District

ಬೀದಿನಾಯಿ ನಿಯಂತ್ರಣ, ಖಾಲಿ ನಿವೇಶನ ಸ್ವಚ್ಛ ಮಾಡುವಂತೆ ಡಿಸಿ, ಆಯುಕ್ತರಿಗೆ ಇನ್ನರ್ ವ್ಹೀಲ್ ಮನವಿ

ತುಮಕೂರು: ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ಹಾಗೂ ಖಾಲಿ ನಿವೇಶನಗಳ ಕಸ ತೆರವು ಮಾಡಬೇಕು ಎಂದು ಇನ್ನರ್ ವ್ಹೀಲ್ ಸಂಸ್ಥೆ ಮುಖಂಡರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹಾಗೂ ನಗರಪಾಲಿಕೆ ಪ್ರಭಾರ ಆಯುಕ್ತ ಯೋಗಾನಂದ್ ಅವರಿಗೆ ಮನವಿ ಸಲ್ಲಿಸಿದರು.

ಇನ್ನರ್  ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ ಲೋಕೇಶ್, ಕಾರ್ಯದರ್ಶಿ ಸುಮಿತ್ರಾ ನಾಗರಾಜ್, ಖಜಾಂಚಿ ವೀಣಾ ಅವರು ಮನವಿ ಪತ್ರ ಸಲ್ಲಿಸಿ ಮಾತನಾಡಿ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ನಾಯಿಗಳು ಮಕ್ಕಳು, ವೃದ್ಧರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಎಲ್ಲಾ ರಸ್ತೆಗಳಲ್ಲೂ ಬೀದಿನಾಯಿಗಳ ಉಪಟಳದಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿ ಅಪಘಾತಗಳಾಗುತ್ತಿವೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.

ನಗರದ ಖಾಲಿ ನಿವೇಶನಗಳು ಗಿಡಗಂಟಿ, ಕಸದಿಂದ ತುಂಬಿಹೋಗಿವೆ. ಕಸ ಸುರಿಯುವವರೂ ಹೆಚ್ಚಾಗಿದ್ದಾರೆ. ಇದರಿಂದ ಹಂದಿ, ನಾಯಿಗಳ ಹಾವಳಿ, ವಿಷಜಂತುಗಳ ಭೀತಿ ಎದುರಾಗಿದೆ. ರೋಗರುಜಿನ ಹರಡುತ್ತವೆ. ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ನಿವೇಶನ ಮಾಲೀಕರಿಗೆ ಸೂಚನೆ ನೀಡಬೇಕು ಇಲ್ಲವೆ, ನಗರಪಾಲಿಕೆಯಿಂದಲೇ ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

admin
the authoradmin

Leave a Reply