾರದಾಮೂವೀಸ್, ಗಾಂಧಿನಗರ ಬೆಂಗಳೂರು, ಹಾಲಿ ವಾಸ, ಮಾರುತಿ ನಗರ ಬೆಂಗಳೂರು
    ನಿಜವಾದ ಕೈಗನ್ನಡಿ ಯಂತಿದೆ ಇವತ್ತಿನ ಥಳುಕು ಬಳುಕು ಮತ್ತು ಢೋಂಗಿ ಮತ್ತು ಕಾಸ್ಟ್ಲೀ ಶಿಕ್ಷಣ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಬಗ್ಗೆ ಮತ್ತು ಅವತ್ತಿನ ಕಾಲದ ಶಿಕ್ಷಣ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ, ನಮಸ್ಕಾರ

  • ಶಿಕ್ಷಕರ ದಿನಾಚರಣೆಯ ಲೇಖನ ತುಂಬ ಚೆನ್ನಾಗಿ ಬುದ್ದಿ ಹೇಳುವ ರೀತಿ ಬರೆದಿದ್ದಾರೆ, ಧನ್ಯವಾದ ಸರ್

  • ನಾರಾಯಣಸ್ವಾಮಿ, ನಿವೃತ್ತ ಉದ್ಯೋಗಿ ಶಾರದಾಮೂವೀಸ್, ಗಾಂಧಿನಗರ ಬೆಂಗಳೂರು, ಹಾಲಿ ವಾಸ, ಮಾರುತಿ ನಗರ ಬೆಂಗಳೂರು
    ನಿಜವಾದ ಕೈಗನ್ನಡಿ ಯಂತಿದೆ ಇವತ್ತಿನ ಥಳುಕು ಬಳುಕು ಮತ್ತು ಢೋಂಗಿ ಮತ್ತು ಕಾಸ್ಟ್ಲೀ ಶಿಕ್ಷಣ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಬಗ್ಗೆ ಮತ್ತು ಅವತ್ತಿನ ಕಾಲದ ಶಿಕ್ಷಣ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ, ನಮಸ್ಕಾರ,,,,,

  • ಗುರು ಶಿಷ್ಯರು ಹೇಗಿರಬೇಕು ಮತ್ತು ಶಿಕ್ಷಣ, ಶಿಕ್ಷಕರು ವಿದ್ಯಾರ್ಥಿಗಳು ಏನು ಮಾಡಬೇಕೆಂಬ ವಿಷಯದ ಬಗ್ಗೆ ಬಹಳ ಸುಂದರವಾಗಿ ವಿಶ್ಲೇಷಿಸಿದರು. ಇದು ಎಲ್ಲರಿಗೂ ಉಉಪಯೋಗಕರ ಮಾಹಿತಿಯ ಲೇಖನ, ಅಭಿನಂದನೆ ಮತ್ತು ನಮಸ್ಕಾರ

  • ನಿಮ್ಮ ಜನಮನ ಕನ್ನಡ ಪತ್ರಿಕೆಯನ್ನು ಇದೇ ಮೊದಲು ನೋಡಿದ್ದು ಮತ್ತು ಮೊದಲ ಬಾರಿಗೆ ಓದಿದ ನನ್ನ ಮೊದಲನೆಯ ಲೇಖನ. ಇಷ್ಟವಾದ ಕಾರಣ
    ಶಿಕ್ಷಣ ದಿನಾಚರಣೆಯ ಈ ಲೇಖನವನ್ನು ನನ್ನೆ ಗೆಳೆಯರ ಮತ್ತು ಕುಟುಂಬದ ಗುಂಪಿನ ಎಲ್ಲರಿಗೂ ವಾಟ್ಸಾಪು ಮೂಲಕ ಶೇರ್ ಮಾಡಿದ್ದೇನೆ

  • ಶಿಕ್ಷಕರ ದಿನಾಚರಣೆಯ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ ಇದೊಂದು ಸಮರ್ಥ ಸಚಿತ್ರ ಲೇಖನ, ಧನ್ಯವಾದಗಳು ಸರ್

Leave a Reply