Mysore

ಹಿರೀಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಕ್ಯಾಲೆಂಡರ್ ಬಿಡುಗಡೆ

ಹುಣಸೂರು(ಹಿರಿಕ್ಯಾತನಹಳ್ಳಿಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿ ಹಿರೀಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಮುಖ್ಯ ಶಿಕ್ಷಕಿ ಸರಳ ಮಾತನಾಡಿ ಕಹಿ ಘಟನೆಗಳು ಮರು ಕಳಿಸದಂತೆ ತಪ್ಪುಗಳು ಆಗದ ರೀತಿ ಗೊತ್ತಿದ್ದು ಗೊತ್ತಿಲ್ಲದೆ ನಡೆದ  ಘಟನೆಗಳನ್ನು  ಮರೆತು ಬರುವ ದಿನಗಳನ್ನ ನೋಡಿಕೊಳ್ಳಬೇಕು. ಒಳ್ಳೆಯ ಕೆಲಸಗಳನ್ನು ಮಾಡಿದಾಗ ಸಂತೋಷವಾಗುತ್ತದೆ ಬೇರೆಯವರಿಗೂ ಸಂತೋಷಪಡುವ ಕೆಲಸ ಮಾಡುವಷ್ಟು ದಿನ ಎಂದು ಆತ್ಮವಲೋಕನ ಮಾಡಿಕೊಳ್ಳಬೇಕಾಗುತ್ತದೆ. ರೈತರೂ ಕೂಡ ತಮ್ಮ ವ್ಯವಸಾಯದ ಬದುಕಿನಲ್ಲಿ ಸಮಯ ದಿನಗಳನ್ನು ನಿಗದಿ ಮಾಡಿಕೊಳ್ಳುತ್ತಾರೆ ಅದೇ ರೀತಿ ಓದುವ ದಿನಗಳಲ್ಲಿ ತಾವು ಕೂಡ ವೇಳಾಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಬೇಕು ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಮಹಾದೇವೇಗೌಡ ಮಾತನಾಡಿ 2026 ರಲ್ಲಿ  ಏನು ಸಾಧನೆ ಮಾಡಬೇಕು ಎಂದು ಗುರಿಯಾಗಿಟ್ಟುಕೊಳ್ಳಬೇಕು. ಕ್ಯಾಲೆಂಡರ್ ಪ್ರತಿ ತಿಂಗಳು ಒಂದು ಪುಟ ಬದಲಾವಣೆಯಾದಂತೆ, ತಮ್ಮ ಭವಿಷ್ಯದ ದಿನಗಳನ್ನು ಉಜ್ವಲ ರೀತಿ ಆಗುವಂತೆ ಬದಲಾವಣೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿರೇನಹಳ್ಳಿ ಅಶೋಕ್, ಉಪಾಧ್ಯಕ್ಷ ಜಯಶೀಲ, ಸದಸ್ಯರುಗಳಾದ ಜಯಣ್ಣ, ಸಂಪತ್ತು, ಮಾಲಿಂಗ, ಪುಟ್ಟ ನಾಯಕ, ಮಮತಾ, ಶ್ರುತಿ, ರವಿ, ಹರೀಶ್, ಸೇರಿದಂತೆ ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want