Mysore

ಬ್ಯಾಂಕಿಂಗ್ ಹಾಗೂ ರೈಲ್ವೆ ನೇಮಕಾತಿ ಪರೀಕ್ಷೆಗೆ ತರಬೇತಿ… ಆಸಕ್ತರು ಅರ್ಜಿ ಸಲ್ಲಿಸಬಹುದು…

ಹಾಸನ: 2026-2027ನೇ ಸಾಲಿಗೆ 12 ರಾಷ್ರೀಕೃತ ಬ್ಯಾಂಕ್‌ ಗಳಿಂದ ಖಾಲಿ ಇರುವ ಒಟ್ಟು 22,281 ಕ್ಕೂ ಹೆಚ್ಚು ಬ್ಯಾಂಕಿಂಗ್ ಕ್ಲರಿಕಲ್ ಕೇಡರ್‌ ಹುದ್ದೆಗಳನ್ನು ಹೆಚ್ಚುವರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಜೊತೆಗೆ  ಕಪ್ಯೂಟರ್‌ ಜ್ಞಾನ  ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.

ರೈಲ್ವೆ ಇಲಾಖೆಯಲ್ಲಿ 8850 (ಎನ್.ಟಿ.ಪಿ.ಸಿ) ಕ್ಕೂ ಅಧಿಕ, ಟಿಕೆಟ್‌ ಮೇಲ್ವಿಚಾರಕರು, ಸ್ಟೇಷನ್‌ ಮಾಸ್ಟರ್‌, ಗೂಡ್ಸ್‌ & ಟ್ರೈನ್‌ ಮ್ಯಾನೇಜರ್, ಜೂನಿಯರ್‌ ಅಕೌಂಟೆಂಟ್‌,‌ ಟ್ರಾಫಿಕ್‌ ಅಸಿಸ್ಟೆಂಟ್‌, ಕ್ಲರ್ಕ್‌ ಕಮ್‌ ಟೈಪಿಸ್ಟ್‌ ಹೀಗೆ ಅನೇಕ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಅಧಿಸೂಚನೆ ಹೊರಡಿಸಲಾಗಿದೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ದಿ:27.11.2025 ಕೊನೆಯ ದಿನವಾಗಿದೆ.

ಮುಂಬರುವ ಎಲ್ಲಾ ಬ್ಯಾಂಕಿಂಗ್ ಮತ್ತು ಇನ್ಸೂರೆನ್ಸ್‌, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಮುಂತಾದ ನೇಮಕಾತಿ ಪರೀಕ್ಷೆಗಳ ತಯಾರಿಗಾಗಿ ಕೆ.ಎಸ್‌.ಎಫ್‌ ಅಕಾಡೆಮಿ ಕೃಷಿಕ್‌ ಸರ್ವೋದಯ ಫೌಂಡೇಶನ್‌(ರಿ) ಹಾಸನ ಶಾಖೆ (IAS,KAS,FDA,SDA,PSI – ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ) ಮೊದಲನೇ ಮಹಡಿ ಕೃಷಿಕ್‌ ಸರ್ವೋದಯ ಭವನ, ರೆಡ್‌ ಕ್ರಾಸ್‌ ಪಕ್ಕ, ಸಾಲಗಾಮೆ ರಸ್ತೆ, ಹಾಸನ-573202 ವತಿಯಿಂದ ನುರಿತ ವಿಷಯ ತಜ್ಞರಿಂದ ತರಬೇತಿ ನೀಡಲಾಗುತ್ತದೆ ಮತ್ತು ಶಾರ್ಟ್‌ ಕಟ್‌ ಟೆಕ್ನಿಕ್‌, ಸ್ಪೀಡ್‌ ಅಂಡ್‌ ಟೈಮ್‌ ಮ್ಯಾನೆಜ್‌ಮೆಂಟ್‌ ತಂತ್ರಗಾರಿಕೆಯ ಮೂಲಕ ಸರಳವಾಗಿ ಹೇಳಿಕೊಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಕಛೇರಿ ವೇಳೆಯಲ್ಲಿ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಹಾಗೂ ದೂರವಾಣಿ, ವಾಟ್ಸಾಪ್ ಮೂಲಕ ಕೆ.ಎಸ್.ಎಫ್‌ ಅಕಾಡೆಮಿ ಹಾಸನ ಶಾಖೆಯ ಶೈಕ್ಷಣಿಕ ಸಂಯೋಜಕರಾದ ಶ್ರೀ.ಪ್ರಜ್ವಲ್:-ಮೊ:8792459334 ರವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want