LatestLife style

ಸೌಂದರ್ಯವನ್ನು ಆಸ್ವಾದಿಸುವುದು, ಆರಾಧಿಸುವುದು ಮಾನವ ಸಹಜಗುಣ… ಪ್ರಕೃತಿಯೇ ಸೌಂದರ್ಯದ ಗುರು!

ಸೌಂದರ್ಯ ಎಂದರೇನು? ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ನೀಡಬಹುದು.. ಆದರೆ ನಿಜವಾದ ಸೌಂದರ್ಯ  ನೋಡುವ ಕಣ್ಣಿನಲ್ಲಿ.. ಆಸ್ವಾದಿಸುವ ಮನಸ್ಸಿನಲ್ಲಿದೆ.. ಸೌಂದರ್ಯ ಎನ್ನುವುದು ಮೇಲ್ನೋಟಕ್ಕೆ ಕಾಣದೆ ಇರಬಹುದು.. ಕುರೂಪದಲ್ಲಿಯೂ ಸೌಂದರ್ಯ ಹುಡುಕಬೇಕು ಅದು ರೂಪವೇ ಅಲ್ಲದ ಸೌಂದರ್ಯ.. ಹಾಗಾದರೆ ಸೌಂದರ್ಯ ಎಂದರೇನು? ಎಂಬುದರ ಆಳ, ಅಗಲದ ಬಗೆಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ವಿಶ್ಲೇಷಿಸುತ್ತಾ ಹೋಗಿದ್ದಾರೆ. ಈ ಬಾರಿ ಅವರು ಸೌಂದರ್ಯದ ಸುತ್ತಲೂ ಹರಡಿಕೊಂಡಿರುವ ಮಾನವ ಸಹಜಗುಣವನ್ನು ತೆರೆದಿಟ್ಟಿದ್ದಾರೆ.

ಸೌಂದರ್ಯದ ಬಗ್ಗೆ ಪುರಾಣ ಕಾಲದಿಂದಲೂ ಪರಂಪರಾನುಗತ ಚರ್ಚೆ, ವಾದ, ಸಂವಾದ ನಡೆಯುತ್ತಲೇ ಬಂದಿದೆ. ಸಹಜ ಸೌಂದರ್ಯವನ್ನು ಯಾವುದೇ ಭೇದಭಾವ ಇಲ್ಲದೆ ಪ್ರತಿಯೊಬ್ಬರೂ ಪರಸ್ಪರ ಪ್ರೀತಿಸಿ ಗೌರವಿಸಿ ಸ್ವಇಚ್ಚೆಯಿಂದಲೇ  ಆರಾಧಿಸುತ್ತಾರೆ. ಒಂದಿಲ್ಲೊಂದು ಕಾರಣದಿಂದ ಅಥವಾ ಯಾವುದೇ ಒಂದು ಕಾರಣಕ್ಕಾಗಿ ಅಂದ ಚೆಂದವನ್ನು ಎಲ್ಲರೂ ಬಯಸುತ್ತಾರೆ.

ಇದನ್ನೂ ಓದಿ: ಸೌಂದರ್ಯ ಒಲ್ಲದ ಮೂರ್ಖ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ.. ಇಲ್ಲಿದೆ ತಪ್ಪದೆ ಓದಿ..

ತಮ್ಮನ್ನು ಬೇರೆಯವರು ಗಮನಿಸುತ್ತಿಲ್ಲ ಅಥವಾ ಗಮನಿಸಿದರೂ ಪರವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಏಕಾಂತವಾಗಿ ದರ್ಪಣದ ಮುಂದೆ ನಿಂತು, ಕುಳಿತು ತಮ್ಮ ಇಡೀ ದೇಹದ ಅಂಗಾಂಗ ಸೌಂದರ್ಯವನ್ನು ನಖಶಿಖಾಂತ ತದೇಕ ಚಿತ್ತದಿಂದ ದಿಟ್ಟಿಸಿ ನೋಡಿ ಕೊಂಡು ಆನಂದ ಪಡುತ್ತಾರೆ. ಒಂದು ವೇಳೆ ಏನಾದರೂ ಬದಲಾವಣೆ, ಮಾರ್ಪಾಡು ಅಗತ್ಯವಿದ್ದರೆ, ಕಂಡು ಬಂದರೆ ಸೌಂದರ್ಯ ವರ್ಧಕ ಸಾಧನೆ ಬಗ್ಗೆ ಹೆಚ್ಚಿನ ಗಮನ ನೀಡುವರು. ಇಂಥ ಸಾಮಾನ್ಯ ಜ್ಞಾನವು ಮಾನವಸಹಜ ಗುಣವಾಗಿದ್ದು ಎಲ್ಲರಲ್ಲೂ  ಇದ್ದೇ ಇರುತ್ತದೆ. ವಿಶೇಷವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಅವಧಿ ತೆಗೆದುಕೊಂಡು ಸಮಯ ಸಿಕ್ಕಾಗಲೆಲ್ಲ ಸರಾಗವಾಗಿ ಅಡಿಯಿಂದ ಮುಡಿಯವರೆಗೆ ಪರೀಕ್ಷೆ ಮತ್ತು ಪರಿಶೀಲನೆ ಮಾಡಿಕೊಳ್ಳುವ ಪ್ರತೀತಿ ಇದೆ.

ಸೌಂದರ್ಯವೃದ್ಧಿ ಅಲಂಕಾರದ ವಸ್ತು,ವಸ್ತ್ರ, ಪ್ರಸಾಧನಗಳನ್ನು ಉಪಯೋಗಿಸುವ ಮೂಲಕ ಕೃತಕ, ಸ್ವಾಭಾವಿಕ ಸೌಂದರ್ಯದ ಸೊಬಗನ್ನು ಹೆಚ್ಚಿಸುವ ಪ್ರವೃತ್ತಿ ಬೆಳೆಸಿಕೊಂಡು ಆಪ್ಯಾಯ ಮಾನ ವಿನ್ಯಾಸದಲ್ಲಿ ಕಾಣಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ. ಏನೇ ಆಗಲಿ, ಇದು ಅಭ್ಯಾಸವಾದರೆ ಉಪಾಯ, ವ್ಯಸನಿ ಆದಾಗ ಅಪಾಯವು ಕಟ್ಟಿಟ್ಟ ಬುತ್ತಿಯಾಗಿ ಕಷ್ಟ ನಷ್ಟ ನೋವು ಸಾವು ಸಂಭವಿಸಬಹುದು.

ಇದನ್ನೂ ಓದಿ: ಸೌಂದರ್ಯಕ್ಕೆ ಇರುವುದೆಷ್ಟು ಮುಖಗಳು.. ಸೌಂದರ್ಯದ ಸುತ್ತ ಘಟಿಸಿ ಹೋದ ಘಟನಾವಳಿಗಳೆಷ್ಟು?

ಕವಿ, ಸಾಹಿತಿ, ಶಿಲ್ಪಿ, ಕಲಾವಿದ, ಸಿಂಪಿಗ, ಅರ್ಚಕ, ಆಡಳಿತಗಾರ,  ಮಹಾರಾಜ, ಮಂತ್ರಿ, ರಾಜಕಾರಣಿ, ಶಿಕ್ಷಕ, ಆಸ್ತಿಕ, ನಾಸ್ತಿಕ, ಆಧ್ಯಾತ್ಮಿಕ ಪ್ರವರ್ತಕ, ಸಮಾಜ ಸುಧಾರಕ, ಪತ್ರಕರ್ತ, ನಟ, ಚಿತ್ರ ಕಲಾವಿದ, ಹರಿ(ಕತೆ) ದಾಸ, ಸಂತ, ಸನ್ಯಾಸಿ, ಸಂಸಾರಿ, ಬ್ರಹ್ಮಚಾರಿ, ದೇವ ದಾನವ ಪ್ರತಿಯೊಬ್ಬರಲ್ಲೂ ಸೌಂದರ್ಯ ಪ್ರಜ್ಞೆ ಇದ್ದೇ ಇದೆ. ಒಮ್ಮೆ ಆದರೂ ಇದರ ಆರಾಧನೆ ಮಾಡಿರುತ್ತಾರೆ. ಸೌಂದರ್ಯ ಲೋಕದಿಂದ ಶಾಶ್ವತವಾಗಿ ಹೊರಬರಲು ಅಥವಾ ಹೊರಗೆ  ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಪುಷ್ಟೀಕರಿಸುವಂತಹ ಸಾಹಿತ್ಯ ಸಾಲುಗಳನ್ನು ಡಿವಿಜಿ ಜಗಜ್ಜಾಹೀರು ಮಾಡಿದ್ದಾರೆ..

ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ ಕಂಗೊಳಿಸುವುದದರಸಿರಿ ಅರೆಘಳಿಗೆಯಲರೊಳ್ ಪೊಂಗುವ ಆನಂದವದನು ಅನುಭವಿಸಿದವನ್ ಅಜನ ಹಂಗಿಪನೇ ಕೃಪಣತೆಗೆ , ಮಂಕುತಿಮ್ಮ .. ಈ ಸಾಲಿನ ತಾತ್ಪರ್ಯವನ್ನು ನೋಡುವುದಾದರೆ, ಆರು ತಿಂಗಳ ಶ್ರಮದ ದುಡಿಮೆಯ ನಂತರ ಒಂದು ಗುಲಾಬಿ ಹೂವು ಬೆಳೆಯುತ್ತದೆ, ಅದರ ಸೊಬಗು ಸೌಂದರ್ಯವು ಸ್ವಲ್ಪ ಹೊತ್ತು ಮಾತ್ರ ಅರಳಿ ಕಂಗೊಳಿಸುತ್ತದೆ.  ಆ ವೇಳೆ ಹೊರ ಹೊಮ್ಮುವ ಸಂತೋಷವನ್ನು ಅನುಭವಿಸುವ ಸೌಂದರ್ಯ ಆರಾಧಕನು ಬ್ರಹ್ಮನನ್ನು ಹಂಗಿಸಿ ಮೂದಲಿಸುವನೇನು? ಎಂಬುದೇ ಇದರ ತಾತ್ಪರ್ಯ.

ಇದನ್ನೂ ಓದಿ: ಬದಲಾವಣೆಯ ಕಾಲಘಟ್ಟದಲ್ಲಿ ನಿಂತು ನೋಡುವವರಿಗೆ ಕಾಣುತ್ತಿರುವುದೇನು?

ಇನ್ನೊಂದು ಕಡೆ ಇದೇ ಕವಿಯು “ಪ್ರಕೃತಿಯೇ ಸೌಂದರ್ಯದ ಪ್ರಪ್ರಥಮ ಗುರು” ಎಂಬುದಾಗಿ ಕೆಳಕಂಡಂತೆ ವರ್ಣಿಸಿದ್ದಾರೆ. ಬಾಂದಳದ ಬಾಗು ರವಿಕಿರಣಗಳ ನೀಳ್ ಕೋಲು ಇಂದುಮಣಿ ನುಣ್ಪು ತಾರೆಗಳ ಕಣ್ಮಿನುಗು ಚೆಂದದಂಗಾಂಗ ಭಾವದಿ ಮೊದಲ ಪಾಠವಿದು ಸೌಂದರ್ಯದಾ ಗುರು ಪ್ರಕೃತಿ,  ಮಂಕುತಿಮ್ಮ   ಸೌಂದರ್ಯದ ಕುರಿತಂತೆ ಮಾತಾಡುತ್ತಾ ಹೋದರೆ ಅವುಗಳಿಗೆ ಕೊನೆಯೇ ಇಲ್ಲವೇನೋ?

admin
the authoradmin

9 Comments

  • ಸೌಂದರ್ಯದ ಬಗ್ಗೆ ಅರ್ಥಪೂರ್ಣ ಮತ್ತು ಸುಂದರವಾದ ಲೇಖನ, ಎಲ್ಲರಿಗೂ ಧನ್ಯವಾದ

  • ಲವ ಸರ್, ಅಮೋಘವಾಗಿ ಮೂಡಿಬಂದಿದೆ., ಅನಂತಾನಂತ ಧನ್ಯವಾದಗಳು
    ಕುಮಾರಕವಿ ನಟರಾಜ

  • One of the most important and top class articles I have ever read so far, in my lifetime, thanks sir 👍 🙏

  • Very interesting and impressive topic to understand seriously by the younger generation, today, thank you very much sir/madam

  • ಬಹಳ ವಿಜೃಂಭಣೆಯಿಂದ ಪ್ರಕಟಗೊಂಡ ಒಂದು ಆಕರ್ಷಕ ಮನಮೋಹಕ ಹಾಗೂ ವಿಶೇಷ ಲೇಖನ, ಧನ್ಯವಾದ ಸರ್/ಮೇಡಂ

  • ಉತ್ತಮ ಬರವಣಿಗೆಯ ಅತುತ್ತಮ ವಿಚಾರದ ಸುಂದರ ಪುಟ ವಿನ್ಯಾಸದ ಶೃಂಗಾರಭರಿತ ಸಭ್ಯತೆಯ ಲೇಖನ. ಪ್ರಕಟಿಸಿದವರಿಗೂ ಲೇಖಕರಿಗೂ , ನಮನಗಳು,

  • ಉತ್ತಮ ಬರವಣಿಗೆಯ ಅತುತ್ತಮ ವಿಚಾರದ ಸುಂದರ ಪುಟವಿನ್ಯಾಸದ ಶೃಂಗಾರಭರಿತ ಸಭ್ಯತೆಯ ಲೇಖನ. ಪ್ರಕಟಿಸಿದವರಿಗೂ ಲೇಖಕರಿಗೂ , ನಮನಗಳು,

  • ನನಗಂತೂ ಓದಿ ತುಂಬ ಖುಷಿಯಾಯಿತು, ಅಪರೂಪದ ಲೇಖನ ಪ್ರಕಟಿಸಿದ ತಮಗೆ ತುಂಬ ಧನ್ಯವಾದಗಳು ಸರ್.

  • ಸೌಂದರ್ಯಒಲ್ಲದ,,,,,,,ಲೇಖನ ಓದಿದ ನಾನೂ ನನ್ನ ಸ್ನೇಹಿತರು ಬೇರೆಯವರಿಗೂ ಶೇರ್ ಮಾಡಿದ್ದೇವೆ. ನಿಮ್ಮ ಪತ್ರಿಕೆಯ subscribe ಆಗುವುದು ಹೇಗೆ. ಪ್ರತಿದಿನ ನಾವೆಲ್ಲ ನಿಮ್ಮ ಜನಮನ ಪತ್ರಿಕೆಯನ್ನು ಓದಲು ಏನು ಮಾಡಬೇಕು, ಹೇಗೆ? ದಯವಿಟ್ಟು ತಿಳಿಸಿರಿ, ಒಂದುವೇಳೆ ನಿಮ್ಮದು YouTube ಅಥವ Google ಇದ್ದರೆ ಹೇಗೆ ಓಪನ್ ಮಾಡಬೇಕು ಎಂಬುದನ್ನೂ ಸಹ ನಿಮ್ಮ ಪತ್ರಿಕೆ ಕೊನೆಯಲ್ಲಿ ಪ್ರಕಟಿಸಿ/ಮಾಹಿತಿ ನೀಡಿದರೆ ಎಲ್ಲ ಓದುಗರಿಗೂ ತುಂಬ ಅನುಕೂಲವಾಗುತ್ತದೆ ಸರ್, ನಮಸ್ಕಾರ

Leave a Reply