ಮೈಸೂರು: ಶಾಲಾ ಶಿಕ್ಷಣ ಇಲಾಖೆ(ಕರ್ನಾಟಕ) ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ2025-26ರ ವಿವಿಧ ಓಟದ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಮೈಸೂರಿನ ಅಜಯ್ ಪೃಥ್ವಿರಾಜ್ ಎಂ.ಎಲ್ ಜಯಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆಗೈದಿದ್ದಾನೆ.

14ರಿಂದ 17 ವರ್ಷ ವಯೋಮಿತಿಯ 400ಮೀಟರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆ ದಿದ್ದು, 800ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು, ಪಾರಿತೋಷಕ ಮತ್ತು ಬಹುಮಾನವನ್ನು ತನ್ನ ದಾಗಿಸಿಕೊಂಡಿದ್ದಾನೆ. ಇದರಲ್ಲಿ 400 ಮಿಟರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಪೋಷಕರಿಗೂ ಹಾಗೂ ತಾನು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಗೂ ಕೀರ್ತಿ ತಂದಿದ್ದಾನೆ.

ಈ ಹಿಂದೆಯೂ ಹಲವಾರು ಸ್ಪರ್ಧೆಗಳಲ್ಲಿ ಅಜಯ್ ಪೃಥ್ವಿ ರಾಜ್ ಉತ್ತಮ ಪ್ರದರ್ಶನ ತೋರಿ ಪ್ರಥಮ ಸ್ಥಾನ ಗಳಿಸಿ ವಿಜೇತನಾಗಿದ್ದಾನೆ. ಈತ ಮೈಸೂರಿನ ಐಡಿಎಲ್ ಜಾವಾ ರೊಟರಿ ಶಾಲೆಯ ವಿದ್ಯಾರ್ಥಿ ಹಾಗೂ ನಗರದ ಎಂ.ಎಲ್.ರಾಜು (ರಾಜ್ ಬ್ಯಾಗ್ಸ್) ಮತ್ತು ಸಂಗೀತ ದಂಪತಿ ಪುತ್ರ.








