ದೊಡ್ಡಯ್ಯ ಉರುಫ್ ವಿದ್ಯಾಸಾಗರ್ ಕನ್ನಡ ಚಿತ್ರರಂಗದಲ್ಲಿ ನಟ ರಾಜೇಶ್ ಆಗಿ ಮಿಂಚಿದ್ದು ಹೇಗೆ ಗೊತ್ತಾ?

ಚಂದನವನದಲ್ಲಿ ಮಿಂಚಿದ ನಾಯಕರು ತಮ್ಮದೇ ಆದ ನಟನೆ ಮೂಲಕ ಗಮನಸೆಳೆದಿದ್ದಾರೆ. ಹಿರಿಯ ನಟರಂತು ಜತೆಗೆ ಸದಭಿರುಚಿಯ ಚಿತ್ರಗಳನ್ನು ಬಿಟ್ಟು ಹೋಗಿದ್ದಾರೆ. ಅಂತಹ ಸಿನಿಮಾಗಳನ್ನು ವೀಕ್ಷಿಸುವಾಗಲೆಲ್ಲ ಮನಸ್ಸಿಗೆ ಖುಷಿ ಕೊಡುತ್ತದೆ. ಅಷ್ಟೇ ಅಲ್ಲದೆ ಇವತ್ತು ಅವರಿಲ್ಲವಲ್ಲ ಎಂಬ ನೋವು ಕಾಡುತ್ತಿರುತ್ತದೆ. ಇಂತಹ ನಾಯಕ ನಟರಲ್ಲಿ ರಾಜೇಶ್ ಒಬ್ಬರಾಗಿದ್ದಾರೆ. ಇವತ್ತು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಿನಿಮಾದ ಮೂಲಕ ಸದಾ ನಮ್ಮೊಂದಿಗಿದ್ದಾರೆ ಎನ್ನುವುದೇ ನೆಮ್ಮದಿಯ ವಿಚಾರವಾಗಿದೆ. ಇಷ್ಟಕ್ಕೂ ನಟ ರಾಜೇಶ್ ಯಾರು? ಅವರು ನಟಿಸಿದ ಚಿತ್ರಗಳೆಷ್ಟು ಎಂಬಿತ್ಯಾದಿ ವಿಷಯಗಳನ್ನು ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಪುಟ್ಟಹಳ್ಳಿಯ ಮಧ್ಯಮವರ್ಗ ಕುಟುಂಬದಲ್ಲಿ 1935ರಲ್ಲಿ ಜನಿಸಿದ ದೊಡ್ಡಯ್ಯ ಉರುಫ್ ವಿದ್ಯಾಸಾಗರ್ ನಾಗಾರ್ಜುನ (1961) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಇವರು ನಟಿಸಿದ 7ನೇ ಚಿತ್ರ ನಮ್ಮಊರು. ಇದು ಈತ ಹೀರೋ ಆಗಿ ನಟಿಸಿದ ಚೊಚ್ಚಲ ಚಿತ್ರವೂ ಹೌದು!.
ಈ ಸಿನಿಮಾದಿಂದ ರಾಜೇಶ್ ಎಂದು ಪುನರ್ ನಾಮಕರಣಗೊಂಡರು. ನಮ್ಮ ಊರು ಚಿತ್ರದಲ್ಲಿ ಖ್ಯಾತನಟಿ ಕೃಷ್ಣಕುಮಾರಿಯಂಥ ಸೀನಿಯರ್ ಮೋಸ್ಟ್ ನಟಿಯೊಡನೆ ಉತ್ತಮವಾಗಿ ನಟಿಸಿದರು. ಈ ಫಿಲಮ್ ಸರ್ಕಾರದಿಂದ ಶೇ.100 ತೆರಿಗೆ ವಿನಾಯ್ತಿ (TAX FREE) ಪಡೆದು ರಾಜ್ಯಾದ್ಯಂತ ಭರ್ಜರಿ ಜಯಭೇರಿ ಬಾರಿಸಿತು. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನೂ ಗಳಿಸಿತು. 8 ಥಿಯೇಟರ್ ಗಳಲ್ಲಿ 100 ದಿನ, 2 ಕೇಂದ್ರದಲ್ಲಿ ಸಿಲ್ವರ್ ಜುಬ್ಲಿ ಆಚರಿಸಿತು. ನವನಟ ರಾಜೇಶ್ ಇಲ್ಲಿಂದ ಹಿಂದಿರುಗಿ ನೋಡದೆ 150ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿ ಅನೇಕ ಪ್ರಶಸ್ತಿ ಬಿರುದು ಬಹುಮಾನ ಪಡೆದರು. ಅಷ್ಟೇ ಏಕೆ ನಮ್ಮಊರು ರಾಜೇಶ್ ಎಂದೇ ಗುರುತಿಸಿ ಕೊಂಡು ದಿನೇದಿನೇ ನಿರೀಕ್ಷೆಗೂ ಮೀರಿ ಖ್ಯಾತಿ ಗಳಿಸಿದರು.

ನಮ್ಮಊರು ರಾಜೇಶ್ ಎಂದು ಖ್ಯಾತಿಗಳಿಸಿ ಚಿತ್ರರಂಗದ ಅಗ್ರಜರಾದ ರಾಜ್, ಕಲ್ಯಾಣ್, ಉದಯ್ ಕುಮಾರತ್ರಯರ ನಂತರ 4ನೇ ಸ್ಥಾನದಲ್ಲಿ ಬಹಳ ಕಾಲ ವಿಜೃಂಭಿಸಿದರು. ಪ್ರತಿಧ್ವನಿ ಮತ್ತು ಬಿಡುಗಡೆ ಚಿತ್ರಗಳಲ್ಲಿ ರಾಜ್ಕುಮಾರಷ್ಟೆ ಪ್ರಮುಖ ಪಾತ್ರವನ್ನು ನಿಭಾಯಿಸಿ ಶಹಬ್ಬಾಸ್ಗಿರಿ ಪಡೆದರು. ರಾಜಕುಮಾರ್ ನಟಿಸಬೇಕಾಗಿದ್ದ ಎರಡು ಮುಖ ಮತ್ತು ಪುಣ್ಯಪುರುಷ ಮುಂತಾದ ಕೆಲವು ಚಿತ್ರಗಳು ರಾಜ್ಕುಮಾರ್ ರವರ ಕಾಲ್ ಶೀಟ್ ಸಿಗದೇ ಇದ್ದುದರಿಂದ? ಹಾಗೂ ಅದೃಷ್ಟವಶಾತ್ ರಾಜೇಶ್ ಗೆ ದೊರಕಿದ್ದು ದೇವರಕೃಪೆ ಎಂದು ನಂಬೋಣ. ಎಲ್ಲರ ಅನಿಸಿಕೆ ಅಭಿಪ್ರಾಯ ಹಾಗೂ ಆಯ್ಕೆಯನ್ನು ಹುಸಿಮಾಡದೆ ತಮಗೆ ದೊರೆತ ಪಾತ್ರಗಳಿಗೆ ಜೀವ ತುಂಬಿ ನ್ಯಾಯ ದೊರಕಿಸಿದ ಓರ್ವ ಪ್ರಾಮಾಣಿಕ ಪರಿಶ್ರಮ ಕಲಾವಿದ ಎಂದರೆ ಉತ್ಪ್ರೇಕ್ಷೆ ಆಗಲಾರದು.
ಎಸ್.ಆರ್.ಪುಟ್ಟಣ್ಣಕಣಗಾಲ್ ರವರು ಖ್ಯಾತ ಕಾದಂಬರಿಕಾರ್ತಿ ಮೈಸೂರಿನ ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರು ಬರೆದಿದ್ದ ಮಹಿಳಾ ಪ್ರಧಾನ ಪಾತ್ರವಿರುವ ಕಾದಂಬರಿ ಆಧಾರಿತ ಕಪ್ಪುಬಿಳುವು ಚಿತ್ರದಲ್ಲಿ ನವನಟ ರಾಜೇಶ್ ಗೆ ಒಂದು ಅವಕಾಶ ನೀಡಿದರು. ಇದನ್ನು ಸದುಪಯೋಗ ಪಡಿಸಿಕೊಂಡ ಈತ ಉತ್ತಮವಾಗಿ ಅಭಿನಯಿಸಿ ಪುಟ್ಟಣ್ಣ ಸೇರಿದಂತೆ, ಎಲ್ಲರಿಂದ ಭೇಷ್ ಎನಿಸಿಕೊಂಡ ಪ್ರತಿಭಾವಂತ ನಟ. ಇದಾದ ನಂತರ ಕನ್ನಡದ ಪ್ರಪ್ರಥಮ ಸಿನಿಮಾಸ್ಕೋಪ್ ವರ್ಣಚಿತ್ರ ಸೊಸೆತಂದ ಸೌಭಾಗ್ಯ ಚಿತ್ರದ ಇಬ್ಬರು ಹೀರೋಗಳ ಪೈಕಿ ಇವರೂ ಸಹ ಓರ್ವ ಹೀರೋ ಪಾತ್ರವಹಿಸಿ ಒಳ್ಳೆಯ ಹೆಸರು ಮಾಡಿದರು. ಕಾಲಕ್ರಮೇಣ ಕಾವೇರಿ, ಪಿತಾಮಹ, ದೇವರದುಡ್ಡು, ಆನಂದ್, ಮುಂತಾದ ಉತ್ತಮ ಚಿತ್ರಗಳು ಇವರ ಸಿನಿಜೀವನ ಹಾದಿಯ ಮೈಲಿಗಲ್ಲುಗಳಾದವು.

ಹಲವಾರು ಚಿತ್ರಗಳಲ್ಲಿನ ಶ್ರೇಷ್ಠ ನಟನೆಗೆ ರಾಜ್ಯ ಪ್ರಶಸ್ತಿ ಮತ್ತು ಫಿಲಂ ಫೇರ್ ಪ್ರಶಸ್ತಿಯೊಡನೆ ಇನ್ನೂ ಅನೇಕ ಪ್ರಶಸ್ತಿ ಬಿರುದು ಬಹುಮಾನಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಕನ್ನಡದ ಶಿವಾಜಿಗಣೇಶನ್ ಬಿರುದಾಂಕಿತರಾಗಿ ಅದ್ಭುತ ಅಭಿನಯ ನೀಡಿದ ಈ ಅಪ್ರತಿಮ ಕಲಾವಿದನಿಗೆ ಒಟ್ಟು 5 ಮಕ್ಕಳು. ಇವರ ಪೈಕಿ ನಿವೇದಿತಾ ಉರುಫ್ ಆಶಾರಾಣಿ (ಶಿವರಾಜ್ಕುಮಾರ್ ನಟಿಸಿದ ರಥಸಪ್ತಮಿ ಚಿತ್ರದ ಹೀರೋಯಿನ್) ಇವರ ಮಗಳು ಮತ್ತು ದ.ಭಾರತದ ಟಾಪ್ ಹೀರೊ ಮೆಘಾಸ್ಟಾರ್ ಅರ್ಜುನ್ ಸರ್ಜಾ ಇವರ ಅಳಿಯ.. 2012ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ನೀಡಿದ ಗೌರವ ಡಾಕ್ಟರೇಟ್ ಪಡೆದ ಡಾ.ರಾಜೇಶ್ ತಮ್ಮ ಮಕ್ಕಳು ಮೊಮ್ಮಕ್ಕಳ ಜತೆಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾಗಲೆ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ದಿನಾಂಕ.19.2.2022 ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸ್ವರ್ಗಸ್ಥರಾದರು.
ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟ, ನಟಿಯರ ಮಾಹಿತಿಗೆ ಇದರ ಮೇಲೆ ಕ್ಲಿಕ್ ಮಾಡಿ…..
ರಾಜೇಶ್ ನಟಿಸಿದ ಚಲನಚಿತ್ರಗಳು 1.ನಾಗಾರ್ಜುನ(1961) 2.ಶ್ರೀರಾಮಾಂಜನೇಯಯುದ್ಧ, 3.ನವಕೋಟಿನಾರಾಯಣ 4 ವೀರಸಂಕಲ್ಪ, 5.ಸತಿಸುಕನ್ಯ, 6.ಗಂಗೆಗೌರಿ 7.ನಮ್ಮಊರು, 8.ಸುವರ್ಣಭೂಮಿ 9 ಬ್ರೋಕರ್ಭೀಷ್ಮಾಚಾರಿ 10 ಕಪ್ಪುಬಿಳುಪು 11 ಎರಡುಮುಖ 12 ಪುಣ್ಯಪುರುಷ 13 ಕಾಣಿಕೆ 14 ಬೃಂದಾವನ 15 ಭಲೇಬಸವ 16 ಅರಿಶಿನಕುಂಕುಮ, 17 ನಾಡಿನಭಾಗ್ಯ, 18 ಮೂರುಮುತ್ತುಗಳು 19 ಬೋರೇಗೌಡ ಬೆಂಗಳೂರಿಗೆಬಂದ 20 ನಮ್ಮಮನೆ, 21.ಆರು ಮೂರು ಒಂಭತ್ತು 22 ದೇವರಮಕ್ಕಳು 23 ಒಂದೇಕುಲ ಒಂದೇ ದೈವ 24 ಪೂರ್ಣಿಮ 25 ಪಿತಾಮಹ 26 ಪ್ರತಿಧ್ವನಿ 27 ಬೇತಾಳಗುಡ್ಡ 28 ನಮ್ಮಬದುಕು 29 ವಿಷಕನ್ಯೆ 30 ಸುಭದ್ರಾಕಲ್ಯಾಣ 31 ಹೆಣ್ಣು ಹೊನ್ನು ಮಣ್ಣು 32 ಭಲೇಭಾಸ್ಕರ

33 ಕ್ರಾಂತಿವೀರ 34 ಬಿಡುಗಡೆ 35 ಗೃಹಿಣಿ 36 ಸಹಧರ್ಮಿಣಿ 37 ಬೃಂದಾವನ 38 ಅರಿಶಿನಕುಂಕುಮ 39 ಊರ್ವಶಿ 40 ಒಂದು ಹೆಣ್ಣಿನ ಕಥೆ 41 ಸಿಐಡಿ-72. 42 ಬಾಂಧವ್ಯ 43 ಮರೆಯದದೀಪಾವಳಿ 44 ಊರ್ವಶಿ 45 ದೇವರಗುಡಿ 46 ನಮ್ಮ ಊರ ದೇವರು 47 ಕಸ್ತೂರಿವಿಜಯ 48 ಮನೆಬೆಳಕು 49 ಸರ್ಪಕಾವಲು 50 ಕಾವೇರಿ 51 ವಿಪ್ಲವವನಿತೆ 52 ಆಶೀರ್ವಾದ 53 ಬೆಳುವಲದಮಡಿಲಲ್ಲಿ 54 ಬದುಕುಬAಗಾರವಾಯಿತು 55 ಮುಗಿಯದಕಥೆ 56 ಇದು ನಮ್ಮ ದೇಶ 57 ಮಾಯಾ ಮನುಷ್ಯ, 58 ಜನರ್ತಕಿಯರಹಸ್ಯ 59 ದೇವರದುಡ್ಡು, 60 ಶ್ರೀರೇಣುಕಾದೇವಿಮಹಾತ್ಮೆ 61ಸೊಸೆತಂದಸೌಭಾಗ್ಯ,
62 ವಂಶಜ್ಯೋತಿ 63 ನನ್ನ ಪ್ರಾಯಶ್ಚಿತ್ತ 64 ಆತ್ಮಶಕ್ತಿ 65 ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ 66 ಮಾಯೆಯಮುಸುಕು 67 ಪ್ರೇಮಾನುಬಂಧ 68 ಚದುರಿದಚಿತ್ರಗಳು 69 ವಸಂತನಿಲಯ 70 ಕ್ರಾಂತಿಯೋಗಿಬಸವಣ್ಣ 71 ಹುಲಿಯಾದಕಾಳ 72 ಕಲಿಯುಗ 73 ಆಶಾಕಿರಣ 74 ದೇವರಮನೆ 75 ಪಿತಾಮಹ 76 ತಾಯಿಮಮತೆ 77 ಕರ್ಣ 78 ತವರುಮನೆ 79 ಆನಂದ್ 80 ಎಲ್ಲಾಹೆಂಗಸರಿಂದ 81 ಸೇಡಿನಸಂಚು 82 ಶಿವ ಭಕ್ತ ಮಾರ್ಕಂಡೇಯ 83 ಕಂಕಣಭಾಗ್ಯ 84 ತಾಯಿಯಆಸೆ 85 ನಮ್ಮೂರರಾಜ 86 ಭರತ್ 87 ಲೇಡೀಸ್ ಹಾಸ್ಟಲ್ 88 ಧರ್ಮಪತ್ನಿ 89 ಒಂದಾಗಿಬಾಳೋಣ 90 ತಾಳಿಗಾಗಿ 91.ಬಾಳಹೊಂಬಾಳೆ 92 ರಾಜಯುವರಾಜ 93 ಜಯಭೇರಿ 94 ಶ್ರೀ ಸತ್ಯನಾರಾಯಣ ಪೂಜಾಫಲ 95 ವರಗಳಬೇಟೆ

96 ತವರುಮನೆ ಉಡುಗೊರೆ 97 ರಾಯರಮಗ 98 ಹೆತ್ತಕರುಳು 99 ಅರಗಿಣಿ 100 ಗಡಿಬಿಡಿ ಅಳಿಯ 101 ಮಧುರಮೈತ್ರಿ 102 ಹೆಣ್ಣಿನಸೌಭಾಗ್ಯ 103 ಸತ್ಯಸಂಘರ್ಷ 104 ಕರ್ನಾಟಕ ಸುಪುತ್ರ 105 ಸೂರ್ಯಪುತ್ರ 106 ಹೆತ್ತವಳಕೂಗು 107 ಮನೆಮನೆ ರಾಮಾಯಣ 108 ಸೂತ್ರಧಾರ 109 ಮುದ್ದಿನ ಸೊಸೆ 110 ಪಟ್ಟಣಕ್ಕೆ ಬಂದ ಪುಟ್ಟ 111 ಬಾಳಿದಮನೆ 112 ಜನನಿ ಜನ್ಮಭೂಮಿ 113 ರಾಜ 114 ಶ್ರೀಸಿದ್ಧಾರೂಢ ಮಹಾತ್ಮೆ 115 ಥ್ರಿಲ್ಲರ್ಕಿಲ್ಲರ್ 116 ರಂಭೆ ನೀವಯ್ಯಾರದ ಗೊಂಬೆ 117 ಇದು ಎಂಥಾ ಪ್ರೇಮವಯ್ಯ 118 ಅಂಡರ್ವರ್ಲ್ಡ್ 119 ವಿಶ್ವ 120 ಭಕ್ತ ಅಯ್ಯಪ್ಪ 121 ಮತದಾನ 122 ಕಾನೂನು 123 ನಮ್ಮ ಸಂಸಾರ ಆನಂದಸಾಗರ 124 ಕೋಟಿಗೊಬ್ಬ 125 ಚಿಟ್ಟೆ 126 ಸತ್ಯಮೇವ ಜಯತೆ 127 ಪೊಲೀಸ್ ಡಾಗ್ 128 ನಾಗರಹಾವು 129 ಧೀರ, ಮುಂತಾದ ಸುಮಾರು 250ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದ ಕಲಾತಪಸ್ವಿ ಡಾ.ರಾಜೇಶ್ ಎಂದೆಂದೂ ಅಜರಾಮರ!










ನಮ್ಮಊರು ಕಲಾತಪಸ್ವಿ ಹಿರಿಯನಟ ರಾಜೇಶ್ ಬಗ್ಗೆ ನಮ್ಮ ಹೆಮ್ಮೆಯ ಹಿರಿಯ ಲೇಖಕ ಕುಮಾರಕವಿ ನಟರಾಜಣ್ಣ ಮನ ಮುಟ್ಟುವ ರೀತಿಯಲ್ಲಿ ಹಳ್ಳ್ಯಿಯವರಿಗೂ ದಿಲ್ಲಿಯವರಿಗೂ ಎಲ್ಲ ವರ್ಗದವರಿಗೂ ಅರ್ಥವಾಗುವಂತೆ ಬರೆದಿದ್ದಾರೆ. ಇವರಿಗೆ ನಮ್ಮ ಗ್ರಾಮದ ಪರವಾಗಿ ನಮ್ಮ ಗೆಳೆಯರ ಮತ್ತು ಬಂಧುಬಳಗದ ಪರವಾಗಿ ಗೌರವಪೂರ್ಣ ನಮಸ್ಕಾರ, ಇದನ್ನ ತುಂಬ ಚೆನ್ನಾಗಿ ಪ್ರಕಟಿಸಿದ ನಮ್ಮ ಮೆಚ್ಚಿನ ಜನಮನ ಪತ್ರಿಕೆಯ ಎಲ್ಲರಿಗೂ ಧನ್ಯವಾದ. ನಿಮ್ಮ ಅಭಿಮಾನಿ ರಾಕೇಶ್, ಕುರುಬರಹಳ್ಳಿ, ಬಾದಾಮಿ,
ಸಿನಿಮ ನಟ ರಾಜೇಶ್ ರವರ ಲೇಖನ ಬಹಳ ಇಷ್ಟವಾಯಿತು. ಲೇಖಕ ನಟರಾಜ ಕವಿಯವರು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬೇಕಾದ ಮಾಹಿತಿಯನ್ನು
ಸರಳವಾಗಿ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವ ಉತ್ತಮ ಕೆಲಸ ಮಾಡಿದ್ದಾರೆ. ಇವರಿಗೂ ಜನಮನ ಕನ್ನಡ ಪತ್ರಿಕೆಯವರಿಗೂ ನನ್ನ ಅನೇಕ ವಂದನೆಗಳು ಮತ್ತು ಧನ್ಯವಾದಗಳು. ಜೈ ಹಿಂದ್ ಜೈ ಕರ್ನಾಟಕ
ಧರಣೇಂದ್ರ, ಕಂಪ್ಲಿ
ಸಿನಿಮ ನಟ ರಾಜೇಶ್ ರವರ ಲೇಖನ ಬಹಳ ಇಷ್ಟವಾಯಿತು. ಲೇಖಕ ನಟರಾಜ ಕವಿಯವರು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬೇಕಾದ ಮಾಹಿತಿಯನ್ನು
ಸರಳವಾಗಿ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವ ಉತ್ತಮ ಕೆಲಸ ಮಾಡಿದ್ದಾರೆ. ಇವರಿಗೂ ಜನಮನ ಕನ್ನಡ ಪತ್ರಿಕೆಯವರಿಗೂ ನನ್ನ ಅನೇಕ ವಂದನೆಗಳು ಮತ್ತು ಧನ್ಯವಾದಗಳು. ಜೈ ಹಿಂದ್ ಜೈ ಕರ್ನಾಟಕ
ಧರಣೇಂದ್ರ, ಕಂಪ್ಲಿ, ಬಳ್ಳಾರಿ ಜಿಲ್ಲೆ
ಸಿನಿಮ ನಟ ರಾಜೇಶ್ ರವರ ಲೇಖನ ಬಹಳ ಇಷ್ಟವಾಯಿತು. ಲೇಖಕ ನಟರಾಜ ಕವಿಯವರು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬೇಕಾದ ಮಾಹಿತಿಯನ್ನು ಸರಳವಾಗಿ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವ ಉತ್ತಮ ಕೆಲಸ ಮಾಡಿದ್ದಾರೆ. ಇವರಿಗೂ ಜನಮನ ಕನ್ನಡ ಪತ್ರಿಕೆಯವರಿಗೂ ನನ್ನ ಅನೇಕ ವಂದನೆಗಳು ಮತ್ತು ಧನ್ಯವಾದಗಳು. ಜೈ ಹಿಂದ್ ಜೈ ಕರ್ನಾಟಕ
ಧರಣೇಂದ್ರ, ಕಂಪ್ಲಿ, ಬಳ್ಳಾರಿ ಜಿಲ್ಲೆ
ಕನ್ನಡ ಚಲನಚಿತ್ರ ರಂಗದ ಶ್ರೇಷ್ಠ ನಟರುಗಳಲ್ಲಿ ಒಬ್ಬರಾಗಿದ್ದ ಹಳೇ ಕಾಲದ ನಟ ರಾಜೇಶ್ ಲೇಖನ ಓದಿ ಖುಷಿಯಾಯಿತೂ, ಬಹಳ ಅಮೋಘವಾಗಿ ಬರೆದಿರುವ ಲೇಖಕ ನಟರಾಜ ಕವಿಯವರಿಗೆ ಧನ್ಯವಾದ,
ಶ್ರೀಮತಿ ಪಾರಿಜಾತ ರಾಕೇಶ್ ಬಾದಾಮಿ
ಬಾಗಲಕೋಟೆ ಜಿಲ್ಲೆ, ಕರ್ನಾಟಕ ರಾಜ್ಯ.
Very fine article about RAJESH the Kannada actor written nicely by KUMARA KAVI NATARAJ sir thanks JANAMANA KANNADA