LatestLife style

ನಿಸರ್ಗದ ಸೌಂದರ್ಯಕ್ಕೆ ಮನಸೋಲದವರುಂಟೆ..? ನಿಸರ್ಗ ಸುಂದರಿಯ ಸೌಂದರ್ಯ ಅನಂತಾನಂತ…!

ಸೌಂದರ್ಯ ಎಂದರೇನು? ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ನೀಡಬಹುದು.. ಆದರೆ ನಿಜವಾದ ಸೌಂದರ್ಯ  ನೋಡುವ ಕಣ್ಣಿನಲ್ಲಿ.. ಆಸ್ವಾದಿಸುವ ಮನಸ್ಸಿನಲ್ಲಿದೆ.. ಸೌಂದರ್ಯ ಎನ್ನುವುದು ಮೇಲ್ನೋಟಕ್ಕೆ ಕಾಣದೆ ಇರಬಹುದು.. ಕುರೂಪದಲ್ಲಿಯೂ ಸೌಂದರ್ಯ ಹುಡುಕಬೇಕು ಅದು ರೂಪವೇ ಅಲ್ಲದ ಸೌಂದರ್ಯ.. ಹಾಗಾದರೆ ಸೌಂದರ್ಯ ಎಂದರೇನು? ಎಂಬುದರ ಆಳ, ಅಗಲದ ಬಗೆಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ವಿಶ್ಲೇಷಿಸುತ್ತಾ ಹೋಗಿದ್ದಾರೆ. ಈ ಬಾರಿ ಅವರು ಸೌಂದರ್ಯದ ಕುರಿತ ಮನುಜ ಸಹಜ ಆಕರ್ಷಣೆಯನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: ಸೌಂದರ್ಯ ಒಲ್ಲದ ಮೂರ್ಖ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ.. ಇಲ್ಲಿದೆ ತಪ್ಪದೆ ಓದಿ..

ಆಕಾಶ ಭೂಮಿಗಳ ಸೌಂದರ್ಯ ಅನಂತಾನಂತ! ನಭೋಮಂಡಲದಲ್ಲಿ ಭೂಮಿಯೆಡೆಗೆ ಸೂರ್ಯ ಬಾಗುವುದು ಸಹಜ. ಇದಕ್ಕೆ ಕಾರಣ ಧರಣಿ-ದಿಗಂತ ನಡುವಣ ಸ್ವಾಭಾವಿಕ ಆಕರ್ಷಣ. ಪರಸ್ಪರ ಕ್ರಿಯಾಗುಣವಾದ ಇದನ್ನು ವೈಜ್ಞಾನಿಕ ವಾಗಿ ಗುರುತ್ವಾಕರ್ಷಣಾ ಎನ್ನುತ್ತಾರೆ… ಪ್ರಕೃತಿಯಲ್ಲಿಯೇ ಇಂತಹದೊಂದು ಆಕರ್ಷಕ ಗುಣವಿರಬೇಕಾದರೆ ಪ್ರಾಣಿ ಪಕ್ಷಿಯಾಚೆಗೆ ಮನುಷ್ಯನಲ್ಲಿ ಸೌಂದರ್ಯವನ್ನು ಆಸ್ವಾದಿಸುವ ಗುಣವಿಲ್ಲದಿದ್ದರೆ ಆತ ಮನುಷ್ಯನಾಗಿರಲು ಹೇಗೆ ಸಾಧ್ಯ? ಆದರೂ ನಮ್ಮ ಎದುರಿಗಿರುವ ಸೌಂದರ್ಯವನ್ನು ಆಸ್ವಾದಿಸಬೇಕೇ ಹೊರತು ಮುಟ್ಟಿ ಕೆಡಿಸುವುದು ಅಕ್ಷಮ್ಯ ಅಪರಾಧ…

ಉದಯನ ಬೆಳಗು, ಸಂಜೆಯ ಮುಳುಗು ವೇಳೆಯಲ್ಲಿ ಸರಳರೇಖಾ ರವಿಕಿರಣವು ತೆಳುಗುಲಾಬಿ ವಸ್ತ್ರ ತೊಟ್ಟ ಯುವತಿಯ ಅಂಗಾಂಗ ಮೂಲಕ *ಸೂರ್ಯ* ನೇರವಾಗಿ ತೂರಿದಾಗ; ಕಡುಬಿಳಿ ವಸ್ತ್ರತೊಟ್ಟ ಹದಿಹರೆಯದ ತರುಣಿಯು ತೊರೆ, ಕಡಲು, ಮಳೆ ನೀರಿನ ಒದ್ದೆಯಿಂದ ಮಿಂದೆದ್ದು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬರುವವಳಾ ಮೈಯನ್ನು ವರುಣ ಅಂಟಿಕೊಂಡಾಗ…  ಮಲೆನಾಡು, ಬಯಲುಸೀಮೆ ಹೊರಾಂಗಣದಲ್ಲಿ ತೆಳು ನೀಲಿ ಲಂಗರವಿಕೆ ತೊಟ್ಟು ನಿರಾಳವಾಗಿ ನಿಂತ ಪಡ್ಡೆ ಹುಡುಗಿಯ ಸುತ್ತಲೂ ಗುಡಿಸೀ ಬಳಸಿ ತಿರುಗೀ ಮುರುಗಿ ಸುತ್ತುತ್ತಾ ವಾಯು ಸುಯ್ ಸುಯ್ ಬೀಸುವಾಗ ಸೃಷ್ಟಿಯಾಗುವ ಚೆಲುವ ಚಿತ್ತಾರ ವ್ಹಾ..ವ್..

ಇದನ್ನೂ ಓದಿ: ಸೌಂದರ್ಯಕ್ಕೆ ಇರುವುದೆಷ್ಟು ಮುಖಗಳು.. ಸೌಂದರ್ಯದ ಸುತ್ತ ಘಟಿಸಿ ಹೋದ ಘಟನಾವಳಿಗಳೆಷ್ಟು?

ಕಾಣಸಿಗುವ ಅಂಗಾಂಗ ಮೈಮಾಟ ನೋಟವು ಮೇನಕಾ ತಿಲೋತ್ತಮೆ ರಂಬೆ ಊರ್ವಶಿಯರ ನೃತ್ಯಕ್ಕಿಂತಲೂ ಮಿಗಿಲಾದದ್ದು. ಇಂಥ ಅಪೂರ್ವ, ಅಮೋಘ, ಅದಮ್ಯ, ಆಕರ್ಷಕ, ಆಪ್ಯಾಯಮಾನ ಸೌಂದರ್ಯವನ್ನು ಕಾಳಿದಾಸನೂ ವರ್ಣಿಸಲಸದಳ?! ಆದರೆ, ನಾನಿಲ್ಲಿ ವರ್ಣಿಸಿದ್ದೇನೆ ಹೀಗೆ:- ಸನ್ ಈಸ್ ಎ ‘ಪೀಪರ್’, ರೈನ್ ಈಸ್ ಎ ‘ಸೋಕರ್’, ವಿಂಡ್ ಈಸ್ ಎ ‘ಸ್ವೀಪರ್’. ಈ ಮೂರು(ಪಂಚ) ಭೂತಗಳ ವಿಶಿಷ್ಟ ವಿಶೇಷತೆ ಕಂಡಂಥ ಪಡ್ಡೆಹೈದಂಗೆ ಅನಿಸಿದ್ದು  ಜವ್ವನೆಯ ಅಂಗಾಂಗ ಸೌಂದರ್ಯವನ್ನು ನಯವಾಗಿ ಸವರಿ ಬರುವ ಅದೃಷ್ಟದ ಸೂರ್ಯಕಿರಣ, ನಾನಾಗಬಾರದಿತ್ತೆ…?

ನಾಜೂಕಾಗಿ ಒತ್ತೀಒತ್ತಿ ಒದ್ದೆಯ ಮುದ್ದೆ ಮಾಡಿದ ವರುಣ, ನಾನಾಗಬಾರದಿತ್ತೇ? ತಣ್ಣಗೆ ಬೀಸುತ್ತ ನವಿರಾಗಿ ಮುಟ್ಟಿ ಮುತ್ತಿಟ್ಟು ಮುದ್ದಿಸಿದ ವಾಯು ನಾನಾಗಬಾರದಿತ್ತೇ! ಎಂದು. ಇವನಂತೆಯೇ ತಪಸ್ಸು ಮಾಡುವ, ಜಪಮಂತ್ರ ಹೇಳುವ, ಜೊಲ್ಲು ಸುರಿಸುವ, ಪುರುಷರು ಅನೇಕ ಇರಬಹುದು?! ರವಿಯ ಕಿರಣ, ಮಳೆಯ ಸಿಂಚನ, ತಂಗಾಳಿಯ ತೂರುವಿಕೆ, ಇವೆಲ್ಲವೂ ಸುಂದರಿಯ ತನುತಟ್ಟಿ ಮನಮುಟ್ಟಿ ಅನುಭವಿಸಾಸ್ವಾದಿಸಿದ ಬಳಿಕವೇ ಒಂದೇ ಒಂದುಸಲ ನನ್ನನ್ನೂ ನನ್ನ ತನುಮನ ತೂರಿ-ಸವರಿ-ನೆನೆಸಿ ಹೋಗಬಾರದೇ? ಎಂಬ ಮನದಾಳದಇಂಗಿತ ಒಡಲಾಳದಳಲು ಎಂತಹ ಪುರುಷನಿಗೂ ಕಾಡುತ್ತದೆ, ಬೇಡುತ್ತದೆ ಪೀಡಿಸುತ್ತದೆ.

ಕಡೇಪಕ್ಷ ಅವನೊಳಗಿನದ್ದು ಹಪಹಪಿಸುತ್ತದೆ? ಇಂಥ ಕನಸು- ನನಸು ಬಗ್ಗೆ ಅನನ್ಯ ಪ್ರಾರ್ಥಿಸುವ ಗಡಸು- ಗಂಡಸು ಎಲ್ಲೆಡೆ ಇದ್ದೇ ಇರುತ್ತಾನೆ. ಕೆಲವರು ಮಾತ್ರ ಬಹಿರಂಗವಾಗಿ ಹೇಳಿಕೊಂಡರೆ, ಹಲವರು ಅಂತರಂಗವಾಗಿ ಮನಸಲ್ಲೆ ಮಂಡಿಗೆ ತಿನ್ನುತ್ತಾರೆ! ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರಿಗೆಲ್ಲ ದೇವಿ ನೀನೊಬ್ಬಳೇ!… ಈ ಎಲ್ಲ ಸೌಂದರ್ಯ ದೃಶ್ಯಗಳನ್ನು ಕೇವಲ ಇಣುಕಿಣುಕಿ ಕದ್ದು ನೋಡುವ ರೋಮಾಂಚನ ಕ್ಷಣಗಳಂತೂ “ಸವಿನೆನಪುಗಳು ಬೇಕು ಸವಿಯಲೀ ಬದುಕು” ಎಂಬುದು ಸಾಯೋವರೆಗೂ ನಿತ್ಯಸತ್ಯ ಮಾತ್ರವಲ್ಲ ಅಜರಾಮರ, ಚಿರಸ್ಮರಣೀಯ! ಇಲ್ಲಿ ಪ್ರಸ್ತುತವೆನಿಸಿದ ಇನ್ನೊಂದು ಪ್ರಮುಖ ಉದಾಹರಣೆ:- “ನಡೆ-ನುಡಿಯೊಳೆಲ್ಲರೂ ಶುಚಿವೀರ ಸಾಧುಗಳು, ಶಸ್ತ್ರ ಹೇಮ ಕುಚ* ಸೋಂಕಿದೊಡೆ ಜಗದೊಳು ಅಚಲ ಆಗದವರಾರು, ಸರ್ವಜ್ಞ” (ವಿ.ಸೂ.: ದಯವಿಟ್ಟು ‘ಕುಚ’ ಪದದ ಬದಲು ‘ಸೌಂದರ್ಯ’ ಪದ ಸೇರಿಸಿಕೊಳ್ಳಲು ವಿನಂತಿ)

ಇದನ್ನೂ ಓದಿ:ಸೌಂದರ್ಯವನ್ನು ಆಸ್ವಾದಿಸುವುದು, ಆರಾಧಿಸುವುದು ಮಾನವ ಸಹಜಗುಣ… ಪ್ರಕೃತಿಯೇ ಸೌಂದರ್ಯದ ಗುರು!

admin
the authoradmin

Leave a Reply