Latest

25-11-2025 ಮಂಗಳವಾರದ ವಿಶೇಷತೆಗಳೇನು? ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?

ಜೈ ಶ್ರೀ ಗುರುದೇವ್  ಶ್ರೀ ಶಿವಗಿರಿಕ್ಷೇತ್ರ ಶಿವಾಲ್ದಪ್ಪನ ಬೆಟ್ಟ

ಸಂವತ್ಸರ: ವಿಶ್ವಾವಸು. SAMVATSARA : VISHWAVASU, ಆಯಣ: ದಕ್ಷಿಣಾಯನ. AYANA: DAKSHINAYANA, ಋತು: ಹೇಮಂತ. RUTHU: HEMANT, ಮಾಸ: ಮಾರ್ಗಶಿರ. MAASA: MARGASHIRA, ಪಕ್ಷ: ಶುಕ್ಲ. PAKSHA: SHUKLA, ತಿಥಿ: ಪಂಚಮಿ TITHI: PANCHAMI, ಶ್ರದ್ಧಾತಿಥಿ: ಪಂಚಮಿ. SHRADDHA  TITHI: PANCHAMI. ವಾಸರ: ಬೌಮವಾಸರ. VAASARA: BOWMAVAASARA, ನಕ್ಷತ್ರ: ಉತ್ತರಾಷಾಡ. NAKSHATRA: UTTARAASHADA. ಯೋಗ: ಗಂಡ. YOGA: GANDA. ಕರಣ: ಬಾಲವ. KARANA:  BALAVA. ಸೂರ್ಯೋದಯ(Sunrise): 06:36 ಸೂರ್ಯಾಸ್ತ(Sunset): 05:51 ರಾಹುಕಾಲ(RAHU KAALA) : 03:00PM To 04:30PM. 25-11-2025

ಇವತ್ತಿನ ನಿಮ್ಮ ರಾಶಿ ಭವಿಷ್ಯದ ಫಲಾಫಲಗಳು…

ಮೇಷ ರಾಶಿ

ಸ್ವಲ್ಪ ಅನಾರೋಗ್ಯದ ಸೂಚನೆಗಳಿವೆ. ವಿವಾದಗಳಿಂದ ದೂರವಿರುವುದು ಒಳ್ಳೆಯದು. ವೃತ್ತಿಯಲ್ಲಿ ಅಡೆತಡೆಗಳು  ಹೆಚ್ಚಾಗುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸಭಾರ ಇರುತ್ತದೆ. ನಿರುದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯವುದಿಲ್ಲ. ಆರ್ಥಿಕವಾಗಿ ನಿರೀಕ್ಷಿತ ಫಲಿತಾಂಶಗಳು ಇರುತ್ತವೆ.

ವೃಷಭ ರಾಶಿ.

ಮನೆಯಲ್ಲಿ ಶುಭಕಾರ್ಯಗಳನ್ನು ನಿರ್ವಹಿಸುತ್ತೀರಿ. ಹಳೆಯ ಮಿತ್ರರು ಆಗಮನ ಸಂತಸವನ್ನುಂಟು ಮಾಡುತ್ತದೆ. ಆಸ್ತಿ ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಮಾಡಿಕೊಳ್ಳುತ್ತೀರಿ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವೃತ್ತಿ ವ್ಯಾಪಾರಗಳು ಲಾಭದಾಯಕವಾಗಿ  ಸಾಗುತ್ತವೆ. ಉದ್ಯೋಗದಲ್ಲಿರುವವರಿಗೆ  ಸಂಬಳದ ವಿಷಯದಲ್ಲಿ ಶುಭವಾರ್ತೆಗಳು ದೊರೆಯುತ್ತವೆ.

ಮಿಥುನ ರಾಶಿ.

ಉದ್ಯೋಗ ರಂಗದಲ್ಲಿ  ನಿಮ್ಮ ಕಾರ್ಯವೈಖರಿಗೆ ಪ್ರಶಂಸೆಗಳನ್ನು ಪಡೆಯುತ್ತೀರಿ. ಸಂಬಳದ ವಿಷಯದಲ್ಲಿ ಶುಭವಾರ್ತೆಗಳು ದೊರೆಯುತ್ತವೆ.  ಸಹೋದರರೊಂದಿಗೆ ವಿವಾದಗಳು ಉಂಟಾಗುತ್ತವೆ. ಕುಟುಂಬ ಸದಸ್ಯರ ನಡವಳಿಕೆಯು ಆಶ್ಚರ್ಯವನ್ನುಂಟು ಮಾಡುತ್ತದೆ. ವೃತ್ತಿ ವ್ಯಾಪಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.

ಕಟಕ ರಾಶಿ.

ವ್ಯಾಪಾರಗಳಲ್ಲಿ ನಿರುತ್ಸಾಹ ಕಾಣಿಸಿಕೊಳ್ಳುತ್ತವೆ. ಕೈಗೊಂಡ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ . ದೂರ ಪ್ರಯಾಣವನ್ನು ಮುಂದೂಡುತ್ತೀರಿ. ಕುಟುಂಬ ವ್ಯವಹಾರದಲ್ಲಿ ಆತುರದಲ್ಲಿ  ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲಿ.  ಉದ್ಯೋಗದದಲ್ಲಿ ಕಾರ್ಯಗಳು ನಿಧಾನವಾಗಿ ಸಾಗುತ್ತಿರುತ್ತದೆ. ಆರ್ಥಿಕವಾಗಿ ವಾತಾವರಣ ಋಣಾತ್ಮಕವಾಗಿರುತ್ತದೆ.

ಸಿಂಹ ರಾಶಿ.

ಹೊಸ ಸಾಲದ ಪ್ರಯತ್ನಗಳನ್ನು ಮಾಡುತ್ತೀರಿ. ಆತ್ಮೀಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ . ಖರ್ಚು ವೆಚ್ಚದ ವಿಷಯದಲ್ಲಿ ಎಚ್ಚರಿಕೆ ಇರಲಿ. ಕುಟುಂಬ ಸದಸ್ಯರ ನಡವಳಿಕೆಯು ಆತಂಕವನ್ನು ಉಂಟು ಮಾಡುತ್ತದೆ. ವ್ಯಾಪಾರಸ್ಥರಿಗೆ ಆಲೋಚನೆಯಲ್ಲಿ ಸ್ಥಿರತೆ ಇರುವುದಿಲ್ಲ. ವೃತ್ತಿ ಉದ್ಯೋಗಗಳಲ್ಲಿ ಜವಾಬ್ದಾರಿ ಹೆಚ್ಚಾಗಿ, ಸಾಕಷ್ಟು ವಿಶ್ರಾಂತಿ  ದೊರೆಯುವುದಿಲ್ಲ. ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.

ಕನ್ಯಾ ರಾಶಿ.

ಯೋಜಿತ ಕೆಲಸಗಳು ಯೋಜಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರಖ್ಯಾತಿ  ಹೆಚ್ಚಾಗುತ್ತದೆ. ಆಕಸ್ಮಿಕ ಧನಲಾಭ ಉಂಟಾಗುತ್ತದೆ.ವ್ಯಾಪಾರಕ್ಕೆ ಹೊಸ ಹೂಡಿಕೆಗಳು ದೊರೆಯುತ್ತವೆ.  ವೃತ್ತಿ ಉದ್ಯೋಗಗಳಲ್ಲಿ ಕೆಲಸ ಒತ್ತಡದಿಂದ ಪರಿಹಾರ ದೊರೆಯುತ್ತದೆ. ದೀರ್ಘ ಕಾಲಿದ ಸಾಲದ ಒತ್ತಡದಿಂದ ಹೊರಬರುತ್ತೀರಿ.

ತುಲಾ ರಾಶಿ.

ಕುಟುಂಬ ಸದಸ್ಯರ ಆರೋಗ್ಯ ವಿಚಾರದಲ್ಲಿ  ವೈದ್ಯಕೀಯ ಸಮಾಲೋಚನೆ ಅಗತ್ಯ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಲಾಭ ಗಳಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಉದ್ಯೋಗ ವಿಚಾರಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

ವೃಶ್ಚಿಕ ರಾಶಿ.

ಆದಾಯ ಹೆಚ್ಚು ತೃಪ್ತಿ ತರುತ್ತದೆ. ಮನೆಯ ಹೊರಗೆ ವಾತವರಣ ಅನುಕೂಲಕರವಾಗಿರುತ್ತದೆ. ಆಪ್ತ ಸ್ನೇಹಿತರ ನೆರವಿನಿಂದ ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಸ್ವೀಕರಿಸಲಾಗುತ್ತದೆ. ಉದ್ಯೋಗದಲ್ಲಿ ಶ್ರಮ ಹೆಚ್ಚಾದರೂ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ.

ಧನುಸ್ಸು ರಾಶಿ.

ಸಹೋದರರೊಂದಿಗೆ ಸ್ಥಿರಾಸ್ತಿ  ವಿವಾದ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ಆಶಾದಾಯಕವಾಗಿರುವುದಿಲ್ಲ. ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆಧ್ಯಾತ್ಮಿಕ ಸೇವೆಗಳಿಗೆ ನೆರವು ನೀಡಲಾಗುತ್ತವೆ. ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ.

ಮಕರ ರಾಶಿ.

ಪ್ರಮುಖ ಕಾರ್ಯಗಳಲ್ಲಿ ಅಚಲ ಪ್ರಯತ್ನದಿಂದ ಕಾರ್ಯ ಸಿದ್ಧಿ ಉಂಟಾಗುತ್ತದೆ. ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ವೃತ್ತಿಪರ ವ್ಯವಹಾರಗಳು ಮತ್ತಷ್ಟುಅಭಿವೃದ್ಧಿ ಹೊಂದುತ್ತದೆ. ಹಣಕಾಸಿನ ವ್ಯವಹಾರಗಳು ಹೆಚ್ಚು ಸಮೃದ್ಧವಾಗಿರುತ್ತದೆ. ಅಧಿಕಾರಿಗಳ ಬೆಂಬಲದಿಂದ ಉದ್ಯೋಗಿಗಳಿಗೆ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ.

ಕುಂಭ ರಾಶಿ.

ವೃತ್ತಿಪರ ಉದ್ಯೋಗಗಳಲ್ಲಿ  ನಿರೀಕ್ಷೆಗಳು ನಿಜವಾಗುತ್ತವೆ. ಬಾಲ್ಯದ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಭೂ ವಿವಾದಗಳು ಇತ್ಯರ್ಥದತ್ತ  ಸಾಗುತ್ತದೆ. ವ್ಯಾಪಾರಗಳಲ್ಲಿ  ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಅವಕಾಶಗಳು ಅಪ್ರಯತ್ನವಾಗಿ ದೊರೆಯುತ್ತವೆ.

ಮೀನ ರಾಶಿ.

ಪ್ರಮುಖ ವ್ಯವಹಾರಗಳು ಮುಂದೂಡಲ್ಪಡುತ್ತವೆ. ಬಂಧು ಮಿತ್ರರಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡಿ ನಷ್ಟ ಎದುರಿಸುತ್ತೀರಿ. ಉದ್ಯೋಗಿಗಳಿಗೆ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳಿರುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತವೆ.

admin
the authoradmin

Leave a Reply