LatestLife style

ಚಳಿಗಾಲದಲ್ಲಿ ಅಸ್ತಮಾದತ್ತ ನಿರ್ಲಕ್ಷ್ಯ ಬೇಡ.. ಮುಂಜಾಗ್ರತೆ ಇರಲಿ… ಅಸ್ತಮಾದಿಂದ ರಿಲ್ಯಾಕ್ಸ್ ಹೇಗೆ?

ಅಸ್ತಮಾ ಇರುವವರಿಗೆ ಚಳಿಗಾಲ ಬಂತೆಂದರೆ ಉಪಟಳ ಜಾಸ್ತಿಯಾಗುವುದು ಸಾಮಾನ್ಯ.. ಹೀಗಾಗಿ ಇದರ ಬಗ್ಗೆ ಒಂದಷ್ಟು ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಸ್ವಲ್ಪ ನೆಮ್ಮದಿಯಾಗಿ ದಿನಕಳೆಯಲು ಸಾಧ್ಯವಾಗಲಿದೆ. ಅಸ್ತಮಾವನ್ನು ನಿಯಂತ್ರಣದಲ್ಲಿಡಲು ರೋಗಿಗಳು ಏನು ಮಾಡಬೇಕು ಎಂಬುದರ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ತಜ್ಞರು ನೀಡಿದ್ದು ಅದನ್ನು ಪಾಲಿಸುವುದು ಒಳ್ಳೆಯದು.

ಈ ಸಮಯದಲ್ಲಿ ಅಸ್ತಮಾದಿಂದ ಬಳಲುತ್ತಿರುವವರು ಸ್ವಲ್ಪ ಎಚ್ಚರವಾಗಿರುವುದು ಒಳ್ಳೆಯದು. ಏಕೆಂದರೆ ವಾತಾವರಣ ಬದಲಾದಾಗ, ನೀರಿನ ವ್ಯತ್ಯಾಸ, ಪಟಾಕಿಯ ಹೊಗೆ, ಧೂಳು ಹೀಗೆ ಹತ್ತು ಹಲವು ವ್ಯತ್ಯಾಸಗಳು ಅಸ್ತಮಾ ಉಲ್ಭಣವಾಗುವಂತೆ ಮಾಡುವುದರಿಂದ ಎಚ್ಚರಿಕೆ ವಹಿಸಿ ಒಂದಷ್ಟು ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಅಸ್ತಮಾವನ್ನು ನಿಯಂತ್ರಣದಲ್ಲಿರಿಸಲು ಏನು ಮಾಡಬೇಕು? ಹೇಗಿರಬೇಕು ನಮ್ಮ ಜೀವನ ಶೈಲಿ? ಎಂಬಿತ್ಯಾದಿ ವಿಚಾರಗಳ ಕುರಿತಂತೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ:  ಹಾಲುಣಿಸಿದರೆ ತಾಯಿಯ ಸೌಂದರ್ಯಕ್ಕೆ ಧಕ್ಕೆ ಬರುತ್ತಾ? 

ಮನೆಯಿಂದ ಹೊರಗೆ ಹೋಗುವಾಗ ವೈದ್ಯರು ನೀಡುವ ತ್ವರಿತ ಶಮನ ನೀಡುವ ಔಷಧಿ ಮತ್ತು ಇನ್ನೇಲರ್‌ ಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಹೊಗೆ, ಧೂಳಿನಿಂದ ಆದಷ್ಟು ದೂರ ಇರುವಂತೆ ನೋಡಿಕೊಳ್ಳಬೇಕು. ಮಲಗುವ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಬೂಷ್ಟ್ ಮತ್ತು ಧೂಳು ರಗ್ಗುಗೆ ಹಿಡಿಯುವುದರಿಂದ ಅದನ್ನು ದೂರವಿಟ್ಟು, ಸ್ವಚ್ಛವಾಗಿರುವ ಹೊದಿಕೆಗಳನ್ನು ಬಳಸಬೇಕು. ಮಲಗುವ ಕೋಣೆಯಲ್ಲಿರುವ ಮಂಚದ ಹಾಸಿಗೆ, ದಿಂಬು, ಕುರ್ಚಿ, ಇನ್ನಿತರ ಪೀಠೋಪಕರಣಗಳಲ್ಲಿ ಧೂಳುಗಳು ಶೇಖರಣೆಯಾಗುತ್ತವೆ. ಹೀಗಾಗಿ ಇವುಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು.

ಬೆಕ್ಕು, ನಾಯಿಗಳನ್ನು ಜತೆಯಲ್ಲಿ ಮಲಗಿಸಿಕೊಳ್ಳುವುದು ಒಳ್ಳೆಯದಲ್ಲ. ಮಲಗುವ ಕೋಣೆಯಲ್ಲಿ ಧೂಮಪಾನ ಇನ್ನಿತರ ಹೊಗೆ ಬರದಂತೆ ನೋಡಿಕೊಳ್ಳಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ತೊಳೆಯಬೇಕು. ಮನೆಯಲ್ಲಿ ಕಸ ಗುಡಿಸುವುದು, ವ್ಯಾಕ್ಯೂಮ್ ಮಾಡುವುದು, ಧೂಳು ತೆಗೆಯುವುದು, ಪೇಯಿಂಟ್ ಮಾಡುವುದು, ಕೀಟಗಳಿಗೆ ಸ್ಪ್ರೇ ಮಾಡುವುದು, ಇನ್ನಿತರ ತೀಕ್ಷ್ಣ ಕಾರಕ ಆಹಾರ ಪದಾರ್ಥಗಳನ್ನು ಬೇಯಿಸುವುದು, ಒಗ್ಗರಣೆ ಹಾಕುವುದು ಮೊದಲಾದವುಗಳನ್ನು ಅಸ್ತಮಾ ಪೀಡಿತರು ಮಾಡಬಾರದು, ಪೀಡಿತರು ಮನೆಯಲ್ಲಿದ್ದಾಗಲೂ  ಮಾಡಬಾರದು. ಮೂರು ಬಾರಿ ಲಘು ಆಹಾರ ಸೇವಿಸುವುದು, ಹಣ್ಣು ಹಂಪಲುಗಳನ್ನು ಸೇವಿಸಬೇಕು.

ಇದನ್ನೂ ಓದಿ:  ಐವತ್ತರ ನಂತರದ ಬದುಕಿಗೆ ಮಹಿಳೆಯರು ಮಾನಸಿಕ-ದೈಹಿಕವಾಗಿ ತಯಾರಾಗುವುದು ಹೇಗೆ?

ಅಸ್ತಮಾ ಇರುವವರು ನಿರ್ಲಕ್ಷ್ಯ ತೋರಬಾರದು. ವೈದ್ಯರು ನೀಡಿದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಅಸ್ತಮಾವನ್ನು ನಿಯಂತ್ರಿಸುವ ಔಷಧಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು, ಧೂಮಪಾನ, ಅತಿಯಾದ ಆಹಾರಸೇವನೆ ಒಳ್ಳೆಯದಲ್ಲ. ಅಲರ್ಜಿ ಉಂಟು ಮಾಡುವ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು. ಹಾಲಿನ ಉತ್ಪನ್ನಗಳು, ಚಾಕೋಲೆಟ್, ರಿಫೈನ್ಡ್ ವೈಟ್ ಫ್ಲೋರ್, ಬ್ರೆಡ್, ಕೇಕ್, ಸಕ್ಕರೆ ಮುಂತಾದ ಆಹಾರ ಪದಾರ್ಥಗಳಿಂದ ದೂರವಿರಬೇಕು. ಹೆಣ್ಣು ಮಕ್ಕಳು ಸ್ನಾನದ ಬಳಿಕ ತೇವಯುಕ್ತ ಕೂದಲನ್ನು ಚೆನ್ನಾಗಿ ಟವೆಲ್‌ನಿಂದ ಒರೆಸಿ ತೇವ ತೆಗೆಯಬೇಕು. ಕೂದಲಿನಲ್ಲಿ ತೇವದ ಅಂಶ ನಿಲ್ಲದಂತೆ ನೋಡಿಕೊಳ್ಳಬೇಕು. ಇದೆಲ್ಲದರ ನಡುವೆ ವೈದ್ಯರ ಸೂಚನೆಯಂತೆ ಔಷಧಿಯನ್ನು ಸೇವಿಸಬೇಕೇ ವಿನಃ ಸ್ವಯಂ ಔಷಧೋಪಚಾರಕ್ಕೆ ಮುಂದಾಗಬಾರದು.

 

B M Lavakumar

admin
the authoradmin

Leave a Reply