State

ಮಧುರ ಅಶೋಕ್ ಕುಮಾರ್ ಅವರ ಅಭಿನಂದನಾ ಗ್ರಂಥ ‘ಮಧುರಾಂತರಂಗ’ ಬಿಡುಗಡೆ

ಬೆಂಗಳೂರು: ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಸಮುದಾಯಭವನದಲ್ಲಿ ಮಧುರ ಅಶೋಕ್ ಕುಮಾರ್ ಅವರ ಅಭಿನಂದನಾ ಗ್ರಂಥ “ಮಧುರಾಂತರಂಗ” ಬಿಡುಗಡೆ ಸಮಾರಂಭವು ಅರ್ಥಪೂರ್ಣವಾಗಿ ನೆರವೇರಿತು. ಸಾಹಿತ್ಯ, ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳ ಸಂಗಮವಾಗಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು ಭಾಗವಹಿಸಿ ಕೃತಿಯ ಮಹತ್ವವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ಅವರು ಮಧುರ ಅಶೋಕ್ ಕುಮಾರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿ ವೀರೇಶ್ ಅವರು ಉಪಸ್ಥಿತರಿದ್ದರು. ಸಮಾಜಮುಖಿ ಚಿಂತನೆ, ಸೇವಾ ಮನೋಭಾವ ಮತ್ತು ಮಾನವೀಯ ಕಾಳಜಿಯಿಂದ ಗುರುತಿಸಿಕೊಂಡಿರುವ ಮಧುರ ಅಶೋಕ್ ಕುಮಾರ್ ಅವರು ಇದುವರೆಗೆ 117 ಬಾರಿ ರಕ್ತದಾನ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮಧುರ ಅಶೋಕ್ ಕುಮಾರ್ ಅವರು ಕೇವಲ ಸಾಹಿತ್ಯ ಮತ್ತು ಸಮಾಜಸೇವೆಗೆ ಸೀಮಿತರಾಗದೆ, ತಮ್ಮ ಬದುಕಿನ ಮೂಲಕ ಮಾನವೀಯ ಮೌಲ್ಯಗಳನ್ನು ಸಾರುತ್ತಿರುವುದು ಯುವಜನತೆಗೆ ಪ್ರೇರಣೆ. ಇಂತಹ ಸಾಧಕರನ್ನು ಗೌರವಿಸುವುದು ಸಮಾಜದ ಜವಾಬ್ದಾರಿ‌. ಮಧುರ ಅಶೋಕ್ ಕುಮಾರ್ ಅವರು ಶರಣು ವಿಶ್ವವಚನ ಫೌಂಡೇಷನ್‌ನ ಆಜೀವ ಸದಸ್ಯರಾಗಿದ್ದು, ಸಂಸ್ಥೆಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಧುರಾಂತರಂಗ ಕೃತಿಗೆ ಲೇಖನ ನೀಡಿರುವ ವಚನ ಕುಮಾರಸ್ವಾಮಿ ದಂಪತಿಗಳನ್ನು ಮಧುರ ಅಶೋಕ್ ಕುಮಾರ್ ಅವರು ಗೌರವಿಸಿದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want