2025ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಶಿಪ್ ಟೂರ್ನಿ ಇತಿಹಾಸದಲ್ಲಿ ಭಾರತದ ವನಿತೆಯರು ಚಿರಸ್ಮರಣೀಯರಾಗಿ ಉಳಿದಿರುತ್ತಾರೆ. ಆದಿ ಕಾಲದಿಂದ ಆಚರಣೆಯಲ್ಲಿರುವ ವಿಶ್ವಶ್ರೇಷ್ಠ ಭಾರತದ ಮಹಿಳಾ ಸಂಸ್ಕೃತಿ ಪರಂಪರೆ ಆಚಾರ ವಿಚಾರ ಮುಂತಾದ ಯಾವ ಪದ್ದತಿಗೂ ಚ್ಯುತಿ ಬಾರದಂತೆ ಕ್ರಿಕೆಟ್ ಹಾಗೂ ಇತರೆ ಕ್ರೀಡಾ ಕೂಟದಲ್ಲೂ ನಮ್ಮ ದೇಶದ ಆಟಗಾರ್ತಿಯರು ಕಳೆದ 50 ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಆಲ್ ರೌಂಡ್ ಆಟಗಾರ್ತಿ ದೀಪ್ತಿಶರ್ಮರವರ ಇನ್ಸ್ಟಾಗ್ರಾಂನ “ಜೈಶ್ರೀರಾಂ” ಮತ್ತು ತೋಳಿನ ಹನುಮಾನ್ ಟ್ಯಾಟು ಉತ್ತಮ ಉದಾಹರಣೆ.
ಇದನ್ನೂ ಓದಿ: ಚಿಲಿಯಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ತೆಕ್ಕಡ ಭವಾನಿ… ಸ್ಕೀಯಿಂಗ್ ನಲ್ಲಿ ಕಂಚಿನ ಪದಕ!
ಭಾರತ ಮಹಿಳೆಯರು ವಿಶ್ವ ಚಾಂಪಿಯನ್ಸ್ ಆಗಲು ಅಸಾಧ್ಯವೆಂದು ಇಡೀ ಪ್ರಪಂಚವೇ ವ್ಯಂಗ್ಯವಾಡಿತ್ತು. 2017ರಲ್ಲಿ ರನ್ನರ್ ಅಪ್ ಆಗಿ ಹೊರನಡೆದ ಅಂದಿನಿಂದಲೂ ಇಂಗ್ಲೆಂಡ್, ಆಸ್ಟ್ರೇಲಿಯ ಕುಹಕದ ನಗೆಬೀರಿ ಜರಿಯುತ್ತ ಬಂದಿತ್ತು. ಆದರೆ ಧೃತಿಗೆಡದ ಹರ್ಮಾನ್ ಪ್ರೀತ್ ನಾಯಕತ್ವದ ತಂಡವು ಛಲಬಿಡದೆ ಪ್ರತಿ ಪಂದ್ಯದಲ್ಲು ಬ್ಯಾಟಿಂಗ್ ಬೌಲಿಂಗ್ ಫೀಲ್ಡಿಂಗ್ ಮೂರೂ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್ ಗೆದ್ದರು.ಪ್ರಪಂಚದ ಎಲ್ಲರಂತೆ ಭಾರತೀಯರೂ ಅರ್ಹ ಪ್ರತಿಭಾವಂತರೆಂದು ಸಾಧಿಸಿ ತೋರುವ ಮೂಲಕ ರುಜುವಾತು ಪಡಿಸಿದರು.

ದೈವಸಂಕಲ್ಪವೋ ಎಂಬಂತೆ ಗಾಯಗೊಂಡು ಹೊರನಡೆದ ಪ್ರತೀಕಾರಾವಲ್ ಬದಲಿಗೆ ತಂಡ ಸೇರಿ ಉತ್ತಮ ಆಟವಾಡಿದ ಶಫಾಲಿವರ್ಮ ಕೊಡುಗೆ ಶ್ಲಾಘನೀಯ. ಸೆಮಿಫೈನಲ್ ಪಂದ್ಯ ದಲ್ಲಿ ಸೆಂಚುರಿ ಬಾರಿಸಿದ ಜಮೀಮರೊಡ್ರಿಗಸ್ ಮತ್ತು ಇವರ ಜತೆಗೂಡಿ ಅಮೋಘ ಬ್ಯಾಟಿಂಗ್ ಮಾಡಿ ಶತಕ ವಂಚಿತರಾದ ಕ್ಯಾಪ್ಟನ್ ಕೌರ್ ರವರ ಆಟವು ವಿಶ್ವಕಪ್ ವಿಜಯಕ್ಕೆ ಮುನ್ನುಡಿ ಬರೆಯಿತು. ನಂತರ ಫೈನಲ್ ಪಂದ್ಯದಲ್ಲಿ ಕ್ಯಾಚಸ್ ವಿನ್ ದಿ ಮ್ಯಾಚಸ್ ನಾಣ್ಣುಡಿಯಂತೆ ಅಮನ್ಜೋತ್ ಕೌರ್ ಮತ್ತು ಸ್ವಯಂ ಕ್ಯಾಪ್ಟನ್ ಕೌರ್ ಇವರಿಬ್ಬರು ಹಿಡಿದ ಎರಡು ಅತ್ಯುತ್ತಮ ಕ್ಯಾಚ್, ದೀಪ್ತಿಶರ್ಮರವರ ಶ್ರೇಷ್ಠ ಬೌಲಿಂಗ್ ಹಾಗೂ ಆಲ್ ರೌಂಡ್ ಆಟದ ಮೂಲಕ ಭಾರತೀಯ ವನಿತೆಯರ ಮಡಿಲು ಸೇರಿದ, ಮುಡಿ ಏರಿದ, 150 ಕೋಟಿ ಭಾರತೀಯರ ಕನಸನ್ನು ನನಸು ಮಾಡಿದ 2025ರ ವಿಶ್ವಕಪ್ ವಿಜಯೋತ್ಸವದ ಇತಿಹಾಸ ಆಚಂದ್ರಾರ್ಕ ಅಜರಾಮರ!
ಇದನ್ನೂ ಓದಿ: ಜಗತ್ತಿನ ನಂ.1 ಕ್ರೀಡೆ ಫುಟ್ಭಾಲ್…. ಈ ಕ್ರೀಡೆ ಹಿಂದಿನ ನಾವು-ನೀವು ಅರಿಯದ ರೋಚಕ ವಿಚಾರಗಳು ಏನೇನು?
ಹರ್ಮನ್ ಪ್ರೀತ್ ಕೌರ್ ನಾಯಕತ್ವದ ತಂಡ: 1.ಸ್ಮೃತಿಮಂದನ 2.ಹರ್ಲಿನ್ ಡಿಯೊಲ್ 3.ಪ್ರತೀಕರಾವಲ್ 4.ಜಮೀಮ ರೊಡ್ರಿಗಸ್ 5.ಶಫಾಲಿವರ್ಮ 6.ಉಮಾಚೆತ್ರಿ 7.ರಿಚಾಗೋಶ್ 8.ಅಮನ್ಜೋತ್ ಕೌರ್ 9.ದೀಪ್ತಿಶರ್ಮ 10.ಶ್ರೀಚರಣಿ 11.ಸ್ನೇಹರಾಣ 12.ರಾಧಯಾದವ್ 13.ಕ್ರಾಂತಿಗೌಡ್ 14.ಅರುಂಧತಿರೆಡ್ಡಿ, 15.ರೇಣುಕಾಸಿಂಗ್

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕರ್ನಾಟಕದ ಕೊಡುಗೆಯನ್ನು ನೋಡಿದ್ದೇ ಆದರೆ, ಜೀವಂತ ದಂತಕಥೆಯಂತಿರುವ ಕರ್ನಾಟಕದ ಶಾಂತಾರಂಗಸ್ವಾಮಿ ಅವರನ್ನು ಮರೆಯಲು ಸಾಧ್ಯವೇಇಲ್ಲ. ಭಾರತ ದೇಶದ ಕ್ರಿಕೆಟ್ ತಂಡದ ಮೊಟ್ಟಮೊದಲ ಕ್ಯಾಪ್ಟನ್ ಆಗಿ ಆಯ್ಕೆಗೊಂಡು ಬಹಳ ವರ್ಷಕಾಲ ಅಧ್ಬುತಕಾರ್ಯ ನಿರ್ವಹಿಸಿ ತಮ್ಮ ಕ್ರೀಡಾಜೀವನ ಪರ್ಯಂತ ಹೆಚ್ಚಿನ ಶ್ರಮವಹಿಸಿ ಶ್ರದ್ಧೆಯಿಂದ ಪ್ರತಿಯೊಂದು ಪಂದ್ಯದಲ್ಲಿ ಪ್ರತಿಯೊಬ್ಬ ಆಟಗಾರ್ತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಸ್ವಾರ್ಥದಿಂದ ತಮ್ಮದೇ ಶೈಲಿಯಲ್ಲಿ ಅಮೋಘ ಆಲ್ರೌಂಡ್ ಆಟದ ಮೂಲಕ ಇಡೀ ಕ್ರಿಕೆಟ್ ಜಗತ್ತನೇ ಗೆದ್ದಿದ್ದರು.
ಇದನ್ನೂ ಓದಿ: ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…
1976ರಿಂದ 1992ವರೆಗಿನ ಅವಧಿಯಲ್ಲಿ ಒಟ್ಟಾರೆ 17 ಟೆಸ್ಟ್ ಪಂದ್ಯ ಮತ್ತು 20 ಏಕದಿನ ಪಂದ್ಯ ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತವು ತನ್ನ ಚೊಚ್ಚಲ ಟೆಸ್ಟ್ ಕ್ರಿಕೆಟ್ ಗೆದ್ದುದಲ್ಲದೇ ಮೊಟ್ಟಮೊದಲ ಸರಣಿಯನ್ನೂ ಸಹ ಗೆದ್ದುದು ಸ್ಮರಣೀಯ ಇತಿಹಾಸ. 1976ರಲ್ಲಿ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಸಿಕ್ಸರ್ ಹೊಡೆದ ಭಾರತದ ಮೊಟ್ಟಮೊದಲ ಮಹಿಳೆ. 1978 ವರೆಗೆ ಬೇರೆಯೇ ಅಂಗವಾಗಿ ಉಳಿದಿದ್ದ ಮಹಿಳಾ ಕ್ರಿಕೆಟ್ ಸಂಸ್ಥೆಯು ಬಿ.ಸಿ.ಸಿ.ಐ.ಗೆ ವಿಲೀನಗೊಳಿಸುವ ಕಾರ್ಯದಲ್ಲಿ ರೂವಾರಿ ಆಗಿದ್ದರು. ಕಾಲಕ್ರಮೇಣ ಬಿಸಿಸಿಐ ಸಂಸ್ಥೆಯ ಪ್ರಪ್ರಥಮ ಮಹಿಳಾ ಪದಾಧಿಕಾರಿಯಾಗಿ ಮಹಿಳಾ ಕ್ರಿಕೆಟಿಗ ಆಟಗಾರ್ತಿಯರ ಕುಂದು ಕೊರತೆ ನೀಗಿಸಿ ಅವರಿಗೆ ಬೇಕಾದ ಅತ್ಯವಶ್ಯಕ ಸೌಲಭ್ಯಗಳು ದೊರಕುವಂತೆ ನಿಷ್ಟಯಿಂದ ಸೇವಾಕಾರ್ಯ ಮಾಡಿದ ರೂವಾರಿ ನಮ್ಮ ಹೆಮ್ಮೆಯ ಕನ್ನಡತಿ ಶಾಂತಾರಂಗಸ್ವಾಮಿ.

ಇವರ ಮಾರ್ಗದರ್ಶನದ ಹಾದಿಯಲ್ಲಿ ಭಾರತ ಕ್ರಿಕೆಟ್ ಆಟಗಾರ್ತಿಯರಾಗಿ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ ಕನ್ನಡತಿಯರು: ಮಮತ ಮಾಬೆನ್, ಮಂಗಳೂರು ಮೂಲದ ಜಮೀಮ ರೋಡ್ರಿಗಸ್, ವಿ.ಆರ್.ವನಿತ, ಕರುಣಾಜೈನ್, ರಾಜೇಶ್ವರಿಗಾಯಕ್ವಾಡ್, ವೇದಾಕೃಷ್ಣಮೂರ್ತಿ, ಶ್ರೇಯಾಂಕಪಾಟೀಲ್, ಶುಭಾಸತೀಶ್, ಅನುರಾಧ, ಶುಭಾಂಗಿಕುಲಕರ್ಣಿ, ಮಮತಾರಾವ್, ಮುಂತಾದ ಅನೇಕರು.
ಇದನ್ನೂ ಓದಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಸಾಮ್ರಾಜ್ಯದ ಚಕ್ರವರ್ತಿ ವಿರಾಟ್ ಕೊಹ್ಲಿ ರವರ 18 ವರ್ಷದ ವನವಾಸ ಅಂತ್ಯ..
1973ರಲ್ಲಿ ಭಾರತ ದೇಶದಲ್ಲು ಮಹಿಳಾ ಕ್ರಿಕೆಟ್ ಜನಿಸಿತು.ಅಂದಿನಿಂದ ಇಂದಿನವರೆಗೂ ನಮ್ಮ ಮಹಿಳೆಯರು ಪ್ರಪಂಚದಾದ್ಯಂತ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರಮವಹಿಸಿ ಯಶಸ್ವಿ ಅಗಿದ್ದಾರೆ. ತಮ್ಮ ಪ್ರತಿಭೆಯಿಂದ ಭಾರತವು ಬೆಳಗುವಂತೆ ಮಾಡಿದವರು. ಶಾಂತಾರಂಗಸ್ವಾಮಿ, ಡಯಾನಎಡುಲ್ಜಿ, ಜುಲನ್ ಗೋಸ್ವಾಮಿ, ಮಿಥಾಲಿರಾಜ್, ನೀತೂಡೇವಿಡ್, ಸಂಧ್ಯಾ ಅಗರವಾಲ್, ಅಂಜು ಜೈನ್, ಹೇಮಲತಾಕಾಳ, ಸುಧಾಷಾ, ಜಯಾಶರ್ಮ, ನೂಶಿನ್, ಶಿಖಾಪಾಂಡೆ, ಅಂಜುಂಚೋಪ್ರಾ, ಮುಂತಾದ ಅನೇಕ ಮಹಿಳಾ ಕ್ರಿಕೆಟ್ ದಿಗ್ಗಜರು ಇಂದಿಗೂ ವಂದನಾರ್ಹರು. ಇವರೆಲ್ಲರ ತಪಸ್ಸಿನ ಫಲವೇ ಇಂದಿನ ವಿಶ್ವಕಪ್ ವಿಜೇತ ಭಾರತ ವನಿತೆಯರು ಎಂಬ ನವಯುಗ ಪ್ರಾರಂಭ!










Thank you so much sir 🙏
Amazing excellent job 👏 👍 👌 this is absolutely one of
my favorite articles. Lot of thanks to both AUTHOR AND PUBLISHER
What an awesome article about Indian women’s cricket 🏏 👏. Author is great in preparing brief history of INDIAN WOMEN’S CRICKET as well as 2025 WORLD CUP 🏆
WINNING TEAM. HATS OFF TO MR . B.N.NATARAJ SIR
2025 women’s World Cup cricket championship tournament article is excellent and exciting 👏 WOMEN’S
TEAM INDIA 🇮🇳 LIFTED WORLD CUP, congratulations to the writer of the article. Thanks for the janamana kannada staff including the Editor.
ಮಹಿಳೆಯರ ಕ್ರಿಕೆಟ್ ಬಗ್ಗೆ ಸಾಮಾನ್ಯವಾಗಿ ಯಾರೂ ಹೇಳಿಲ್ಲ ಅಥವ ಹೆಚ್ಚಾಗಿ ಬರೆಯುವೂದೂ ಇಲ್ಲ. ಈ ಲೇಖನ ಓದಿದ ನಂತರ ನನಗೆ ತುಂಬ ಸಂತೋಷ ಆಗಿದೆ. ಲೇಖಕರಾದ ಕವಿ ನಟರಾಜರವರಿಗೆ ಮನದಾಳದ ವಂದನೆಗಳು ಹಾಗೂ ಪತ್ರಿಕೆಯ ಸಂಪಾದಕರಿಗೂ ಧನ್ಯವಾದಗಳು. ಇಂಥ ಕ್ರೀಡಾ ಲೇಖನಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟಿಸಲು ವಿನಂತಿ
ಅಅತ್ತ್ಯುತ್ತಮವಾದ ಕ್ರಿಕಟ್ ಲೇಖನ, ಧನ್ಯವಾದ ಸರ್
ಸಾಮಾನ್ಯವಾಗಿ ಭಾರತದ ಮಹಿಳೆಯರ ಕ್ರಿಕೆಟ್ಟ್ ಬಗ್ಗೆ ಯಾರೂ ಬರೆಯಲ್ಲ. ಈ ವಿಶ್ವ ಕಪ್ ಗೆದ್ದ ವನಿತೆಯರು ಲೇಖನವನ್ನು ಬಹಳ ಚೆನ್ನಾಗಿ ಬರೆದಿರುವ ಕುಮಾರಕವಿ ನಟರಾಜ ಸರ್ ಅಭಿನಂದನಾರ್ಹರು. ಪ್ರಕಟಿಸಿದವರಿಗೂ ಧನ್ಯವಾದ ಸರ್
ಸಾಮಾನ್ಯವಾಗಿ ಭಾರತ ದೇಶದ ಮಹಿಳೆಯರ ಕ್ರಿಕೆಟ್ ಬಗ್ಗೆ ಯಾರೂ ಬರಿದಿಲ್ಲ. ವಿಶ್ವ ಕಪ್ ಗೆದ್ದ ವೀರ ವನಿತೆಯರ ಬಗ್ಗೆ ಬರೆದ ಕುಮಾರಕವಿಯವರಿಗೆ ಕೋಟಿ ವಂದನೆ, ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು
ಸಾಮಾನ್ಯವಾಗಿ ಭಾರತದ ಮಹಿಳೆಯರ ಕ್ರಿಕೆಟ್ಟ್ ಬಗ್ಗೆ ಯಾರೂ ಬರೆಯಲ್ಲ. ಈ ವಿಶ್ವ ಕಪ್ ಗೆದ್ದ ವನಿತೆಯರು ಲೇಖನವನ್ನು ಬಹಳ ಚೆನ್ನಾಗಿ ಬರೆದಿರುವ ಕುಮಾರಕವಿ ನಟರಾಜ ಸರ್ ಅಭಿನಂದನಾರ್ಹರು. ಪ್ರಕಟಿಸಿದವರಿಗೂ ಧನ್ಯವಾದ ಸರ್
ಸಾಮಾನ್ಯವಾಗಿ ಭಾರತದ ಮಹಿಳೆಯರ ಕ್ರಿಕೆಟ್ಟ್ ಬಗ್ಗೆ ಯಾರೂ ಬರೆಯಲ್ಲ. ಈ ವಿಶ್ವ ಕಪ್ ಗೆದ್ದ ವನಿತೆಯರು ಲೇಖನವನ್ನು ಬಹಳ ಚೆನ್ನಾಗಿ ಬರೆದಿರುವ ಕುಮಾರಕವಿ ನಟರಾಜ ಸರ್ ಅಭಿನಂದನಾರ್ಹರು. ಪ್ರಕಟಿಸಿದವರಿಗೂ ಧನ್ಯವಾದ ಸರ್ …..
ಸಾಮಾನ್ಯವಾಗಿ ಭಾರತದ ಮಹಿಳೆಯರ ಕ್ರಿಕೆಟ್ಟ್ ಬಗ್ಗೆ ಯಾರೂ ಬರೆಯಲ್ಲ. ಈ ವಿಶ್ವ ಕಪ್ ಗೆದ್ದ ವನಿತೆಯರು ಲೇಖನವನ್ನು ಬಹಳ ಚೆನ್ನಾಗಿ ಬರೆದಿರುವ ಕುಮಾರಕವಿ ನಟರಾಜ ಸರ್ ಅಭಿನಂದನಾರ್ಹರು. ಪ್ರಕಟಿಸಿದವರಿಗೂ ಧನ್ಯವಾದ ಸರ್ …..
2025ರ ಮಹಿಳೆಯರ ಕ್ರಿಕೆಟ್ ವಿಶ್ವ ಕಪ್ ಗೆದ್ದ ವೀರ ವನಿತೆಯರ ಬಗ್ಗೆ ಬರೆದಿರುವ ಲೇಖನ ಉತ್ತಮ ಅತಿ ಉತ್ತಮ, ಆನಂದಬಾಷ್ಪ ಬರಿಸಿತು ಸರ್ ಧನ್ಯವಾದ, ನಮಸ್ಕಾರ
ಮಹಿಳಾ ವಿಶ್ವ ಕಪ್ ಕ್ರಿಕೆಟಿನ ಲೇಖನ ತುಂಬ ಇಷ್ಟವಾಯ್ತು ಸರ್ ಧನ್ಯವಾದ
ತುಂಬ ಚೆನ್ನಾಗಿ ಬರೆದಿರುವ ಈ ಲೇಡೀಸ್ ಕ್ರಿಕೆಟ್ ಲೇಖನ ನನಗೆ ಮತ್ತು ನನ್ನ ಎಲ್ಲ ಮಿತ್ರರಿಗೆ ಬಹಳ ಹಿಡಿಸಿತು.
ಇತ್ತೀಚಿನ ವರ್ಷದಿಂದ ನಾನು ಓದಿದ ಲೇಖನಗಳಲ್ಲೇ ಅತಿ ಹೆಚ್ಚಾಗಿ ಮೆಚ್ಚಿದ ಲೇಖನ ನಿಮ್ಮ ಪತ್ರಿಕೆಯ ವಿಶ್ವ ಕಪ್ ಗೆದ್ದ ಭಾರತದ ವನಿತೆಯರು. ಅಭಿನಂದನ
Super article about women’s World Cup cricket 🏏 and the Cup won by Indian team 👏
ಸೂಪರ್ ಆಗಿತ್ತು ಹುಡುಗಿಯರ ಕ್ರಿಕೆಟ್ ಬಗೆಗಿನ ಬರಹ
ತುಂಬ ಚೆನ್ನಾಗಿದೆ ತುಂಬ ಇಷ್ಟವಾಯ್ತು
ಸೂಪರ್ ಆಗಿದೆ ಹುಡುಗಿಯರ ಕ್ರಿಕೆಟ್ ಬಗೆಗಿನ ಬರವಣಿಗೆ,