LatestMysore

ಮೈಸೂರಿನಲ್ಲಿ ಅದ್ಧೂರಿ ಬಸವ ಜಯಂತಿ ಆಚರಣೆ… ನಗರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಜೀವಧಾರ ಗಿರೀಶ್

ಮೈಸೂರು: ಮೈಸೂರಿನ ಬಸವ ಬಳಗಗಳ ಒಕ್ಕೂಟ ಮತ್ತು ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ  ಸಹಕಾರದೊಂದಿಗೆ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಸಲುವಾಗಿ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಅದರಂತೆ ನಗರ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಜೀವಧಾರ ಗಿರೀಶ್ ಅವರನ್ನು ನೇಮಕ ಮಾಡಿರುವುದಾಗಿ ಬಸವ ಬಳಗಗಳ ಒಕ್ಕೂಟದ  ಅಧ್ಯಕ್ಷ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಸುತ್ತೂರು ವೀರ ಸಿಂಹಾಸನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶಯದಂತೆ ಇದುವರೆಗೆ ಬಸವ ಜಯಂತಿಯನ್ನು ಆಚರಿಸಿಕೊಂಡು ಬಂದಿದ್ದು ಈ ಬಾರಿಯೂ ಅವರ ಮಾರ್ಗದಲ್ಲಿ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು, ನಮ್ಮ ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಧ್ಯೇಯವಾಕ್ಯದೊಂದಿಗೆ ಅರ್ಥಪೂರ್ಣವಾಗಿ ಏಪ್ರಿಲ್ 19 ಮತ್ತು 20ರಂದು ಎರಡು ದಿನಗಳ ಕಾಲ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ

ಕಾರ್ಯಕ್ರಮದ ಯಶಸ್ವಿಗೆ ನಗರ ಪ್ರಚಾರ ಸಮಿತಿಯು ಪ್ರಮುಖವಾಗಿದ್ದು,  ಸಮಾಜಮುಖಿ ಕಾರ್ಯಗಳಲ್ಲಿ  ಜೀವಧಾರ ಗಿರೀಶ್ ಅವರ ಮುಂದಾಳತ್ವ ಮತ್ತು ಕಾರ್ಯನಿಷ್ಠೆ ಹಾಗೂ ಸಂಘಟನಾ ಚತುರತೆಯನ್ನು ಗಮನಿಸಿ ನಗರ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ಜವಬ್ದಾರಿಗಳನ್ನು ನೀಡಲಾಗಿದೆ. ಸಮಸ್ತ ಬಸವಾಭಿಮಾನಿ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕೆಂದು ಎಂ ಚಂದ್ರಶೇಖರ್ ಅವರು ಮನವಿ ಮಾಡಿದ್ದಾರೆ.

ಶರಣರ ಕಾಯಕ, ದಾಸೋಹ ತತ್ವ ಗುಬ್ಬಿ ತೋಟದಪ್ಪ ಬದುಕಿಗೆ ಆದರ್ಶ: ಕಲ್ಮಳ್ಳಿ ನಟರಾಜು

admin
the authoradmin

Leave a Reply

Translate to any language you want