CinemaLatest

ಸಂಕಷ್ಟದಲ್ಲಿಯೂ ಛಲದಿಂದ ಸಿನಿಮಾ ಬದುಕನ್ನು ಕಟ್ಟಿಕೊಂಡ ಹಿರಿಯ ನಟಿ ಲೀಲಾವತಿ… ಇವರು ನಟಿಸಿದ ಚಿತ್ರಗಳೆಷ್ಟು?

ಹಿರಿಯನಟಿ ಲೀಲಾವತಿ ಅವರು ಚಂದನವನದಲ್ಲಿ  ಹೆಸರು ಮಾಡಿದ ನಟಿ… ಇವರು ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಗಳು ದೊಡ್ಡಮಟ್ಟದಲ್ಲಿದೆ. ಜೀವನುದ್ದಕ್ಕೂ ಸುಖಪಡದ ಜೀವ… ತನ್ನ ಸುತ್ತಲೂ ಸುತ್ತಿಕೊಳ್ಳುತ್ತಿದ್ದ ಸಂಕಷ್ಟವನ್ನು ಕೊಡವಿಕೊಂಡು ಸಿನಿಮಾ ಸೇರಿದಂತೆ ತಮ್ಮ ಬದುಕನ್ನು ಗಟ್ಟಿ ಮಾಡಿಕೊಂಡವರು.. ಇಂತಹ ನಟಿಯ ಬಗ್ಗೆ ಹೇಳುತ್ತಾ ಹೋದರೆ ಗ್ರಂಥವೊಂದು ಸಿದ್ಧವಾಗಿ ಬಿಡುತ್ತದೆ. ಅವರ ಸಿನಿಮಾ ಬದುಕಿನ ಬಗ್ಗೆ ಕುಮಾರಕವಿ ನಟರಾಜ್ ಅವರು ಇಲ್ಲಿ ಪರಿಚಯಿಸಿದ್ದಾರೆ…

1933ರ ಆಸುಪಾಸು, ಬ್ರಿಟಿಷ್‍ ಇಂಡಿಯಾ ಮದ್ರಾಸ್‍ ಪ್ರಾವಿನ್ಸ್ ಮೈಸೂರು ರಾಜ್ಯ ದಕ್ಷಿಣ ಕನ್ನಡ ಮಂಗಳೂರು ಸಮೀಪದ ಬೆಳ್ತಂಗಡಿ ಗ್ರಾಮದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಈ ಲೀಲಾಕಿರಣ 1949ರಲ್ಲಿ ಡಿ.ಶಂಕರಸಿಂಗ್‍ರವರ ‘ನಾಗಕನ್ನಿಕ’ ಕನ್ನಡ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ. 1953ರಲ್ಲಿ ‘ಚಂಚಲಕುಮಾರಿ’ ಮತ್ತು ಸೌಭಾಗ್ಯಲಕ್ಷ್ಮಿ’ ಚಿತ್ರಗಳ ನಂತರ ಲೀಲಾವತಿ ಎಂದು ಹೆಸರು ಬದಲಾಯಿಸಿಕೊಂಡರು. ಕನ್ನಡ ಚಿತ್ರರಂಗದ ನಾಯಕನಟರಾದ ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ಸುಬ್ಬಯ್ಯನಾಯ್ಡು, ಆರ್.ನಾಗೇಂದ್ರರಾವ್, ಕೆಂಪರಾಜಅರಸು, ಹೊನ್ನಪ್ಪಭಾಗವತರ್ ಮುಂತಾದ ದಿಗ್ಗಜರ ಚಿತ್ರಗಳಲ್ಲಿ ನಟಿಸಿ ಖ್ಯಾತರಾದರು.

ರಾಜೇಶ್, ರಾಜಾಶಂಕರ್, ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್ ಮುಂತಾದವರ ಚಿತ್ರಗಳಲ್ಲೂ ಅಭಿನಯಿಸಿ ನಭೂತೋ ನಭವಿಷ್ಯತಿ ದಾಖಲೆ ನಿರ್ಮಿಸಿ ಚಂದನವನದ 5 ತಲೆಮಾರಿನ ಬಹುತೇಕ ಎಲ್ಲ ಹೀರೋಗಳ ಸಿನಿಮಗಳಲ್ಲೂ ನಟಿಸಿದ ಏಕೈಕ ಅಭಿನೇತ್ರಿ ಎಂಬ ಖ್ಯಾತಿಗೂ ಭಾಜನರಾದರು. ಇವರ ಜತೆ ನಟಿಸಿದ ಹೀರೋಗಳ ಪೈಕಿ ರಾಜಕುಮಾರ್ ಜತೆ ಅತಿ ಹೆಚ್ಚು ಫಿಲಮ್‍ಗಳಲ್ಲಿ ನಟಿಸಿದ ದಾಖಲೆ ಹೊಂದಿರುವ ಈಕೆ ‘ವರನಟ ರಾಜಕುಮಾರ್’ ಅವರಂತೆ ‘ವಧುನಟಿ ಲೀಲಾವತಿ’ ಎಂಬ ಬಿರುದನ್ನೂ ಪಡೆದಿದ್ದರು.

ಈ ಅಪೂರ್ವ ಜೋಡಿ ನಟಿಸಿದ 30ಕ್ಕೂ ಹೆಚ್ಚು ಜನಪ್ರಿಯ ಚಿತ್ರಗಳ ಪೈಕಿ ಟಾಪ್ ಸಿನಿಮಾಗಳು: ವೀರಕೇಸರಿ, ಕುಲವಧು, ಕಣ್ತೆರೆದುನೋಡು, ಗಾಳಿಗೋಪುರ, ಮನಮೆಚ್ಚಿದಮಡದಿ, ಕನ್ಯಾರತ್ನ, ರಾಣಿಹೊನ್ನಮ್ಮ, ತುಂಬಿದಕೊಡ, ರಣಧೀರಕಂಠೀರವ, ಸಿಪಾಯಿರಾಮು, ಮುಂತಾದ ಸಿನಿಮಾಗಳಂತು ಇವತ್ತಿಗೂ ನಂ.1 ಸ್ಥಾನದ ಜನಪ್ರಿಯತೆ ಗಳಿಸಿವೆ. ಸುಮಾರು 300ಕ್ಕೂ ಮಿಕ್ಕು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಲೀಲಾವತಿ ಕನ್ನಡ, ತುಳು, ಕೊಂಕಣಿ, ತಮಿಳು, ತೆಲುಗು, ಹಿಂದಿ ಆರು ಭಾಷೆಗಳ 500 ಸಿನಿಮಾದಲ್ಲಿ ನಟಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದರು. ಮುತ್ಸದ್ದಿ ಕಲಾವಿದೆ ಲೀಲಾವತಿ ಅಭಿನಯಿಸಿದ ಕಟ್ಟಕಡೇ ಫಿಲಂ, ತಮ್ಮಪುತ್ರ ವಿನೋದರಾಜ್ ನಟಿಸಿ 23.10.2009ರಂದು ಬಿಡುಗಡೆಯಾದ ಕನ್ನಡ ಫಿಲಂ “ಯಾರದು?

ಕರ್ನಾಟಕದಲ್ಲೇ ನೆಲೆಸಬೇಕೆಂಬ ಇಚ್ಚೆಯಿಂದ 1962ರಲ್ಲಿ ಮದ್ರಾಸಿನ ಕೊಡಂಬಕ್ಕಂನಲ್ಲಿ ಖರೀದಿಸಿದ್ದ ತೋಟವನ್ನು ಬಿಕರಿ ಮಾಡಿದ ನಂತರ 1974ರಲ್ಲಿ ಬೆಂಗಳೂರು ನೆಲಮಂಗಲ ಬಳಿಯಿರುವ ಸೋಲದೇವನಹಳ್ಳಿಯಲ್ಲಿ ಕೃಷಿ ಜಮೀನು ಖರೀದಿಸಿ ತಮ್ಮ ಏಕೈಕ ಪುತ್ರ ನಟ ವಿನೋದರಾಜ್ ಜತೆ ಫಾರಂಹೌಸಲ್ಲಿ ವಾಸ ಮಾಡುತ್ತಿದ್ದರು. ವಿನಾಕಾರಣ ಆಗಾಗ್ಗೆ ಕೆಲವು ಕಿಡಿಗೇಡಿಗಳು ನಡೆಸಿದ ದಾಂಧಲೆಗೆ ಒಳಗಾಗಿ ಅನೇಕ ಬಾರಿ ಹಲವಾರು ರೀತಿಯ ಕಷ್ಟನಷ್ಟ ಅನುಭವಿಸಿದ್ದ ತಾಯಿ-ಮಗ, ಧೈರ್ಯಲಕ್ಷ್ಮಿ ಬಂಗಾರದ ಮನುಷ್ಯನಂತೆ ಧೃತಿಗೆಡದೆ ತಂಪಾಡಿಗೆ ತಾವು ಜೀವನ ಸಾಗಿಸುತ್ತಿದ್ದರು. ಕಡೆಗೂ ಈಕೆ ತಮ್ಮ ಮೊಮ್ಮಕ್ಕಳೊಡನೆ ಆನಂದವಾಗಿ ಕಾಲಕಳೆವ ಅದೃಷ್ಟವಂತೆ ಆಗಲೇಇಲ್ಲ?! ವಯೋಸಹಜ ಅನಾರೋಗ್ಯದಿಂದ ವಧುನಟಿ ಡಾ.ಲೀಲಾವತಿ 8.12.2023 ರಂದು ಕೊನೆಯುಸಿರೆಳೆದರು.

ಕೇವಲ 2ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ನಟಿ ಲೀಲಾಕಿರಣ ಉರುಫ್ ಲೀಲಾವತಿ 6 ಭಾಷೆಗಳ 500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯ ನೀಡಿದ್ದಾರೆ. ಚಂದನವನ ಚರಿತ್ರೆಯಲ್ಲಿ ನೂತನ ದಾಖಲೆ ಸೃಷ್ಟಿಸಿ ಕಲಾಸರಸ್ವತಿ ಎಂಬ ಬಿರುದು ಸಂಪಾದಿಸದ್ದರು. ಡಾ.ರಾಜ್ ಜತೆ 44ಚಿತ್ರದಲ್ಲಿ ಅಭಿನಯಿಸಿ ರಾಜಕುಮಾರ್ ಜತೆ ನಟಿಸಿದ ಹೀರೋಯಿನ್ ಪೈಕಿ ಮೊದಲಸ್ಥಾನ ಪಡೆದಿದ್ದರು

2008ನೇ ಇಸವಿಯಲ್ಲಿ ಜರುಗಿದ ಘಟಿಕೋತ್ಸವ ಕಾರ್ಯಕ್ರಮ ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಲೀಲಾವತಿಯವರು ಹಲವಾರು ಚಿತ್ರದ ತಮ್ಮ ಶ್ರೇಷ್ಠ ಅಭಿನಯಕ್ಕೆ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ಹಾಗೂ ಅನೇಕ ರಾಜ್ಯ ಪ್ರಶಸ್ತಿ ಗಳನ್ನು ಪಡೆದಿದ್ದಾರೆ. 2000ನೇ ಇಸವಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಜೀವಮಾನ ಸಾಧನೆಗೆ ನೀಡುವ “ಡಾ.ರಾಜಕುಮಾರ್ ಸ್ಮರಣಾರ್ಥ” ಪ್ರಶಸ್ತಿಯನ್ನೂ ಗಳಿಸಿದ್ದರು. ಇವರ ಪುತ್ರ ವಿನೋದರಾಜ್ ಹತ್ತಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯ ಹೀರೋ ಎನಿಸಿದ್ದಾರೆ. ಭಾರತದ ಚಿತ್ರರಂಗದಲ್ಲಿರುವ ಕೆಲವೇ ಮಂದಿ ಡಿಸ್ಕೊ-ಕಂ-ಬ್ರೇಕ್ ಡ್ಯಾನ್ಸ್ ಹೀರೋಗಳಲ್ಲಿ ಇವರೂ ಒಬ್ಬರು. ಬಾಲಿವುಡ್ ಖ್ಯಾತನಟ ಮಿಥುನ್ ಚಕ್ರವರ್ತಿಯಿಂದ ಶಹಬ್ಬಾಷ್‍ಗಿರಿ ಪಡೆದು ಜೂ.ಮೈಕೆಲ್ ಜಾಕ್ಸನ್ ಎಂಬ ಬಿರುದು ಸಂಪಾದಿಸಿದ್ದಾರೆ.

ಲೀಲಾವತಿ ನಟಿಸಿದ ಪ್ರಮುಖ ಕನ್ನಡ ಚಿತ್ರಗಳನ್ನು ನೋಡುವುದಾದರೆ, ನಾಗಕನ್ನಿಕಾ, ಚಂಚಲಕುಮಾರಿ, ಸೌಭಾಗ್ಯಲಕ್ಷ್ಮಿ, ಭಕ್ತವಿಜಯ, ಹರಿಭಕ್ತ, ಮಾಂಗಲ್ಯಯೋಗ, ಅಬ್ಬಾಆಹುಡುಗಿ, ಧರ್ಮವಿಜಯ, ರಣಧೀರ ಕಂಠೀರವ, ರಾಣಿಹೊನ್ನಮ್ಮ, ದಶಾವತಾರ, ಕೈವಾರಮಹಾತ್ಮೆ, ಕಣ್ತೆರೆದುನೋಡು, ಕಿತ್ತೂರು ಚೆನ್ನಮ್ಮ, ಕರುಣೆಯೇ ಕುಟುಂಬದ ಕಣ್ಣು, ಭೂದಾನ, ಗಾಳಿಗೋಪುರ, ರತ್ನಮಂಜರಿ, ಮನಮೆಚ್ಚಿದಮಡದಿ, ನಂದಾದೀಪ, ಕನ್ಯಾರತ್ನ, ವಿಧಿವಿಲಾಸ, ಕುಲವಧು, ಕಲಿತರೂಹೆಣ್ಣೇ, ಬೇವುಬೆಲ್ಲ, ಜೀವನತರಂಗ, ಮಲ್ಲಿಮದುವೆ,  ಸಂತತುಕಾರಾಂ, ವಾಲ್ಮೀಕಿ, ವೀರಕೇಸರಿ, ಶಿವರಾತ್ರಿಮಹಾತ್ಮೆ, ತುಂಬಿದಕೊಡ,  ಚಂದ್ರಹಾಸ, ಇದೇಮಹಾಸುದಿನ, ವಾತ್ಸಲ್ಯ,  ಮದುವೆ ಮಾಡಿ ನೋಡು, ಮನೆಕಟ್ಟಿ ನೋಡು.

ನಾಗಪೂಜ, ಮೋಹಿನಿಭಸ್ಮಾಸುರ,  ಪ್ರೇಮಮಯಿ, ತೂಗುದೀಪ, ಗಂಗೆಗೌರಿ,  ಅತ್ತೆಗೊಂದುಕಾಲ ಸೊಸೆಗೊಂದುಕಾಲ, ಭಾಗ್ಯದೇವತೆ, ಅಣ್ಣತಮ್ಮ, ಕಲ್ಪವೃಕ್ಷ, ಮಮತೆ, ಬೃಂದಾವನ, ಗೆಜ್ಜೆಪೂಜೆ, ಸೋತುಗೆದ್ದವಳು, ಆರುಮೂರುಒಂಭತ್ತು, ಸುಖಸಂಸಾರ,  ಸಿಗ್ನಲ್‍ ಮ್ಯಾನ್ ಸಿದ್ದಪ್ಪ, ಬೋರೇಗೌಡ ಬೆಂಗ್ಳೂರಿಗೆ ಬಂದ, ಅಪರಾಜಿತೆ, ಸಿಪಾಯಿರಾಮು, ಶರಪಂಜರ, ಧರ್ಮಪತ್ನಿ, ನಾಮೆಚ್ಚಿದಹುಡುಗ, ಮೂರೂವರೆವಜ್ರಗಳು, ಪ್ರೇಮಪಾಶ, ನಾಗರಹಾವು, ಭಕ್ತಕುಂಬಾರ, ದೇವರಗುಡಿ,ಸಹಧರ್ಮಿಣಿ,ಇದುನಮ್ಮದೇಶ, ಮಗಮೊಮ್ಮಗ, ಪ್ರೊಫೆಸರ್ ಹುಚ್ಚೂರಾಯ, ಮಹಾತ್ಯಾಗ, ಉಪಾಸನೆ, ಬಿಳೀಹೆಂಡ್ತಿ, ಭಾಗ್ಯಜ್ಯೊತಿ, ಹೊಸಿಲುಮೆಟ್ಟಿದಹೆಣ್ಣು, ಕೂಡಿ ಬಾಳೋಣ

ಹೆಣ್ಣುಸಂಸಾರದ ಕಣ್ಣು, ಕಳ್ಳಕುಳ್ಳ, ಕಥಾಸಂಗಮ, ಬಂಗಾರದಗುಡಿ, ಫಲಿತಾಂಶ, ಕಾಲೇಜುರಂಗ, ಮಕ್ಕಳಭಾಗ್ಯ, ಕಿಲಾಡಿಕಿಟ್ಟು, ನಾ ನಿನ್ನ ಮರೆಯಲಾರೆ, ದೀಪ, ಕುಂಕುಮರಕ್ಷೆ, ಮುಗ್ಧಮಾನವ, ವೀರ ಸಿಂಧೂರಲಕ್ಷ್ಮಣ, ದೇವದಾಸಿ, ಕಿಲಾಡಿಜೋಡಿ, ವಸಂತಲಕ್ಷ್ಮಿ, ಮಾತುತಪ್ಪದಮಗ, ನಾ ನಿನ್ನ ಬಿಡಲಾರೆ, ಪಕ್ಕಾಕಳ್ಳ, ಸವತಿಯ ನೆರಳು, ವಿಜಯ್‍ ವಿಕ್ರಮ್, ನನ್ನರೋಶನೂರುವರುಷ, ನಮ್ಮಮ್ಮನಸೊಸೆ, ನ್ಯಾಯನೀತಿಧರ್ಮ, ಸಿಂಹಜೋಡಿ, ಸುಬ್ಬಿಸುಬ್ಬಕ್ಕಸುವ್ವಲಾಲಿ, ವಸಂತಗೀತಾ, ಹಣಬಲವೋಜನಬಲವೋ, ಕುಲಪುತ್ರ, ತಾಯಿಯ ಮಡಿಲಲ್ಲಿ, ಕುಳ್ಳಕುಳ್ಳಿ.

ಧನಲಕ್ಷ್ಮಿ, ಮರೆಯದಹಾಡು, ಆಟೋರಾಜ, ಎರಡುನಕ್ಷತ್ರಗಳು, ಸಿಡಿದೆದ್ದ ಸಹೋದರ, ಮುದುಡಿದ ತಾವರೆ ಅರಳಿತು, ಸಮರ್ಪಣೆ, ಎಡೆಯೂರು ಸಿದ್ಧಲಿಂಗೇಶ್ವರ, ಶ್ರಾವಣಬಂತು, ಇಂದಿನ ರಾಮಾಯಣ, ಒಲವು ಮೂಡಿದಾಗ, ಚಾಣಕ್ಯ, ಅಜೇಯ, ಹೊಸಬಾಳು, ಕೇಡಿನಂ.1, ಬಾಳೊಂದು ಉಯ್ಯಾಲೆ, ನಾನು ನನ್ನ ಹೆಂಡ್ತಿ, ಬೆಟ್ಟದತಾಯಿ, ಕಥಾನಾಯಕ, ಸೀಳುನಕ್ಷತ್ರ, ಹುಲಿಹೆಬ್ಬುಲಿ, ಒಲವಿನಉಡುಗೊರೆ, ಪ್ರೇಮಲೋಕ, ರಾಮಣ್ಣಶಾಮಣ್ಣ, ಡಾಕ್ಟರ್ ಕೃಷ್ಣ, ಅಭಿಮಾನ, ಯುಗಪುರುಷ, ಗಗನ, ಗೋಲ್‍ ಮಾಲ್ ರಾಧಾಕೃಷ್ಣ, ಟೈಗರ್ ಗಂಗು, ಹಬ್ಬ, ಚಾಮುಂಡಿ, ಸ್ವಾತಿ ಮುತ್ತು, ಶುಕ್ರ, ಕನ್ನಡದ ಕಂದ, ದೂರದಬೆಟ್ಟ(ಅತಿಥಿನಟಿ), ಯಾರದು (ಅಂತಿಮ ಫಿಲಂ/2009)

admin
the authoradmin

44 Comments

  • 1977 ರಿಂದ ಮೈವಿವಿ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ ಮಾನಸ ಗಂಗೋತ್ರಿ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನನಗೆ ಪರಿಚಯವಾದ ನಟರಾಜ ಕವಿಯವರು ಆಗಲೇ ಕಪ್ಪುಸಮುದ್ರ ಕವನಸುಧೆ ಮುಂತಾದ ಪುಸ್ತಕ ಬರೆದಿದ್ದ ಯುವಕ. ಇವರೊಬ್ಬ ವಾಗ್ಮಿ, ಸಕಲಕಲಾವಲ್ಲಭ. ಕನ್ನಡ ಇಂಗ್ಲಿಷ್ ಹಿಂದಿ ತಮಿಳು ತೆಲುಗು ಭಾಷೆಯ ಜ್ಞಾನವೂ ಇವರಿಗಿತ್ತು. ಇಷ್ಟು ವರ್ಷದ ನಂತರ ಮತ್ತೆ ನಿಮ್ಮ ಜನಮನ ಪತ್ರಿಕೆಯ ಮೂಲಕ ಇವರ ಲೇಖನ ಓದುವ ಅದೃಷ್ಟ ಸಿಕ್ಕಿತು. ಇವರು ಬರೆಯುವ ಲೇಖನ ಕವನ ಕಥೆ ಬಗ್ಗೆ ಎರಡು ಮಾತಿಲ್ಲ. ಈಗ ಇವರು ಬರೆದಿರುವ ಹಿರಿಯ ನಟಿ ಲೀಲಾವತಿಯವರ ಲೇಖನ ಓದಿದ ನನಗೆ ತುಂಬ
    ಸಂತೋಷ ಆಗಿದೆ. ಇವರ ಹೆಚ್ಚೆಚ್ಚು ಲೇಖನ ನಿಮ್ಮ ಪತ್ರಿಕೆಯಲ್ಲಿ ಬರಲಿ ನಾನೂ ನನ್ನ ಮಿತ್ರರೂ ಕುಟುಂಬದವರೂ ತಪ್ಪದೇ ಓದುತ್ತೇವೆ, ನಮಸ್ಕಾರ ಧನ್ಯವಾದ ಸರ್

  • ವಧುನಟಿ ಡಾ.ಎಂ.ಲೀಲಾವತಿಯವರ ಲೇಖನ ಅದ್ಭುತ. ಇಂಥವರ ಬಗ್ಗೆ ಈಗಿನವರು ಯಾರೂ ಬರಿಯೋದೇಇಲ್ಲ.ಹಾಗಾಗಿ ಇದನ್ನು ಬರೆದ ಕುಮಾರಕವಿ ಯವರಿಗೆ ಧನ್ಯವಾದ ನಮಸ್ಕಾರ, ಪ್ರಭಾಕರ ಶಾಸ್ತ್ರಿ, ಹುಣಸೂರು

  • ವಧುನಟಿ ಡಾ.ಎಂ.ಲೀಲಾವತಿಯವರ ಲೇಖನ ಅದ್ಭುತ. ಇಂಥವರ ಬಗ್ಗೆ ಈಗಿನವರು ಯಾರೂ ಬರಿಯೋದೇಇಲ್ಲ.ಹಾಗಾಗಿ ಇದನ್ನು ಬರೆದ ಕುಮಾರಕವಿ ಯವರಿಗೆ ಧನ್ಯವಾದ ನಮಸ್ಕಾರ, ಪ್ರಭಾಕರ ಶಾಸ್ತ್ರಿ, ಹುಣಸೂರು.

  • ನಾನೊಬ್ಬ ನಿವೃತ್ತ ಸಬ್ ರಿಜಿಸ್ಟ್ರಾರ್, ಹಳೇಕಾಲದ ನಟನಟಿಯರನ್ನು ಮರೆತೇಹೋಗಿರುವ ಈ ಕಾಲದ ಪತ್ರಿಕೆಯವರು ಮತ್ತು ಲೇಖಕರು ಇರುವ ಮಧ್ಯೆ ಕುಮಾರಕವಿ ಅಂಥ ಲೇಖಕರನ್ನು ಕಂಡು ಬಹಳ ಸಂತೋಷ ಮತ್ತು ನೆಮ್ಮದಿ. ಈಗ ವಿಷಯಕ್ಕೆ ಬರ್ತೇನೆ. ನಮ್ಮಕಾಲದಲ್ಲಿ ವೈಭವದಿಂದ ಮೆರೆದ ಅದೇರೀತಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ನಾಟಕ ಸಿನಿಮ ನಟನಟಿಯರ ಪೈಕಿ ಈ ಲಿಲಾವತಿಯೂ ಒಬ್ಬರು. ಇವರ ಕುರಿತು ನಟರಾಜ ಕವಿಯವರು ಬರೆದ ಈ ಲೇಖನ ಸತ್ಯವಾಗಿ ತುಂಬ ಸೊಗಸಾಗಿದೆ. ನನ್ನ ಹಾರ್ದಿಕ ಅಭಿನಂದನೆಗಳು ಮತ್ತು ಆಶೀರ್ವಾದಗಳು

  • ನಾನೊಬ್ಬ ನಿವೃತ್ತ ಸಬ್ ರಿಜಿಸ್ಟ್ರಾರ್, ಹಳೇಕಾಲದ ನಟನಟಿಯರನ್ನು ಮರೆತೇಹೋಗಿರುವ ಈ ಕಾಲದ ಪತ್ರಿಕೆಯವರು ಮತ್ತು ಲೇಖಕರು ಇರುವ ಮಧ್ಯೆ ಕುಮಾರಕವಿ ಅಂಥ ಲೇಖಕರನ್ನು ಕಂಡು ಬಹಳ ಸಂತೋಷ ಮತ್ತು ನೆಮ್ಮದಿ. ಈಗ ವಿಷಯಕ್ಕೆ ಬರ್ತೇನೆ. ನಮ್ಮಕಾಲದಲ್ಲಿ ವೈಭವದಿಂದ ಮೆರೆದ ಅದೇರೀತಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ನಾಟಕ ಸಿನಿಮ ನಟನಟಿಯರ ಪೈಕಿ ಈ ಲಿಲಾವತಿಯೂ ಒಬ್ಬರು. ಇವರ ಕುರಿತು ನಟರಾಜ ಕವಿಯವರು ಬರೆದ ಈ ಲೇಖನ ಸತ್ಯವಾಗಿ ತುಂಬ ಸೊಗಸಾಗಿದೆ. ನನ್ನ ಹಾರ್ದಿಕ ಅಭಿನಂದನೆಗಳು, ಆಶೀರ್ವಾದಗಳು ಹಾಗೂ ಧನ್ಯವಾದಗಳು

  • ಅಂದಿನ ಕಾಲದ ಪ್ರಸಿದ್ಧ ನಾಯಕಿನಟಿ ಎಂ.ಲೀಲಾವತಿಯ ಬಗ್ಗೆ ಕುಮಾರಕವಿ ನಟರಾಜ ರವರ ಲೇಖನ ಓದಿ ಮೆಚ್ಚಿದ್ದೇನೆ. ಅವರಿಗೆ ಮತ್ತು ಜನಮನ ಪತ್ರಿಕೆಗೆ ನನ್ನ ನಮಸ್ಕಾರಗಳು

  • ನಟರಾಜ ಕುಮಾರಕವಿ ಯವರು ಬರೆದಿರುವ ಹಳೇ ಕಾಲದ ಸಿನಿಮ ನಟಿ ಲೀಲಾವತಿಯವರ ಲೇಖನ ಬಹಳ ಚೆನ್ನಾಗಿದೆ. ಧನ್ಯವಾದ, ನಮಸ್ಕಾರ

  • ದಿವಂಗತ ಹಿರಿಯ ನಟಿ ಲೀಲಾವತಿಯವರ ಲೇಖನ ಸೂಪರ್, ಲೇಖಕರಿಗೆ ಮತ್ತು ಜನಮನ ಪತ್ರಿಕೆಯವರಿಗೆ ನಮಸ್ಕಾರ

  • ಲೀಲಾವತಿ ಅಮ್ಮನವರ ಬಗ್ಗೆ ಹಿರಿಯ ಲೇಖಕ ನಟರಾಜ ಸರ್ ಅಮೋಘ ಲೇಖನ ಬರೆದಿದ್ದಾರೆ, ತುಂಬ ತುಂಬ ಧನ್ಯವಾದ

  • 90 ವರ್ಷಕಾಲ ಬದುಕಿ ಬಾಳಿದ ಹಿರಿಯ ಕಲಾವಿದೆ ಲೀಲಾವತಿ ಅಮ್ಮನ ಕುರಿತು ಹಿರಿಯರೂ ಅನುಭವಿ ಲೇಖಕರೂ ಆದ ಕವಿ ನಟರಾಜ ಸರ್ ಬಲು ಚೆಅಂದವಾಗೆ ಬರೆದಿರುವುದರಿಅಂದ ನನ್ನ ಮತ್ತು ನಮ್ಮ ಕುಟುಂಬದವರ ನಮಸ್ಕಾರ

  • ಒಂದು ಕಾಲದ ಭವ್ಯ ನಟಿ ದಿವಂಗತ ಲೀಲಾವತಿಯವರ ಲೇಖನ ಬೊಂಬಾಟ್ ಸೂಪರ್……

  • ನಮ್ಮ ತಂದೆಯವರು ಯಾವಾಗಲೂ ಹೊಗಳುತ್ತಿದ ಉತ್ತಮ ಕಲಾವಿದೆ ಲೀಲಾವತಿಯವರ ಲೇಖನ ತುಂಬ ಚೆನ್ನಾಗಿದೆ. ಎಲ್ಲರೂಓದಿ ಖುಷಿಪಟ್ಟೆವು ಅನಂತ ನಮಸ್ಕಾರ, ಧನ್ಯವಾದ

  • ಲೀಲಾವತಿಯ ಬಗ್ಗೆ ಬರೆದಿರುವ ಕುಮಾರಕವಿಯವರ ಲೇಖನ ಫಸ್ಟ್ ಕ್ಲಾಸ್ ಅರ್ಟಿಕಲ್ ಆಗಿದೆ ಧನ್ಯವಾದ

  • ನನ್ನ ಅಚ್ಚುಮೆಚ್ಚಿನ ನಟಿ ಲೀಲಾವತಿಯವರ ಕುರಿತು ನಟರಾಜಣ್ಣ ಬರೆದ ಲೇಖನ ಓದಿ flash back ಕಾಲಕ್ಕೆ ಹೋಗಿದ್ದೆ. ಧನ್ಯವಾದ ಸರ್

  • ಮಹಾನಟಿ ಮಂಗಳೂರು ಲೀಲಾವತಿ ಬಗೆಗಿನ ಸಚಿತ್ರ ವರ್ಣಮಯ ಹಾಗೂ
    ಬಹಳ ಚಿತ್ತಾಕರ್ಷಕ ಶೈಲಿಯಲ್ಲಿ ಬರೆದಿರುವ ಹಿರಿಯ ಲೇಖಕ ಕುಮಾರಕವಿ ಅವರಿಗೆ ಅಭಿನಂದನೆ, ಪತ್ರಿಕೆಯ ಎಲ್ಲರಿಗೂ ಸಹ ನನ್ನ ನಮಸ್ಕಾರ

  • ನನ್ನ ಆತ್ಮೀಯ ಮಿತ್ರ ನಟರಾಜ ಕವಿಯು ಬರೆದಂಥ ಆಗಿನ ಕಾಲದ ಸಿನಿಮ ನಟಿ ಲೀಲಾವತಿಯವರ ಲೇಖನ ಓದಿದೆ. ಬಹಳ ಚೆನ್ನಾಗಿದೆ ಮತ್ತು ತುಂಬ ಚೆನ್ನಾಗಿ ಬರೆದಿದ್ದಾರೆ ಕೂಡ. ಕನ್ನಡ ಜನಮನ ಪತ್ರಿಕೆಯ ಎಲ್ರಿಗೂ ಧನ್ಯವಾದ

  • ನನ್ನ ಆತ್ಮೀಯ ಸಹೋದ್ಯೋಗಿ ಮಿತ್ರ ನಟರಾಜ ಕವಿಯು ಬರೆದಂಥ ಆಕಾಲದ ಸಿನಿಮ ನಟಿ ಲೀಲಾವತಿಯವರ ಲೇಖನ ಓದಿದೆ. ಬಹಳ ಚೆನ್ನಾಗಿದೆ ಮತ್ತು ತುಂಬ ಚೆನ್ನಾಗಿ ಬರೆದಿದ್ದಾರೆ ಕೂಡ. ಕನ್ನಡ ಜನಮನ ಪತ್ರಿಕೆಯ ಎಲ್ರಿಗೂ ಧನ್ಯವಾದ

  • ವರನಟಿ ಲೀಲಾವತಿಯವರ ಲೇಖನವನ್ನು ಕುಮಾರಕವಿ ನಟರಾಜ ಅಣ್ಣಾವ್ರು
    ನಮ್ಮ ಮನೆಯ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಬರೆದಿದ್ದಾರೆ, ನಮಸ್ಕಾರ ಧನ್ಯವಾದ

  • ಹಿರಿಯನಟಿ ಲೀಲಾವತಿ ಮೇಡಂ (ದಿವಂಗತ) ಬಗ್ಗೆ ನಿಮ್ಮ ಪತ್ರಿಕೆಯಲ್ಲಿ ಬಂದಿರುವ ಲೇಖನ ಬಹಳ ಬಹಳ ಸೊಗಸಾಗಿದೆ ನಿಮಗೂ ಲೇಖಕರಿಗೂ ನೂರು ನಮಸ್ಕಾರ

  • Excellent exciting article on LATE MADAM ACTRESS DR.LEELAVATHI. thank you very much NATARAJ sir 🙏🎉🌹🌾👍

  • Wonderful message oriented article about late kannada film actress LEELAVATHI. First class writing by the senior aurhur KUMARAKAVI B.N.NATARAJA sir. Thanks 🙏 sir

  • Wonderful message oriented article about kannada film actress(late) Dr.LEELAVATHI.M. First class writing by senior author KUMARAKAVI B.N.NATARAJA sir. Thanks JANAMANA KANNADA e-newsletter rather e-newspaper 🙏

  • Kumarakavi B.N.NATARAJ sir article on ACTRESS DR.LEELAVATHI is a well written nice article. Also very much informative for the younger generation 👏 👍

  • Wonderful message oriented article about kannada film actress(late) Dr.LEELAVATHI.M. First class writing by senior author KUMARAKAVI B.N.NATARAJA sir. Thanks JANAMANA KANNADA e-newsletter rather e-newspaper… 🙏

  • Really good information and appreciation article written by NATRAJ sir on KANNADA ACTRESS LATE LEELAVATHI MA’AM
    Yadukumar, assistant film stunt director, Chennai, THANKS FOR ALL PEOPLE of KANNADA JANAMANA e-newspaper

  • Really good information and appreciation article written by NATRAJ sir on KANNADA ACTRESS LATE LEELAVATHI MA’AM
    Yadukumar, assistant film stunt director, Chennai, THANKS FOR ALL PEOPLE of KANNADA JANAMANA e-newspaper….

  • ಆಗಿನ ಕಾಲದ ಸಿನಿಮ ಹಿರೋಯಿನ್ ರಾಜಕುಮಾರ್ ಜೋಡಿಯ ನಟಿ ಲೀಲಾವತಿಯವರ ಲೇಖನ ಬಹಳ ಇಷ್ಟವಾಗಿದೆ. ಧನ್ಯವಾದ ಸರ್

  • ನನ್ನ ಮೆಚ್ಚಿನ ಸಿನಿಮ ನಟಿ ದಿ.ಲೀಲಾವತಿಯವರ ಬಗ್ಗೆ ಬರೆದ ನಟರಾಜ
    ಕುಮಾರಕವಿಯವರ ಲೇಖನ ಏಕ್ಧಮ್ ಹೈ ಕ್ಲಾಸ್ , ಥ್ಯಾಂಕ್ಯು ಸರ್

  • ನನ್ನ ಮೆಚ್ಚಿನ ಸಿನಿಮ ನಟಿ ದಿ.ಲೀಲಾವತಿಯವರ ಬಗ್ಗೆ ಬರೆದ ನಟರಾಜ
    ಕುಮಾರಕವಿಯವರ ಲೇಖನ ಏಕ್ಧಮ್ ಹೈ ಕ್ಲಾಸ್ , ಥ್ಯಾಂಕ್ಯು ವೆರಿ ಮಚ್

  • ನನ್ನ ಮೆಚ್ಚಿನ ಸಿನಿಮ ನಟಿ ದಿ.ಲೀಲಾವತಿಯವರ ಬಗ್ಗೆ ಬರೆದ ನಟರಾಜ ಕುಮಾರಕವಿಯವರ ಲೇಖನ ಏಕ್ಧಮ್ ಹೈ ಕ್ಲಾಸ್ , ಥ್ಯಾಂಕ್ಯು ವೆರಿ ಮಚ್

  • ದಿವಂಗತ ನಟಿ ಲೀಲಾವತಿಯವರ ಬಗ್ಗೆ ಒಂದು ಉತ್ತಮ ಲೇಖನ

  • ದಿವಂಗತ ನಟಿ ಲೀಲಾವತಿಯವರ ಬಗ್ಗೆ ಒಂದು ಉತ್ತಮ ಲೇಖನ…ನಮಸ್ಕಾರ ಧನ್ಯವಾದ

  • ನನ್ನ ಗುರುಗಳಾದ ನಟರಾಜ ಸರ್ ಕುಮಾರಕವಿಯವರು ಬರೆದಿರುವ ಹಿರಿಯ ಸಿನಿಮ ನಟಿ ಲೀಲಾವತಿಯವರ ಲೇಖನ ಓದಿದೆ. ತುಂಬ ಚೆನ್ನಾಗಿದೆ. ನಮಸ್ಕಾರ ಸರ್

  • ನನ್ನ ಗುರುಗಳಾದ ನಟರಾಜ ಸರ್ ಕುಮಾರಕವಿಯವರು ಬರೆದಿರುವ ಹಿರಿಯ ಸಿನಿಮ ನಟಿ ಲೀಲಾವತಿಯವರ ಲೇಖನ ಓದಿದೆ. ತುಂಬ ಚೆನ್ನಾಗಿದೆ. ನಮಸ್ಕಾರ ಸರ್, ಧನ್ಯವಾದ

  • ನಮ್ಮ ನಂಟರೂ ಬಂಧುಗಳೂ ಹಿರಿಯಣ್ಣನೂ ಆದ ನಟರಾಜಣ್ಣ ರವರು ಬರೆದ ಎಲ್ಲಾ ಲೇಖನವೂ ಅತ್ಯುತ್ತಮ ಮತ್ತು ಉಪಯುಕ್ತ. ಈಗ ಇವರು ಬರೆದಂಥ ದಿವಂಗತ ನಟಿ ಲೀಲಾವತಿಯವರ ಲೇಖನವೂ ಶ್ರೇಷ್ಟವಾಗಿದೆ. ನಮ್ಮ ಹಳ್ಳಿಯ ಹಿರಿಯರೂ ಕಿರಿಯರೂ ಎಲ್ಲರೂ ಓದಿ ವಿಷಯ ತಿಳಿದು ಕೊಂಡೆವು. ಎಲ್ಲರಿಗೂ ಸಹ ನಮ್ಮ ಕಡೆಯಿಂದ ಧನ್ಯವಾದ ನಮಸ್ಕಾರ

  • ನಮ್ಮ ನಂಟರೂ ಬಂಧುಗಳೂ ಹಿರಿಯಣ್ಣನೂ ಆದ ನಟರಾಜಣ್ಣ ರವರು ಬರೆದ ಎಲ್ಲಾ ಲೇಖನವೂ ಅತ್ಯುತ್ತಮ ಮತ್ತು ಉಪಯುಕ್ತ. ಈಗ ಇವರು ಬರೆದಂಥ ದಿವಂಗತ ನಟಿ ಲೀಲಾವತಿಯವರ ಲೇಖನವೂ ಶ್ರೇಷ್ಟವಾಗಿದೆ. ನಮ್ಮ ಹಳ್ಳಿಯ ಹಿರಿಯರೂ ಕಿರಿಯರೂ ಎಲ್ಲರೂ ಓದಿ ವಿಷಯ ತಿಳಿದು ಕೊಂಡೆವು. ಎಲ್ಲರಿಗೂ ಸಹ ನಮ್ಮ ಕಡೆಯಿಂದ ಧನ್ಯವಾದ ನಮಸ್ಕಾರ….

  • ನಾನು ಬೆಂಗಳೂರಿನ ಗಾಂಧಿನಗರದ ಶಾರದಾ ಮೂವೀಸ್ ಸಂಸ್ಥೆಯ ನಿವೃತ್ತ ನೌಕರ ನನಗೀಗ 83 ವಯಸ್ಸು. ಕಳೆದ 2-3 ತಿಂಗಳಿಂದ ಕುಮಾರಕವಿಯವರ ನಟರಾಜರವರ ಎಲ್ಲ ಲೇಖನ ಅದರಲ್ಲೂ ವಿಶೇಷವಾದ ಚಂದನವನ ಚರಿತ್ರೆಯ
    ಲೇಖನಗಳನ್ನು ಅವರ status ನಿಂದ ತಪ್ಪದೇ ಓದುತ್ತಾ ಬಂದಿದ್ದೇನೆ. ಈಗ ಲೀಲಾವತಿಯವರ ಲೇಖನ ಓದಿದೆ. ಪ್ರತಿಯೊಂದು ಲೇಖನವೂ ಅಮೋಘ ಮತ್ತು ಆಕರ್ಷಕ ಹಾಗೂ ಸಂಗ್ರಹ ಯೋಗ್ಯ. ಇವರಿಗೆ ದೇವರು ಆರೋಗ್ಯ ಆಯುಷ್ಯ ಕೊಡಲಿ, ಇಷ್ಟೇ ನನ್ನ ಅಭಿಪ್ರಾಯ, ನಮಸ್ಕಾರ

  • ನಾನೊಬ್ಬ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯನಾಗಿ ನಿವೃತ್ತನಾದೆ. ನಟರಾಜಣ್ಣ ನವರ ಪ್ರತಿಯೊಂದು ಲೇಖನವನ್ನೂ ಅವರ ಸ್ಟೇಟಸ್ ಬಾಕ್ಸಿನಿಂದ ಓದುತ್ತಿರುವ ಇವರ ಸಾಹಿತ್ಯದ ಅಭಿಮಾನಿ. ಚಂದನವನ ಚರಿತ್ರೆಯ ಲೇಖನ ಗಳು ಒಂದಕ್ಕಿಂತ ಇನ್ನೊಂದು ತುಂಬ ತುಂಬ ಚೆನ್ನಾಗಿದೆ. ಈಗ ಇವತ್ತು ಹಳೇ ಕಾಲದ ಸಿನಿಮಾ ನಟಿ ಲೀಲಾವತಿಯವರ ಲೇಖನ ಸೇರಿದಂತೆ ಎಲ್ಲವೂ ಸಹ ಹಳ್ಳಿಯವರಿಗೂ ಸಿಟಿಯವರಿಗೂ ಮಹಿಳೆ, ಯುವಕರು, ಶಾಲಾಕಾಲೇಜು ವಿದ್ಯಾರ್ಥಿಗಳಿಗೂ ಮತ್ತು ಹಿರಿಯರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆಯುತ್ತಾರೆ. ನಿಜವಾಗಲು ಇವರಿಗೆ ನಮ್ಮೆಲ್ಲರ ನಮಸ್ಕಾರ ಹಾರೈಕೆ ಸದಾ ಇರುತ್ತದೆ, ಧನ್ಯವಾದ ಸರ್

  • ನಾನೊಬ್ಬ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯನಾಗಿ ನಿವೃತ್ತನಾದೆ. ನಟರಾಜಣ್ಣ ನವರ ಪ್ರತಿಯೊಂದು ಲೇಖನವನ್ನೂ ಅವರ ಸ್ಟೇಟಸ್ ಬಾಕ್ಸಿನಿಂದ ಓದುತ್ತಿರುವ ಇವರ ಸಾಹಿತ್ಯದ ಅಭಿಮಾನಿ. ಚಂದನವನ ಚರಿತ್ರೆಯ ಲೇಖನ ಗಳು ಒಂದಕ್ಕಿಂತ ಇನ್ನೊಂದು ತುಂಬ ತುಂಬ ಚೆನ್ನಾಗಿದೆ. ಈಗ ಇವತ್ತು ಹಳೇ ಕಾಲದ ಸಿನಿಮಾ ನಟಿ ಲೀಲಾವತಿಯವರ ಲೇಖನ ಸೇರಿದಂತೆ ಎಲ್ಲವೂ ಸಹ ಹಳ್ಳಿಯವರಿಗೂ ಸಿಟಿಯವರಿಗೂ ಮಹಿಳೆ, ಯುವಕರು, ಶಾಲಾಕಾಲೇಜು ವಿದ್ಯಾರ್ಥಿಗಳಿಗೂ ಮತ್ತು ಹಿರಿಯರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ಬರೆಯುತ್ತಾರೆ. ನಿಜವಾಗಲು ಇವರಿಗೆ ನಮ್ಮೆಲ್ಲರ ನಮಸ್ಕಾರ ಹಾರೈಕೆ ಸದಾ ಇರುತ್ತದೆ, ಧನ್ಯವಾದ ಸರ್ 🙏🙏🙏🙏🙏👏👏👏

  • ಲೀಲಾವತಿಯವರ ಲೇಖನ ಅದ್ಭುತವಾಗಿದೆ ಲೇಖಕ ಅಮೋಘವಾಗಿ ಬರೆದಿದ್ದಾರೆ, ಧನ್ಯವಾದ ನಮಸ್ಕಾರ

  • ನಾನು ಬೆಂಗಳೂರಿನ ಗಾಂಧಿನಗರದ ಶಾರದಾ ಮೂವೀಸ್ ಸಂಸ್ಥೆಯ ನಿವೃತ್ತ ನೌಕರ ನನಗೀಗ 83 ವಯಸ್ಸು. ಕಳೆದ 2-3 ತಿಂಗಳಿಂದ ಕುಮಾರಕವಿಯವರ ನಟರಾಜರವರ ಎಲ್ಲ ಲೇಖನ ಅದರಲ್ಲೂ ವಿಶೇಷವಾದ ಚಂದನವನ ಚರಿತ್ರೆಯ
    ಲೇಖನಗಳನ್ನು ಅವರ status ನಿಂದ ತಪ್ಪದೇ ಓದುತ್ತಾ ಬಂದಿದ್ದೇನೆ. ಈಗ ಲೀಲಾವತಿಯವರ ಲೇಖನ ಓದಿದೆ. ಪ್ರತಿಯೊಂದು ಲೇಖನವೂ ಅಮೋಘ ಮತ್ತು ಆಕರ್ಷಕ ಹಾಗೂ ಸಂಗ್ರಹ ಯೋಗ್ಯ. ಇವರಿಗೆ ದೇವರು ಆರೋಗ್ಯ ಆಯುಷ್ಯ ಕೊಡಲಿ, ಇಷ್ಟೇ ನನ್ನ ಅಭಿಪ್ರಾಯ, ನಮಸ್ಕಾರ…

Leave a Reply