LatestSports

ಚಿಲಿಯಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ತೆಕ್ಕಡ ಭವಾನಿ… ಸ್ಕೀಯಿಂಗ್ ನಲ್ಲಿ ಕಂಚಿನ ಪದಕ!

ಚಿಲಿಯ ಕೊರಾಲ್ಕೊದಲ್ಲಿ ಸೆಪ್ಟೆಂಬರ್ 14 ಮತ್ತು 15 ರಂದು ನಡೆದ ದಕ್ಷಿಣ ಅಮೆರಿಕಾ ಕ್ರಾಸ್-ಕಂಟ್ರಿ ಸ್ಕೀಯಿಂಗ್ ಎಫ್‌ಐಎಸ್ ಸ್ಪರ್ಧೆಯ 5 ಕಿ.ಮೀ. ರೇಸ್ ಮತ್ತು 1.3 ಕಿ.ಮೀ. ಸ್ಪ್ರಿಂಟ್ ರೇಸ್ ನಲ್ಲಿ ಕೊಡಗಿನ ತೆಕ್ಕಡ ಭವಾನಿ  ಅವರು ಭಾಗವಹಿಸಿ ಎರಡು ಕಂಚಿನ ಪದಕಗಳನ್ನು  ಪಡೆಯುವ ಮೂಲಕ  ಎಫ್‌ಐಎಸ್ ಸ್ಪರ್ಧೆ ಕ್ರಾಸ್-ಕಂಟ್ರಿ ಸ್ಕೀಯಿಂಗ್‌ನಲ್ಲಿ ಅಂತರರಾಷ್ಟ್ರೀಯ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಂದಿನ ಒಲಂಪಿಕ್ಸ್ ನಲ್ಲಿ ಸ್ಕೀಯಿಂಗ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವ ಸಲುವಾಗಿ ಕಠಿಣ ಪರಿಶ್ರಮ ಪಡುತ್ತಿರುವ ತೆಕ್ಕಡ ಭವಾನಿ ಅವರು ಈಗಾಗಲೇ ಚಿಲಿಯಲ್ಲಿ ಹೆಚ್ಚಿನ ತರಬೇತಿಯನ್ನು ಪಡೆಯುತ್ತಿದ್ದಾರೆ. ಇದುವರೆಗೆ ಸ್ಲೀಯಿಂಗ್ ಹಲವು ರೀತಿಯಲ್ಲಿ ಸಾಧನೆ ಮಾಡಿರುವ ಇವರು ವಿದೇಶದ ನೆಲದಲ್ಲಿ ಭಾರತದ ಪತಾಕೆಯನ್ನು ಹಾರಿಸಿ ಬಂದಿದ್ದಾರೆ. ಕೆಲವು ತಿಂಗಳ ಹಿಂದೆ ಚೀನಾದ ನೆಲಕ್ಕೆ ಹೋಗಿ ಅಲ್ಲಿ ಭಾರತದ ಪತಾಕೆಯನ್ನು ಹಾರಿಸಿ ಬಂದಿದ್ದರು.  ಆ ಮೂಲಕ ಈ ಕ್ರೀಡೆಯಲ್ಲಿ ಚೀನಾದ ನೆಲಕ್ಕೆ ಕಾಲಿಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದುಕೊಂಡಿದ್ದರು.  ಆ ನಂತರ ಮಹಾರಾಷ್ಟ್ರದಲ್ಲಿ ಉನ್ನತ ತರಬೇತಿಯನ್ನು ಪಡೆದ ಅವರು ಸದ್ಯ ಚಿಲಿಯಲ್ಲಿ ತರಬೇತಿಯಲ್ಲಿದ್ದಾರೆ.

ಇದುವರೆಗೆ ಭಾರತದ ನೆಲಮಾತ್ರವಲ್ಲದೆ ಹೊರ ದೇಶದಲ್ಲಿಯೂ ಭಾಗವಹಿಸಿದ್ದಾರೆ.  ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌, -2020 (5 ಕಿಮೀ)ರಲ್ಲಿ ಕಂಚಿನ ಪದಕ, ಮೊದಲ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌-2020 (10 ಕಿಮೀ) ಕಂಚಿನ ಪದಕ,  ಎರಡನೇ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ -2021 (1.4 ಕಿಮೀ) ಚಿನ್ನದ ಪದಕ, ಎರಡನೇ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ 2021 (5 ಕಿ ಮೀ) ಕಂಚಿನ ಪದಕ, ಆಲ್‌ಇಂಡಿಯಾ ಓಪನ್‌ ಸ್ಕೀ ಮತ್ತು ಸ್ನೋಬಾಲ್‌ ಚಾಂಪಿಯನ್‌ಷಿಪ್‌-2022 (1.5 ಕಿಮೀ) ಬೆಳ್ಳಿ ಪದಕ, ಆಲ್‌ಇಂಡಿಯಾ ಓಪನ್‌ ಸ್ಕೀ ಮತ್ತು ಸ್ನೋಬಾಲ್‌ ಚಾಂಪಿಯನ್‌ ಷಿಪ್‌-2022 (5 ಕಿಮೀ) ಕಂಚಿನ ಪದಕ ಪಡೆದುಕೊಂಡಿದ್ದಾರೆ.

ನ್ಯಾಷನಲ್‌ ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ -2022 (5 ಕಿಮೀ) ಬೆಳ್ಳಿ ಪದಕ, ನ್ಯಾಷನಲ್‌ ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ -2022 (10 ಕಿಮೀ) ಬೆಳ್ಳಿ ಪದಕ, ನ್ಯಾಷನಲ್‌ ವಿಂಟರ್‌ ಬೈಥ್ಲಾನ್‌ ಚಾಂಪಿಯನ್‌ಷಿಪ್‌-2022 (10 ಕಿಮೀ) ಬೆಳ್ಳಿ ಪದಕ,  ನ್ಯಾಷನಲ್‌ ವಿಂಟರ್‌ ಬೈಥ್ಲಾನ್‌ ಚಾಂಪಿಯನ್‌ಷಿಪ್‌-2022 (5 ಕಿಮೀ) ಬೆಳ್ಳಿ ಪದಕ, ನ್ಯಾಷನಲ್‌ ಕ್ರಾಸ್‌ ಕಂಟ್ರಿ ಸ್ಕೀಯಿಂಗ್‌ ಚಾಂಪಿಯನ್‌ಷಿಪ್‌ -2022 (1. 5 ಕಿಮೀ) ಚಿನ್ನದ ಪದಕ,  3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2023 (10 ಕಿ ಮೀ) ಚಿನ್ನದ ಪದಕ.

3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2023 (5 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2023 (1.5 ಕಿ ಮೀ) ಚಿನ್ನದ ಪದಕ ಗಳಿಸಿದ್ದಾರೆ. ಇನ್ನು  ಮೂರನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2024 (10 ಕಿ ಮೀ) ಚಿನ್ನದ ಪದಕ,  3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2024 (10 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್‌ 2024 (10 ಕಿ ಮೀ) ಚಿನ್ನದ ಪದಕ ವನ್ನು ಪಡೆದಿದ್ದಾರೆ.

ಎಫ್‌ ಐಎಸ್‌ ಸ್ಕೀಯಿಂಗ್‌ ರೇಸ್‌ ಐಸ್‌ಲ್ಯಾಂಡ್‌ 2022 (1.2 ಕಿಮೀ) 7ನೇ ಸ್ಥಾನ, ಎಫ್‌ ಐಎಸ್‌ ಸ್ಕೀಯಿಂಗ್‌ ರೇಸ್‌ ಐಸ್‌ಲ್ಯಾಂಡ್‌ 2022 (05 ಕಿಮೀ) 6ನೇ ಸ್ಥಾನ, ರೈಪ್ಫಿಸೆನ್‌ ಲಾಂಗ್‌ಲೌಫ್‌ ಕಪ್‌ ಇಟಲಿ, 2022 (05 ಕಿಮೀ) ಬೆಳ್ಳಿ ಪದಕ, ಏಷ್ಯನ್‌ ಸಮ್ಮರ್‌ ಬೈಥ್ಲಾನ್‌, ಕಝಕಿಸ್ತಾನ್‌, 2023 (7.5 ಕಿಮೀ) 17ನೇ ಸ್ಥಾನ, ಎಫ್‌ಐಎಸ್‌ ಸ್ಕೀಯಿಂಗ್‌ ರೇಸ್‌ ಐಸ್‌ಲ್ಯಾಂಡ್‌ 2023 (1.2 ಕಿಮೀ) 4ನೇ ಸ್ಥಾನ, ಎಫ್‌ಐಎಸ್‌ ಸ್ಕೀಯಿಂಗ್‌ ರೇಸ್‌ ಐಸ್‌ಲ್ಯಾಂಡ್‌ 2023 (05 ಕಿಮೀ) 4 ನೇ ಸ್ಥಾನ,

ನಾರ್ಡಿಕ್‌, ವಿಶ್ವ ಸ್ಕೀಯಿಂಗ್‌‌ ಚಾಂಪಿಯನ್‌ ಶಿಪ್‌ ಸ್ಲೊವೆನಿಯಾ 2023 (05 ಕಿಮೀ) 31ನೆ ಸ್ಥಾನ  ಪಡೆದರೂ ಭಾರತದಿಂದ ಆಯ್ಕೆಯಾದ ಏಕೈಕ ಸ್ಫರ್ಧಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲದೆ, ಈಸ್ಟರ್ನ್‌ ಯೂರೋಪ್‌ ಕಪ್‌, ಕಝಕಿಸ್ತಾನ್‌ 2024 (5 ಕಿಮೀ) 36ನೇ ಸ್ಥಾನ,  ಈಸ್ಟರ್ನ್‌ ಯೂರೋಪ್‌ ಕಪ್‌, ಕಝಕಿಸ್ತಾನ್‌ 2024 (1.4 ಕಿಮೀ) 43ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ… ಇವರ ಸಾಧನೆಗಳೇನು?

B M Lavakumar

admin
the authoradmin

Leave a Reply