ಕಾಡಾನೆಗಳನ್ನು ಹಿಮ್ಮೆಟ್ಟಿಸಲು ನಾಗರಹೊಳೆಗೆ ಬಂತು ಎಐ ತಂತ್ರಜ್ಞಾನ… ಹೇಗಿದೆ ಇದರ ಕಾರ್ಯವೈಖರಿ ಗೊತ್ತಾ?

ಹುಣಸೂರು(ಹಿರೀಕ್ಯಾತನಹಳ್ಳಿಸ್ವಾಮಿಗೌಡ): ಇತ್ತೀಚೆಗಿನ ವರ್ಷಗಳಲ್ಲಿ ಕಾಡಂಚಿನ ಗ್ರಾಮಗಳಲ್ಲಿ ವನ್ಯ ಪ್ರಾಣಿ ಮತ್ತು ಮಾನವನ ನಡುವಿನ ಸಂಘರ್ಷ ತಾರಕ್ಕೇರುತ್ತಿದೆ. ಪ್ರತಿನಿತ್ಯವೂ ವನ್ಯ ಪ್ರಾಣಿಗಳೊಂದಿಗೆ ಹೊಡೆದಾಡಿಕೊಂಡು ರೈತರು ಬೆಳೆಗಳನ್ನು ಬೆಳೆಯುವಂತಾಗಿದೆ, ಅಷ್ಟೇ ಅಲ್ಲದೆ ಪ್ರಾಣವನ್ನು ಕಳೆದುಕೊಳ್ಳುವಂತಾಗಿದೆ. ಈಗಾಗಲೇ ಗ್ರಾಮಸ್ಥರು ಮತ್ತು ರೈತರು ಪ್ರತಿನಿತ್ಯವೂ ಜೀವ ಕೈನಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಯಾವಾಗ ಹುಲಿ, ಚಿರತೆ, ಕಾಡಾನೆಗಳು ಜಮೀನಿಗೆ, ಮನೆಗೆ ನುಗ್ಗಿ ದಾಳಿ ಮಾಡುತ್ತವೆ ಎನ್ನುವುದನ್ನು ಹೇಳಲಾರದ ಪರಿಸ್ಥಿತಿ ಇಲ್ಲಿನವರದ್ದಾಗಿದೆ.

ಈ ನಡುವೆ ಕಾಡಾನೆ ಮತ್ತು ಮಾನವ ಸಂಘರ್ಷ ತಡೆಯಲು ಅರಣ್ಯ ಇಲಾಖೆ ವಿನೂತನ ತಂತ್ರಜ್ಞಾನವಾದ ಎಐ ಕ್ಯಾಮರಾವನ್ನು ನಾಗರಹೊಳೆ ಅರಣ್ಯ ವ್ಯಾಪ್ತಿಯ ಫಾರಂ ಗಾರ್ಡ್ ಎಂಬಲ್ಲಿ ಅಳವಡಿಸಿದ್ದು ಅದರಲ್ಲಿ ಯಶಸ್ಸು ಕಂಡಿದೆ. ಹೀಗಾಗಿ ರೈತರು ಇದರತ್ತ ಆಸೆಕಣ್ಣಿನಿಂದ ನೋಡುತ್ತಿದ್ದಾರೆ. ಹಾಗಾದರೆ ಏನಿದು ವಿನೂತನ ತಂತ್ರಜ್ಞಾನ ಎಂಬುದನ್ನು ನೋಡಿದ್ದೇ ಆದರೆ ಆ ಕುರಿತಂತೆ ಒಂದಷ್ಟು ಮಾಹಿತಿ ಲಭ್ಯವಾಗುತ್ತದೆ. ಈಗಾಗಲೇ ದೇಶದಾದ್ಯಂತ ಆರ್ಚಿಪಿಸಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ವೇಗವಾಗಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತಿದ್ದು ಅದನ್ನು ಇದೀಗ ಪ್ರಾಣಿಗಳನ್ನು ಹಿಮ್ಮೆಟ್ಟಿಸುವ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಎಐ ಈ ಕ್ಯಾಮರ ಆನೆಯ ಸ್ಪಷ್ಟ ಚಿತ್ರವನ್ನು ಸೆರೆ ಹಿಡಿಯಲಿದ್ದು ಆ ಮೂಲಕ ಮುಂದಿನ ಕ್ರಮಕ್ಕೆ ಸಹಾಯ ಮಾಡಲಿದೆ.

ಸಾಮಾನ್ಯವಾಗಿ ಕಾಡಾನೆಗಳು ಕಾಡನ್ನು ಬಿಟ್ಟು ನಾಡನ್ನು ಪ್ರವೇಶಿಸಿ ರೈತರ ಮೇಲೆ ದಾಳಿ ನಡೆಸುವುದಲ್ಲದೆ, ಕಷ್ಟಪಟ್ಟು ಬೆಳೆದ ಪಸಲನ್ನು ತಿಂದು ತುಳಿದು ಹಾಳು ಮಾಡ ಲಿದೆ. ಇದನ್ನು ತಡೆಯವ ಸಲುವಾಗಿ ಅರಣ್ಯ ಇಲಾಖೆಯ ನಾಗರ ಹೊಳೆಯಲ್ಲಿ ಎಐ ಕ್ಯಾಮರಾ ಅಳವಡಿಸಿದ್ದು ಇದು ಯಶಸ್ವಿಯಾಗಿದೆ. ಈ ಕ್ಯಾಮರಾ ದಾಟಿ ಬರಲು ಅನಗಳಿಗೆ ಸಾಧ್ಯವಿಲ್ಲದಂತಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುತ್ತಿವೆ ಎನ್ನುವುದು ಅರಣ್ಯ ಇಲಾಖೆಯ ಭರವಸೆಯಾಗಿದೆ. ಎಲ್ಲಿ ಆನೆ ಕಂದಕ ನಿರ್ಮಿಸಲು ಸಾಧ್ಯವಿಲ್ಲವೋ, ತಂತಿ ಬೇಲಿ ಹಾಕಲಾಗದ ಸ್ಥಳ, ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗದ ಜಾಗ ಮತ್ತು ತಡೆಗೋಡೆ ನಿರ್ಮಿಸಲಾಗಿದ ಸ್ಥಳದಲ್ಲಿ ಈ ಕ್ಯಾಮರಾ ಅಳವಡಿಸಲಾಗಿದೆ.

ಸುಮಾರು ಮೂರ್ನಾಲ್ಕು ತಿಂಗಳಗಳ ಹಿಂದೆ ಈ ಎಐ ತಂತ್ರಜ್ಞಾನದ ಕ್ಯಾಮರಾ ಅಳವಡಿಸಲಾಗಿದ್ದು, ಈ ಕ್ಯಾಮರಾ ದಾಟಿ ಯಾವುದೇ ಅನೆಗಳು ಆ ಪ್ರದೇಶದಿಂದ ನಾಡಿನತ್ತ ಬಂದಿಲ್ಲ ಎನ್ನಲಾಗಿದ್ದು, ಅರಣ್ಯ ಇಲಾಖೆಯ ಈ ಪ್ಲಾನ್ ಸಕ್ಸಸ್ ಆಗಿದೆ. ಸರ್ಕಾರ ಅನುದಾನ ಒದಗಿಸಿದರೆ ನಾಡಂಚಿನ ಪ್ರದೇಶಗಳಲ್ಲಿ ಆನೆ ಮತ್ತು ಪ್ರಾಣಿಗಳ ಹಾವಳಿ ಇರುವ ಕಡೆ ಈ ಕ್ಯಾಮರಾ ಅಳವಡಿಸಿ ಆನೆ, ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಯಬಹು ದಾಗಿದೆ . ಸುಮಾರು ಒಂದೂವರೆ ಲಕ್ಷ ರೂ. ವೆಚ್ಚ ದಲ್ಲಿ ಈ ಎಐ ಕ್ಯಾಮರಾ ಅಳಮಾಸಲಾಗಿದ್ದು, ಆನೆ ಹತ್ತಿರ ಬರುತ್ತಿದ್ದಂತೆ ಕ್ಯಾಮರಾಕ್ಕೆ ಆಕೆ ಅಳವಡಿಸಿರುವ ಸ್ವೀಕರ್ ನಲ್ಲಿ ಜೇನು ಹುಳುಗಳು, ಜನರ ಕಿರುಚಾಟ ಮತ್ತು ಪಟಾಕಿ ಸಿಡಿಸುವ ಸದ್ದು ಸೇರಿ ದಂತೆ ಸುಮಾರು 20 ಶಬ್ದಗಳನ್ನು ಮಾಡಲಿದ್ದು ಈ ಭಾರೀ ಶಬ್ದಕ್ಕೆ ಆನೆಗಳು ದಿಕ್ಕಾಪಾಲಾಗಿ ಓಡಿ ಹೋಗಲಿವೆ.
ಈ ಕ್ಯಾಮರಾ ವು ಆನೆಗಳು ವಾಪಸ್ ಓಡಿ ಹೋಗುವುದನ್ನು ಸೆರೆ ಹಿಡಿಯುವುದರೊಂದಿಗೆ ಸುಮಾರು 150ಮೀಟರ್ ವ್ಯಾಪ್ತಿಯವರೆಗೆ ಕಾರ್ಯನಿರ್ವಹಿಸಲಿವೆ. ಓಡಿ ಹೋಗುವುದನ್ನು ಸೆರೆ ಹಿಡಿಯುವುದರೂಂದಿಗೆ ಸುಮಾರು 150 ಮೀಟರ್ ವ್ಯಾಪ್ತಿಯವರೆಗೆ ಕ್ಯಾಮೆರಾ ಗಳು ಕಾರ್ಯನಿರ್ವಹಿಸಲಿವೆ. ಈ ಕ್ಯಾಮರವೂ ಆನೆಯ ಸ್ಪಷ್ಟ ಚಿತ್ರವನ್ನು ಸೆರೆ ಹಿಡಿಯಲಿದೆ ಜೊತೆಗೆ ಅದು ಓಡಿ ಹೋಗುವ ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿಯಲಿದೆ.

ಇಲಾಖೆಯಲ್ಲಿರುವ ಅಲ್ಪ ಪ್ರಮಾಣದ ಆದಾಯ ಹಣದಲ್ಲಿ ಒಂದೂವರೆ ಲಕ್ಷ ರೂ ಖರ್ಚು ಮಾಡಿ ಈ ಎಐ ಕ್ಯಾಮರಾ ಅಳವಡಿಸಲಾಗಿದೆ ಇದು ಯಶಸ್ವಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಅಳವಡಿಸಿ ಪ್ರಾಣಿಗಳ ಅವಳಿ ತಡೆಯಲು ಚಿಂತಿಸಲಾಗಿದೆ ಈ ಎಐ ತಂತ್ರಜ್ಞಾನದ ಕ್ಯಾಮರಾ ಕಡಿಮೆ ದರದಲ್ಲಿ ಸಿಗುವಂತಾಗಬೇಕು ಇದಕ್ಕೆ ಸರ್ಕಾರದಿಂದ ವಿಶೇಷ ಅನುದಾನ ನೆರವು ಬೇಕಾಗುತ್ತದೆ.
ಎಐ ಕ್ಯಾಮರಾ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಿದ್ದೇ ಆದರೆ, ಆನೆ ಕಂಡರೆ 20 ರೀತಿಯ ಸೌಂಡ್ ಮಾಡುತ್ತದೆ. ಇದರಿಂದ ಆ ಶಬ್ದಕ್ಕೆ ಹೆದರಿ ಆನೆಗಳು ಓಡಿ ಹೋಗುತ್ತವೆ. ಈ ಕ್ಯಾಮರಾ ನೂರೈವತ್ತು ಮೀಟರ್ ವ್ಯಾಪ್ತಿಯವರೆಗೆ ಕಾರ್ಯನಿರ್ವಹಿಸುತ್ತದೆ. ಈ ಕುರಿತಂತೆ ಮಾಹಿತಿ ನೀಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಡಿ ಸಿ ಎಫ್ ಲಕ್ಷ್ಮೀಕಾಂತ್ ಅವರು ನಾಗರಹೊಳೆ ಅರಣ್ಯ ವ್ಯಾಪ್ತಿಯ ಫಾರಂ ಗಾರ್ಡ್ ಎಂಬಲ್ಲಿ ಅತ್ಯಾಧುನಿಕ ‘ಎಐ’ ಕ್ಯಾಮರಾವನ್ನು ಪ್ರಾಯೋಗಿಕವಾಗಿ ಅಳವಡಿ ಸಲಾಗಿದೆ. ಇದರಿಂದ ಯಾವುದೇ ಪ್ರಾಣಿಯನ್ನಾದರೂ ಕೂಡ ಕಾಡಿನಿಂದ ನಾಡಿಗೆ ಬಾರದಂತೆ ಹಿಮ್ಮಟ್ಟಿಸಬಹುದು ಇದರಿಂದ ನಾಡಿನಲ್ಲಿ ವ್ಯವಸಾಯ ಮಾಡುವ ಜನರಿಗೆ ತೊಂದರೆ ನೀಡಿದಂತೆ ಹಿಮ್ಮೆಟ್ಟಿಸಲು ಸಹಾಯವಾಗಿದೆ ಎಂದಿದ್ದಾರೆ.







