janamanakannada > Blog > District > ಚಿತ್ರ ಸುದ್ದಿಗಳ ಗುಚ್ಚ.. ವಾಲ್ಮೀಕಿ ಸಭಾಂಗಣ ಉದ್ಘಾಟನೆ… ಅಂಬೇಡ್ಕರ್ ವಿಚಾರಧಾರೆ ಮಹಾ ಕೃತಿ ಬಿಡುಗಡೆ
ಚಿತ್ರ ಸುದ್ದಿಗಳ ಗುಚ್ಚ.. ವಾಲ್ಮೀಕಿ ಸಭಾಂಗಣ ಉದ್ಘಾಟನೆ… ಅಂಬೇಡ್ಕರ್ ವಿಚಾರಧಾರೆ ಮಹಾ ಕೃತಿ ಬಿಡುಗಡೆ
adminDecember 1, 2025

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಿರ್ಮಿಸಲಾಗಿರುವ ಶ್ರೀ ವಾಲ್ಮೀಕಿ ಸಭಾಂಗಣ ಉದ್ಘಾಟನೆ ಅದ್ಧೂರಿಯಾಗಿ ನೆರವೇರಿತು. ಹಲವು ಗಣ್ಯರು, ಸಮುದಾಯದ ಮುಖಂಡರು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಲು ಸೂಕ್ತ ಸ್ಥಳದ ಕುರಿತಂತೆ ಮುಖಂಡರೊಂದಿಗೆ ಚರ್ಚೆ ನಡೆಸಲಾಯಿತು. ಈ ಸಂಬಂಧ ನಡೆದ ಸಭೆಯಲ್ಲಿ ಹಲವು ಮುಖಂಡರು ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಅಂಬೇಡ್ಕರ್ ವಿಚಾರಧಾರೆ ಮಹಾ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಸಾಹಿತಿ ಪೂರಿಗಾಲಿ ಮರಡೇಶ ಮೂರ್ತಿ ಮತ್ತು ಹೊರೆಯಲ ಗ್ರಾಮದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Tags:News
admin







