Mysore

ಗೀತಾಂಜಲಿ ಶಾಲೆಯಲ್ಲಿ ನಡೆದ “ಅರಳು ಪ್ರತಿಭೆ” ಕಾರ್ಯಕ್ರಮದಲ್ಲಿ  ಚಿತ್ತಾರ ಮೂಡಿಸಿದ ಚಿಣ್ಣರು

ಮೈಸೂರು: ನಗರದ ಶ್ರೀರಾಂಪುರ ಎರಡನೇ ಹಂತದ ಬೆಮೆಲ್ ಬಡಾವಣೆಯಲ್ಲಿರುವ ಗೀತಾಂಜಲಿ ಇಂಟರ್ನ್ಯಾಷನಲ್ ಗ್ಲೋಬಲ್ ಸ್ಕೂಲ್ ನಲ್ಲಿ  ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ “ಅರಳು ಪ್ರತಿಭೆ” ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ವಿವಿಧ ಚಿತ್ರಗಳನ್ನ ಬಿಡಿಸಿ ಬಣ್ಣಗಳಿಂದ ಆಕರ್ಷಣೀಯವಾಗಿಸಿ ಬಹುಮಾನಗಳನ್ನು ಪಡೆದರು.

ಗಣರಾಜ್ಯೋತ್ಸವದ ಅಂಗವಾಗಿ ಶಾಲೆಯ ನೂತನ ಸುಸಜ್ಜಿತ ಕ್ಯಾಂಪಸ್ ನಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು  ಪಾಲ್ಗೊಂಡಿದ್ದರೆ, ಅವರುಗಳ ಪೋಷಕರು  “ಅರಳು ಪ್ರತಿಭೆ” ಗಳನ್ನು ಪ್ರೋತ್ಸಾಹಿಸಿದರು.

ಸ್ಪರ್ಧೆ ನಂತರ ಏರ್ಪಡಿಸಲಾಗಿದ್ದ ವೇದಿಕೆಯ ಕಾರ್ಯಕ್ರಮದಲ್ಲಿ ಗೀತಾಂಜಲಿ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಆದಿಶೇಷನ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅವರು ಮಾತನಾಡಿ” ಮಕ್ಕಳ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ರಚನಾತ್ಮಕ ಕಲಿಕೆ ಹಾಗೂ ಗುಣಮಟ್ಟದ ಶಿಕ್ಷಣ ದೊಂದಿಗೆ , ಎಳೆಯ ಮನಸ್ಸುಗಳಿಗೆ ಉತ್ತಮ ಶಾಲಾ ಪರಿಸರ ಹಾಗೂ ಶ್ರೇಷ್ಠ  ಮೌಲ್ಯಗಳನ್ನು ಕಲಿಸುವುದು ನಮ್ಮ ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ  ಜ್ಯೋತಿ ಗುರುಕುಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪುಷ್ಪಜ್ಯೋತಿ ಅವರು ಮಾತನಾಡಿ ” ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಭಾರತೀಯ ಸಂಸ್ಕೃತಿಯ ಮಹತ್ವ, ಸಾಹಿತ್ಯ ,ಸಂಗೀತ, ನೃತ್ಯ ಕಲೆ ಹಾಗೂ ಶ್ರೇಷ್ಠ ಗ್ರಂಥಗಳಾದ ಮಹಾಭಾರತ, ರಾಮಾಯಣ, ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಗಳಲ್ಲಿರುವ ಮಹತ್ವದ ಸಾರಗಳನ್ನು ಶಿಕ್ಷಕರು ಶಾಲೆಯಲ್ಲಿ ಹಾಗೂ ಪೋಷಕರು ಮನೆಯಲ್ಲಿ ಕಲಿಸಬೇಕು ಎಂದರು. ಮಕ್ಕಳ ಹೆದರು ಪೋಷಕರು ಮೊಬೈಲ್ ಬಳಸದೆ ಪುಸ್ತಕದ ಅಭಿವೃದ್ಧಿ ಬಳಸಿಕೊಳ್ಳಬೇಕು. ಇಂತಹ ಪರಿಸರದಲ್ಲಿ ಬೆಳೆದ ಮಕ್ಕಳು ಉತ್ತಮ ಪ್ರಜೆಯಾಗಿ ರೂಪುಗೊಂಡು ಭವಿಷ್ಯವನ್ನು ಉನ್ನತವಾಗಿ ರೂಪಿಸಿಕೊಳ್ಳುತ್ತಾರೆ ಎಂದರು.

ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಮೂರು ವಿಭಾಗಗಳಲ್ಲಿ ವಿಜೇತರಾಗಿ ಪ್ರಶಸ್ತಿ ಫಲಕ ಪಡೆದುಕೊಂಡರು. ಅಲ್ಲದೆ ಪಾಲ್ಗೊಂಡು ಚಿತ್ರಕಲೆ ಬಿಡಿಸಿದ ಎಲ್ಲಾ ಮಕ್ಕಳಿಗೂ ಸರ್ಟಿಫಿಕೇಟ್ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗೀತಾಂಜಲಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ, ಸೌಮ್ಯ ಆದಿಶೇಷನ್ ಗೌಡ , ಪುತ್ರ , ಪ್ರಶ್ನೆಗಳಾದ ನಂಜೇಗೌಡ ಹಾಗೂ ಸುಧಾ, ವ್ಯವಸ್ಥಾಪಕ ಪನ್ನಗಪ್ರಭು,  ಕರ್ನಾಟಕ ಮುಕ್ತ ವಿವಿ ಪ್ರಾಧ್ಯಾಪಕ ಪ್ರೊಫೆಸರ್ ಪಾಂಡುರಂಗ, ಸಾತಗಳ್ಳಿ ಮಹಾತ್ಮ ಗಾಂಧಿ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಕುಮಾರ್,  ಗೀತಾಂಜಲಿ ಶಾಲೆಯ ಶಿಕ್ಷಕಿಯರಾದ ಪುಷ್ಪ, ಜಯಶ್ರೀ, ಸಿಬ್ಬಂದಿ ಲಕ್ಷ್ಮಿ, ಮಹೇಶ, ಲಕ್ಷ್ಮಮ್ಮ ಮನೋಹರ ಸೇರಿದಂತೆ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

 

admin
the authoradmin

ನಿಮ್ಮದೊಂದು ಉತ್ತರ

Translate to any language you want