Mysore

ಗಾವಡಗೆರೆ ರೈತ ಸೇವಾ ಸಹಕಾರ ಸಂಘದ 2026ರ ಕ್ಯಾಲೆಂಡರ್ ಬಿಡುಗಡೆ..

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಗಾವಡಗೆರೆ ರೈತ ಸೇವಾ ಸಹಕಾರ ಸಂಘದ 2026ರ ದಿನದರ್ಶಿಕೆ (ಕ್ಯಾಲೆಂಡರ್)ನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಅಧ್ಯಕ್ಷರಾದ ಸಣ್ಣೇಗೌಡ, ನಿರ್ದೇಶಕರಾದ  ಬಿ.ಎಂ.ತಾರಕೇಶ್ವರಿ, ಹೊನ್ನಪ್ಪ ರಾವ್ ಕಾಳಿಂಗೆ, ತಿಮ್ಮನಾಯ್ಕ ಶ್ರೀಕಂಠ, ರುಕ್ಮಾಂಗದ ಟಿ.ಎನ್, ಮಹದೇವೇಗೌಡ , ಮಹಾದೇವ ಎ, ಮಂಜುನಾಥ್ ಬಿ ಎ, ಶೋಭಾ, ಶ್ವೇತಾ ಹಾಗೂ ಎಸ್ ಬಿಐ ಬ್ಯಾಂಕಿನ ವ್ಯವಸ್ಥಾಪಕರಾದ ಟಿಎಸ್ ತೇಜಸ್ವಿ ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ ಆನಂದ್  ಉಪಸ್ಥಿತರಿದ್ದರು.

ನೂತನ ವರ್ಷದ ಕ್ಯಾಲೆಂಡರ್ ನ್ನು ರೈತರು ಮತ್ತು ಷೇರುದಾರರು ಸಂಘದಿಂದ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೆ ರೈತ ಸೇವಾ ಸಹಕಾರ ಸಂಘದಲ್ಲಿ ಇ ಸ್ಟಾಂಪ್ ವ್ಯವಸ್ಥೆಯನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಛಾಪಾ ಕಾಗದವನ್ನು ಅಗತ್ಯವಿದ್ದವರು ಸಂಘದಿಂದ ಪಡೆದುಕೊಳ್ಳಬಹುದಾಗಿದೆ ಎಂದು   ಈ ವೇಳೆ ತಿಳಿಸಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want