ಬಂಗ್ಲೆ ಶಾಮಾರಾವ್ ದ್ವಾರಕಾನಾಥ ಚಂದನವನದ ‘ದ್ವಾರಕೀಶ್’ ಆಗಿ ಮೆರೆದಿದ್ದು ಹೇಗೆ? ಅವರು ನಟಿಸಿದ ಚಿತ್ರಗಳೆಷ್ಟು?

ಬಂಗ್ಲೆ ಶಾಮಾರಾವ್ ದ್ವಾರಕಾನಾಥ ಅಂದ್ರೆ ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ. ಆದರೆ ದ್ವಾರಕೀಶ್ ಎಂದರೆ ತಕ್ಷಣ ಕನ್ನಡ ಚಿತ್ರರಂಗದ ಕುಳ್ಳನಾಗಿ ಎಲ್ಲರ ಗಮನಸೆಳೆದು ಬಿಡುತ್ತಾರೆ. ಆಗಸ್ಟ್ 19, 1942ರಂದು ಹುಣಸೂರಿನಲ್ಲಿ ಶಾಮರಾವ್ ಮತ್ತು ಜಯಮ್ಮರವರ ಮಗನಾಗಿ ಜನಿಸಿದರು. ಮೈಸೂರಿನ ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿ ಅದಾದ ಬಳಿಕ ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರಾದರೂ ಅದು ಅವರಿಗೆ ತೃಪ್ತಿ ಕೊಡಲಿಲ್ಲ. ಹೀಗಾಗಿ ಅವರು ಸಿನಿಮಾರಂಗದತ್ತ ವಾಲಿದರು. 1963ರಲ್ಲಿ ಚಂದನವನಕ್ಕೆ ಎಂಟ್ರಿ ಕೊಟ್ಟ ಅವರು ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ ರಚನೆಕಾರರಾಗಿ ಸಾಧನೆಗೈದು 2024 ಏಪ್ರಿಲ್ 16ರಂದು ತಮ್ಮ 82ನೇ ವಯಸ್ಸಿನಲ್ಲಿ ಚಿರನಿದ್ರೆಗೆ ಜಾರಿದರು. ದ್ವಾರಕೀಶ್ ಅವರ ಸಿನಿಮಾ ಜೀವನ ಮತ್ತು ಸಾಧನೆಯ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಒಂದಷ್ಟು ವಿಚಾರವನ್ನು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ
ನಟನೆ ಮೂಲಕ ಎಲ್ಲರ ಗಮನ ಸೆಳೆದ ವಾಮನ ರೂಪದ ಕಲಾವಿದ. ಅಷ್ಟೇ ಅಲ್ಲ ತನ್ನ ಕಿರಿಯ ವಯಸ್ಸಿನಲ್ಲೆ ನಟ, ನಿರ್ಮಾಪಕ, ನಿರ್ದೇಶಕನಾಗಿ ಅತ್ಯಂತ ಯಶಸ್ಸು, ಕೀರ್ತಿ ಹಾಗೂ ಹಣ ಮೂರನ್ನು ವಶಪಡಿಸಿಕೊಂಡ ಅದೃಷ್ಟವಂತ. ಬಣ್ಣದ ಬದುಕಿನಲ್ಲಿ ಹಲವು ರೀತಿಯ ಏಳುಬೀಳು ಕಂಡುಂಡವರು. 1966ರಲ್ಲಿ ಮೊಟ್ಟಮೊದಲ ಬಾರಿಗೆ ಮಮತೆಯ ಬಂಧನ ಚಿತ್ರ ನಿರ್ಮಿಸಿ ಕನ್ನಡ ಚಿತ್ರರಂಗದ ಅತಿಕಿರಿಯ ನಿರ್ಮಾಪಕ ಎನಿಸಿದರು. ಮೇಯರ್ ಮುತ್ತಣ್ಣ (1969) ಸಿನಿಮಾದ ಮೂಲಕ ರಾಜ್ ಕುಮಾರ್ ರಿಂದ ಪ್ರಥಮ ಬಾರಿಗೆ ಬೆಂಗಳೂರಿನ ಮೇಯರ್ ಪಾತ್ರವನ್ನು ಮಾಡಿಸಿದ ಕೀರ್ತಿ ದ್ವಾರಕೀಶನಿಗೆ ಸಲ್ಲುತ್ತದೆ.

ಏಕ ಕಾಲಕ್ಕೆ ಕನ್ನಡ ಹಿಂದಿ ಎರಡೂ ಭಾಷೆ ಗಳಲ್ಲಿ ‘ಆಫ್ರಿಕಾದಲ್ಲಿ ಶೀಲಾ’ ಕಲರ್ ಫಿಲಂ ತಯಾರಿಸುವ ಮೂಲಕ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರೋದ್ಯಮಿಗಳೂ ಚಿತ್ರೀಕರಣ ಮಾಡಲು ಹಿಂಜರಿವಂತಹ ಆಫ್ರಿಕಾದಂಥ ದಟ್ಟಕಾಡಿನಲ್ಲಿ ಧೈರ್ಯದಿಂದ ಮುನ್ನುಗ್ಗಿ ಚಿತ್ರೀಕರಣ ಮುಗಿಸಿ ನೂತನ ದಾಖಲೆಯೊಡನೆ ಹಿಂದಿರುಗಿದ ಭಾರತದ ಪ್ರಥಮ ಪ್ರಾದೇಶಿಕ ಭಾಷಾ ಚಿತ್ರದ ನಿರ್ಮಾಪಕ ಎಂಬ ಕೀರ್ತಿ ಗಳಿಸಿದರು. ಇದಾದ ಕೆಲವೇ ತಿಂಗಳ ನಂತರ ವಿದೇಶದಲ್ಲಿ ತಯಾರಿಸಿದ ಮೊಟ್ಟ ಮೊದಲ ಕನ್ನಡ ಚಲನಚಿತ್ರ ‘ಸಿಂಗಾಪುರಲ್ಲಿ ರಾಜಾಕುಳ್ಳ’ ನಿರ್ಮಾಪಕನಾಗಿ ವಿಖ್ಯಾತರಾದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು
ಪ್ರಪ್ರಥಮ ಬಾರಿಗೆ ಕುಳ್ಳ ಏಜೆಂಟ್ 000 ಚಿತ್ರದ ಮೂಲಕ ತಾವೇ ಹೀರೊ ಆಗಿ, ಕ್ಯಾಬರೆ ಡಾನ್ಸರ್ ಜ್ಯೋತಿಲಕ್ಷ್ಮಿಯನ್ನು ಡೆಬ್ಯೂ ಹೀರೋಯಿನ್ ಮಾಡಿದ್ದಲ್ಲದೇ ‘ಆಡೂ.. ಆಟ ಆಡೂ…’ ಕನ್ನಡ ಹಾಡನ್ನು ಬಾಲಿವುಡ್ ನ ಖ್ಯಾತ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ರಿಂದ ಹಾಡಿಸುವ ಮೂಲಕ ಪ್ರಥಮ ಬಾರಿಗೆ ಇವರನ್ಶು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ ಕೀರ್ತಿಯೂ ಇದೇ ಕುಳ್ಳನಿಗೆ ಸೇರುತ್ತದೆ. ಮೈಸೂರು-ಬೆಂಗಳೂರು ಕೇಂದ್ರಗಳಲ್ಲಿ ಏಕ ಕಾಲಕ್ಕೆ ಸತತ ಒಂದು ವರ್ಷ ಕಾಲ ದಿನವಹಿ 4 ಪ್ರದರ್ಶನ ಕಂಡ ಕನ್ನಡದ ಪ್ರಪ್ರಥಮ ಫಿಲಂ ‘ಆಪ್ತಮಿತ್ರ’ ರಾಷ್ಟ್ರ ಪ್ರಶಸ್ತಿ ಪಡೆಯಿತು!

ಮಾತ್ರವಲ್ಲದೆ 52ವರ್ಷ ದೀರ್ಘ ಕಾಲದ ಕನ್ನಡ ಸಿನಿಮಾ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ರಾದೇಶಿಕ ಭಾಷೆಯ ಚಿತ್ರವೊಂದು ಎಲ್ಲ ವರ್ಗದಲ್ಲೂ ರಾಜ್ಯ ಪ್ರಶಸ್ತಿಗಳನ್ನು ಬಾಚಿದ ಏಕೈಕ ಕನ್ನಡ ಚಿತ್ರ ಎನಿಸಿ ದಾಖಲೆ ನಿರ್ಮಿಸಿತು. ಈ ಚಿತ್ರದ ನಿರ್ಮಾಪಕನೂ ಸಹ ಇದೇ ಲಿಲಿಪುಟ್ ಆಕಾರದ ಕಿಲಾಡಿಕುಳ್ಳ. 1942ರಲ್ಲಿ ಜನಿಸಿದ ಬಂಗ್ಲೆ ಶಾಮರಾವ್ ದ್ವಾರಕಾನಾಥ್. ಇವರ ಮಾವ ಹುಣಸೂರು ಕೃಷ್ಣಮೂರ್ತಿ ಮತ್ತು ಇವರ ಬಾವ ಹೆಚ್.ಆರ್ ಭಾರ್ಗವ. 1964ರಲ್ಲಿ ‘ದ್ವಾರಕೀಶ್’ ಹೆಸರಿಂದ ಚಿತ್ರರಂಗ ಪ್ರವೇಶಿಸಿದ ದ್ವಾರಕನಾಥ್ ತಮ್ಮ ಕಿರಿಯ ವಯಸ್ಸಿನಲ್ಲೇ ವಿವಿಧ ಮಜಲುಗಳಲ್ಲಿ ಅನವರತ ತಮ್ಮನ್ನು ತೊಡಗಿಸಿಕೊಂಡಿದ್ದ ಕ್ರಿಯಾಶೀಲ ವ್ಯಕ್ತಿ.
ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..
ಕಥೆ ಚಿತ್ರಕತೆ, ಸಂಭಾಷಣೆ, ಹಾಡು, ವಿತರಣೆ, ಇತ್ಯಾದಿ ಕಾರ್ಯಗಳ ಜತೆಗೆ ಆಟ ಹುಡುಗಾಟ ಆಡಿದ ಸೀರಿಯಸ್ ಜೋಕರ್. 50 ವರ್ಷ ಪರ್ಯಂತ 50ಕ್ಕೂ ಹೆಚ್ಚು ಫಿಲಂಸ್ ನಿರ್ಮಿಸುವ ಹಾದಿಯಲ್ಲಿ ಗರಿಷ್ಠ ಏಳು-ಬೀಳು ಕಂಡಂಥ ಚಂದನವನದ ಮೊಟ್ಟಮೊದಲ ನಟ- ನಿರ್ಮಾಪಕ- ನಿರ್ದೇಶಕ! 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ 60ಕ್ಕೂ ಹೆಚ್ಚು ಸಿನಿಮಗಳನ್ನೂ ನಿರ್ಮಾಣ ಮಾಡಿರುವ ಧೀರ ಚಿತ್ರೋದ್ಯಮಿ. ಇವರ ಹತ್ತಿರದ ಸಂಬಂಧಿಯಾಗಿದ್ದ ಖ್ಯಾತ ನಿರ್ಮಾಪಕ- ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ನಿರ್ಮಾಣ ನಿರ್ದೇಶನದ ವೀರಸಂಕಲ್ಪ ಚಿತ್ರದಿಂದ ಚಂದನವನಕ್ಕೆ ಎಂಟ್ರಿ ಕೊಟ್ಟ ನಂತರ ಕಾಲಕ್ರಮೇಣ ಬಲು ಸಲೀಸಾಗಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.

ಪಾರಿಭಾಷಿಕ ವಿಭಾಗದ ಕಾರ್ಯಗಳನ್ನೂ ಸರಾಗವಾಗಿ ನಿರ್ವಹಿಸಿ 60 ವರ್ಷ ಕಾಲ ಕನ್ನಡ ಸಿನಿಮ ಸಾಮ್ರಾಜ್ಯ ಆಳಿದರು! ಇವರ ಇಬ್ಬರು ಗಂಡುಮಕ್ಕಳನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ ಹೆಮ್ಮೆಇರುವ ಈತ ನಿಜವಾಗಿಯೂ ಕನ್ನಡ ಚಿತ್ರರಂಗದ ಮಹಾನ್ ಕುಳ್ಳನೇ ಹೌದು. ಇಂತಹ ಅಪಾರ ಅನುಭವ ಹೊಂದಿರುವ ಈತ ತಮ್ಮ ಸಿನಿಜೀವನ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಕಷ್ಟನಷ್ಟ, ಏಳುಬೀಳು, ನೋವುನಲಿವು ಎಲ್ಲವನ್ನು ಅನುಭವಿಸಿದರು. ಹಲವಾರು ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಸನ್ಮಾನ ಹಾಗೂ ಅಂತರ ರಾಷ್ಟ್ರ ಮಟ್ಟದಲ್ಲಿ ಹಲವಾರು ದಾಖಲೆಯನ್ನು ನಿರ್ಮಿಸಿದರು.
ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್
ದ್ವಾರಕೀಶ್ ನಟಿಸಿದ ಪ್ರಮುಖ ಫಿಲಂಸ್ ಯಾವುದೆಂದರೆ? ವೀರಸಂಕಲ್ಪ, ಸತ್ಯಹರಿಶ್ಚಂದ್ರ, ಮದುವೆ ಮಾಡಿನೋಡು, ಶ್ರೀಕನ್ಯಕಾ ಪರಮೇಶ್ವರಿ ಕಥೆ, ಧನಪಿಶಾಚಿ, ಶ್ರೀಪುರಂದರದಾಸರು, ಲಗ್ನಪತ್ರಿಕೆ, ಭಾಗ್ಯದ ಬಾಗಿಲು, ಅಡ್ಡದಾರಿ, ಮಂಕುದಿಣ್ಣೆ, ಬೇಡಿ ಬಂದವಳು, ಗಾಂಧಿನಗರ, ಜೇಡರಬಲೆ, ಮೇಯರ್ ಮುತ್ತಣ್ಣ, ಮಲ್ಲಮ್ಮನಪವಾಡ, ಅರಿಶಿನಕುಂಕುಮ, ಬಾಳುಬೆಳಗಿತು, ಶ್ರೀ ಕೃಷ್ಣರುಕ್ಮಿಣಿ ಸತ್ಯಭಾಮ, ಸಿಡಿಲಮರಿ, ಭಲೇ ಅದೃಷ್ಟವೋ ಅದೃಷ್ಟ, ತಾಯಿದೇವರು, ಬಾಳಬಂಧನ, ನ್ಯಾಯವೇ ದೇವರು, ನಂದಗೋಕುಲ, ಜನ್ಮರಹಸ್ಯ, ಕ್ರಾಂತಿವೀರ, ಕುಳ್ಳ ಏಜೆಂಟ್ 000, ಬಂಗಾರದ ಮನುಷ್ಯ, ದೇವರು ಕೊಟ್ಟ ತಂಗಿ.

ಸಿಐಡಿ72, ಪ್ರೊಫೆಸರ್ ಹುಚ್ಚೂರಾಯ, ಮಹದೇಶ್ವರ ಪೂಜಾಫಲ, ಮಗಮೊಮ್ಮಗ, ಅಣ್ಣಅತ್ತಿಗೆ, ಮಮತೆಯ ಬಂಧನ, ಕೌಬಾಯ್ ಕುಳ್ಳ, ಭಕ್ತಕುಂಬಾರ, ಮಕ್ಕಳಭಾಗ್ಯ, ದೇವರದುಡ್ಡು, ಬಹದ್ದೂರ್‌ಗಂಡು, ಪಾವನಗಂಗಾ, ಸೊಸೆತಂದ ಸೌಭಾಗ್ಯ, ಕಳ್ಳಕುಳ್ಳ, ಧನಲಕ್ಷ್ಮಿ, ಭಾಗ್ಯವಂತರು, ಗಲಾಟೆಸಂಸಾರ, ಕಿಟ್ಟುಪುಟ್ಟು, ಶ್ರೀಮಂತನ ಮಗಳು, ಭಲೇಹುಡುಗ, ಸಿಂಗಾಪುರಲ್ಲಿ ರಾಜಾಕುಳ್ಳ, ಭಲೇಹುಡುಗ, ಮಾತುತಪ್ಪದ ಮಗ, ಮಧುರಸಂಗಮ, ಅಸಾಧ್ಯ ಅಳಿಯ, ನಾನಿರುವುದೆ ನಿನಗಾಗಿ, ಮನೆಮನೆಕಥೆ, ಹದ್ದಿನಕಣ್ಣು, ಆಟೋರಾಜ, ಸಿಂಹದಮರಿಸೈನ್ಯ, ಕುಲಪುತ್ರ, ಅವಳಹೆಜ್ಜೆ.
ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..
ಗುರುಶಿಷ್ಯರು, ಪೆದ್ದಗೆದ್ದ, ಘರ್ಜನೆ, ಕಾರ್ಮಿಕ ಕಳ್ಳನಲ್ಲ, ಜಿಮ್ಮೀಗಲ್ಲು, ಪ್ರಚಂಡಕುಳ್ಳ, ಮದುವೆ ಮಾಡು ತಮಾಷೆ ನೋಡು, ಇಂದಿನ ರಾಮಾಯಣ, ನೀ ಬರೆದ ಕಾದಂಬರಿ, ನೀತಂದ ಕಾಣಿಕೆ, ಆಫ್ರಿಕದಲ್ಲಿ ಶೀಲ, ಡ್ಯಾನ್ಸ್ ರಾಜ ಡ್ಯಾನ್ಸ್, ಹೆಂಡ್ತಿ ಹೇಳಿದರೆ ಕೇಳಬೇಕು, ಸರ್ವರ್ ಸೋಮಣ್ಣ, ಮುದ್ದಿನ ಮಾವ, ಬಹ್ಮಗಂಟು, ರಾಯರುಬಂದರು ಮಾವನ ಮನೆಗೆ, ಗೆದ್ದಮಗ, ಕುಳ್ಳಕುಳ್ಳಿ, ಮಂಕುತಿಮ್ಮ, ನ್ಯಾಯಎಲ್ಲಿದೆ, ಒಂದೇಗೂಡಿನ ಹಕ್ಕಿಗಳು, ಗೌರಿಕಲ್ಯಾಣ, ಆನಂದಭೈರವಿ, ಮಂಡ್ಯದಗಂಡು, ರಸಿಕ, ಕಿಲಾಡಿಗಳು, ಹೊಸಕಳ್ಳ ಹಳೇಕುಳ್ಳ, ಶೃತಿ, ಜೈಕರ್ನಾಟಕ, ಖುಷಿ, ಶ್ವೇತನಾಗರ, ಕಿಡ್ನ್ಯಾಪ್, ಗಂಡಮನೆ ಮಕ್ಕಳು, ರಾವಣರಾಜ್ಯ, ಮಜ್ನು, ಕೃಷ್ಣನೀ ಕುಣಿದಾಗ, ಜೊತೆ ಜೊತೆಯಲಿ, ಆಪ್ತಮಿತ್ರ, ಜೋಶ್, ವಿಷ್ಣುವರ್ಧನ, ಚೌಕ, ಮಾಣಿಕ್ಯ, ಆಟಗಾರ, ಚಾರುಲತ, ಅಮ್ಮ ಐ ಲವ್ ಯು, ಆಯುಷ್ಮಾನ್ ಭವ, ಮುಂತಾದವು.









ಜನಮನ ಪತ್ರಿಕೆಯನ್ನು ಎಷ್ಟು ಹೊಗಳಿದರೂ ಸಹ ಸಾಲದು. 1990ರಿಂದ ಈಚಿನ ಪೀಳಿಗೆಯವರಿಗೆ ಗೊತ್ತೇಇಲ್ಲದ ಅನೇಕ ವಿಷಯದ ಬಗ್ಗೆ ಅದರಲ್ಲೂ ಚಂದನವನ ಚಿತ್ರರಂಗದ ಬಗ್ಗೆಲ್ಲ ಅಮೋಘ ಅಂಕಿ-ಅಂಶ ಮತ್ತು ಮಾಹಿತಿ ನೀಡುತ್ತಿದೆ. ನಿಮ್ಮ ಅಂಕಣಕಾರ ಮತ್ತು ಖ್ಯಾತ ಬರಹಗಾರರಾದ ಕವಿ ನಟರಾಜ ರವರ ಜ್ಞಾನ ಮತ್ತು ಮಾಹಿತಿ ಸಾಮರ್ಥ್ಯದ ಬಗ್ಗೆ ಎಷ್ಟು ಅಭಿನಂದಿಸಿದರೂ ಸಹ ತೀರದು. ಹೀಗಿರುವಾಗ ಪತ್ರಿಕೆಯ ಬಳಗಕ್ಕೆ ವಿಶೇಷವಾಗಿ ಸಂಪಾದಕರಿಗೆ ಪ್ರಕಾಶಕರಿಗೆ ಕೋಟಿ ಕೋಟಿ ಧನ್ಯವಾದ, ಶಾಂತಕುಮಾರ, ಕೃಷಿಕ, ಮಂಡಕಳ್ಳಿ ಮೈಸೂರು.
ಕನ್ನಡ ಚಿತ್ರರಂಗದ ಎಲ್ಲ ಲೇಖನವೂ ಅಪ್ರತಿಮ ಉಪಯುಕ್ತ. ಲೇಖಕರಿಗೆ ಮತ್ತು ಪತ್ರಿಕೆಗೆ ನಮ್ಮ ತಲೆಮಾರಿನ ಎಲ್ಲರ ಪರವಾಗಿ ಧನ್ಯವಾದ ನಮಸ್ಕಾರ
ನನಗೆ ನನ್ನ ಬಂಧುಮಿತ್ರರಿಗೆ ಹಾಗೂ ಕುಟುಂಬದವರಿಗೆ ಕನ್ನಡ ಸಿನಿಮ ನಟ ನಟಿಯರ ಕುರಿತು ಗೊತ್ತಿಲ್ಲದ ಅನೇಕ ವಿಚಾರ ಮತ್ತು ವಿಷಯದ ಬಗ್ಗೆ ಸಂಕ್ಷಿಪ್ತಕ್ಕೂ ಹೆಚ್ಚಿನ ಆದರೆ ಸುಧೀರ್ಘಕ್ಕೂ ಕಡಿಮೆಯ ಅಂದರೆ ಓದುಗರಿಗೆ ಬೋರ್ ಆಗದಂತೆ ಹಿತಮಿತವಾಗಿ ಎಷ್ಟುಬೇಕೋ ಅಷ್ಟು ಬಹಳ ಉಪಯುಕ್ತ ಮಾಹಿತಿಯ ಸಿನಿಮ ಲೇಖನಗಳು ಸೂಪರ್..ರ್… ಹೀಗೇ ಮುಂದುವರೆಯಲಿ ಸರ್ ಮುಂದುವರೆದರೆ ಚೆನ್ನಾಗಿರುತ್ತದೆ ಎಂಬುದೆ ನಮ್ಮೆಲ್ಲರ ಒಕ್ಕೊರಲಿನ ಅಭಿಪ್ರಾಯ ಅನಿಸಿಕೆ ಅಭಿನಂದನೆ
Thank you so much LAVAKUMAR sir for a beautiful and wonderful editorial work 💕
Very much interesting article about KULLA AGENT 000 the only successful dwarf actor DWARAKEESH. Thanks sir 🙏
Excellent job and great writing from JANAMANA KANNADA
publisher and also the author Mr Natraj. Thank you all.
ನಮ್ಮಂಥ ಯುವ ಜನಾಂಗಕ್ಕೆ ಉತ್ತಮ ಮಾಹಿತಿಯ ಮತ್ತು ಸಾಮಾನ್ಯಜ್ಞಾನ ಮಾಹಿತಿಯ ಕನ್ನಡ ಚಿತ್ರರಂಗದ ಲೇಖನ. ನಮಗೆ ನಿಜವಾಗಲೂ ತುಂಬ ಸಂತೋಷ ಆಯ್ತು, ಧನ್ಯವಾದ ನಮಸ್ಕಾರ
ದ್ವಾರಕೀಶ್ ರವರ ಬಗ್ಗೆಲ್ಲ ತಿಳಿಸಿರುವ ಇಷ್ಟೊಂದು ನಿಗೂಢವಾದ ಸತ್ಯ ಅಥವ ವಿಚಾರ ಬಹುಶಃ ಕನ್ನಡ ಚಿತ್ರ ನೋಡುವ ಅಭಿಮಾನಿಗಳಿಗೆ ಗೊತ್ತಿರಲಿಕ್ಕಿಲ್ಲ ಎಂದು ನನ್ನ ಅಭಿಪ್ರಾಯ. ಫಸ್ಟ್ ಕ್ಲಾಸ್ ಆರ್ಟಿಕಲ್
ಥ್ಯಾಂಕ್ಯು ಸರ್,,,,,.ಬೆಳಗಾವಿ ಗಂಗಾವತಿಯಿಂದ ಕನ್ನಡ (ಸಿನಿಮಾ) ಸಾಹಿತ್ಯ ಅಭಿಮಾನಿ, (ಶಿರ್ಖೆ ನಿವಾಸಿ)ಬೆಂಗಳೂರು
74 ವಯಸ್ಸಿನ ನನಗೆ ಕನ್ನಡ ಚಲನಚಿತ್ರ ನಟ ದ್ವಾರಕೀಶ್ ಬಗ್ಗೆ ಸ್ವಲ್ಪ ವಿಚಾರ ಮಾತ್ರ ತಿಳಿದಿತ್ತು. ಆದರೀಗ ನಿಮ್ಮ ಜನಮನ ಪತ್ರಿಕೆಯ ಮಹಾನ್ ಲೇಖಕ ಕುಮಾರಕವಿಯವರ ಮೂಲಕ ಕನ್ನಡ ಚಿತ್ರರಂಗ ಮತ್ತು ನಟನಟಿಯರ ಬಗ್ಗೆ
ಒಂದಷ್ಟು ಹೆಚ್ಚಿನ ವಿಚಾರ ತಿಳಿಯುವ ಉತ್ತಮ ಅವಕಾಶ ದೊರಕಿದೆ. ಇ ಕಾರಣಕ್ಕೆ ನಿಮಗೆಲ್ಲರಿಗೂ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಅನೇಕಾನೇಕ ಧನ್ಯವಾದಗಳು (ಮೂಲತಹ ನಾನು ಬಾಗಲಕೋಟೆ ಬಳಿಯ ಘಲಗಿ ಎಂಬ ಪರಸ್ಥಳದವನು) ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ.
ನಮ್ಮಂಥ ಯುವ ಜನಾಂಗಕ್ಕೆ ಉತ್ತಮ ಮಾಹಿತಿಯ ಮತ್ತು ಸಾಮಾನ್ಯಜ್ಞಾನ ಮಾಹಿತಿಯ ಕನ್ನಡ ಚಿತ್ರರಂಗದ ಲೇಖನ. ನಮಗೆ ನಿಜವಾಗಲೂ ತುಂಬ ಸಂತೋಷ ಆಯ್ತು, ಧನ್ಯವಾದ ಸರ್
ಹಾಸ್ಯನಟ ಕುಳ್ಳ ದ್ವಾರಕೀಶ್ ರವರ ಬಗೆಗಿನ ಲೇಖನ ಬೊಂಬಾಟ್ ಸರ್ ನಮಸ್ಕಾರ ಧನ್ಯವಾದ
ದ್ವಾರಕೀಶ್ ಲೇಖನ ತುಂಬ ಚೆನ್ನಾಗಿದೆ ಸೂ…ಪ….ರ್….. ಧನ್ಯವಾದ ಸರ್ ಓದಿದ ನಾವು ಅವರ ಸಿನಿಮಾಗಳನ್ನು ಜ್ಞಾಪಿಸಿಕೊಂಡು ನಕ್ಕುನಕ್ಕು ಸಾಕಾಯ್ತತು.