District

ಕೆರೆ ಅತಿಕ್ರಮಣ ತೆರವು ಸೇರಿ ಹಲವು ಬೇಡಿಕೆ ಈಡೇರಿಕೆಗೆ ಹಕ್ಕೆ – ಹುಲುಸೆ ಗ್ರಾಮಸ್ಥರ ಪ್ರತಿಭಟನೆ

ಕುಶಾಲನಗರ(ರಘುಹೆಬ್ಬಾಲೆ): ತಾಲ್ಲೂಕಿನ ಹಕ್ಕೆ ಗ್ರಾಮಸ್ಥರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಕ್ಕೆ ಮತ್ತು ಹುಲುಸೆ ಗ್ರಾಮಸ್ಥರು  ಹಕ್ಕೆ ಸರ್ಕಲ್ ನಲ್ಲಿ ಹಕ್ಕೆ ಗ್ರಾಮದ ನಿವಾಸಿ ಸಾಮಾಜಿಕ ಹೋರಾಟಗಾರ  ಮೋಹನ್ ನೇತೃತ್ವದಲ್ಲಿ ನೂರಾರು ಗ್ರಾಮಸ್ಥರು ಜಮಾವಣೆಗೊಂಡು  ತಾಲ್ಲೂಕು ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಸ್ ತಂಗುದಾಣ, ಕೆರೆ ಅತಿಕ್ರಮಣ  ತೆರವು, ಎಡದಂಡೆ ನಾಲೆಯ ರಸ್ತೆ ಸಮಸ್ಯೆ ಹಾಗೂ ಉದ್ದೇಶಿತ ಬೀದಿನಾಯಿಗಳ ಆಕೈಕೆ ಕೇಂದ್ರದ ಪ್ರಸ್ತಾವನೆ ಕೈಬಿಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ರಸ್ತೆ ಅಭಿವೃದ್ಧಿ ಸಮಯದಲ್ಲಿ ಹಳೆಯ ಬಸ್ ನಿಲ್ದಾಣವನ್ನು ತೆರವು ಮಾಡಲಾಗಿತ್ತು. ರಸ್ತೆ ನಿರ್ಮಾಣ ಮಾಡಿ ಅನೇಕ ವರ್ಷಗಳೇ ಕಳೆದರೂ ಇದುವರೆಗೂ ಬಸ್ ತಂಗುತಾಣ ನಿರ್ಮಿಸಿಲ್ಲ.

ಹಕ್ಕೆ ಮತ್ತು ಹುಲುಸೆ ಗ್ರಾಮಗಳು ಕಾಡಾಂಚಿನ ಗ್ರಾಮಗಳಾಗಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಹಕ್ಕೆ ಗ್ರಾಮದಲ್ಲಿ ಬೀದಿನಾಯಿಗಳ ಆರೈಕೆ ಕೇಂದ್ರ ಸ್ಥಾಪನೆಗೆ ಪ್ರಾಸ್ತಾವನೆ ಸಲ್ಲಿಸಿರುವ ಕ್ರಮ ಸರಿಯಿಲ್ಲ. ಈ ಕೂಡಲೇ ಉದ್ದೇಶಿಸಿ ಆರೈಕೆ ಕೇಂದ್ರ ಪ್ರಸ್ತಾಪವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಅವರು ಗ್ರಾಮದ ಸಾಮಾಜಿಕ ಹೋರಾಟಗಾರ ಮೋಹನ್, ಜಿ.ಪಂ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಕಾಂಗ್ರೆಸ್ ಮುಖಂಡ ಎಚ್.ಕೆ.ನಟೇಶ್ ಗೌಡ ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ,ಸದಸ್ಯರಾದ ಮಂಜುನಾಥ್ ಹಾಗೂ ಶಿವನಂಜಪ್ಪ ಅವರೊಂದಿಗೆ  ಮಾತುಕತೆ ನಡೆಸಿದರು. ಗ್ರಾಮಸ್ಥರ ವಿರೋಧ ಹಿನ್ನೆಲೆ ಬೀದಿನಾಯಿಗಳ ಆರೈಕೆ ಕೇಂದ್ರ ಸ್ಥಾಪನೆ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದರು.

ರಸ್ತೆ ಅಭಿವೃದ್ಧಿ ವೇಳೆ ಮುಚ್ಚಿರುವ ಚರಂಡಿಯಿಂದ ಗ್ರಾಮಸ್ಥರಿಗೆ ತೊಂದರೆ ಆಗಿದೆ ಕೊಳಚೆ ನೀರು ಸರಗವಾಗಿ ಹೋಗಲು ಚರಂಡಿ ಇಲ್ಲದೆ ರಸ್ತೆಯ ಮೇಲೆ ಹರಿಯುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಗಳಾದ ಕಿರಣ್ ಕುಮಾರ್ ಹಾಗೂ ಸೌಮ್ಯ ಅವರು ಮುಚ್ಚಿರುವ ಗುಂಡಿ ತೆಗೆದು ಪೈಪ್ ಲೈನ್ ಅಳವಡಿಸುವ ಮೂಲಕ ಕೊಳಚೆ ನೀರು ಹರಿದು ಹೋಗುವಂತೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಲೋಕೋಪಯೋಗಿ ಇಂಜಿನಿಯರಿಂಗ್ ಕೂಡ ಹಕ್ಕೆ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡುವುದಾಗಿ ಹೇಳಿ ಜೆಸಿಬಿ ಮೂಲಕ ಕಾಮಗಾರಿ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.

ಈ ಸಂದರ್ಭ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಶ್ರೀನಿವಾಸ್ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ , ಕಂದಾಯ ಅಧಿಕಾರಿ ಸಂತೋಷ್, ಎಚ್.ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಬಿಎ ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ. ತಾಲೂಕು ಅಧ್ಯಕ್ಷರಾದ ಶಿವ, ತಾಲೂಕು ಉಪಾಧ್ಯಕ್ಷ ಜಯರಾಜ್, ತಾಲೂಕು ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ. ಹಾಗೂ ಎಚ್ ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ದಲಿತ ಮುಖಂಡ ನಿರ್ವಾಣಪ್ಪ,ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಗ್ರಾಮಸ್ಥರಾದ ಸಂಪತ್ತು,ಲೋಕೇಶ್,ಕುಮಾರ,ತಮ್ಮಯ್ಯ, ದೇವು, ಚಂದ್ರ, ಪರಶಿವ, ಕೃಷ್ಣಪ್ಪ, ಮಂಜುನಾಥ ಸ್ವಾಮಿ, ರಾಜಪ್ಪ, ವಾರಿಜಾ, ಹೃತಿಕ್,  ಈಶ,  ಪಾಪಣ್ಣ ಹಾಗೂ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

admin
the authoradmin

Leave a Reply