ArticlesLatest

ಕೊಡಗಿನ ಜನಮನದ ಜೀವ ನಾಡಿ ಶಕ್ತಿಗೆ 69 ವಸಂತಗಳು  ತುಂಬಿದ ಶುಭಾಶಯಗಳು…

ಕೊಡಗಿನ ಜನಮನದ ಹೆಮ್ಮೆಯ ಪ್ರತೀಕವಾದ ನೀನು ಹೋಳಿಯ ಶುಭ ದಿನದಿ  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಿನಗೆ ಮನ ತುಂಬಿದ ಶುಭಾಶಯಗಳು…. ನಿನಗೆ 69 ವಸಂತಗಳು  ತುಂಬಿದರೂ ಕೂಡ  ಬಹಳಷ್ಟು ಜತನದಿಂದ ಜೋಪಾನದಿಂದ ಮಗುವಿನಂತೆ ಸಲಹುತ್ತಿರುವ ನಿನ್ನ  ತ್ರಿಮೂರ್ತಿ ಗಳಿಗೆ ಶರಣು ಶರಣಾರ್ಥಿಗಳು…

ಎಲೆಲೆ ಶಕ್ತಿ,  ಏನು ನಿನ್ನೀ ಮಾಯಾ ಶಕ್ತಿ…

ನಿನ್ನ ದರ್ಶನವಿಲ್ಲದೇ

ಸೂರ್ಯನ ಉದಯವೇ ಇಲ್ಲ…

ಮನೆಯಂಗಳದಿ ನಿನ್ನ ಆಗಮನವಿಲ್ಲದೇ

ಕಾಫಿ ಟೀ ಸ್ವಾದವೇ ಇಲ್ಲ…

ಜಿಲ್ಲೆಯ ಜನಸಾಮಾನ್ಯರ, ನೊಂದವರ,

ಶೋಷಿತರ ಪಾಲಿನ ಆಶಾಕಿರಣ ನೀನು…

ದಿನಂಪ್ರತೀ ಸೂರ್ಯಾಸ್ತದಿ

ನೀ  ಹೊತ್ತು ತರುವ ಸಮಸ್ಯೆಗಳು

ಸೂರ್ಯಾಸ್ತದ ಹೊತ್ತಿಗೆ

ಪರಿಹರಿಸುವ ಮಾಂತ್ರಿಕ ನೀನು…

ನೀನು ರಜೆ ಮಾಡಿದಾಗ ನಿನ್ನ  ದರ್ಶನವಿಲ್ಲದೆ,

ನಿನ್ನ ಸ್ಪರ್ಶವಿಲ್ಲದೇ, ನೀ ನೀಡುತ್ತಿದ್ದ

ಮಾಹಿತಿಗಳಿಲ್ಲದೇ ಪರದಾಡುವರು

ನಿತ್ಯದ ನಿನ್ನ ಆ  ಓದುಗರು…

ಕೆ.ಎಸ್.ಮೂರ್ತಿ, ಕುಶಾಲನಗರ

 

ಕೊಡಗಿನ ‘ಶಕ್ತಿ’ಯಾದ ಪತ್ರಿಕೆಗೆ 69ನೇ ಹುಟ್ಟುಹಬ್ಬದ ಸಂಭ್ರಮ… ಪತ್ರಿಕೆ ಇಷ್ಟವಾಗುವುದು ಏಕೆ?

admin
the authoradmin

Leave a Reply

Translate to any language you want