ArticlesLatest

ಸಾಕವ್ವನ ಸಾಂಗತ್ಯ ಕೃತಿ ಲೋಕಾರ್ಪಣೆ… ಲೇಖಕ ಪರಮೇಶ ಕೆ.ಉತ್ತನಹಳ್ಳಿಯವರ ಬದುಕು ಬರಹ..

ಪರಮೇಶ ಕೆ.ಉತ್ತನಹಳ್ಳಿ ಅವರು ಪತ್ರಿಕೆಗಳನ್ನು ಓದುವವರಿಗೆ ಚಿರಪರಿಚಿತರು ಎಂದೇ ಹೇಳಬೇಕು.. ಸಾಂದರ್ಭಿಕ ಲೇಖನ, ಕವನಗಳನ್ನು ಬರೆಯುವ ಮೂಲಕ ಆಗಾಗ್ಗೆ ಒಂದಲ್ಲ ಒಂದು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಬರವಣಿಗೆಯ ತುಡಿತ ಹೊಂದಿರುವ ಅವರು ಇದೀಗ “ಸಾಕವ್ವನ ಸಾಂಗತ್ಯ” ಕವನ ಸಂಕಲನ ಹೊರತರುವ ಮೂಲಕ ತಾನೊಬ್ಬ ಕವಿ ಎಂಬುದನ್ನು ರುಜುವಾತು ಪಡಿಸಿದ್ದಾರೆ. ಅವರ ಈ ಕವನ ಸಂಕಲನವು 16 ನವೆಂಬರ್ 2025ಭಾನುವಾರದಂದು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಲೋಕಾರ್ಪಣೆಯಾಗಲಿದೆ. ಇವರ ಬದುಕು ಮತ್ತು ಬರಹ ಅದರಾಚೆಗಿನ ಸೇವೆಯ ಕುರಿತ ಮಾಹಿತಿ ಇಲ್ಲಿದೆ..

ಪರಮೇಶ ಕೆ. ಅವರು (ಕಾವ್ಯನಾಮ-ಪರಮೇಶ ಕೆ. ಉತ್ತನಹಳ್ಳಿ) ಮೈಸೂರಿನ ಏಳಿಗೆಹುಂಡಿ(ಉತ್ತನಹಳ್ಳಿ) ಗ್ರಾಮದಲ್ಲಿ ಕುಳ್ಳಯ್ಯ ಹಾಗೂ ಸಾಕಮ್ಮ ಅವರ ಮಗನಾಗಿ 31/12/1989ರಲ್ಲಿ ರೈತಾಪಿ ಕುಟುಂಬದಲ್ಲಿ ಜನಿಸಿದರು. ಬಡತನ ಮತ್ತು ಹಸಿವಿನ ದಿನಗಳೊಂದಿಗೆ ಬದುಕು ಸಾಗಿಸುತ್ತಾ ಬಂದ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಏಳಿಗೆಹುಂಡಿಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಹೊಸಹುಂಡಿಯಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನ ದಳವಾಯಿ ಶಾಲೆಯಲ್ಲಿಯು, ಪಿಯುಸಿ ಶಿಕ್ಷಣವನ್ನು ಜೆ.ಪಿ.ನಗರದ ಜೆ.ಎಸ್.ಎಸ್. ಕಾಲೇಜಿನಲ್ಲಿ ಮುಗಿಸಿದರು.

ಪದವಿ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿಯು, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ,  ಮಾಸ್ಟರ್ ಆಫ್ ಫಿಲಾಸಫಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬಿ.ಇಡಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ವಸಂತ್ ಮಹಲಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಇದರೊಂದಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್), ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾರೆ.

ಬಹುಮುಖ ಪ್ರತಿಭೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡು ವಿವಿಧ ಕಾರ್ಯಗಳ ನಿರೂಪಣೆ, ವಿವಿಧ ಬಗೆಯ ಗಾಯನ,  ಕವಿತೆಗಳು, ಕತೆಗಳು, ವಿವಿಧ ಪತ್ರಿಕೆಗಳಲ್ಲಿ ಲೇಖನ, ಲಲಿತಾ ಪ್ರಬಂಧ, ಬಿಡಿ ಬರಹಗಳು ಹೀಗೆ ತಮ್ಮ ಬರಹದ ವಿವಿಧ ರೂಪದಲ್ಲಿ ಸಾಹಿತ್ಯವನ್ನು ರಚಿಸುತ್ತಿದ್ದಾರೆ. ಪ್ರತಿನಿತ್ಯ ಕನಿಷ್ಠ ಎರಡಾದರೂ ಕವನಗಳನ್ನು, ವಾರದಲ್ಲಿ ಒಂದು ಲೇಖನ ರಚಿಸುವ ಹವ್ಯಾಸಿ ಇವರದ್ದಾಗಿದೆ. ಕಳೆದು ಹತ್ತು ವರ್ಷಗಳಿಂದ ಉಪನ್ಯಾಸಕರಾಗಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಮೇಶ ಕೆ. ಅವರು ಪ್ರಸ್ತುತ ಮೈಸೂರಿನ ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸೃಜನಶೀಲ ಹಾಗೂ ಸೃಜನೇತರ ಬರವಣಿಗೆಯ ಪ್ರಕಟಣೆ : ಪ್ರಜಾನುಡಿ ದಿನಪತ್ರಿಕೆಯಲ್ಲಿ  ಲೇಖನಗಳು ಮತ್ತು ಕಥೆಗಳು, ಆಂದೋಲನ ದಿನಪತ್ರಿಕೆಯಲ್ಲಿ ಲೇಖನಗಳು, ಮೈಸೂರು ದಿನಪತ್ರಿಕೆಯಲ್ಲಿ ಲೇಖನಗಳು,  ಪ್ರತಿನಿಧಿ ದಿನಪತ್ರಿಕೆಯಲ್ಲಿ ಕವಿತೆಗಳು-ಕಥೆಗಳು-ಲೇಖನಗಳು, ಜನಮಿತ್ರ ಕವನಗಳು-ಕಥೆಗಳು ಮತ್ತು ಲೇಖನಗಳು, ಜನಮಿಡಿತ ದಿನಪತ್ರಿಕೆಯಲ್ಲಿ ಹಲವಾರು ಕವನಗಳು-ಕಥೆಗಳು ಮತ್ತು ಲೇಖನಗಳು, ವಿಶ್ವವಾಣಿ ದಿನಪತ್ರಿಕೆಯಲ್ಲಿ ಕವನಗಳು-ಕಥೆಗಳು ಮತ್ತು ಲೇಖನಗಳು, ಉದಯವಾಣಿ ದಿನಪತ್ರಿಕೆಯಲ್ಲಿ ಲೇಖನಗಳು, ರಾಜ್ಯಧರ್ಮದಲ್ಲಿ ಲೇಖನ, ಪ್ರಿಯಾಂಕ ಮಾಸಿಕ‌ ಪತ್ರಿಕೆಯಲ್ಲಿ ಲೇಖನ, ನೈರುತ್ಯ ಮಾಸಿಕ ಪತ್ರಿಕೆಯಲ್ಲಿ ಲೇಖನ, ಮಾನಸ ತ್ರೈಮಾಸಿಕ ಪತ್ರಿಕೆಯಲ್ಲಿ ಲೇಖನಗಳು, ಉಗಾದಿ ಹೂರಣದಲ್ಲಿ ಲೇಖನ ಪ್ರಕಟ, ಮೈಸೂರು ವಿ.ವಿ. ಕೃಷಿ ಸಂಪುಟದಲ್ಲಿ ಲೇಖನಗಳು, ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಲೇಖನಗಳು, ಸಾಂಸ್ಕೃತಿಕ ಸಂಕಥನದಲ್ಲಿ ಲೇಖನಗಳು ಪ್ರಕಟವಾಗಿರುತ್ತವೆ.

ಸೇವಾನುಭವ: 1. ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷ 2015-16, 2016-17, 2.  ಜೀನಿಯಸ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು, 3. ವಿಜಯ ಚೇತನ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವರ್ಷ 2019-20 (ಅತಿಥಿ ಉಪನ್ಯಾಸಕ), 4. ಲರ್ನರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ 2021-23 (ಅತಿಥಿ ಉಪನ್ಯಾಸಕ), 5. ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಐದು ವರ್ಷ 2020-24, 6. ಹಿಂದೂಸ್ಥಾನ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ಮುಂದುವರಿಕೆ..

ಪ್ರಶಸ್ತಿಗಳು ಮತ್ತು ಸನ್ಮಾನ: ಎನ್.ಎಸ್.ಎಸ್.ಉತ್ತಮ ಸ್ವಯಂಸೇವಕ(2010), ಮಹಾರಾಜ ಕಾಲೇಜಿನ ಕನ್ನಡ ಮತ್ತು ಜಾನಪದ ಸಂಘದ ಉಪಾಧ್ಯಕ್ಷ (2009-2010), ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ರಾಜ್ಯಮಟ್ಟದ ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ (2014), ಮೈಸೂರು ವಿಶ್ವವಿದ್ಯಾನಿಲಯದ ಸರ್ಕಾರಿ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಕರ್ನಾಟಕ ಸರ್ಕಾರ ಕೊಡ ಮಾಡಿದ ವರ್ಷದ ಅತ್ಯುತ್ತಮ ಪ್ರಶಿಕ್ಷಣ ಪ್ರಶಸ್ತಿ (2014), 2010ರ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚನ, ಜೀನಿಯಸ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವರ್ಷದ ಉಪನ್ಯಾಸಕ ಪ್ರಶಸ್ತಿ(2017-18), ಬುದ್ಧಿಜೀವಿಗಳ ಬಳಗದ ವತಿಯಿಂದ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ (2018),

ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ವರ್ಷದ ಉಪನ್ಯಾಸಕ ಪ್ರಶಸ್ತಿ (2023-24), ಅಭಿರುಚಿ ಬಳಗದ ವತಿಯಿಂದ 2024ನೇ ಸಾಲಿನ ಅಭಿರುಚಿ ಶಿಕ್ಷಣ ರತ್ನ ಪ್ರಶಸ್ತಿ, ಮತ್ತೆ ಹಾಡಿತು ಸೀಸನ್-2 ಭಾಗವಹಿಸಿರುತ್ತಾರೆ (2024), ಮೈಸೂರು ಸಾಹಿತ್ಯ‌ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ನೋಂ.) ವತಿಯಿಂದ 2024ನೇ ಸಾಲಿನ ವಿದ್ಯಾವಾರಿಧಿ ಪ್ರಶಸ್ತಿ, ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ (ರಿ) ಕುಕನೂರು ವತಿಯಿಂದ 2025ನೇ ಸಾಲಿನ ಶಿಕ್ಷಣ ರತ್ನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಶ್ರೀಯುತ ಪರಮೇಶ ಕೆ. ಅವರ  ಪ್ರತಿಭೆಯನ್ನು ಗುರುತಿಸಿ ಆದರದಿಂದ ಗೌರವಿಸಿವೆ.

admin
the authoradmin

Leave a Reply