ಕೆಂಚನಹಳ್ಳಿಯಲ್ಲಿ ದಲಿತ ಕುಟುಂಬಗಳು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯ.. ಸಂಸದರು, ಶಾಸಕರು ನೀಡಿದ ಭರವಸೆಗಳೇನು?
oppo_0ಸರಗೂರು : ಕೆಂಚನಹಳ್ಳಿ ಗ್ರಾಮದಲ್ಲಿ ಕಳೆದ ಸುಮಾರು ದಿನಗಳಿಂದ ಪುನರ್ ವಸತಿ ದಲಿತ ಕುಟುಂಬದವರು ತಮಗೆ ಸಿಗಬೇಕಾಗಿರುವ ಜಮೀನು ಮತ್ತು ಸಾಗುವಳಿ ಪತ್ರವನ್ನು ನೀಡುವಂತೆ ಆಗ್ರಹಿಸಿ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸಂಸದರಾದ ಸುನಿಲ್ ಬೋಸ್ ಹಾಗೂ ಶಾಸಕರಾದ ಅನಿಲ್ ಚಿಕ್ಕಮಾದು ಅವರುಗಳು ಭೇಟಿ ನೀಡಿ ಅಸಿಸ್ಟೆಂಟ್ ಕಮಿಷನರ್, ತಹಶೀಲ್ದಾರ್ ಸಮ್ಮುಖದಲ್ಲಿ ಪ್ರತಿಭಟನಾಕಾರರನ್ನು ಮನವೊಲಿಸಿದ ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಖಂಡರಾದ ಪುಟ್ಟಸ್ವಾಮಿ ಮಾತನಾಡಿ 30 ವರ್ಷಗಳಿಂದ ಪುನರ್ ವಸತಿಯ ಹಕ್ಕಿಗಾಗಿ 200 ಕುಟುಂಬಗಳು ಹೋರಾಟ ಮಾಡುತ್ತಾ ಬಂದಿದ್ದು, ಪ್ರಮುಖ ದಾಖಲಾತಿಗಳು ಸರ್ಕಾರಕ್ಕೆ ಹೋಗಿದ್ದರು ನಮಗೆ ಜಮೀನು ಕೊಡಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಳಜಿ ವಹಿಸಿಲ್ಲ ಈ ಸಂಬಂಧ ಹಿಂದೆ ಇದಕ್ಕೆಲ್ಲಾ ಡಿಸಿಯವರೆ ಅನುಮತಿ ಕೊಡುತ್ತಿದ್ದರು, ಈ ಹಿಂದೆ ಇದಕ್ಕೆಲ್ಲ ಅವರೇ ಅಧ್ಯಕ್ಷರಾಗಿದ್ದರು. ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ ಈ ಹಿಂದೆ ಇಲ್ಲಿಗೆ ವಲಸೆ ಬಂದು ಇಲ್ಲೇ ಇದ್ದರು ಸಹ ಇವರಿಗೆ ಭೂಮಿ ಸಿಕ್ಕಿಲ್ಲ ಎಂದರು.
ಸಂಸದ ಸುನಿಲ್ ಭೋಸ್ ರವರು ಅಧಿಕಾರಿಗಳ ಜೊತೆ ಮಾತನಾಡಿ ಚರ್ಚಿಸಲಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮಲ್ಲಿರುವ ದಾಖಲಾತಿ ಪ್ರಕಾರ ಎಲ್ಲಾ ಜಮೀನುಗಳನ್ನು ಪಲಾನುಭವಿಗಳಿಗೆ ನೀಡಿದ್ದೇವೆ ಎಂದರು. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಲಾಗಿ ಕೆಂಚನಳ್ಳಿ ಸರ್ವೆ ನಂಬರ್ 1ರಲ್ಲಿ 840 ಎಕರೆ ಬಿಟ್ಟುಕೊಟ್ಟಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ, ಆದರೆ ಆಕಾರ ಬಂದು ಆರ್ ಟಿ ಸಿ ಪ್ರಕಾರ ಒಟ್ಟು 955 ಎಕರೆ ಜಮೀನು ಇದೆ. ಅವರ ಪ್ರಕಾರ 840 ಎಕರೆಯಲ್ಲಿ 533 ಎಕರೆ ನೀಡಿದ್ದಾರೆ, ಇನ್ನು 307 ಎಕರೆಯನ್ನು ಅರಣ್ಯ ಇಲಾಖೆಯವರು ನಮಗೆ ಬಿಟ್ಟು ಕೊಡಬೇಕೆಂದು ಎಂದು ತಿಳಿಸಿದರು. ಈ ಸಂಬಂಧ ಕಂದಾಯ ಇಲಾಖೆಯವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುನಿಲ್ ಬೋಸ್ ರವರು ಕಂದಾಯ ಇಲಾಖೆಯವರಿಗೆ ಈ ತನಕ ನೀವು ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಶಾಸಕರು ಮಾತನಾಡಿ ಕಬಿನಿ ಅಣೆಕಟ್ಟು ನಿರ್ಮಾಣದ ವೇಳೆ ಮನೆ-ಜಮೀನು ಕಳೆದುಕೊಂಡ ಕೆಂಚನಹಳ್ಳಿ ಗ್ರಾಮದ ನಿರಾಶ್ರಿತರಿಗೆ ಸರ್ವೇ ನಂ.1 ರಲ್ಲಿ ಒಟ್ಟು 200 ಕುಟುಂಬಗಳಿಗೆ ಒಟ್ಟು 840 ಎಕರೆ ಜಮೀನು ಬಿಡುಗಡೆಗೊಂಡಿದ್ದು,ಅದರಲ್ಲಿ 495 ಎಕರೆ ಜಮೀನು ಈಗಾಗಲೇ ಅರ್ಹ ಫಲಾನುಭವಿಗಳಿಗೆ ಹಂಚಿಕೆಯಾಗಿದೆ. ಉಳಿದ ಸುಮಾರು 345 ಎಕರೆ ಜಮೀನು ಕಂದಾಯ ಇಲಾಖೆಗೆ ಸೇರಿದ ಕಾರಣ ಈ ಸಮಸ್ಯೆಯು ಬಗೆ ಹರಿದಿಲ್ಲ. ಈ ವಿಷಯವನ್ನು ನಾನು ಈಗಾಗಲೇ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ ಮತ್ತು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮಿತಿ ಸಭೆಯಲ್ಲಿಯೂ ಇದರ ಬಗ್ಗೆ ಚರ್ಚೆ ಮಾಡಿದ್ದು.ಸರ್ಕಾರ ಮಟ್ಟದಲ್ಲಿ ಚರ್ಚೆಯಲ್ಲಿದ್ದು ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿದೆ.

ಕಂದಾಯ ಸಚಿವರು, ಅರಣ್ಯ ಇಲಾಖೆ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದು,ಸ್ಥಳದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಸೂಚನೆ ನೀಡಿದರು. ಸಂಸದರಾದ ಸುನೀಲ್ ಬೋಸ್ ಅವರು ದೂರವಾಣಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತಮ್ಮ ಇಲಾಖೆಯ ಕಟ್ಟುಪಾಡುಗಳು ಏನೇ ಇರಲಿ,ಆದಷ್ಟು ಬೇಗ ಈ ಪ್ರತಿಭಟನಾಕಾರರಿಗೆ ನ್ಯಾಯ ಸಿಗಬೇಕು ಎಂದು ಸೂಚನೆ ನೀಡಿದರು.
ಈ ಸಂಬಂಧ ಬಂಡಿಪುರ ಅರಣ್ಯಅಧಿಕಾರಿ ಸಿಎಫ್ ಪ್ರಭಾಕರ್ ರವರನ್ನು ನಿಮ್ಮ ಇಲಾಖೆಯ ಅಭಿಪ್ರಾಯ ತಿಳಿಸಿ ಎಂದು ಹೇಳಿದಾಗ, ಸಂಸದರು ಹಾಗೂ ಶಾಸಕರ ಇವರ ಕರೆಗೆ ಓ ಗೊಟ್ಟು ,ಪ್ರತಿಭಟನೆಯನ್ನು ನಿಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ತಾಲೂಕಿನ ಕಾಂಗ್ರೆಸ್ ಮಹಿಳಾಧ್ಯಕ್ಷೆ ಸೌಮ್ಯ ಮಂಜುನಾಥ್ ಹಣ್ಣು, ಹಂಪಲು ವಿತರಿಸಿದರು. ತಹಶೀಲ್ದಾರ್ ಶ್ರೀನಿವಾಸ್, ಮಂಜುನಾಥ್, ಎಸಿಎಫ್ ಪರಮೇಶ್, ವಲಯ ಅರಣ್ಯ ಅಧಿಕಾರಿಗಳು, ಪೊಲೀಸ್ ಉಪ ನಿರೀಕ್ಷಕರುಗಳು, ಗ್ರಾಮದ ಮುಖಂಡರಾದ ಪುಟ್ಟಸ್ವಾಮಿ, ಭಾಗ್ಯಲಕ್ಷ್ಮಿ ಲಿಂಗರಾಜು, ಸಿದ್ದಯ್ಯ, ಎಚ್.ಸಿ ನರಸಿಂಹಮೂರ್ತಿ, ಕೋಟೆ ಮಹಾಸಭಾಧ್ಯಕ್ಷ ಹೈರಿಗೆ ಶಿವರಾಜು, ವಕೀಲ ಶಿವರಾಜು, ವಕೀಲ ಜವರಯ್ಯ, ಬಿ.ಡಿ.ಮುಂಟಿ ವೇಣು, ನಾಗರಾಜು, ಜೀವಿಕ ಬಸವರಾಜು, ಗ್ರಾಮೀಣ ಮಹೇಶ್.

ಮಲಾರ ಅಂಕಯ್ಯ, ನಾಗರಾಜು, ಅಶೋಕ್, ಮಣಿಕಂಠರಾಜ್,ಭೀಮನಹಳ್ಳಿ ಸೋಮೇಶ್, ಎನ್. ಬೇಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಳಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ಗ್ರಾಮೀಣ ಬಸವರಾಜು, ವಿಜಯ್, ವೇಣುಗೋಪಾಲ, ಶಿವಣ್ಣ, ಗುರುಸ್ವಾಮಿ,ಮಹಾದೇವಸ್ವಾಮಿ, ಚೆನ್ನಿಪುರ ನಾಗರಾಜು, ಮಲ್ಲಿಕಾರ್ಜುನ,ಶಾಂತರಾಜು, ರಾಜೀವ್, ಶಂಕರ್, ಇಂದ್ರ, ನಾಗರಾಜು, ದೇವಯ್ಯ, ಕೆ ಎಂ ಲೋಕೇಶ್,ಇಂಜಿನಿಯರ್ ಕೆ.ಎಂ.ಲೋಕೇಶ್, ಸಣ್ಣಪ್ಪ, ಶಿವಬಸಪ್ಪ, ಮುಖಂಡರಾದ ಕೋಟೆ ಮಂಜುನಾಥ್, ವೆಂಕಟಸ್ವಾಮಿ, ಸೂರ್ಯ, ಗಣೇಶಚಾರ್, ಸಮೀರ್, ಕುಮಾರ, ರಾಮರಾಜು, ವನಸಿರಿ ಶಂಕರ್, ಇಮ್ರಾನ್, ಶಂಕರ್ ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಅವರು ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.








