Latest

ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ ಸಂದೇಶಗಳು.. ಗಣ್ಯರು ಅವರ ಬಗ್ಗೆ ನುಡಿದ ನುಡಿಮುತ್ತುಗಳು ಏನೇನು?

ನರೇಂದ್ರನಾಥ ದತ್ತನು ಸ್ವಾಮಿ ವಿವೇಕಾನಂದ ರಾಗಿ ಬೆಳೆದದ್ದು ಬೆಳಗಿದ್ದು ಸುವರ್ಣಇತಿಹಾಸ. ಸನಾತನ ಧರ್ಮದ ಜೀರ್ಣೋದ್ಧಾರಗೊಳಿಸಿ ಶಾಶ್ವತ ನೆಲೆ-ಸೆಲೆ ಪುನರ್‌ಸ್ಥಾಪಿಸಿದ ಮಹಾಮಾನವ ಇವರಾಗಿದ್ದಾರೆ. ಇವರು ಈ ಜಗತ್ತಿಗೆ ಸಾರಿದ ಸಂದೇಶ ಚಿರವಾಗಿ ಉಳಿದಿದೆ. ಜತೆಗೆ ಅವರ ಕುರಿತಂತೆ ಗಣ್ಯಾತಿಗಣ್ಯರು ತಮ್ಮದೇ ಆದ ನುಡಿ ಮುತ್ತುಗಳನ್ನು ಸುರಿಸಿದ್ದು ಎಲ್ಲವನ್ನೂ ಬರಹಗಾರರಾದ ಕುಮಾರಕವಿ ನಟರಾಜ್ ನಮ್ಮ ಮುಂದಿಟ್ಟಿದ್ದಾರೆ.

*ಆಧ್ಯಾತ್ಮಿಕ ಜೀವನ ಅನುಸರಿಸುವ 100 ಜನರಪೈಕಿ 80 ಜನ ಆಷಾಢಭೂತಿ ಇದ್ದರೆ, 15ಜನ ಮತಿಭ್ರಮಿತರು, ಉಳಿದ 5 ಜನ ಮಾತ್ರ ಸತ್ಯದರ್ಶನ ಮಾಡಬಹುದು?! *ಹೇ ಭಗವಾನ್, ಬೇರೆಬೇರೆಕಡೆ ಹುಟ್ಟಿದ ನದಿಗಳು ಸಾಗರದಲ್ಲಿ ಸಂಗಮಗೊಳ್ಳುವಂತೆ, ಮಾನವರು ನೇರವಾಗಿಯೊ ವಕ್ರವಾಗಿಯೊ ಇರುವ ಪಥಗಳನ್ನು ಅನುಸರಿಸಿದರೂ ಅವೆಲ್ಲವೂ ನಿನ್ನೆಡೆಗೆ ಕರೆದೊಯ್ಯುತ್ತವೆ.

*ಪ್ರತಿಯೊಂದು ಆತ್ಮದಲ್ಲಿಯೂ ದಿವ್ಯತೆ ಹುದುಗಿದೆ. ಈ ಸುಪ್ತ ದಿವ್ಯತೆಯನ್ನು ಬಾಹ್ಯ-ಆಂತರಿಕ ಪ್ರಕೃತಿಯ ನಿಗ್ರಹದಿಂದ ವ್ಯಕ್ತ ಪಡಿಸುವುದೇ ಜೀವನದ ಗುರಿ.ಇದನ್ನು ಕರ್ಮ ಯೋಗದಿಂದಾಗಲಿ, ಭಕ್ತಿಯೋಗದಿಂದಾಗಲಿ, ರಾಜಯೋಗದಿಂದಾಗಲಿ, ಜ್ಞಾನಯೋಗ ದಿಂದಾಗಲಿ, ಯಾವುದಾದರೊಂದು ಮಾರ್ಗದಿಂದ ಅಥವ ಈಎಲ್ಲ ಮಾರ್ಗಗಳ ಸಂಯೋಗದಿಂದಾಗಲಿ ಸಾಧಿಸಿ ಮುಕ್ತ ರಾಗೋಣ. ಇದೇ ನಿಜಧರ್ಮದ ಸರ್ವಸ್ವ ಸಿದ್ಧಾಂತ ನಂಬಿಕೆ ಅಂತರಂಗ ಬಹಿರಂಗದ ಆಚಾರ ವಿಚಾರ!

*ಒಪ್ಪೊತ್ತಿನ ಅನ್ನಬಟ್ಟೆ ನೀಡದ ವೇದಾಂತ, ಪವಿತ್ರಗ್ರಂಥ, ಮೂಢನಂಬಿಕೆ, ವಾಮಾಚಾರ, ದೇವಸ್ಥಾನ, ಹರಕೆ, ವಿಗ್ರಹ, ಆರಾಧನೆ, ಆಣೆಪ್ರಮಾಣ, ಪ್ರತಿಜ್ಞೆ, ನಾಕ-ನರಕ, ಎಲ್ಲವೂ ಗೌಣ. *ದುರ್ಬಲರಿಗೆ ಈ ಜನ್ಮ ಅಥವ ಯಾವುದೇ ಜನ್ಮದಲ್ಲಾಗಲಿ ಸ್ಥಳವಿಲ್ಲ.  ಏಕೆಂದರೆ, ದುರ್ಬಲತೆಯು ಗುಲಾಮಗಿರಿಗೆ ದಾರಿಯಾಗುತ್ತದೆ ಮತ್ತು ಎಲ್ಲಾ ರೀತಿಯ ಭೌತಿಕ-ಮಾನಸಿಕ ಕಷ್ಟಗಳಿಗೆ ಎಡೆ ಮಾಡಿಕೊಡುತ್ತದೆ.  ಆದ್ದರಿಂದ, ದುರ್ಬಲತೆಯೇ ನಿಜವಾದ ಸಾವು!

ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರುವ ವಿವೇಕಾನಂದ ವಾಣಿಗಳನ್ನು ಒಂದೆಡೆ ಕಲೆಹಾಕಿ ಸಂಗ್ರಹಯೋಗ್ಯ ಕೈಪಿಡಿ ಮಾಡಬಹುದು. ಈಗಲೂ ಇವುಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡು ಸಿದ್ಧಾಂತ ನೆಲೆಗಟ್ಟಿನ ಸುಖಜೀವನ ಹೊರೆಯುತ್ತ ಪ್ರಾಮಾಣಿಕವಾಗಿ ಆರಾಧಿಸಬಹುದು, ಜೈಹೋ..ವಿವೇಕಾನಂದ!

ವಿವೇಕಾನಂದರ ಬಗ್ಗೆ ಗಣ್ಯರ ನುಡಿಮುತ್ತುಗಳು ಹೀಗಿವೆ…

*ವಿಶ್ವದ ಜ್ಞಾನಿ ವಿವೇಕದ ವಿಜ್ಞಾನಿ –ಅಮೆರಿಕದ ರೂಸ್‌ವೆಲ್ಟ್,

*ಅಜ್ಞಾನದಿಂದ ಜ್ಞಾನದೆಡೆಗೆ, ಅಹಂಕಾರದಿಂದ ನಿರಹಂಕಾರದೆಡೆಗೆ ಮನುಕುಲವನ್ನ ಕರೆದೊಯ್ದ ಅವತಾರಪುರುಷ

-ಬ್ರಿಟನ್ ದೊರೆಜಾರ್ಜ್-ರಾಣಿಎಲಿಜ಼ಬೆತ್

*ಶತಮಾನಗಳಿಂದ ತಣ್ಣಗಿದ್ದ ನಮ್ಮದೇಶಕ್ಕೆ ಧರ್ಮಜಾಗೃತದ ಬಿಸಿಮುಟ್ಟಿಸಿದ ಪರ್ಯಾಯ ಸೂರ್ಯ –ರಷ್ಯಾದ ಲೆನಿನ್

*ಅನುಭವಾಮೃತದ ಅನರ್ಘ್ಯರತ್ನ -ಇಟಲಿ ಪ್ರಧಾನಿ ಮುಸಲೋನಿ

*ನಾಸ್ತಿಕ ಚಕ್ರವರ್ತಿಯಾಗಿದ್ದ ನನ್ನನ್ನು ಆಸ್ತಿಕ ಸೈನಿಕನನ್ನಾಗಿಸಿದ ಪರಿವರ್ತಕ -ಹಿಟ್ಲರ್

*ಮತಾಂಧರ ಅಧಿಕಾರಾಂಧರ ಸ್ವಾರ್ಥವನ್ನು ದೂರ ಮಾಡಬಲ್ಲ ರಿಯಲ್ ಕಾಮ್ರೇಡ್ –ಚೀನ ಕ್ರಾಂತಿಕಾರಿ ಮಾವೋತ್ಸೆತುಂಗ್

*ಸೂರ್ಯನಿಂದ ಕತ್ತಲೆ ದೂರವಾಗುವಂತೆ ನರೇಂದ್ರನಿಂದ ಅಜ್ಞಾನ ದೂರವಾಗಿ ಜ್ಞಾನವು ಬೆಳಗಿತು –ಪೆರಿಯಾರ್(ಈ.ವಿ.ರಾಮಸ್ವಾಮಿ)

*ಮೌಢ್ಯದ ಭೂತವನ್ನೋಡಿಸಿ ಮನುಷ್ಯ ಧರ್ಮದ ದೇವತೆಯನ್ನ ಪ್ರತಿಷ್ಠಾಪಿಸಲು ಇಡೀ ಜೀವನವನ್ನೆ ಮುಡಿಪಾಗಿಟ್ಟ ಹಿರಿಯಣ್ಣ. –ಅರವಿಂದೊಘೋಶ್

*ಅಂದಿನ ವಿವೇಕವಾಣಿಯ ಪ್ರತಿಧ್ವನಿಯಿಂದ ಪ್ರಪಂಚವೆ ಕೆಲಕಾಲ ಸ್ತಬ್ಧಗೊಂಡಿತ್ತು -ಸರ್ದಾರ್‌ಪಟೇಲ್

*ತನ್ನನ್ನು ಮೋಹಿಸಿದ ಮೋಹಿನಿಯ ಮನಃಪರಿವರ್ತನೆ ಮಾಡಿದ ಜಗದೋದ್ಧಾರಕ –ಸರೋಜಿನಿನಾಯ್ಡು

*ಕೋವಿಗುಂಡು ದಂಡುದಾಳಿ ಇಲ್ಲದೆ ವಿಶ್ವ ಧರ್ಮಯುದ್ಧ ಗೆದ್ದ ಆಧ್ಯಾತ್ಮಿಕ ವೀರಯೋಧ. ಈಗ ಬದುಕಿದ್ದಿದ್ದರೆ ಅನುದಿನವೂ ನಾನು ಕಾಯಕ ಆರಂಭಿಸುವ ಮೊದಲು ಅವರ ಪಾದಕಮಲಕ್ಕೆ ನಮಸ್ಕರಿಸುತ್ತಿದ್ದೆ. -ಸುಭಾಶ್‌ಚಂದ್ರಬೋಸ್

*ನರೇಂದ್ರನಂಥ ಮಾನವತಾವಾದಿ ಮತ್ತು ಧರ್ಮಪ್ರವರ್ತಕ ‘ನಭೂತೋ ನಭವಿಷ್ಯತೀ’ -ರವೀಂದ್ರನಾಥಠಾಗೋರ್

*ವಿಶ್ವಧರ್ಮದ ಪ್ರತೀಕ, ಸನಾತನ ಹಿಂದೂ ಧರ್ಮದ ಪುನರ್‌ ಸ್ವಾತಂತ್ರ್ಯನೇತಾರ –ಬಾಲಗಂಗಾಧರತಿಲಕ್

*ನಾನು ಭಾರತಕ್ಕೆ ಸ್ವತಂತ್ರ ಕೊಡಿಸಿರಬಹುದು, ಅದರೆ ನನಗೂ ಮುಂಚೆ ಭಾರತ ಧರ್ಮಕ್ಕೆ ಸ್ವತಂತ್ರ ಕೊಡಿಸಿದ ಯೋಧ –ಗಾಂಧೀಜಿ

*ಭಾರತೀಯ ಎಂಬ ಪದಕ್ಕೆ ಅನ್ವರ್ಥ, ಸನಾತನ ಸಂಸ್ಕೃತಿ ಪರಂಪರೆಯ ಜ್ಞಾನಸೂರ್ಯ –ಕಿಂಗ್‌ಮೇಕರ್ ರಾಜಾಜಿ

*ನಾನು ಕಂಡ ಜಗತ್ತಿನ ಮೊಟ್ಟಮೊದಲ ವಿಶ್ವಮಾನವ –ರಾಷ್ಟ್ರಕವಿ ಕುವೆಂಪು

ವಿಶ್ವದಾದ್ಯಂತ ಭಾರತಮಾತೆಯನ್ನು ಮೆರವಣಿಗೆ ಮಾಡಿದ ಅಪ್ಪಟ ಹಿಂದೂದೇಶಭಕ್ತ –ವರಕವಿದ.ರಾ.ಬೇಂದ್ರೆ

*ಕಾಳಿಮಾತೆಯ ವರಪುತ್ರ ನರೇಂದ್ರ ಮುಂದಿನಜನ್ಮದಲ್ಲಾದರೂ ನಮ್ಮ ಪುತ್ರನಾಗಿ ಜನಿಸಲಿ.-ಶಾರದಾದೇವಿ ಮತ್ತು ರಾಮಕೃಷ್ಣ ಪರಮಹಂಸ.

ಏಳಿ ಎದ್ದೇಳಿ ಗುರಿ ತಲುಪುವ ತನಕ ವಿರಮಿಸದಿರಿ.. ಹಿಂದೂ ಧರ್ಮದ  ಪುನರುತ್ಥಾನಗೈದ ಸ್ವಾಮಿ ವಿವೇಕಾನಂದ..

admin
the authoradmin

7 ಪ್ರತಿಕ್ರಿಯೆಗಳು

  • ರಾಮಕೃಷ್ಣ ಪರಮಹಂಸರ ಪಟ್ಟಾ ಶಿಷ್ಯ ಮತ್ತು ಈ ಜಗತ್ತು ಕಂಡ ಮೊಟ್ಟಮೊದಲ ಹಾಗೂ ಕಟ್ಟಕಡೆಯ ಅಧ್ಬುತ ವ್ಯಕ್ತಿ-ಶಕ್ತಿ, ಸ್ವಾಮಿ
    ವಿವೇಕಾನಂದರ ಬಗ್ಗೆ ಬರೆದಿರುವ ಬಹಳ ಸೊಗಸಾದ ಉಪಯುಕ್ತ ಲೇಖನ ಬರಹಗಾರ ಕುಮಾರಕವಿಯವರಿಗೂ ಪ್ರಕಟಿಸಿದ ಜನಮನ ಪತ್ರಿಕೆಯವರಿಗೂ ಅನಂತಾನಂತ ಧನ್ಯವಾದ, ಶ್ರೀನಿವಾಸ್ ಮತ್ತು ಮಿತ್ರರು, ದೊಡ್ಡಬಳ್ಳಾಪುರ.

  • ರಾಮಕೃಷ್ಣ ಪರಮಹಂಸರ ಪಟ್ಟಾ ಶಿಷ್ಯ ಮತ್ತು ಈ ಜಗತ್ತು ಕಂಡ ಮೊಟ್ಟಮೊದಲ ಹಾಗೂ ಕಟ್ಟಕಡೆಯ ಅಧ್ಬುತ ವ್ಯಕ್ತಿ-ಶಕ್ತಿ, ಸ್ವಾಮಿ
    ವಿವೇಕಾನಂದರ ಬಗ್ಗೆ ಬರೆದಿರುವ ಬಹಳ ಸೊಗಸಾದ ಉಪಯುಕ್ತ ಲೇಖನ ಬರಹಗಾರ ಕುಮಾರಕವಿಯವರಿಗೂ ಪ್ರಕಟಿಸಿದ ಜನಮನ ಪತ್ರಿಕೆಯವರಿಗೂ ಅನಂತಾನಂತ ಧನ್ಯವಾದ, ಶ್ರೀನಿವಾಸ್ ಮತ್ತು ಮಿತ್ರರು, ದೊಡ್ಡಬಳ್ಳಾಪುರ ಟೌನ್

  • ರಾಮಕೃಷ್ಣಪರಮಹಂಸ ರವರ ಶಿಷ್ಯೋತ್ತಮ ಲೋಕಮಾನ್ಯ ಪುರುಷೋತ್ತಮ ಸ್ವಾಮಿವಿವೇಕಾನಂದ ರವರ ಬಗ್ಗೆ ಅತಿ ಉತ್ತಮ ಲೇಖನ ಬರೆದ ಶ್ರೇಷ್ಟ ಹಿರಿಯ ಕವಿ ನಟರಾಜರವರಿಗೆ ಕನ್ನಡ ಕುಲಕೋಟಿಯ ಹಾಗೂ ದೇಶಭಕ್ತ ಭಾರತೀಯ ರೆಲ್ಲರ ಪರವಾಗಿ ಗೌರವಪೂರ್ಣ ನಮಸ್ಕಾರ, ಜನಮನ ಪತ್ರಿಕೆಯವರಿಗೂ ನಮ್ಮ ಧನ್ಯವಾದ. ಯಶೋದಮ್ಮ, ವಿಜಯನಗರ, ಬೆಂಗಳೂರು

  • ರಾಮಕೃಷ್ಣಪರಮಹಂಸ ರವರ ಶಿಷ್ಯೋತ್ತಮ ಲೋಕಮಾನ್ಯ ಪುರುಷೋತ್ತಮ ಸ್ವಾಮಿವಿವೇಕಾನಂದ ರವರ ಬಗ್ಗೆ ಅತಿ ಉತ್ತಮ ಲೇಖನ ಬರೆದ ಶ್ರೇಷ್ಟ ಹಿರಿಯ ಕವಿ ನಟರಾಜರವರಿಗೆ ಕನ್ನಡ ಕುಲಕೋಟಿಯ ಹಾಗೂ ದೇಶಭಕ್ತ ಭಾರತೀಯ ರೆಲ್ಲರ ಪರವಾಗಿ ಗೌರವಪೂರ್ಣ ನಮಸ್ಕಾರ, ಜನಮನ ಪತ್ರಿಕೆಯವರಿಗೂ ನಮ್ಮ ಧನ್ಯವಾದ, ಅಭಿನಂದನೆ. ಯಶೋದಮ್ಮ, ನಿವೃತ್ತ ಪ್ರಾಧ್ಯಾಪಕಿ, ವಿಜಯನಗರ, ಬೆಂಗಳೂರು

  • Excellent and exciting article on SPIRITUAL STALWART SWAMY VIVEKANANDA written by another Excellent senior citizen KUMARAKAVI B.N.NATARAJA 👏 👌 with plenty of useful information to increase knowledge hugely by world citizens especially (Indian) youth 👍,Thank you all.
    KANNAN Naidu, oorgaum, KGF, KOLAR DIST

ನಿಮ್ಮದೊಂದು ಉತ್ತರ

Translate to any language you want