Mysore

ಸರಗೂರಿನಲ್ಲಿ ಹಳೆ ವಿದ್ಯಾರ್ಥಿಗಳ ಸಮೂಹ ಸಮಿತಿಯಿಂದ ಜ.18 ರಂದು ಗುರುವಂದನ ಕಾರ್ಯಕ್ರಮ

ತಂದೆ-ತಾಯಿ ಜೊತೆಗೆ ನಮಗೆ ವಿದ್ಯೆ ಕಲಿಸಿದ ಗುರುಗಳೇ ಕಾರಣ. ಆ ಗುರುಗಳನ್ನು ಗೌರವಿಸುವ ನಿಟ್ಟಿನಲ್ಲಿ ಭವ್ಯವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸರಗೂರು: ಪಟ್ಟಣದ ಅಖಿಲ ನಾಮದಾರಿಗೌಡ ಸಮುದಾಯ ಭವನದಲ್ಲಿ ಗುರುವಂದನ ಕಾರ್ಯಕ್ರಮವನ್ನು ಜ.18 ರಂದು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಸಮೂಹ ಸಮಿತಿ ಅಧ್ಯಕ್ಷ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಪೂರ್ವಭಾವಿ ಸಭೆಯ ಬಳಿಕ  ಮಾತನಾಡಿದ ಹಳೆ ವಿದ್ಯಾರ್ಥಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ. ರವಿ, ಶಿಕ್ಷಕರನ್ನು ಗೌರವಿಸುವ ಅವಕಾಶ ನಮಗೆ ಸಿಕ್ಕಿರುವುದು ಸೌಭಾಗ್ಯ. ನಾವು ಇಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ತಂದೆ-ತಾಯಿ ಜೊತೆಗೆ ನಮಗೆ ವಿದ್ಯೆ ಕಲಿಸಿದ ಗುರುಗಳೇ ಕಾರಣ. ಆ ಗುರುಗಳನ್ನು ಗೌರವಿಸುವ ನಿಟ್ಟಿನಲ್ಲಿ ಭವ್ಯವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮೂಹ ಸಮಿತಿ ಅಧ್ಯಕ್ಷ ಡಾ. ಸೋಮಣ್ಣ, ತಾಲೂಕು ಆರೋಗ್ಯಾಧಿಕಾರಿ ಟಿ ರವಿಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಎಸ್.ಆರ್. ಜಗದೀಶ್, ಮಹದೇವಶೆಟ್ಟಿ, ಬಿಲ್ಲಯ್ಯ, ಗುತ್ತಿಗೆದಾರ ಪರಶಿವಮೂರ್ತಿ,  ಪ್ರಕಾಶ್, ಎಸ್.ಎ. ನಾಗೇಂದ್ರ, ಜಿ. ಕೃಷ್ಣಕುಮಾರ್, ಎಂ.ಸಿ. ರಾಘವೇಂದ್ರ, ಮಹಾವೀರ, ಕೃಷ್ಣ, ಇಲಿಯಾಸ್, ಸತೀಶ್, ಜಲೀಲ್, ಗಿರೀಶ್, ರೇಖಾ, ಪುಪ್ಪಾಂಜಲಿ, ಕಲಾವತಿ, ಗೋವಿಂದರಾಜು, ರಘು, ಬಸವರಾಜು, ಎಸ್.ಕೆ. ಕುಮಾರ್, ಎಂ.ಸಿ. ಬಾಬು, ಇದಾಯತ್ ಉಲ್ಲಾ ಷರೀಫ್, ಅಬ್ದುಲ್ ಮಾಲೀಕ್, ಸರಗೂರು ಕೃಷ್ಣ, ಉದಯ್ ಕುಮಾರ್, ಬೀರ್ವಾಳ್ ಶಂಕರ, ಅಶೋಕ್, ಅಬ್ದುಲ್ ವಾಹೀದ್, ಬಿ. ಮಟಕೆರೆ ಸಂದರ್, ಬಾಡಗ ನಾಗರಾಜು, ಸುರೇಶ್ ನಾಯಕ, ಬೋರ್ಡ್ ನಾಗರಾಜು, ಬೇಕರಿ ಇಬ್ರಾಹಿಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want