ಅಭಿನೇತ್ರಿ ಬಿ.ಸರೋಜಾದೇವಿರವರಿಗೆ ದೊರೆತ ಪುರಸ್ಕಾರಗಳು ಅವರ ಸಾಧನೆಯ ಕಥೆ ಹೇಳುತ್ತವೆ.. ಸಿನಿಮಾ ಬದುಕು ಹೇಗಿತ್ತು?

ಅನವರತ ಕನ್ನಡತಿಯಾಗೆ ಉಳಿಯಬಯಸುವ ಐತಿಹ್ಯ ರಾಜ್ಯದ ಮಹಾನ್ ದೇಶದ ಮೇರುನಟಿ ಸರೋಜಾದೇವಿ ಅವರ ಸಿನಿಮಾ ಬದುಕು ಮತ್ತು ಆ ಸಾಧನೆಗೆ ದೊರೆತ ಪುರಸ್ಕಾರಗಳು ಅನೇಕಾನೇಕ.. ಬರೀ ಸಿನಿಮಾ ಮಾತ್ರವಲ್ಲ ನಿಸರ್ಗ ಮತ್ತು ಪರಿಸರದ ಬಗ್ಗೆ ಗಂಭೀರ ಚಿಂತನೆ ಮಾಡಿದವರು. ರೈತ-ಯೋಧರ ಬಗ್ಗೆ ಹೆಚ್ಚು ಕಾಳಜಿ. ಪ್ರಪಂಚದಾದ್ಯಂತ ವಿಹರಿಸಿದರೂ ಅನ್ಯಭಾಷೆ, ಅನ್ಯಜನ ಕ್ಕಿಂತಲೂ ತಮ್ಮ ಮಾತೃಭಾಷೆ-ಜನ್ಮಭೂಮಿಗೇ ಹೆಚ್ಚುಒಲವು. ಕನ್ನಡ ನಾಡು ನುಡಿ ಜನತೆ ಬಗ್ಗೆ ಇವರ ಉತ್ಸಾಹ-ಪ್ರೋತ್ಸಾಹ, ಬೆಂಬಲ-ಹಂಬಲ, ಸಹಾಯ-ಸಹಕಾರ ವರ್ಣನಾತೀತ.
ಸದಾ ತಮ್ಮವರನ್ನು ತುಸುಹೆಚ್ಚಾಗೇ ಪ್ರೀತಿಸಿ ಗೌರವಿಸುವಂಥ ವಿಶಾಲ ಹೃದಯವಂತಿಕೆಯುಳ್ಳ ಇವರಬಗ್ಗೆ ಕನ್ನಡಿಗರುಸಹ ಅಗಾಧ ಮಮತೆವಾತ್ಸಲ್ಯ ಪ್ರೀತಿಗೌರವ ಇರಿಸಿಕೊಂಡು ಹೆಮ್ಮೆಪಡುತ್ತಾರೆ! 25 ವರ್ಷ ಪರ್ಯಂತ ಭಾರತ ಚಿತ್ರರಂಗದಲ್ಲಿ ಅದ್ವಿತೀಯವಾಗಿ ಮೆರೆದ ನಟಸಾಮ್ರಾಜ್ಞಿ! ಇವರು ಕೃಷ್ಣಸುಂದರಿಯಾದರೂ ಸಿನಿಮಾನಟಿಯಾಗಿ ಓರ್ವ ಕಲಾಪೂರ್ಣರು. ಅಭಿನಯ ಸರಸ್ವತಿಯ ರೂಪು ಲಾವಣ್ಯ ಗಂಭೀರ ನಡೆನುಡಿ ಸರಳ ಸಜ್ಜನಿಕೆ ಗೌರವ ಘನತೆ ಪ್ರಶಸ್ತಿ ಬಹುಮಾನ ಬಿರುದು ಸನ್ಮಾನ ಗೃಹಿಣಿ ಕುಟುಂಬಹೊಣೆಗಾರಿಕೆ ಸಮಾಜಸೇವೆ ಎಲ್ಲದರಲ್ಲೂ ನಿರ್ಮಿಸಿದ ದಾಖಲೆಯನ್ನ ಇದುವರೆಗೆ ವಿಶ್ವ ಚಿತ್ರರಂಗದಲ್ಲಿ ಯಾರೂ ಸರಿಗಟ್ಟಲಾಗಿಲ್ಲ. ಭವಿಷ್ಯದಲ್ಲೂ ಇವೆಲ್ಲ ಸರಣಿದಾಖಲೆಗಳನ್ನು ಮುರಿಯುವುದು ಬಹುಶಃ ಸುಲಭಸಾಧ್ಯವಲ್ಲ?!
ಅಂದು ಒಮ್ಮೆ ಜರುಗಿದ ಘಟನೆ: ಗ್ರೇಟ್ ಬ್ರಿಟನ್ ಸ್ಕಾಲರ್ ಶಿಪ್-ಫೆಲೋಶಿಪ್ ಪಡೆದ, ಎಫಿಶಿಯಂಟ್ ಅಕ್ಯಾಡೆಮಿಶಿಯನ್, ಫಾರಿನ್ ರಿಟರ್ನ್ ಇಂಡಿಯನ್ ಪೊಲಿಟಿಕಲ್ ಸ್ಟಾಲ್ ವಾರ್ಡ್, ಹ್ಯಾಂಡ್ಸಂ ಯೂತ್ ರಾಜಕೀಯ ಮುತ್ಸದ್ದಿ ಇತ್ತೀಚಿಗೆ ನಿಧನರಾದ ಎಸ್.ಎಂ.ಕೃಷ್ಣರನ್ನು ವಿವಾಹವಾಗುವ ಸಂದರ್ಭ ಒಮ್ಮೆ ಮಾತ್ರ ಒದಗಿಬಂದಿತ್ತಂತೆ?! ಆದರೆ ದೈವಲೀಲೆಯಂತೆ 1967ರಲ್ಲಿ ಬೆಂಗಳೂರಿನ ಖ್ಯಾತ ಉದ್ಯಮಿ ಶ್ರೀಹರ್ಷರವರೊಡನೆ ಇವರ ವಿವಾಹವಾಗಿ ಈ ದಂಪತಿಗೆ ಓರ್ವಮಗ ಗೌತಮ್ ರಾಮಚಂದ್ರ, 2 ಹೆಣ್ಣುಮಕ್ಕಳು; ಇಂದ್ರ ಮತ್ತು ಭುವನೇಶ್ವರಿ.
ಬಹಳ ವರ್ಷದ ಗ್ಯಾಪ್ ನಂತರ ಇವರು ಅಭಿನಯಿಸಿದ ಕಟ್ಟಕಡೆಯ ಫಿಲಂ ಪುನೀತ್ ರಾಜಕುಮಾರ್ ನಟಿಸಿದ ನಟಸಾರ್ವಭೌಮ! ಸುಮಾರು 65 ವರ್ಷಕಾಲ 6 ಭಾಷೆಗಳ 200ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಮಹಾ ಅಭಿನೇತ್ರಿ ಡಾ.ಬಿ.ಸರೋಜಾದೇವಿ ಬೆಂಗಳೂರಿನ ತಮ್ಮ ಮನೆಯಲ್ಲಿ ತುಂಬುಜೀವನ ನಡೆಸುತ್ತಿದ್ದಾಗಲೇ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಕೊನೆಗೂ ಭಾರತೀಯಚಿತ್ರರಂಗದ ಭವ್ಯಭವಿತವ್ಯ ಕಲಾರತ್ನ ಅಭಿನಯ ಸರಸ್ವತಿ ದಿನಾಂಕ 14.7.2025ರಂದು ವಿಧಿವಶರಾದರು.
ಡಾ.ಬಿ.ಸರೋಜಾದೇವಿ ಪಡೆದ ಪ್ರಶಸ್ತಿಗಳು: *2008-ರಾಷ್ಟ್ರಪತಿಗಳಿಂದ ಭಾರತ ಸರ್ಕಾರ ಜೀವಮಾನ ಸಾಧನೆಗೆ ನೀಡುವ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ. 1992-ಪದ್ಮಭೂಷಣ, 1969-ಪದ್ಮಶ್ರೀ, *2009-ಡಾ.ರಾಜಕುಮಾರ್ ಸ್ಮರಣಾರ್ಥ ಜೀವಮಾನ ಸಾಧನೆಗೆ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, 2009-ಎನ್.ಟಿ.ಆರ್.ಸ್ಮರಣಾರ್ಥ ಜೀವಮಾನ ಸಾಧನೆಗೆ ಆಂಧ್ರಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ, 2009-ಕಲೈಮಾಮಣಿ : ತಮಿಳುನಾಡು ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿ.
ಇದನ್ನೂ ಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ… ಸಿನಿಮಾಲೋಕದ ಸಾಧನೆಗೆ ಸಾಟಿಯೇ ಇಲ್ಲ..
2001-ಎನ್.ಟಿ.ಆರ್.ರಾಷ್ಟ್ರ ಪ್ರಶಸ್ತಿ ಆಂಧ್ರಪ್ರದೇಶ ರಾಜ್ಯ ಸರ್ಕಾರದಿಂದ, 1993-ಎಂ.ಜಿ.ಆರ್. ಪ್ರಶಸ್ತಿ ತಮಿಳುನಾಡು ರಾಜ್ಯ ಸರ್ಕಾರದಿಂದ, 1988-ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ರಾಜ್ಯ ಸರ್ಕಾರದಿಂದ, 1980-ಅಭಿನಂದನ ಕಾಂಚನಮಾಲ ಪ್ರಶಸ್ತಿ ಕರ್ನಾಟಕ ರಾಜ್ಯ ಸರ್ಕಾರದಿಂದ, 1965-ಅಭಿನಯ ಸರಸ್ವತಿ ಪ್ರಶಸ್ತಿ ಕರ್ನಾಟಕ ರಾಜ್ಯ ಸರ್ಕಾರದಿಂದ, 1969-ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ ತಮಿಳುನಾಡು ರಾಜ್ಯ ಸರ್ಕಾರದಿಂದ, 1994-ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ, 1997-ಸಿನಿಮಾ ಎಕ್ಸ್ ಪ್ರೆಸ್ ಜೀವಮಾನಸಾಧನೆ ಪ್ರಶಸ್ತಿ ಚೆನ್ನೈ, 2003-ದಿನಕರನ್ ಪ್ರಶಸ್ತಿ ಸಕಲಕಲಾ ಪ್ರತಿಭಾ ಸಾಧನೆಗೆ ದೊರೆತಿದೆ.
ಇಷ್ಟೇ ಅಲ್ಲದೆ, 2006-ವಿಜಯ್ ಅವಾರ್ಡ್: ತಮಿಳು ಸಿನಿಮಾಕ್ಕೆ ನೀಡಿದ ಅಮೂಲ್ಯ ಕೊಡುಗೆ, 2006-ಗೌರವ ಡಾಕ್ಟರೇಟ್ ಬೆಂಗಳೂರು ವಿಶ್ವವಿದ್ಯಾಲಯ, 2007-ರೋಟರಿ ಶಿವಾಜಿ ಅವಾರ್ಡ್ ಚೆನ್ನೈ, 2007-ಎನ್.ಟಿ.ಆರ್.ಪ್ರಶಸ್ತಿ:ಕರ್ನಾಟಕ ತೆಲುಗು ಅಕ್ಯಾಡೆಮಿ, 2009-ನಾಟ್ಯ ಕಲಾಧರೆ ಪ್ರಶಸ್ತಿ: ತಮಿಳು ಸಿನಿಮಾರಂಗದ ಭರತ ಕಲಾಚಾರ್, ಚೆನ್ನೈ, 2010 ರಲ್ಲಿ ಸ್ಥಾಪಿತವಾದ ಬಿ.ಸರೋಜಾದೇವಿ ಸ್ಮರಣಾರ್ಥ, ಪದ್ಮಭೂಷಣ ಬಿ.ಸರೋಜಾದೇವಿ ರಾಷ್ಟ್ರ ಪ್ರಶಸ್ತಿ. ಪ್ರತಿವರ್ಷವೂ ದೇಶದ ಚಲನಚಿತ್ರ-ನಾಟಕ- ಲಲಿತಕಲೆಗಳು ವಿಭಾಗದಲ್ಲಿ ಜೀವಮಾನ ಸಾಧನೆಗೆ ನೀಡಲಾಗುವ ಈ ಪ್ರಶಸ್ತಿಗೆ ಇದುವರೆಗೆ ಭಾಜನರಾದ ಅನೇಕ ಕಲಾವಿದರ ಪೈಕಿ ಕೆಲವರ ಉಧಾಹರಣೆಗೆ ವೈಯಜಂತಿಮಾಲ, ಅಂಜಲಿದೇವಿ, ಜಯಂತಿ, ಅಂಬರೀಷ್, ಕೆ.ಜೆ.ಯೇಸುದಾಸ್, ಮುಂತಾದ ದಿಗ್ಗಜರು.
ಡಾ.ಬಿ.ಸರೋಜಾದೇವಿ ನಟಿಸಿದ ಚಿತ್ರಗಳು: ಆಷಾಢಭೂತಿ(1955), ಮಹಾಕವಿ ಕಾಳಿದಾಸ, ಶ್ರೀರಾಮಪೂಜ, ಕಚದೇವಯಾನಿ, ಕೋಕಿಲವಾಣಿ, ಪಂಚರತ್ನ, ಚಿಂತಾಮಣಿ, ಅಣ್ಣತಂಗಿ, ರತ್ನಗಿರಿರಹಸ್ಯ, ಭೂಕೈಲಾಸ, ಸ್ಕೂಲ್ಮಾಸ್ಟರ್, ಜಗಜ್ಯೋತಿಬಸವೇಶ್ವರ, ವಿಜಯನಗರದ ವೀರಪುತ್ರ, ಕಿತ್ತೂರುಚೆನ್ನಮ್ಮ, ದೇವಸುಂದರಿ, ಅಮರಶಿಲ್ಪಿ ಜಕಣಾಚಾರಿ (ಕನ್ನಡದ ಪ್ರಪ್ರಥಮ ಕಲರ್ ಚಿತ್ರ & ತೆಲುಗು+ ಕನ್ನಡ ಎರಡೂಭಾಷೆಯ ಚಿತ್ರದಲ್ಲಿ ಹೀರೋಯಿನ್) ಬೆರೆತ ಜೀವ, ಮಲ್ಲಮ್ಮನ ಪವಾಡ, ಲಕ್ಶ್ಮಿಸರಸ್ವತಿ, ಪೂರ್ಣಿಮಾ, ತಂದೆ ಮಕ್ಕಳು, ಪಾಪಪುಣ್ಯ, ನ್ಯಾಯವೇ ದೇವರು.
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ, ಸಹಧರ್ಮಿಣಿ, ಚಾಮುಂಡೇಶ್ವರಿ ಮಹಿಮೆ, ಶ್ರೀನಿವಾಸಕಲ್ಯಾಣ, ಶನಿಪ್ರಭಾವ, ಗೃಹಿಣಿ, ಭಾಗ್ಯಜ್ಯೋತಿ, ಕಥಾಸಂಗಮ, ಚಿರಂಜೀವಿ, ಬಭ್ರುವಾಹನ, ಶ್ರೀರೇಣುಕಾದೇವಿಮಹಾತ್ಮೆ, ಭಾಗ್ಯವಂತರು, ದಾನಶೂರಕರ್ಣ, ನಮ್ಮಮ್ಮ ತಾಯಿ ಅಣ್ಣಮ್ಮ, ರುದ್ರನಾಗ, ಗುರುಸಾರ್ವಭೌಮ ಶ್ರೀರಾಘವೇಂದ್ರ ಕರುಣೆ, ಗುರುಭಕ್ತಿ, ತಾಯಿತಂದೆ, ಯಾರಿವನು, ಲೇಡೀಸ್ ಹಾಸ್ಟಲ್, ಭಲೇಚತುರ, ಮಹಾ ಶಕ್ತಿಮಾಯೆ, ಗುರು, ಎಮರ್ಜೆನ್ಸಿ, ಅನುರಾಗಸಂಗಮ, ಪುಟ್ಮಲ್ಲಿ, ಅಗ್ನಿ ಐ.ಪಿ.ಎಸ್, ಜನನಿ ಜನ್ಮಭೂಮಿ, ಮಂಗಳಸೂತ್ರ, ದಟ್ಟಕಾಡಿನಲ್ಲಿದಿಟ್ಟಮಕ್ಕಳು, ತಿಮ್ಮ, ಪ್ರಾರಂಭ, ಸಾಮ್ರಾಟ್ ಅಶೋಕ, ರಾಜ್ ದಿ ಶೊಮ್ಯಾನ್, ನಟ ಸಾರ್ವಭೌಮ(2019)