Mysore

ಅಪ್ರಾಪ್ತರು ವಾಹನ ಚಲಾಯಿಸಿದರೆ ಅವರ ಪೋಷಕರಿಗೆ ದಂಡ, ಶಿಕ್ಷೆ.. ನ್ಯಾಯಾಧೀಶ ಗೋವಿಂದಯ್ಯ ಎಚ್ಚರಿಕೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ) :– ಸಂಚಾರಿ ನಿಯಮಗಳು ಎಲ್ಲರ ಸುರಕ್ಷತೆಗಾಗಿ ರೂಪಿಸಿದ್ದು, 18ವರ್ಷದೊಳಗಿನವರು ಬೈಕ್ ಓಡಿಸುವುದು ಅಪರಾಧ, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಹ ಸಂಚಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲದಿದ್ದಲ್ಲಿ ನಿಮ್ಮ ಜೀವನ, ಕುಟುಂಬ ಅನಾಥವಾಗಲಿದೆ ಎಂದು 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋವಿಂದಯ್ಯನವರು ಎಚ್ಚರಿಸಿದರು.

ನಗರದ ಬಿಜಿಎಸ್ ಪಿ.ಯು.ಕಾಲೇಜಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರಸಂಘ ಆಯೋಜಿಸಿದ್ದ 37ನೇ ರಾಷ್ಟಿಯ ರಸ್ತೆ ಸುರಕ್ಷತಾ ಮಾಸಾಚರಣೆ ಮತ್ತು ರಾಷ್ಟ್ರೀಯ ಯುವದಿನಾಚರಣೆ ಉದ್ಘಾಟಿಸಿ ಮಾತನಾಡಿ, ನಿಯಮ ಪಾಲನೆ ನಿಮ್ಮ ಆದ್ಯ ಕರ್ತವ್ಯವಾಗಬೇಕು. ಬೇಜವಾಬ್ದಾರಿತನ ಧೋರಣೆ ಬಿಡಬೇಕು. 18ವರ್ಷ ತುಂಬಿದ ನಂತರವಷ್ಟೇ ವಿದ್ಯಾರ್ಥಿಗಳು ವಾಹನ ಚಾಲನೆಗೆ ಅರ್ಹರು.  ಸಾರಿಗೆ ಇಲಾಖೆಯ ಮೂಲಕ ಚಾಲನ ಪರವಾನಗಿ, ವಾಹನ ಮಾಲೀಕತ್ವ ಮತ್ತು ವಿಮೆ ಇದ್ದಲ್ಲಿ ಹೊಂದಿದ್ದಲ್ಲಿ ಮಾತ್ರ ವಾಹನ ಚಾಲನೆ ಮಾಡಬೇಕು. ಅಪ್ರಾಪ್ತರು ಚಾಲನೆ ಮಾಡಿ ಅಪಘಾತವಾದಲ್ಲಿ ಪೊಷಕರಿಗೆ ದಂಡ ಹಾಗೂ ಶಿಕ್ಷೆಯಾಗಲಿದೆ. ವಿದ್ಯಾರ್ಥಿಗಳು ಶಿಸ್ತು, ಕಾನೂನು ಪಾಲನೆ ಮತ್ತು ಕಾನೂನಿನ ಅರಿವು ತಿಳಿದುಕೊಂಡು ಸತ್ಪ್ರಜೆಗಳಾಗಿ ಎಂದರು.

ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜೀವನ ಪಾಠ ಅತಿ ಮುಖ್ಯವಾದದ್ದು, ದುಶ್ಚಟಗಳಿಗೆ ಜೀವನ ಹಾಳು ಮಾಡಿಕೊಳ್ಳದೆ ಮನೆಯಿಂದಲೇ   ಉನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪಿಯುಸಿ ನಿಮ್ಮ ಜೀವನದ ಟರ್ನಿಂಗ್‌ಪಾಯಿAಟ್, ಮುಂದೆ ನೀವು ಉನ್ನತ ಹುದ್ದೆ, ಉತ್ತಮ ವ್ಯಕ್ತಿಯಾಗುವ ಗುರಿಯನ್ನಿಟ್ಟುಕೊಂಡು  ಓದು, ಜೀವನ ಮೌಲ್ಯದ ಕಡೆಗೆ ಆದ್ಯತೆ ನೀಡಬೇಕು. ವಿದ್ಯೆ ಕಲಿಸಿದ ಗುರುಗಳು, ಶಿಕ್ಷಣ ಕಲ್ಪಿಸಿದ ತಂದೆ-ತಾಯಿಗೆ ಚಿರಋಣಿಯಾಗಿರಿ, ಒಳ್ಳೆಯಹವ್ಯಾಸವನ್ನು ಬೆಳೆಸಿಕೊಳ್ಳಿ, ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸುವಂತೆ  ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಯಾಜ್‌ಪಾಷಾ ಸಂಚಾರ ನಿಯಮಗಳು, ಅವುಗಳ ಪಾಲನೆ, ವಾಹನಗಳ ಬಳಕೆ ಮುಂತಾದವುಗಳ ಕುರಿತು ಮಾಹಿತಿ ನೀಡಿದರಲ್ಲದೆ 18 ವರ್ಷ ತುಂಬಿದವರು ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಿದಲ್ಲಿ ಇಲಾಖೆವತಿಯಿಂದ ನಿಮ್ಮ ಮೊಬೈಲ್‌ಗೆ ಮಾಹಿತಿ ಬರಲಿದ್ದು, ಅಂದು ಕಚೇರಿಗೆ ಬಂದು ಟ್ರಯಲ್ ನೀಡಿದಲ್ಲಿ ನಿಯಮದಂತೆ ಡಿ.ಎಲ್. ಮಾಡಿಕೊಡಲಾಗುವುದೆಂದರು.   ವಕೀಲ ವೆಂಕಟೇಶ್ ಹಿರಿಯ ಮೋಟಾರು ವಾಹನ ನಿರೀಕ್ಷಕ ಡಿ.ಎಂ.ಮಹೇಶ್ ಮಾತನಾಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಮ್ರತಾ ಎಸ್.ಹೊಸಮಠï, ಸಹಾಯಕ ಸರಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ, ವಕೀಲರ ಸಂಘದ ಕಾರ್ಯದರ್ಶಿ ಎಚ್.ಜೆ.ಸಂದೀಪ್, ನಿರೀಕ್ಷಕ ಕೆ.ಜೆ.ತ್ಯಾಗರಾಜು, ವಕೀಲ ಎಚ್.ವಿ.ವೆಂಕಟೇಶ್, ಪ್ರಾಂಶುಪಾಲರಾದ ಕುಮುದಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want