LatestMysore

ಸಾರ್ವಜನಿಕರೇ ಗಮನಿಸಿ… ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್‌ ಕೋಡ್ ಬದಲಾವಣೆ…

ಮಡಿಕೇರಿ: ಅಂಚೆ ಇಲಾಖೆಯ ಆಡಳಿತಾತ್ಮಕ ಸುಧಾರಣೆ ಹಾಗೂ ಟಪಾಲು ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ದೃಷ್ಠಿಯಿಂದ ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್‌ಕೋಡ್ ಅನ್ನು ಬದಲಾವಣೆ ಮಾಡಲಾಗಿದೆ.  ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ.

ಈ ಹಿಂದೆ ಮಡಿಕೇರಿ ವ್ಯಾಪ್ತಿಯಲ್ಲಿ ಮಡಿಕೇರಿ ಪ್ರಧಾನ ಅಂಚೆ ಕಚೇರಿ 571201ನ್ನು ಮುಖ್ಯವಾಗಿಟ್ಟುಕೊಂಡು ಈ ವ್ಯಾಪ್ತಿಯ ಅಂಚೆ ಕಚೇರಿಗಳಿಗೆ ಇದೇ ಪಿನ್ ಸಂಖ್ಯೆ ಅನ್ವಯವಾಗುತ್ತಿತ್ತು. ಆದರೀಗ ಅಂಚೆ ಇಲಾಖೆ ಬದಲಾವಣೆ ಮಾಡಿದ್ದು,  571202 ಮತ್ತು 571203ನ್ನು ಸೇರಿಸಿದ್ದು, ಈ ವ್ಯಾಪ್ತಿಗೆ ಬರುವ ಗ್ರಾಮಗಳ  ಅಂಚೆ ಕಚೇರಿಗಳನ್ನು ವಿಭಾಗಿಸಲಾಗಿದ್ದು, ಇನ್ಮುಂದೆ ಸಾರ್ವಜನಿಕರು ತಮ್ಮ ವ್ಯಾಪ್ತಿಗೆ ಬರುವ ಪಿನ್ ಕೋಡ್ ಗಳನ್ನು ಬಳಸುವುದು ಅಗತ್ಯವಾಗಿದೆ.

ಮಡಿಕೇರಿ ಪ್ರಧಾನ ಅಂಚೆ ಕಚೇರಿ 571201ಕ್ಕೆ ಮಡಿಕೇರಿ ವ್ಯಾಪ್ತಿಗೆ ಬರುವ ಪ್ರದೇಶಗಳು, ವಿದ್ಯಾನಗರ ಉಪ ಅಂಚೆ ಕಚೇರಿ ಮಡಿಕೇರಿ ವ್ಯಾಪ್ತಿಗೆ ಬರುವ ಪ್ರದೇಶಗಳು, ವಿದ್ಯಾನಗರ ಉಪ ಅಂಚೆ ಕಚೇರಿ ಒಳಪಡಲಿದೆ.

571202ಕ್ಕೆ ಗಾಳಿಬೀಡು ಶಾಖಾ ಕಚೇರಿ, ಕಾಲೂರು ಶಾಖಾ ಕಚೇರಿ, ಕೆ.ನಿಡುಗಣೆ ಶಾಖಾ ಕಚೇರಿ, ಮಡಿಕೇರಿ ಡಿ.ಒ.ಸಿ ಉಪ ಅಂಚೆ ಕಚೇರಿ  ಸೇರಿದ್ದು ಉಳಿದಂತೆ 571203ಕ್ಕೆ ಅರುವತೊಕ್ಲು ಶಾಖಾ ಕಚೇರಿ (ಮಡಿಕೇರಿ), ಅವಂದೂರು ಶಾಖಾ ಕಚೇರಿ, ಬೆಟ್ಟಗೇರಿ ಶಾಖಾ ಕಚೇರಿ, ಬಿಳಿಗೇರಿ ಶಾಖಾ ಕಚೇರಿ, ಬೋಯಿಕೇರಿ ಶಾಖಾ ಕಚೇರಿ, ಚೇರಾಂಬಾಣೆ ಶಾಖಾ ಕಚೇರಿ, ಹೆರವನಾಡು ಶಾಖಾ ಕಚೇರಿ, ಕಾಂಡನಕೊಲ್ಲಿ ಶಾಖಾ ಕಚೇರಿ, ಕಗ್ಗೋಡ್ಲು ಶಾಖಾ ಕಚೇರಿ, ಕೊಟ್ಟೂರು ಶಾಖಾ ಕಚೇರಿ, ಕೊಯ್ನಾಡ್ ಶಾಖಾ ಕಚೇರಿ, ಮದೇ ಶಾಖಾ ಕಚೇರಿ, ಮಕ್ಕಂದೂರು ಶಾಖಾ ಕಚೇರಿ, ತಾಳತ್ತಮನೆ ಶಾಖಾ ಕಚೇರಿ ಒಳಪಡಲಿದೆ

ಇನ್ನು ಮುಂದೆ ಬದಲಾಗಿರುವ ಪಿನ್ ಕೋಡ್ ನ್ನು ಬಳಸುವಂತೆ ಮನವಿ ಮಾಡಲಾಗಿದೆ ಈ ಬಗ್ಗೆ ಕೊಡಗು ವಿಭಾಗದ ಅಂಚೆ ಅಧೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

admin
the authoradmin

Leave a Reply