LatestMysore

ತಂದ್ರೆಕೊಪ್ಪಲು ಗ್ರಾಮದ ರಸ್ತೆ ಡಾಂಬರೀಕರಣ ಕಾಮಗಾರಿ ಪರಿಶೀಲಿಸಿದ ಶಾಸಕ ರವಿಶಂಕರ್

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕಿನ ತಂದ್ರೆಕೊಪ್ಪಲು ಗ್ರಾಮದ ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಬಗ್ಗೆ  ಸಾಮಾಜಿಕ ಜಾಲತಾಣ ಮತ್ತು ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಶನಿವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಗ್ರಾಮಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಗುತ್ತಿಗೆದಾರ ಮಹೇಶ್ ಎಂಬುವರಪತ್ನಿ ಗ್ರಾಮಸ್ಥರೊಂದಿಗೆ ನಡೆದುಕೊಂಡ ವರ್ತನೆಯಿಂದ ಕೋಪಗೊಂಡ ಗ್ರಾಮಸ್ಥರು ಡಾಂಬರ್ ಹಾಕಿದ ಕೆಲವೆ ಗಂಟೆಯಲ್ಲಿ ಡಾಂಬರ್ ಕಿತ್ತಕಾರಣ ಅದು ಬಂದಿದೆ ಆದರೆ ಕೆಲವು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿರುವ ಹಾಗೆ ಯಾವುದೆಕಳಪೆ ನಡೆದಿಲ್ಲ ಎಂದರು.

ಗುತ್ತಿಗೆದಾರ ಮಹೇಶ್‌ರ ಪತ್ನಿ ಗ್ರಾಮಸ್ಥರೊಂದಿಗೆ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಗುತ್ತಿಗೆದಾರರ ವಿರುದ್ದ ಹರಿಹಾಯ್ದ ಶಾಸಕರು ಗ್ರಾಮಸ್ಥರು ಕೇಳಿದ ಹಾಗೂ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಎಚ್ಚರಿಕೆ ನೀಡಿದರು.

ಕೃಷ್ಣರಾಜನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಕಳೆದ 30ವರ್ಷಗಳಿಂದ ಡಾಂಬರ್‌ಕಾಣದ ಹಲವಾರು ಗ್ರಾಮಗಳಲ್ಲಿ ರಸ್ತೆ ಅಭಿವೃದ್ದಿ ಮಾಡಲಾಗುತ್ತಿದ್ದು, ಡಾಂಬರೀಕರಣ ನಡೆಯುವಾಗ ಆಯಾಗ್ರಾಮದ ಜನತೆ ಮುಂದೆ ನಿಂತು ಕಾಮಗಾರಿ ಕಳಪೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಹೇಳಿದ ಶಾಸಕರು, ಸರಕಾರದ ಯಾವುದೆ ಕಾಮಗಾರಿ ನಡೆಯುವ ಸಂಧರ್ಭದಲ್ಲಿ ಕ್ವಾಲಿಟಿ ಆಫ್‌ ವರ್ಕ್ ಗೆ ಯಾರಿದಂಲೂ ಯಾವುದೇ ರೀತಿಯ ಕಾಂಪ್ರಮೈಸ್ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದೆ ನಡೆಯುವ ಯಾವುದೇ ಕಾಮಗಾರಿಯಲ್ಲಿ ಈರೀತಿ ಆರೋಪ ಕೇಳಿ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗಳು ಪಟ್ಟಣಕ್ಕೆ ಬಂದು ಗುದ್ದಲಿಪೂಜೆ ಮಾಡಿ ಶೇ80ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು ಮುಂದಿನ ಎರಡು ವರ್ಷದಲ್ಲಿ ಮತ್ತಷ್ಟು ಅಭಿವೃದ್ದಿ ಕೆಲಸ ಮಾಡುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಹಾಜರಿದ್ದ ಗುತ್ತಿಗೆದಾರ ಶಾಸಕರ ಸಮ್ಮುಖದಲ್ಲಿ ಗ್ರಾಮಸ್ಥರ ಕ್ಷಮೆ ಯಾಚಿಸಿ ನನ್ನ ಪತ್ನಿ ನಡೆದುಕೊಂಡ ರೀತಿಯಿಂದ ಈರೀತಿ ಗೊಂದಲ ಸೃಷ್ಠಿಯಾಯಿತು ಈ ವಿಚಾರದಲ್ಲಿ ನಾನು ಗ್ರಾಮಸ್ಥರ ಕ್ಷಮೆಯಾಚಿಸುವುದಾಗಿ ಹೇಳಿದರಲ್ಲದೆ ಕಾಮಗಾರಿ ಕಳಪೆಯಾಗದಂತೆ ಮಾಡಿಕೊಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಾಲಿಗ್ರಾಮ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ತಾಲೂಕು ಕುರುಬರಸಂಘದ ಅಧ್ಯಕ್ಷ  ಚರನಹಳ್ಳಿಶಿವಣ್ಣ, ಮುಖಂಡರಾದ ಮಂಚನಹಳ್ಳಿಅನಂತ, ಚಿಬುಕಹಳ್ಳಿ ಬಸವರಾಜು, ಕೆಸ್ತೂರುಕೊಪ್ಪಲು ಪ್ರಕಾಶ್, ಕಾಮೇನಹಳ್ಳಿ ಶ್ರೀನಿವಾಸ್, ತಂದ್ರೆಧರ್ಮ, ಲೋಕೋಪಯೋಗಿ ಇಲಾಖೆ ಎಇಇ ಸುಮಿತಾ ಮತ್ತಿತರರು ಹಾಜರಿದ್ದರು.

admin
the authoradmin

Leave a Reply

Translate to any language you want