ArticlesLatest

ಗಾನಕೋಗಿಲೆ ಲತಾ ಮಂಗೇಶ್ಕರ್ ನ್ನು ನೆನೆಯುತ್ತಾ… ಕವನದ ಸಮರ್ಪಣೆ…

“ಲತಾ”ಎರಡಕ್ಷರದ ವಿದೂಷಿ ತಾರಾ

ಸಾರ್ವಕಾಲಿಕ ಸಕಲ ಶ್ರೇಷ್ಠ ಶಾರೀರ

ಸಿನಿ ಜಗತ್ತಿನ ಹಿನ್ನೆಲೆ ಗಾಯಕಿಯರ

ಅಸಾಮಾನ್ಯ ಪರ್ವದ ಜೇಷ್ಠ ಶರೀರ

ಗೀತ-ಸಂಗೀತ ಸಾಮ್ರಾಜ್ಯದ ಚಕ್ರವರ್ತಿನಿ

ನೈಟಿಂಗೇಲ್ ಆಫ್ ಇಂಡಿಯ ಮಹಾರಾಣಿ

ಹಳ್ಳಿಯಿಂದ ದಿಲ್ಲಿಯವರೆಗೂ

ಬಡವನಿಂದ ಬಲ್ಲಿದನವರೆಗೂ

ಪಂಡಿತನಿಂದ ಪಾಮರನವರೆಗೂ

ಅರಮನೆಯಿಂದ ಆಲಯದವರೆಗೂ

ಕಿರುಮನೆಯಿಂದ ದಟ್ಟಕಾಡಿನವರೆಗೂ

ಸುಣ್ಣದಗೂಡಿಂದ ಸುಡುಗಾಡಿನವರೆಗೂ

ಗುಡಿಸಲಾಗಲೀ ಮಹಲುಗಳಾಗಲೀ

ಮದುವೆಮುಂಜಿ ಆರತಕ್ಷತೆಯೆ ಇರಲಿ

ನಾಮಕರಣ ಇತ್ಯಾದಿ ಶುಭಕಾರ್ಯವಿರಲಿ

ಪೂಜೆ ಪುನಸ್ಕಾರ ಯಜ್ಞಯಾಗವೆ ಇರಲಿ

ಹುಟ್ಟುಸಾವು ಮಂಗಳಾ ಮಂಗಳ ಯಾವ್ದೆ ಇರಲಿ

ಆಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ

ಆನಂದದಿ ಆಹ್ವಾನಿಸಿ ಆಸ್ವಾದಿಸುವ ದೃಷ್ಟಿ

ಕುಣಿದು ಕುಪ್ಪಳಿಸಿ ನಲಿದುಲಿಯುವ ಸೃಷ್ಟಿ!

ಲತಾ ಗೀತೆಗಳಿಗೆ ಮಾನ್ಯತೆ ಮಾರ್ದನಿ ಧನ್ಯತೆ

ಲತಾಮಂಗೇಶ್ಕರ್ ಧ್ವನಿಪ್ರತಿಧ್ವನಿ ಪ್ರಾಧಾನ್ಯತೆ

ಕೋಗಿಲೆ ನಾಚಿತು ಲತಾ ಕಂಠಮಾಧುರ್ಯಕೆ

ಗಂಧರ್ವರು ಬೆರಗಾದರು ಲತಾಗಾಯನಸಿರಿಗೆ

ವಿಶ್ವಸಂಸ್ಥೆ ಸಭೆಯಲ್ಲಿ ಗಾನಸುಧೆ ಹರಿಸಿದ

ಲಕ್ಷಗಟ್ಟಲೆ ಹಾಡಿ ಗಿನ್ನಿಸ್ ದಾಖಲೆ ಮಾಡಿದ

ಲತಾರ ಅಮೋಘ ಅಪ್ರತಿಮ ಅದ್ಭುತ ಗಾಯನ

ಅನನ್ಯ ಅನಂತ ಅಮೂಲ್ಯ ಆಪ್ಯಾಯಮಾನ

ಅನೇಕ ಪ್ರಶಸ್ತಿ ಸನ್ಮಾನ ಬಿರುದು ಬಹುಮಾನ

ಅಸಂಖ್ಯಾತ ಭಕ್ತರಿಂದ ಅಪೂರ್ವ ಅಭಿಮಾನ

ಕುಮಾರಕವಿಯ ಕಣ್ಣೀರಿನ ಈ ಕವನ ನಮನ

ರವಿ ಚಂದ್ರ ಭೂಮಿ ಇರೋವರೆಗೆ ಅಮರನಿಷ್ಠೆ

ನಿತ್ಯಸತ್ಯ ನಭೋಮಂಡಲ ಮುಟ್ಟುವ ಪರಾಕಾಷ್ಠೆ

ಇವರಿಗಿವರೇ ಸರಿಸಾಟಿ ಮಾಡೋರಿಲ್ಲ ಪೈಪೋಟಿ

ಇಪ್ಪತ್ತನೆ ಶತಮಾನದ ಸ್ತ್ರೀನವರತ್ನ ಪುಣ್ಯಕೋಟಿ

ಕಲಿಯುಗ ಸಂಗೀತಶಾರದೆ ನೀವೇ ಧನುಷ್ಕೋಟಿ

ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಕೋಟಿ ಕೋಟಿ…

admin
the authoradmin

10 Comments

  • Nanu originally from dakshina kannadadavalu. Kaleda 45 varshadinda mumbai nalli nelesiddene. Advisor monthly kannada magazine moolaka KUMARA KAVI NATARAJA ravara parichaya 2 varsadinda ide. Kaleda 3 thingalinda nimma JANAMANA patrike annu whatsapp nalli kalisuttare. Ella lekanagalannu oduttene, uttamavagi bareyuttare. Eega kalisida NANNA MATTU NAMMA KUTUMBADA HAAGU INDIA MATTU PRAPANCHADA ELLARA MECHCHINA GREAT SINGER LATHA JEE bagge Natraj sir bareda kavitheya prati ondu saalugaloo excellent exciting fantastic 👏 😀 👍
    KAVITHA SHENOY, Navi Mumbai, MAHARASHTRA

  • Nanu originally from dakshina kannadadavalu. Kaleda 45 varshadinda mumbai nalli nelesiddene. Advisor monthly kannada magazine moolaka KUMARA KAVI NATARAJA ravara parichaya 2 varsadinda ide. Kaleda 3 thingalinda nimma JANAMANA patrike annu whatsapp nalli kalisuttare. Ella lekanagalannu oduttene, uttamavagi bareyuttare. Eega kalisida NANNA MATTU NAMMA KUTUMBADA HAAGU INDIA MATTU PRAPANCHADA ELLARA MECHCHINA GREAT SINGER LATHA MANGESHKAR RAVARA bagge Natraj sir bareda kavitheya prati ondu saalugalu excellent exciting fantastic 👏 😀 👍 dhanyavadagalu sir. KAVITHA SHENOY, Navi Mumbai, MAHARASHTRA

  • ನನ್ನ ಗೌರವಾನ್ವಿತ ನಟರಾಜಣ್ಣ ರವರು ರಚಿಸಿದ ಲತಾ ಮಂಗೇಶಕರ್ ಕವಿತೆ ತುಂಬ ಸೊಗಸಾದ ಅರ್ಥಪೂರ್ಣ ಹಾಗೂ ಉತ್ತಮ ಪದಗಳ ಜೋಡಣೆ. ಇಂಥ ಅದ್ಭುತ ಪ್ರಾಸದ ಅಮೋಘ ಪದ್ಯವು ನನ್ನ ಮತ್ತು ನನ್ನ ಗೆಳೆತಿಯರ ತನು-ಮನ ಆಕರ್ಷಕಗೊಳಿಸಿ ಮುದ ನೀಡಿತು, ಕುಮಾರಕವಿಯ ಹಂತ ಮೀರಿದ ಅತ್ಯಂತ ಉನ್ನತಮಟ್ಟದ ಪ್ರಬುದ್ಧಕವಿ ಇವರಾಗಿದ್ಥಾರೆ ಎಂದು ಧಾರಾಳವಾಗಿ ಹೆಮ್ಮೆ ಯಿಂದ ಹೇಳಲು ಇಷ್ಟಪಡುತ್ತೇವೆ, ಇಂತಿ, ನಿಮ್ಮ ಅಭಿಮಾನಿ ಓದುಗರು
    ಡಾ.ಕೆ.ಅನಸೂಯ ಹಾಗೂ ಮಿತ್ರರು, ಮೈಸೂರು

  • ನನ್ನ ಗೌರವಾನ್ವಿತ ನಟರಾಜಣ್ಣ ರವರು ರಚಿಸಿದ ಲತಾ ಮಂಗೇಶಕರ್ ಕವಿತೆ ತುಂಬ ಸೊಗಸಾದ ಅರ್ಥಪೂರ್ಣ ಹಾಗೂ ಉತ್ತಮ ಪದಗಳ ಜೋಡಣೆ. ಇಂಥ ಅದ್ಭುತ ಪ್ರಾಸದ ಅಮೋಘ ಪದ್ಯವು ನನ್ನ ಮತ್ತು ನನ್ನ ಗೆಳೆತಿಯರ ತನು-ಮನ ಆಕರ್ಷಕಗೊಳಿಸಿ ಮುದ ನೀಡಿತು, ಕುಮಾರಕವಿಯ ಹಂತ ಮೀರಿದ ಅತ್ಯಂತ ಉನ್ನತಮಟ್ಟದ ಪ್ರಬುದ್ಧಕವಿ ಇವರಾಗಿದ್ಥಾರೆ ಎಂದು ಧಾರಾಳವಾಗಿ ಹೆಮ್ಮೆ ಯಿಂದ ಹೇಳಲು ಇಷ್ಟಪಡುತ್ತೇವೆ, ಇಂತಿ, ನಿಮ್ಮ ಅಭಿಮಾನಿ ಓದುಗರು
    ಡಾ.ಕೆ.ಅನಸೂಯ ಹಾಗೂ ಮಿತ್ರರು, ಮಾನಸಗಂಗೋತ್ರಿ, ಮೈಸೂರು

  • ಭಾರತದ ಖ್ಯಾತ ಹಿನ್ನೆಲೆಗಾಯಕಿ ಲತಾ ಮಂಗೇಶ್ ರವರ ಲೇಖನ/ಕವನ ಅಮೋಘ ಅಪೂರ್ವ. Sathyanarayan(rtd supdt. Mysore University, Mysuru

  • ಭಾರತದ ಖ್ಯಾತ ಹಿನ್ನೆಲೆಗಾಯಕಿ ಲತಾ ಮಂಗೇಶ್ ರವರ ಬಗ್ಗೆ ಅಮೋಘ ಕವನ ಬರೆದು ದೇಶದಾದ್ಯಂತ ಎಲ್ಲರ ವಿಶ್ವಾಸ ಗಳಿಸಿದ ಕುಮಾರಕವಿಯವರಿಗೆ ಧನ್ಯವಾದಗಳು Sathyanarayan(rtd supdt. Mysore University, Mysuru

  • ನನ್ನ ಪಂಚಪ್ರಾಣವಾಗಿದ್ದ ಹಿನ್ನೆಲೆಗಾಯಕಿ ಲತಾಮಂಗೇಶ್ಕರ್ ರವರ ಲೇಖನ ಬರೆದ ವೈವಿಧ್ಯಮಯ ಸಾಂಸ್ಕೃತಿಕ ಲೇಖಕರಾದ ಹಿರಿಯ ಕವಿ ನಟರಾಜ ಸರ್ ರವರಿಗೆ ಕೋಟಿ ಕೋಟಿ ಧನ್ಯವಾದ
    ಶೋಭಾ, ಬೆಳಗಾವಿ

  • ನನ್ನ ಪಂಚಪ್ರಾಣವಾಗಿದ್ದ ಹಿನ್ನೆಲೆಗಾಯಕಿ ಲತಾಮಂಗೇಶ್ಕರ್ ರವರ ಲೇಖನ ಬರೆದ ವೈವಿಧ್ಯಮಯ ಸಾಂಸ್ಕೃತಿಕ ಲೇಖಕರಾದ ಹಿರಿಯ ಕವಿ ನಟರಾಜ ಸರ್ ರವರಿಗೆ ಕೋಟಿ ಕೋಟಿ ಧನ್ಯವಾದಗಳು ಸರ್, ನಮ್ಮ ಮೆಚ್ಚಿನ ಈ-ಪತ್ರಿಕೆ ಜನಮನ ಬಳಗಕ್ಕೂ ವಂದನೆಗಳು ಸರ್, ಶೋಭಾ ರವೀಂದು, ಬೆಳಗಾವಿ

  • ನನ್ನ ಪಂಚಪ್ರಾಣವಾಗಿದ್ದ ಹಿನ್ನೆಲೆಗಾಯಕಿ ಲತಾಮಂಗೇಶ್ಕರ್ ರವರ ಲೇಖನ ಬರೆದ ವೈವಿಧ್ಯಮಯ ಸಾಂಸ್ಕೃತಿಕ ಲೇಖಕರಾದ ಹಿರಿಯ ಕವಿ ನಟರಾಜ ಸರ್ ರವರಿಗೆ ಕೋಟಿ ಕೋಟಿ ಧನ್ಯವಾದಗಳು ಸರ್, ನಮ್ಮ ಮೆಚ್ಚಿನ ಈ-ಪತ್ರಿಕೆ ಜನಮನ ಬಳಗಕ್ಕೂ ವಂದನೆಗಳು ಸರ್, ಶೋಭಾ ರವೀಂದು, ಬೆಳಗಾವಿ ನಗರ

Leave a Reply

Translate to any language you want