FoodLatest

ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ , ಆನಿಯನ್ ಮಿಕ್ಸ್ ಸೀಗಡಿ ಫ್ರೈ, ರುಚಿಕರ ಸೀಗಡಿ ಪಲಾವ್  ಮಾಡುವುದು ಹೇಗೆ?

ಸೀಗಡಿಯಿಂದ ಹತ್ತು ಹಲವು ರೀತಿಯ ರುಚಿಕರವಾದ ಖಾದ್ಯವನ್ನು ನಾವು ತಯಾರಿಸಬಹುದಾಗಿದೆ.. ಹೀಗಾಗಿ ಏನೆಲ್ಲ ತಯಾರಿಸಿ ನಾವು ಸೇವಿಸಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ನೀವು ನಿಮ್ಮ ಮನೆಯಲ್ಲಿಯೇ ಇಲ್ಲಿರುವ ಖಾದ್ಯಗಳನ್ನೇಕೆ  ತಯಾರಿಸಬಾರದು? ಒಮ್ಮೆ ಪ್ರಯತ್ನಿಸಿ ನೋಡಿ

ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ

ತೆಂಗಿನಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ  ಊಟಕ್ಕೆ ಪಲ್ಯ, ಉಪ್ಪಿನ ಕಾಯಿಯಂತೆ ಮಜಾ ಕೊಡುತ್ತದೆ. ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ ಮಾಡಲು ಏನೇನು ಪದಾರ್ಥಗಳು ಬೇಕು? ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಬೇಕಾಗುವ  ಪದಾರ್ಥಗಳು: ಹಸಿ ಸೀಗಡಿ ಮೀನು- ಅರ್ಧ ಕೆಜಿ, ಕಾಯಿತುರಿ- ಅರ್ಧ ಬಟ್ಟಲು, ಬೆಳ್ಳುಳ್ಳಿ- ಆರು ಎಸಳು, ಉಪ್ಪು- ರುಚಿಗೆ ತಕ್ಕಷ್ಟು, ಈರುಳ್ಳಿ- ಒಂದು, ನಿಂಬೆ ರಸ- ಒಂದು ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಕಾರದಪುಡಿ- ಎರಡು ಟೀ ಚಮಚೆ, ಅರಸಿನಪುಡಿ- ಅರ್ಧ ಟೀ ಚಮಚ, ಎಣ್ಣೆ- ಮೂರು ಚಮಚ

ಮಾಡುವ ವಿಧಾನ: ಹಸಿ ಸೀಗಡಿ ಮೀನನ್ನು ಶುಚಿಗೊಳಿಸಿಟ್ಟುಕೊಳ್ಳಬೇಕು. ಹಾಗೆಯೇ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು, ಜತೆಗೆ ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಬೇಕು ಆ ನಂತರ ಮೀನನ್ನು ಪಾತ್ರೆಗೆ ಹಾಕಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ, ಉಪ್ಪು, ಅರಸಿನ ಪುಡಿ, ಕಾರದಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಸ್ವಲ್ಪ ಹೊತ್ತು ಬಿಡಬೇಕು.

ಇದನ್ನೂ ಓದಿ:  ಆರೋಗ್ಯಕ್ಕೆ ಉತ್ತೇಜನ ನೀಡುವ ಬಾರ್ಲಿ ಮತ್ತು  ಗಸಗಸೆ ಪಾಯಸ…

ಆ ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಕತ್ತರಿಸಿಟ್ಟ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕಂದು ಬಣ್ಣ ಬರುವ ವರೆಗೆ ಹುರಿಯಬೇಕು. ನಂತರ ಮಸಾಲೆ ಬೆರೆಸಿಟ್ಟ ಸೀಗಡಿ ಮೀನನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಅದು ಕೂಡ ಕಂದು ಬಣ್ಣ ಬಂದ ಬಳಿಕ ತೆಂಗಿನ ತುರಿಯನ್ನು ಅದಕ್ಕೆ ಸೇರಿಸಿ ಮತ್ತೆ ಹುರಿಯಬೇಕು. ಅದು ಚೆನ್ನಾಗಿ ಮೀನಿನೊಂದಿಗೆ ಬೆರೆತು ಬೆಂದ ಬಳಿಕ ನಿಂಬೆ ರಸವನ್ನು ಹಾಕಿ ತಿರುಗಿಸಬೇಕು. ಆ ನಂತರ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಇಳಿಸಿದರೆ ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ  ತಯಾರಾದಂತೆಯೇ….

ಆನಿಯನ್ ಮಿಕ್ಸ್ ಪ್ರಾನ್  ಫ್ರೈ

ಹಸಿ ಈರುಳ್ಳಿಯೊಂದಿಗಿನ ಪ್ರಾನ್ ಒಂಥರಾ ರುಚಿಯಾಗಿರುತ್ತದೆ. ಇದನ್ನು ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಪ್ರಾನ್- 250ಗ್ರಾಂ, ಈರುಳ್ಳಿ- 1ದೊಡ್ಡ ಗಾತ್ರದ್ದು,  ಕರಿಮೆಣಸು ಪುಡಿ- ಅರ್ಧ ಟೀ ಚ ಹಸಿಮೆಣಸು- 2 ಕೊತ್ತಂಬರಿ ಸೊಪ್ಪು- ಸ್ವಲ್ಪ, ನಿಂಬೆರಸ- 1 ಟೇಬಲ್ ಚಮಚೆ ಎಣ್ಣೆ- 1 ಟೇಬಲ್ ಚಮಚ, ಉಪ್ಪು- 1ಟೀ ಚಮಚೆ

ಇದನ್ನೂ ಓದಿ: ಪಾಲಕ್ ನಿಂದ ಏನೆಲ್ಲ ಮಾಡಬಹುದು ಗೊತ್ತಾ?

ಮಾಡುವ ವಿಧಾನ: ಮೊದಲಿಗೆ ಪ್ರಾನ್‌ ನ್ನು ಶುಚಿ ಮಾಡಿಕೊಳ್ಳಬೇಕು. ನಂತರ ಉಪ್ಪು ಹಾಕಿ ಬೇಯಿಸಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕುದಿಸಿ ಆರಿಸಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಬೇಯಿಸಿದ ಪ್ರಾನ್, ಕರಿಮೆಣಸು ಪುಡಿ, ಕತ್ತರಿಸಿದ ಹಸಿಮೆಣಸು,  ಹಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆರಸ ಹಾಗೂ ಅಗತ್ಯವಿದ್ದರೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆನಿಯನ್ ಮಿಕ್ಸ್ ಪ್ರಾನ್ ರೆಡಿಯಾದಂತೆಯೇ…

ರುಚಿಯಾದ ಪ್ರಾನ್ ಪಲಾವ್

ಪಲಾವ್ ಎಂದಾಕ್ಷಣ ಚಿಕನ್ ಮತ್ತು ಮಟಾನ್ ಪಲಾವ್ ನೆನಪಾಗುತ್ತದೆ. ಆದರೆ ಪ್ರಾನ್(ಸೀಗಡಿ)ನಿಂದಲೂ ರುಚಿಯಾದ ಪಲಾವ್ ಮಾಡಬಹುದಾಗಿದೆ. ಹಾಗಾದರೆ ಪ್ರಾನ್ ಪಲಾವ್ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಪ್ರಾನ್- ಮುನ್ನೂರು ಗ್ರಾಂ, ಅಕ್ಕಿ(ಜೀರಾ/ಬಾಸುಮತಿ)- ಇನ್ನೂರೈವತ್ತು ಗ್ರಾಂ, ಎಣ್ಣೆ- ಅರ್ಧ ಬಟ್ಟಲು, ಉಪ್ಪು- ಮೂರು ಚಮಚ, ತೆಂಗಿನಹಾಲು- ಅರ್ಧ ಬಟ್ಟಲು, ಮೊಸರು- ಕಾಲು ಬಟ್ಟಲು, ಗರಂಮಸಾಲೆ-ಒಂದು ಟೀ ಚಮಚ, ಈರುಳ್ಳಿ- ದೊಡ್ಡದು ಒಂದು, ಬೆಳ್ಳುಳ್ಳಿ-ಶುಂಠಿಪೇಸ್ಟ್- ಒಂದು ಚಮಚ, ಟೊಮ್ಯಾಟೋ- ಎರಡು, ಹಸಿಮೆಣಸು- ಎರಡು, ಮೆಣಸಿನಪುಡಿ- ಎರಡು ಟೀ ಚಮಚ, ಅರಸಿನ- ಅರ್ಧ ಟೀ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ: ಮೊದಲಿಗೆ ಪ್ರಾನ್‌ನ ನಾಳ ತೆಗೆದು ಶುಚಿಗೊಳಿಸಿ ಅದಕ್ಕೆ ಅರಸಿನ ಮತ್ತು ಸ್ವಲ್ಪ ಉಪ್ಪು ಹಾಕಿ ಕಲೆಸಿ ಇಡಬೇಕು. ಈರುಳ್ಳಿ ಮತ್ತು ಟೊಮ್ಯಾಟೋವನ್ನು ಚಿಕ್ಕದಾಗಿ ಹಚ್ಚಿಕೊಳ್ಳಬೇಕು. ಕೊತ್ತಂಬರಿ ಸೊಪ್ಪನ್ನು ಕೂಡ ಹಚ್ಚಿಟ್ಟುಕೊಳ್ಳಬೇಕು. ಹಸಿ ಮೆಣಸನ್ನು ಅರ್ಧಕ್ಕೆ ಕತ್ತರಿಸಿ ಮಧ್ಯೆ ಸೀಳಬೇಕು. ಇನ್ನೊಂದೆಡೆ ಒಂದು ಚಮಚೆ ಉಪ್ಪು ಹಾಕಿ ಅನ್ನವನ್ನು ಸಂಪೂರ್ಣವಾಗಿ ಬೇಯಿಸದೆ ಮುಕ್ಕಾಲು ಭಾಗ ಬೇಯಿಸಿ ಬಸಿದಿಟ್ಟುಕೊಳ್ಳಬೇಕು.

ದನ್ನೂ ಓದಿ: ಆಲೂ ಕಟ್ಲೆಟ್, ಆಲೂಚಾಟ್, ಆಲೂಪಲಾವ್ ಮಾಡುವುದು ಹೇಗೆ?

ಆ ನಂತರ ಕುಕ್ಕರ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಕಾದ ಬಳಿಕ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಹುರಿಯಬೇಕು. ಅದು ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ ಟೊಮ್ಯಾಟೋ ಹಾಕಬೇಕು ಅದನ್ನು ಚೆನ್ನಾಗಿ ಹುರಿಯಬೇಕು ಅದು ಸಂಪೂರ್ಣ ಬೆಂದು ಮೃದುವಾಗುತ್ತಿದ್ದಂತೆಯೇ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ತಿರುಗಿಸಬೇಕು. ಅದಕ್ಕೆ ಹಸಿಮೆಣಸು, ಮೆಣಸಿನ ಪುಡಿ ಹಾಕಿ ಚೆನ್ನಾಗಿ ತಿರುಗಿಸಿ ನಂತರ ಪ್ರಾನ್‌ನ್ನು ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಬಳಿಕ ತೆಂಗಿನಹಾಲು ಮತ್ತು ಮೊಸರು ಹಾಕಿ ಎರಡು ನಿಮಿಷ ಬಿಟ್ಟು ಅದಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ತಿರುವಿ ಕಲೆಸಬೇಕು. ಇದಕ್ಕೆ ಉಪ್ಪು, ಕೊತ್ತಂಬರಿ ಸೊಪ್ಪು, ಗರಂ ಮಸಾಲ ಹಾಕಿ. ಬಳಿಕ ಮುಚ್ಚಳ ಮುಚ್ಚಿ ಎರಡು ನಿಮಿಷ ಹೆಚ್ಚು ಉರಿಯಲ್ಲಿಯೂ ನಂತರ ಹತ್ತು ನಿಮಿಷಗಳ ಕಾಲ ನಿಧಾನ ಉರಿಯಲ್ಲಿ ಬೇಯಿಸಬೇಕು. ನಂತರ ಇಳಿಸಿ. ಒಂದೈದು ನಿಮಿಷ ಬಿಟ್ಟು ಕುಕ್ಕರ್ ಮುಚ್ಚಳ ತೆಗೆದು ಸೌಟ್ ನಿಂದ ಚೆನ್ನಾಗಿ ಕಲೆಸಿದರೆ ಪ್ರಾನ್ ಪಲಾವ್ ಸಿದ್ಧವಾದಂತೆಯೇ…

admin
the authoradmin

ನಿಮ್ಮದೊಂದು ಉತ್ತರ

Translate to any language you want