LatestMysore

ನಿನ್ನಲ್ಲಿರುವ ಶಕ್ತಿಯನ್ನು ನೀನೇ ಗುರುತಿಸಿಕೊಳ್ಳುವುದೇ ನಿಜವಾದ ಹೋರಾಟ: ದಾನೇಶ್ವರೀಜೀ

ಚಾಮರಾಜನಗರ: ಮಾತೆಯರಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ಮಾತೆಯರು ತಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಳ್ಳುವುದೇ ನಿಜವಾದ ಹೋರಾಟ ಎಂದು ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು.

ಭಾರತೀಯ ಬೌದ್ಧ ಮಹಾಸಭಾ ಸಾರನಾಥ ಬುದ್ಧ ವಿಹಾರದ ವತಿಯಿಂದ ಜಿಲ್ಲಾಡಳಿತದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಾ ಎಲ್ಲಾ ಕ್ಷೇತ್ರಗಳಲ್ಲೂ ಮಾತೆಯರೇ ಮುಂದೆ ಹೋಗುತ್ತಿದ್ದಾರೆ. ಮಾತೆಯರು ಅಭಿವೃದ್ಧಿಯ ಸಂಕೇತ. ಮಾತೆಯರು ಸಶಕ್ತ ದೃಢರಾಗದ ಹೊರತು ಸಮಾಜ  ಸದೃಢವಾಗಲು ಸಾಧ್ಯವಿಲ್ಲ. ಮಾತೆಯರು ಸದೃಢರಾಗಲು ಹೋರಾಟ ಮಾಡಬೇಕು. ಹೋರಾಟ ಎಂದರೆ ಸ್ವಾವಲಂಬಿಯಾಗುವುದು. ತನ್ನಲ್ಲಿರುವ ಶಕ್ತಿಯನ್ನು ಗುರುತಿಸಿಕೊಳ್ಳುವುದು.ಆತ್ಮ ಗೌರವದಲ್ಲಿರುವುದು. ಸುಶಿಕ್ತರಾಗುವುದು. ಅವರ ಶಬ್ದದಲ್ಲಿದೆ ವುಮೆನ್. ಮೆನ್ ಅಂದ್ರೆ ಪ್ರಬಲವಾದ ಶಕ್ತಿಯುಳ್ಳವರು ಅದಕ್ಕಾಗಿಯೇ ತೊಟ್ಟಿಲು ಹಿಡಿಯುವ ಕೈ ಜಗತ್ತನ್ನೇ ತೂಗಬಲ್ಲದು. ಇಲ್ಲಿ ಅನೇಕ ಮಾತೆಯರ ಭಾವಚಿತ್ರ ಹಾಕಿದ್ದಾರೆ.ಇವರೆಲ್ಲ ಜಗತ್ತನ್ನ ತೂಗಿದ್ದಾರೆ. ಅಂಬೇಡ್ಕರ್ ಸಹ ಅದನ್ನೇ ಹೇಳಿದ್ದು ನಿನ್ನ ಶಕ್ತಿಯನ್ನು ನೀನೆ ಗುರುತಿಸಿಕೊ ಅದೇ ನಿಜವಾದ ಸ್ವಾವಲಂಬಿತನವಾಗಿದೆ ಎಂದರು.

ಮಹಿಳಾ ಜಿಲ್ಲಾಧ್ಯಕ್ಷರಾದ ಶಿಲ್ಪನಾಗ್ ಉಮೇಶ್ ಕುದರ್ ಮಾತನಾಡಿ ಇಂದು ಜಗತ್ತಿನಲ್ಲಿ ಎಲ್ಲಾ ಮಹಿಳೆಯರು ಮಂಚೂಣಿಯಲ್ಲಿ ಇದ್ದಾರೆ. ರಾಷ್ಟ್ರಪತಿಯವರು ಸಹ ಮಹಿಳೆಯಾಗಿದ್ದಾರೆ. ಜಿಲ್ಲಾಡಳಿತ ನಡೆಸುವವರು ಮಹಿಳೆಯರಾಗಿದ್ದಾರೆ.ಇದಕ್ಕೆಲ್ಲ ಮೂಲ ಕಾರಣ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನವೇ ಆಗಿದೆ ಎಂದರು. ಹಳೆಯ ಕಂದಾಚಾರಗಳಿಂದ ಮುಕ್ತಿ ಹೊಂದಿದ ಈ ದಿನವನ್ನು ಜಿಲ್ಲಾಡಳಿತದ ಮುಂಭಾಗದಲ್ಲಿ ಆಚರಿಸುತ್ತಿರುವುದು ನಮಗೆ ಸಂತಸ ತಂದಿದೆ. ನಂತರ ಕೇಕ್ ಕಟ್ ಮಾಡಿ ಸಂಭ್ರಮ ಆಚರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ್, ಪುಷ್ಪ ಮರಿಸ್ವಾಮಿ, ರೇಣುಕಾದೇವಿ, ಚಿನ್ನಮ್ಮ, ಕೃಷ್ಣಪ್ಪ ಉಮೇಶ್ ಕುದಾರ್, ಕಲಾವತಿ ಶಾಂತಲಕ್ಷ್ಮಿ, ಮಂಗಳ ನಾಗೇಂದ್ರ ನಂಜುಂಡಯ್ಯ, ಕೃಷ್ಣಯ್ಯ, ಯಲಕರು ಮಲ್ಲಿಕಾರ್ಜುನ್, ಬಿಕೆ ಆರಾಧ್ಯ, ಪುಷ್ಪ, ಶಿವಕಮಲ, ಉಪಾಸಕ, ಉಪಾಸಕಿಯರು, ಭೀಮ ಬಂಧುಗಳು, ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want