CinemaLatest

ಬಿಗ್ ಬಾಸ್ ಕಪ್ ಗೆದ್ದು ಬೀಗಿದ ಗಿಲ್ಲಿನಟ… 12ನೇ ಆವೃತಿಗೆ ವರ್ಣರಂಜಿತ ತೆರೆ.. ಗಿಲ್ಲಿ ನಟ ಹೇಳಿದ್ದೇನು?

ಬೆಂಗಳೂರು:ಕನ್ನಡ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಭಾರೀ ಕುತೂಹಲ ಕೆರಳಿಸಿದ್ದ ಕಲರ್ಸ್ ಕನ್ನಡದ ಬಿಗಬಾಸ್ ಶೋ ನ 12ನೇ ಆವೃತ್ತಿಯ ಕಪ್ ನ್ನು ಗಿಲ್ಲಿನಟ  ಗೆದ್ದು ಬೀಗಿದ್ದಾರೆ. ಆ ಮೂಲಕ ಬಿಗ್ ಬಾಸ್ ಶೋಗೆ ತೆರೆ ಎಳೆಯಲಾಗಿದೆ. ಈ ಶೋ ಭಾರೀ ಕುತೂಹಲ ಕೆರಳಿಸಿತ್ತು. ಅಷ್ಟೇ ಅಲ್ಲದೆ ರಾಜ್ಯ ದೇಶ, ವಿದೇಶಗಳಲ್ಲಿನ ಕನ್ನಡಿಗರ ಮನಗೆದ್ದಿದ್ದಲ್ಲದೆ, ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿತು. ಅಷ್ಟೇ ಅಲ್ಲದೆ ಹೊಸ ದಾಖಲೆಗೂ ಈ ಶೋ ಕಾರಣವಾಗಿದೆ.

ಸುಮಾರು 114 ದಿನಗಳ ಕಾಲ ನಡೆದ ಶೋದಲ್ಲಿ 24 ಅಭ್ಯರ್ಥಿಗಳ ಪೈಕಿ ಆರು ಮಂದಿ ಫೈನಲ್ ಗೆ ಬಂದಿದ್ದರು. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ರಘು ಹಾಗೂ ಧನುಷ್  ಪೈಕಿ ಆರನೆಯವರಾಗಿ ಧನುಷ್ ಹೊರಬರುವ ಮೂಲಕ ಶಾಕ್ ನೀಡಲಾಗಿತ್ತು. ಅದಾದ ಬಳಿಕ ರಘು, ಕಾವ್ಯ ಮನೆಯಿಂದ ಹೊರ ಬಂದರು. ಕೊನೆಯಲ್ಲಿ ಗಿಲ್ಲಿ, ಅಶ್ವಿನಿಗೌಡ, ರಕ್ಷಿತಾ ಉಳಿದುಕೊಂಡರು.

ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕರೆದುಕೊಂಡ ಬಂದ ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ಎರಡನೇ ರನ್ನರ್ ಎಂದು ಅಶ್ವಿನಿಗೌಡ ಅವರನ್ನು ಘೋಷಿಸಲಾಯಿತು. ಇದಾದ ನಂತರ ಗಿಲ್ಲಿ ನಟ ಮತ್ತು ರಕ್ಷಿತಾ ಇಬ್ಬರ ಕೈಹಿಡಿದು ನಿಂತ ಸುದೀಪ್ ಅವರು ಗಿಲ್ಲಿನಟನ ಕೈಎತ್ತಿ ವಿನ್ನರ್ ನ್ನು ಘೋಷಿಸುತ್ತಿದ್ದಂತೆಯೇ ಅಭಿಮಾನಿಗಳು ಜೈಘೋಷ ಮೊಳಗಿಸಿ ಹುಚ್ಚೆದ್ದು ಕುಣಿದಿದ್ದಾರೆ.

ಗೆಲುವಿನ ಬಳಿಕ ಮಾಧ್ಯಮದ  ಜೊತೆ ಮಾತನಾಡಿದ ಅವರು, ಇದೆಲ್ಲವೂ ನನಗೆ ನಂಬೋಕೆ ಆಗುತ್ತಿಲ್ಲ.  ಹೊರಗಡೆ ಬಂದ ಮೇಲೆ ಇದು ನಿಜ ಅನ್ನಿಸ್ತಿದೆ. ಬಂದಿರೋ 50 ಲಕ್ಷದಲ್ಲಿ ಯಾವುದಾದ್ರೂ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಮೈಕ್ ಇದ್ಯಾ ಅಂತ ನೋಡಿಕೊಳ್ತಿದ್ದೀನಿ. ನಾನ್ ದೊಡ್ಡಮ್ಮ‌.. ದೊಡ್ಡಮ್ಮ ದ್ವಾಸೆ ಕೊಡು.. ಹಾಡನ್ನ ಸ್ಕೂಲ್‌ಗೆ ಹೋಗುವಾಗ ಕಲಿತಿದ್ದು, ಅದು ಹಾಗೆ ಮನೇಲಿ ಹೇಳಿದ್ದು. ಆಮೇಲೆ ಇಷ್ಟು ಫೇಮಸ್ ಆಯ್ತು ಆ ಹಾಡು. ಮಕ್ಕಳಿಗೆಲ್ಲ ಇಷ್ಟ ಆಗಿದೆ ಅನ್ನೋದು ಆಚೆ ಬಂದ್ಮೇಲೆ ಗೊತ್ತಾಯ್ತು

ಬಿಗ್ ಬಾಸ್ ಗೆ ಎಂಟ್ರಿ ಕೊಡುವಾಗ ಜಂಟಿಯಾಗಿ ನಾನು ಮತ್ತು ಕಾವ್ಯ ಹೋಗಿದ್ವಿ. ಆವಾಗ ಸುಮ್ನೆ ಹೇಳಿದ್ದು, ಅದೇ ಸಿಂಕ್‌ ಆಗೋಯ್ತು. ನಾವು 6 ಜನ ಫೈನಲಿಸ್ಟ್‌ ಇದ್ವಲ್ಲ. ನಮಗೆ ಎಷ್ಟು ಟೆನ್ಷನ್ ಆಗ್ತಿತ್ತು. ಟಾಪ್‌ 6ನಲ್ಲಿ ಇರೋರಲ್ಲಿ ಯಾರಾದರು ಒಬ್ಬರು ನನ್ನ ಪಕ್ಕ ನಿಲ್ತಾರೆ ಅಂತ ಮನಸ್ಸಿಗೆ ಅನ್ನಿಸಿತ್ತು. ಆದರೆ, ಊಹೆ ಮಾಡೋಕು ಆಗ್ತಿರಲಿಲ್ಲ ಏನಾಗುತ್ತೆ ಅಂತ ಎಂದು ಗೆಲುವಿನ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.ಚಡ್ಡಿ, ಬನಿಯನ್ನೇ ನಂಗಿಷ್ಟ ಎಂದಿದ್ದಾರೆ.

ಇನ್ನು ಗಿಲ್ಲಿನೇ ಗೆಲ್ಲೋದು ಎನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಸುಮಾರು 40ಕೋಟಿಗೂ ಹೆಚ್ಚು ಮತಗಳು ಬಂದಿದ್ದವು. ಅದು ಏನೇ ಇರಲಿ ಆರಂಭದಿಂದಲೂ ಕುತೂಹಲ ಕೆರಳಿಸಿಕೊಂಡು ಬಂದಿದ್ದ ಬಿಗ್ ಬಾಸ್ ಶೋ ಮುಗಿದಿದೆ ಮುಂದಿನ ಬಿಗ್ ಬಾಸ್ ಆರಂಭವಾಗುವ ತನಕ ಕಾಯುವುದು ಅ

 

admin
the authoradmin

ನಿಮ್ಮದೊಂದು ಉತ್ತರ

Translate to any language you want