CinemaLatest

ಬಹುಭಾಷಾ ಚಿತ್ರಗಳಲ್ಲಿ ಮಿಂಚಿದ ಹಿರಿಯ ಕಲಾವಿದೆ ಜಮುನಾ… ಇವರು ಸಿನಿಮಾ ನಟಿಯಾಗಿದ್ದು ಹೇಗೆ?

ಹಿಂದಿನ ಕಾಲದ ಸಿನಿಮಾ ನಟಿಯರ ಬದುಕನ್ನು ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ. ಅವರೆಲ್ಲರೂ ತಮ್ಮ ಅಭಿನಯನದಿಂದಲೇ ಭಾಷೆಯ ಗಡಿದಾಟಿ ಎಲ್ಲ ಭಾಷೆಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದನ್ನು ಕಾಣಬಹುದಾಗಿದೆ. ಬಹುತೇಕ ನಟಿಯರು ಕನ್ನಡನಾಡಲ್ಲಿ ಹುಟ್ಟಿ ತದ ನಂತರ ಇತರೆ ರಾಜ್ಯಗಳಿಗೆ ತೆರಳಿ ಅಲ್ಲಿ ಪ್ರಖ್ಯಾತರಾಗಿದ್ದು, ಕನ್ನಡ ಸಿನಿಮಾರಂಗಕ್ಕೂ ಕೊಡುಗೆ ನೀಡಿದ್ದಾರೆ. ಇಂತಹ ನಟಿಯರ ಬಗ್ಗೆ ತಿಳಿಯುತ್ತಾ ಹೋದಾಗ ಹೆಮ್ಮೆ ಎನಿಸುತ್ತದೆ.. ಈ ಬಾರಿ ಹಿರಿಯ ನಟಿ ಜಮುನಾ ಅವರ ಬಗ್ಗೆ ಒಂದಷ್ಟು ಮಾಹಿತಿಯನ್ನು ಬರಹಗಾರರಾದ ಕುಮಾರಕವಿ ನಟರಾಜ್ ಅವರು ನೀಡಿದ್ದಾರೆ.

ಅಂದಿನ  ಬ್ರಿಟಿಷ್ ಆಡಳಿತವಿದ್ದ ಭಾರತದ  ಮದ್ರಾಸ್ ಪ್ರೆಸಿಡೆನ್ಸಿ ಇಂದಿನ ಕರ್ನಾಟಕದ ಬಳ್ಳಾರಿಯ ಹಂಪಿಯಲ್ಲಿ ಮಧ್ಯಮ ವರ್ಗದ ಉತ್ತಮ ಕುಟುಂಬದಲ್ಲಿ  30.8.1936 ರಂದು ಜಮುನಾ  ಜನಿಸಿದರು. ಆಗಿನ ಕಾಲಕ್ಕೆ ಬಹಳ ಅಪರೂಪ ಎನಿಸಿದ ಅಂತರ್ ಜಾತಿ ದಂಪತಿಯ ಆದರ್ಶ ಪುತ್ರಿಯಾಗಿ ಹುಟ್ಟಿಬೆಳೆದ ಈ ನಟಿಯ ಮೂಲ ಹೆಸರು ಜನಾಬಾಯಿ! ಇವರ ತಂದೆ ನಿಪ್ಪಾಣಿಯ ಶ್ರೀನಿವಾಸರಾವ್ ಮಾಧ್ವ ಬ್ರಾಹ್ಮಣ ಅಚ್ಚ ಕನ್ನಡಿಗ! ತಾಯಿ ಕೌಸಲ್ಯಾ ದೇವಿ ವೈಶ್ಯ ಮತದ ತೆಲುಗು ವಾಳ್ಳು. ಹೀಗಾಗಿ ಈಕೆಯ ಮಾತೃಭಾಷೆ ತೆಲುಗು ಮತ್ತು ಪಿತೃಭಾಷೆ ಕನ್ನಡ! ಈ ಕಾರಣಕ್ಕೇನೋ ಇವರು ತೆಲುಗು-ಕನ್ನಡ ಎರಡೂ ಭಾಷೆಯಲ್ಲಿ ಪಾಂಡಿತ್ಯ ಪಡೆದರು. ಚಿತ್ರರಂಗಕ್ಕೆ ಆಗಮಿಸಿದ ಬಳಿಕ ಜಮುನಾ ಎಂದು ಪುನರ್ ನಾಮಕರಣ ಗೊಂಡ ಪಕ್ಕಾ ತೆಲುಗು ಕನ್ನಡತಿ!

ಬಾಲ್ಯದಿಂದಲೂ ಮೃದು ಸ್ವಭಾವದ ಮಿತ ಭಾಷಿ. ಕುಟುಂಬ ಸದಸ್ಯರನ್ನೆ ಬಹುವಾಗಿ ಹಚ್ಚಿಕೊಂಡಿದ್ದ ರಿಸರ್ವ್ರ್ಡ ನೇಚರ್ ಬಾಲಕಿ. ವಿದ್ಯಾರ್ಥಿ ಜೀವನದಲ್ಲಿ ಪಠ್ಯ, ಪಠ್ಯೇತರ ಚಟುವಟಿಗೆ ಎರಡರಲ್ಲೂ ಹೊಗಳುವಷ್ಟು ಚೂಟಿ ಏನಾಗಿರಲಿಲ್ಲ. ಆದರೆ ಯಾವಾಗಲು ಯಾರನ್ನು ಪೂರ್ಣವಾಗಿ ಅವಲಂಬಿಸೊ ಜಾಯಮಾನದ ಹುಡುಗಿಯೂ ಆಗಿರಲಿಲ್ಲ. ಜಮುನ 7ವರ್ಷದ ಕಂದನಿರುವಾಗ ತಂದೆಯ ವ್ಯಾಪಾರ ನಿಮಿತ್ತ ಇಡೀ ಕುಟುಂಬ ಆಂಧ್ರದ ಗುಂಟೂರು ಜಿಲ್ಲೆ ದುಗ್ಗಿರಾಲ ಗ್ರಾಮಕ್ಕೆ ತೆರಳ ಬೇಕಾಯಿತು. ಇದೇ ಗ್ರಾಮದಲ್ಲಿ ಅಂದಿನ ಖ್ಯಾತ ನಟಿ ಸಾವಿತ್ರಿಯವರು ಒಂದು ನಾಟಕ ಪ್ರದರ್ಶನ ಕಾರ್ಯಕ್ರಮದ ಸಲುವಾಗಿ ಇವರ ಮನೆಯಲ್ಲೆ ತಂಗಿದ್ದರು. ಆಗ ಸಾವಿತ್ರಿಯವರ ದೃಷ್ಟಿ ಜಮುನಾರವರ ಮೇಲೆ ಬಿದ್ದು ಅದೃಷ್ಟ ಖುಲಾಯಿಸಿತು. ಕ್ರಮೇಣ ಮದ್ರಾಸಿಗೆ ತೆರಳಿ ನಾಟಕ ಮತ್ತು ಸಿನಿಮಾ ಕಲಾವಿದೆ ಅದರು.

ಈ ಚಿತ್ರಗಳಲ್ಲಿ ಅಡಗಿರುವ ವಿಷ್ಣುವರ್ಧನ್ ನಟಿಸಿರುವ ನಾಲ್ಕು ಸಿನಿಮಾದ ಹೆಸರುಗಳನ್ನು ಊಹಿಸಿ…

ವಿದ್ಯಾರ್ಥಿನಿ ಆಗಿದ್ದಾಗಲೇ ಇವರ ತಾಯಿಯ ಪ್ರೋತ್ಸಾಹದಿಂದ ಹಾರ್ಮೋನಿಯಂ ನುಡಿಸುವುದರಲ್ಲಿ ಮತ್ತು ಹಾಡುಗಾರಿಕೆಯಲ್ಲಿ ಮಾರ್ಗದರ್ಶನ ಪಡೆದರು. ತಮ್ಮ ಮಗಳು ಉತ್ತಮ ಸರ್ಕಾರಿ ಅಧಿಕಾರಿ ಆಗಬೇಕೆಂದು ಈಕೆಯ ಪೋಷಕರು ಬಯಸಿದ್ದರು. ಆದರೆ ನೃತ್ಯ ಹಾಡುಗಾರಿಕೆ ವಾದ್ಯಸಂಗೀತ ಹಾಗೂ ಅಭಿನಯದಲ್ಲಿ ಉತ್ತಮ ತರಬೇತಿ ಪಡೆದ ಜಮುನಾ ಕಾಲಕ್ರಮೇಣ ದಕ್ಷಿಣ ಭಾರತದ ಟಾಪ್ ಹೀರೊಯಿನ್ಸ್ ಪೈಕಿ ಅಗ್ರಸ್ಥಾನ ಗಳಿಸಿದರು.

1952ರಲ್ಲಿ ಜಮುನ ವಿದ್ಯಾರ್ಥಿನಿ ಆಗಿದ್ದಾಗ ಶಾಲಾವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಈಕೆಯ ಪ್ರತಿಭೆಯನ್ನು ಗುರುತಿಸಿದ ಅಂದಿನ ತೆಲುಗು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ಡಾ.ಗರಿಕಿಪತಿ ರಾಜಾರಾವ್ 1953ರಲ್ಲಿ ತಮ್ಮ ಪುಟ್ಟಿಲ್ಲು ಸಿನಿಮಾದಲ್ಲಿ ಮುಖ್ಯ ಪಾತ್ರ ನೀಡಿ ಪ್ರೋತ್ಸಾಹಿಸಿದರು. ಆ ಮೂಲಕ ಜಮುನಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಂದಿನಿಂದ ಹಿಂದಿರುಗಿ ನೋಡದ ಜಮುನಾ ಹಿಂದಿ ಕನ್ನಡ ತೆಲುಗು ತಮಿಳು ಮಲಯಾಳಂ ಭಾಷೆಯ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದರು.

1955ರಲ್ಲಿ ತೆರೆಕಂಡ ಆದರ್ಶಸತಿ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆಗೈದ ಜಮುನ ಸಾಕ್ಷಾತ್ಕಾರ ಬ್ಲಾಕ್‍ ಬಸ್ಟರ್ ಫಿಲಂ ಸೇರಿದಂತೆ 8 ಕನ್ನಡ ಚಿತ್ರದಲ್ಲಿ ಮಾತ್ರ ನಟಿಸಿದ್ರೂ 8 ದಶಕದ ಕಾಲ ಉಳಿವಂಥ ಸ್ಮರಣೀಯ ಅಭಿನಯ ನೀಡಿ ಕನ್ನಡ ಕುಲಕೋಟಿಯ ತನುಮನ ಗೆದ್ದಿದ್ದ ಬಹುಮುಖ ಪ್ರತಿಭೆಯುಳ್ಳ ಮಹಾನ್ ಕಲಾವಿದೆ ಎಂದರೆ ಅತಿಶಯೋಕ್ತಿ ಅಲ್ಲ.

ಜಮುನಾರವರು ಬಾಲಿವುಡ್ ನ ದೇವಾನಂದ್, ಸುನಿಲ್ ದತ್, ಧರ್ಮೇಂದ್ರ, ಜಿತೇಂದ್ರ, ಮುಂತಾದ ದಿಗ್ಗಜರ ಚಿತ್ರಗಳಲ್ಲೂ, ಕಾಲಿವುಡ್ ನ ಎಂ.ಜಿ.ರಾಮಚಂದ್ರನ್, ಶಿವಾಜಿಗಣೇಶನ್ ರವರ ಚಿತ್ರಗಳಲ್ಲೂ, ಟಾಲಿವುಡ್ ನ ಎನ್‍.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ಕೃಷ್ಣ, ಕಾಂತರಾವ್, ಚಿತ್ರಗಳಲ್ಲೂ ಹಾಗೂ ಸ್ಯಾಂಡಲ್‍ವುಡ್ ನ ರಾಜ್, ಕಲ್ಯಾಣ್, ಉದಯ್, ಕುಮಾರತ್ರಯರ ಚಿತ್ರಗಳಲ್ಲದೇ ವಿಷ್ಣುವರ್ಧನ್, ಶ್ರೀನಾಥ್, ಮುಂತಾದವರ ಚಿತ್ರಗಳಲ್ಲೂ ಅಭಿನಯಿಸುವ ಮೂಲಕ ಪಂಚಭಾಷೆ ತಾರೆಯಾಗಿ ಭಾರತದ ಜನಪ್ರಿಯ ನಟಿಯರ ಪಟ್ಟಿಗೆ ಸೇರಿದರು.

ಇಲ್ಲಿರುವ ಚಿತ್ರಗಳನ್ನು ಊಹಿಸಿ ಡಾ.ರಾಜ್ ನಟನೆಯ 5 ಚಿತ್ರಗಳನ್ನು ಹೆಸರಿಸಿ…

1965ರಲ್ಲಿ ಪ್ರಾಣಿಶಾಸ್ತ್ರ ಪ್ರೊಫೆಸರ್ ಜುಲುರಿ ರಮಣರಾವ್ ಎಂಬುವರ ಕೈಹಿಡಿದ ಜಮುನಾ ಗೃಹಿಣಿಯಾಗಿ ಪುತ್ರಿ ಶ್ರಾವಂತಿ ಮತ್ತು ಪುತ್ರ ವಂಶಿ ಎಂಬ ಎರಡು ಮಕ್ಕಳಿಗೆ ತಾಯಿ ಆದರು. 2014ರಲ್ಲಿ ಪತಿಯು ಸ್ವರ್ಗಸ್ಥರಾದ ನಂತರ ಖ್ಯಾತ ಹಿರಿಯ ನಟಿ ಜಮುನಾ ರವರು 27.1.2023 ರಂದು ಹೈದ್ರಾಬಾದಿನ ತಮ್ಮ ಸ್ವಂತ ಮನೆಯಲ್ಲಿ 87ನೇ ವಯಸ್ಸಿಗೆ ನಿಧನ ರಾದರು!

ಜಮುನಾ ಅವರಿಗೆ ಸಂದ ಪ್ರಶಸ್ತಿಗಳು: ಜಮುನಾ ತಮ್ಮ 16ನೇ ವಯಸ್ಸಿನಿಂದ 76ನೇ ವಯಸ್ಸಿನವರೆಗೆ ಒಟ್ಟು 60 ವರ್ಷಕಾಲ ಅಮೋಘವಾದ ಕಲಾಸೇವೆಯನ್ನು ಸಲ್ಲಿಸಿದರು. ಇವರ ಅತ್ಯುತ್ತಮ ಅಭಿನಯಕ್ಕೆ ಹಲವಾರು ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ಉದಾಹರಣೆಗೆ.. 1968 : ಫಿಲಂಫೇರ್ ಪ್ರಶಸ್ತಿ-ಹಿಂದಿಭಾಷೆಯ ಮಿಲನ್ ಚಿತ್ರದ ಶ್ರೇಷ್ಠ ಅಭಿನಯಕ್ಕೆ, 1972 : ಫಿಲಂಫೇರ್ ಪ್ರಶಸ್ತಿ, ತೆಲುಗು ಚಿತ್ರ ಪಂಡಂಟಿಕಾಪುರಂ, 1999 : ತಮಿಳುನಾಡಿನ ಎಂ.ಜಿ.ಆರ್ ಪ್ರಶಸ್ತಿ.

2008 : ಎನ್.ಟಿ.ರಾಮರಾವ್ ರಾಷ್ಟ್ರ ಪ್ರಶಸ್ತಿ, 2010: ಪದ್ಮಭೂಷಣ ಡಾ.ಬಿ.ಸರೋಜಾದೇವಿ ರಾಷ್ಟ್ರ ಪ್ರಶಸ್ತಿ, 2019 :17ನೇ ಸಂತೋಷಂ ಸಿನಿ ಅವಾರ್ಡ್  ಜೀವಮಾನ ಸಾಧನೆಗೆ ನೀಡುವ ಪ್ರಶಸ್ತಿ, ಜಮುನಾ ನಟಿಸಿದ ಕನ್ನಡ ಚಿತ್ರಗಳು.. ಆದರ್ಶಸತಿ, ತೆನಾಲಿರಾಮಕೃಷ್ಣ, ಭೂಕೈಲಾಸ, ರತ್ನಗಿರಿರಹಸ್ಯ, ಮಾಯೆಯಮುಸುಕು, ಸಾಕ್ಷಾತ್ಕಾರ, ಪೊಲೀಸ್‍ಮತ್ತುದಾದಾ, ಗುರುಸಾರ್ವಭೌಮಶ್ರೀರಾಘವೇಂದ್ರಕರುಣೆ, ಮುಂತಾದ ಕೆಲವೇ ಕನ್ನಡ ಚಲನಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ ಮಹಾನ್ ಅಭಿನೇತ್ರಿ.

admin
the authoradmin

12 Comments

  • ನನಗೀಗ 75 ವರ್ಷ. ಬಾಲ್ಯದಿಂದಲೂ ನನ್ನ ಬಹಳ ಅಚ್ಚುಮೆಚ್ಚಿನ ನಟಿಯಾದ ಜಮುನಾ (ನನ್ನೊಬ್ಬಳಿಗೆ ಮಾತ್ರ ಜಮುನ ರಾಣಿ ಆಗಿದ್ದರು) ರವರ ಬಗ್ಗೆ ಬರೆದ ಲೇಖನ ಅಮೋಘ. ಲೇಖಕ ಕುಮಾರಕವಿಯವರನ್ನು ಎಷ್ಟು ಹೊಗಳಿದರೂ ಸಾಲುವುದಿಲ್ಲ. ಏಕೆಂದರೆ ನನಗೆ ಇವರು ನಟಿಸಿದ ತೆಲುಗು-ಕನ್ನಡ ಚಿತ್ರಗಳನ್ನು ಒಂದೂ ಬಿಡದೇ ನೋಡಿದ್ದೇನೆ. Flash back ಕಾಲವನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದ ನಟರಾಜರಿಗೆ ಮತ್ತು ಜನಮನ ಪತ್ರಿಕೆಯವರಿಗೆ ಸಹಸ್ರ ವಂದನೆ, ಧನ್ಯವಾದ. (ನನ್ನ ಮಾತೃಭಾಷೆ ತೆಲುಗು ಆದರೆ ನಮ್ಮ ಪೂರ್ವಜರ (ನೂರಾರು ವರ್ಷಗಳಿಂದ) ಕಾಲದಿಂದ ಮೈಸೂರು ರಾಜ್ಯದವರು ಆದ್ದರಿಂದ ಒಂದು ಲೆಕ್ಕದಲ್ಲಿ ನಾನೂ ಸಹ ಜಮುನಾ ರಾಣಿಯವರಂತೆ ತೆಲುಗು-ಕನ್ನಡತಿ.
    SHANTHAMANI .V., rtd. KSOU officer

  • ನಾನೂ ಸಹ ಮೂಲತಃ ಬಳ್ಳಾರಿಯವನು. ಆದರೆ ಕಳೆದ 45 ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದೇನೆ. ನನಗೆ ನಮ್ಮ ತಂದೆ ತಾಯಿಯವರಿಗೆ ಮಾತ್ರವಲ್ಲ ಮದುವೆಯಾದ ನಂತರ ನನ್ನ ಮಡದಿಗೂ ಸಹ ತುಂಬ ಇಷ್ಟವಾದ ಸಿನಿಮ ನಟಿ ಜಮುನಾ. ಇವರ ಆದರ್ಶಸತಿ ಮತ್ತು ಸಾಕ್ಷಾತ್ಕಾರ ಚಿತ್ರಗಳನ್ನು ಬಹಳಷ್ಟು ಸಲ ನಾವೆಲ್ಲರೂ ನೋಡಿ ಆನಂದ ಪಟ್ಟಿದ್ದೇವೆ. ನಮ್ಮ ಕಾಲದ ಇಂಥಹ ಓರ್ವ ಶ್ರೇಷ್ಠ ಹಳೆಯ ಕಲಾವಿದೆಯ ಲೇಖನ ಬರೆದ ನಟರಾಜ ಕವಿಯವರಿಗೂ ಪ್ರಕಟಿಸಿ ಉಪಕಾರ ಮಾಡಿದ ಜನಮನ ಪತ್ರಿಕೆಯರಿಗೂ ಅನೇಕಾನೇಕ ಧನ್ಯವಾದ. ನಾವು ದಂಪತಿ ಇಬ್ಬರೂ ನಿವೃತ್ತ ಅಧ್ಯಾಪಕರು.
    ಎ.ಪರಮೇಶ್ವರಪ್ಪ ಮತ್ತು ಬಿ.ನೀಲಾದೇವಿ, ಕೊಂಡಮ್ಮ ಸ್ಟ್ರೀಟ್, ಬಳ್ಳಾರಿ

  • ನಾನೂ ಸಹ ಮೂಲತಃ ಬಳ್ಳಾರಿಯವನು. ಆದರೆ ಕಳೆದ 45 ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದೇನೆ. ನನಗೆ ನಮ್ಮ ತಂದೆ ತಾಯಿಯವರಿಗೆ ಮಾತ್ರವಲ್ಲ ಮದುವೆಯಾದ ನಂತರ ನನ್ನ ಮಡದಿಗೂ ಸಹ ತುಂಬ ಇಷ್ಟವಾದ ಸಿನಿಮ ನಟಿ ಜಮುನಾ. ಇವರ ಆದರ್ಶಸತಿ ಮತ್ತು ಸಾಕ್ಷಾತ್ಕಾರ ಚಿತ್ರಗಳನ್ನು ಬಹಳಷ್ಟು ಸಲ ನಾವೆಲ್ಲರೂ ನೋಡಿ ಆನಂದ ಪಟ್ಟಿದ್ದೇವೆ. ನಮ್ಮ ಕಾಲದ ಇಂಥಹ ಓರ್ವ ಶ್ರೇಷ್ಠ ಹಳೆಯ ಕಲಾವಿದೆಯ ಲೇಖನ ಬರೆದ ನಟರಾಜ ಕವಿಯವರಿಗೂ ಪ್ರಕಟಿಸಿ ಉಪಕಾರ ಮಾಡಿದ ಜನಮನ ಪತ್ರಿಕೆಯರಿಗೂ ಅನೇಕಾನೇಕ ಧನ್ಯವಾದ. ನಾವು ದಂಪತಿ ಇಬ್ಬರೂ ನಿವೃತ್ತ ಅಧ್ಯಾಪಕರು.
    ಎ.ಪರಮೇಶ್ವರಪ್ಪ ಮತ್ತು ಬಿ.ನೀಲಾದೇವಿ, (ಕೊಂಡಮ್ಮ ಸ್ಟ್ರೀಟ್, ಬಳ್ಳಾರಿ) ಹಾಲಿ ವಾಸ ಚಂದ್ರ ಲೇಔಟ್ ಬಡಾವಣೆ, ಬೆಂಗಳೂರು.

  • ಹಿರಿಯ ಶ್ರೇಷ್ಟ ನಟಿ ಜಮುನಾರವರ ಬಗ್ಗೆಲ್ಲ ಬರೆದಿರುವ ಲೇಖನ ನಿಜದಲ್ಲಿ
    ಬಹಳ ಉತ್ತಮ ಮತ್ತು ಉಪಯುಕ್ತ ಲೇಖನ

  • ಎಂದಿನಂತೆ ಕುಮಾರಕವಿಯವರ ಹಿರಿಯನಟಿ ಜಮುನಾ ರವರ ಲೇಖನ ಸಂಕ್ಷಿಪ್ತವಾಗಿದ್ದರೂ ಬಹಳ ಸ್ವಾರಸ್ಯಕರ ಮತ್ತು ವರ್ಣನೆ ಮತ್ತು ಪದಗಳ ವಾಕ್ಯಗಳ ಜೋಡಣೆ ಅರ್ಥಗರ್ಭಿತ, ವಿಶಿಷ್ಟ ವಿಶೇಷ, ತುಂಬ ತುಂಬ ಧನ್ಯವಾದ.

  • ಎಂದಿನಂತೆ ಕುಮಾರಕವಿಯವರ ಹಿರಿಯನಟಿ ಜಮುನಾ ರವರ ಲೇಖನ ಸಂಕ್ಷಿಪ್ತವಾಗಿದ್ದರೂ ಬಹಳ ಸ್ವಾರಸ್ಯಕರ ಮತ್ತು ವರ್ಣನೆ ಮತ್ತು ಪದಗಳ ವಾಕ್ಯಗಳ ಜೋಡಣೆ ಅರ್ಥಗರ್ಭಿತ, ವಿಶಿಷ್ಟ, ವಿಶೇಷ, ತುಂಬತುಂಬ ಧನ್ಯವಾದ ನನ್ನ ಗುಂಪಿನ ಎಲ್ಲರಿಗೂ ಶೇರ್ ಮಾಡಿದ್ದೇನೆ. ನಮಸ್ಕಾರ

  • ಶ್ರೇಷ್ಠನಟಿ ಜಮುನಾ ಮೇಡಂ ಬಗ್ಗೆ ನನಗೆ ತಿಳಿದಿಲ್ಲದ ಮಾಹಿತಿಯ ಲೇಖನ ನನಗೆ ತುಂಬ ಖುಷಿ ನೀಡಿತು. ಧನ್ಯವಾದ ಸರ್

  • Excellent exciting extraordinary article about actress JAMUNA written by KUMARA KAVI NATARAJA sir 👏 👍 🙌

  • ಸಾಕ್ಷಾತ್ಕಾರ ಸಿನಿಮಾ ಸೇರಿದಂತೆ ಅನೇಕ ತೆಲುಗು-ಕನ್ನಡ ಚಿತ್ರಗಳಲ್ಲಿ ಬಹುತೇಕ
    ಗೌರಮ್ಮನ ಪಾತ್ರ ನಿರ್ವಹಿಸಿದ ಓರ್ವ ಹಿರಿಯ ಉತ್ತಮ ಕಲಾವಿದೆ ಜಮುನಾ. ಇಂಥವರ ಬಗ್ಗೆ ಲೇಖನ ಬರೆದು ನಮಗೆಲ್ಲ ಸಂತೋಷ ಉಂಟುಮಾಡಿದ ಲೇಖಕ ಕವಿ ನಟರಾಜ ರವರಿಗೂ ಜನಮನ ಪತ್ರಿಕೆಗೂ ಧನ್ಯವಾದ

Leave a Reply