ಮೈಸೂರು: ಅಂತರಾ ಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮಹಾ ಶಿವರಾತ್ರಿಯ ಅಂಗವಾಗಿ ಹುಣಸೂರು ರಸ್ತೆ ಯಲ್ಲಿರುವ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿಗೆ ಇರುವ 50/80 ಮುಡಾ ನಿವೇಶನದಲ್ಲಿ, ಗುಜರಾತ್ ನಲ್ಲಿರುವ ಸೋಮನಾಥ ಮಂದಿರದ ತದ್ರೂಪ ನಿರ್ಮಾಣ ಮಾಡಲಾಗುತ್ತಿದೆ.
ಇದನ್ನು ಸಾರ್ವಜನಿಕರ ವೀಕ್ಷಣೆಗಾಗಿ ಫೆಬ್ರವರಿ 8 ರಿಂದ 22 ರವರೆಗೆ ತೆರೆಯಲಾಗುತ್ತದೆ. ಇಲ್ಲಿ ಪ್ರತಿನಿತ್ಯ ವೇದಿಕೆ ಸಭೆಗಳು, ಸಾಂಸ್ಕೃತಿಕ, ನೃತ್ಯ, ಹಾಡುಗಾರಿಕೆ, ಸನ್ಮಾನಗಳು,ನವ ಚೈತನ್ಯ ದುರ್ಗೆಯರ ದರ್ಶನ, ಮೈಂಡ್ ಸ್ಪಾ, ಸಾಹಿತ್ಯ ಪ್ರದರ್ಶನ, ಮುಂತಾದ ಕಾರ್ಯಕ್ರಮ ಗಳಿರುತ್ತವೆ.

ಇದರ ಪೂರ್ವಭಾವಿ ಸಭೆಯು ಹುಣಸೂರು ರಸ್ತೆಯಲ್ಲಿರುವ ರಾಜಯೋಗ ರಿಟ್ರೀಟ್ ಸೆಂಟರ್ ನಲ್ಲಿ ನಡೆದ್ದು ಈ ವೇಳೆ ಮೈಸೂರು ಭಾಗದ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜೀ ಪ್ರಾಂಶುಪಾಲರಾದ ಬಿಕೆ ರಂಗನಾಥ್, ಚಾಮರಾಜನಗರ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣೀಜಿ, ಬಿ.ಕೆ.ದಾನೇಶ್ವರೀಜೀ, ಮಾಜಿ ಶಾಸಕಿ ಪರಿಮಳ ನಾಗಪ್ಪ, ರಾಜು ಉಪವಿಭಾಗದ ರಾಜಯೋಗ ಶಿಕ್ಷಕಿಯರು ಹಾಗೂ ರಾಜಯೋಗ ವಿದ್ಯಾರ್ಥಿಗಳು ಹಾಜರಿದ್ದರು.








