District

ವಿಶ್ವಗ್ರಾಮ ಸೀಹಳ್ಳಿ’ಯಲ್ಲಿ ಏಡ್ಸ್ ಜಾಗೃತಿ ಜಾತ್ರೆ… ಡಾ.ಉಮೇಶ ಬೇವಿನಹಳ್ಳಿ ನೀಡಿದ ಸಲಹೆಗಳೇನು?

ಮೈಸೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಸೀಹಳ್ಳಿಯಲ್ಲಿ  ಏಡ್ಸ್ ಜಾಗೃತಿ ಜಾತ್ರೆಯನ್ನು ವಿಭಿನ್ನವಾಗಿ ನಡೆಸುವ ಮೂಲಕ ಏಡ್ಸ್ ರೋಗದ ಕುರಿತಂತೆ ಮಾಹಿತಿ ಮತ್ತು ತಡೆಗಟ್ಟುವ ಬಗ್ಗೆ ಸಲಹೆಗಳನ್ನು ನೀಡಲಾಯಿತು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದ ಡಾ. ಉಮೇಶ ಬೇವಿನಹಳ್ಳಿ ಅವರು ಸಿಹಿ ನೀರಿನ  ಕೆರೆ, ಬುಗ್ಗೆಗಳಿಂದ ಸಂರಚನೆಗೊಂಡ ಗ್ರಾಮ ಸೀಹಳ್ಳಿ … ಏಡ್ಸ್ ಎಂಬ ಮಹಾಮಾರಿಗೆ ಜಾತ್ರೆ ಮೂಲಕ ಜಾಗೃತಿ ಮೂಡಿಸಿದ ವಿಶ್ವ ಗ್ರಾಮವೆಂದು ಹೆಸರುವಾಸಿ ಕೂಡ ಈ ಗ್ರಾಮಕ್ಕೆ ಇದೆ ಎಂದು  ಹೇಳಿದರು.

ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಗಳಿಸುವುದರ ಮೂಲಕ  ತಮ್ಮ ಹುಟ್ಟೂರಿಗೆ, ಈ ನಾಡಿಗೆ, ಜನ್ಮ ಕೊಟ್ಟ ತಂದೆ ತಾಯಿಗೆ ಗೌರವವನ್ನು ತರುವ ಕೆಲಸವನ್ನು ಮಾಡಬೇಕು. ಮಕ್ಕಳಿಗೆ ಅವರ ಹುಟ್ಟೂರಿನ ಇತಿಹಾಸ, ಪರಂಪರೆ, ಸಂಸ್ಕೃತಿಯ ಅರಿವನ್ನು ಮೂಡಿಸುತ್ತಾ ಅವರಲ್ಲಿ ಓದಿನ ಆಸಕ್ತಿಯನ್ನು ಪ್ರೇರೇಪಿಸಿದರಲ್ಲದೆ, ಬುದ್ಧನಿರಲಿ, ಗಾಂಧಿ ಇರಲಿ, ಅಂಬೇಡ್ಕರ್ ಇರಲಿ, ಕುವೆಂಪು ಇರಲಿ ಅಥವಾ ನಾವುಗಳಾದರು  ಎಲ್ಲರಿಗೂ ಇರುವುದು ಒಂದೇ ಸಮಯ, ಕಾಲ ಮಹಾತ್ಮರ ರೀತಿಯಲ್ಲಿ ಸತತವಾಗಿ ಪ್ರಯತ್ನಿಸಿದರೆ ಈ ಜಗತ್ತಿನಲ್ಲಿ ಏನನ್ನ ಬೇಕಾದರೂ ಸಾಧಿಸಬಹುದು ಎಂದು ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಶ್ರೀಮತಿ ಚಿತ್ರ ಅವರು ಮಕ್ಕಳಿಗೆ ಕರ್ತವ್ಯ ಮತ್ತು ಹಕ್ಕುಗಳನ್ನು ಕುರಿತು ತಿಳಿಸಿಕೊಟ್ಟರು. ಸಿಬಿಸಿಯ ಉಪಾಧ್ಯಕ್ಷರಾದ ರವಿಕುಮಾರ್, ಉಪನ್ಯಾಸಕರಾದ ಪೃಥ್ವಿ, ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಸ್ವಾಮಿ, ಶ್ರೀಮತಿ ಶಬನ, ಶ್ರೀಮತಿ ವಿದ್ಯಾ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

admin
the authoradmin

Leave a Reply